Updated at Wed,23rd Aug, 2017 7:45PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಲವೆಡೆ ಮುಂಗಾರು ಪೂರ್ವ ಮಳೆ ಅಬ್ಬರ

ಬೆಂಗಳೂರು: ರಾಜ್ಯದ ವಿವಿಧೆಡೆ ಸುರಿಯುತ್ತಿದ್ದ ಮುಂಗಾರು ಪೂರ್ವ ಮಳೆ ಬುಧವಾರ ಕೆಲವೆಡೆ ಅಬ್ಬರಿಸಿದೆ.
ಬೆಂಗಳೂರು ನಗರ, ರಾಮನಗರ ಜಿಲ್ಲೆಯ ಕನಕಪುರ ಸೇರಿದಂತೆ ರಾಜ್ಯದ ಕೆಲವೆಡೆ ರಭಸವಾಗಿ ಮಳೆ ಸುರಿದಿದೆ.
ಬುಧವಾರದ ಮಳೆಗೆ ಕುದೂರು ಹೋಬಳಿಯ ನಾಲ್ಕು ಗ್ರಾಮ ಹಾಗೂ ಅದರಂಗಿ ಗ್ರಾಮದಲ್ಲಿ ತೆಂಗು, ಅಡಕೆ ಹಾಗೂ ಹಲಸಿನ ಮರಗಳು, ಮಾವಿನಮರ, ಬಾಳೆತೋಟ ಮುಂತಾದ ತೋಟಗಾರಿಕೆ ಬೆಳೆಗಳು ನಾಶವಾಗಿವೆ.

ರಾಜಧಾನಿ ಬೆಂಗಳೂರಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಒಂದೆರಡು ಕಡೆ ಮರಗಳು ಧರೆಗುರುಳಿದ್ದು, ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಗಾಳಿ ಸಹಿತ ಮಳೆಯ ಹೊಡೆತಕ್ಕೆ ಸಿಲ್ಕ್ ಬೋರ್ಡ್‌ನಲ್ಲಿ ಮರ ಉರುಳಿದ್ದು, ಶಿವನಗರ
ಮತ್ತು ಕೋರಮಂಗಲ 8ನೇ ಕ್ರಾಸ್‌ನಲ್ಲಿ ಮರದ ರೆಂಬೆಗಳು ಮುರಿದಿವೆ. ಕೆಲವು ಅಂಡರ್‌ಪಾಸ್‌ ಮತ್ತು ಜಂಕ್ಷನ್‌ಗಳಲ್ಲಿ
ನೀರು ಸರಾಗವಾಗಿ ಹರಿದುಹೋಗದೆ, ಸುಗಮ ಸಂಚಾರಕ್ಕೂ ವ್ಯತ್ಯಯ ಉಂಟಾಗಿತ್ತು.

ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಮೇಲ್ಮೆ„ ಸುಳಿಗಾಳಿ ಹಾಗೂ ಕಡಿಮೆ ಒತ್ತಡದ ತಗ್ಗು (ಟ್ರಫ್) ಪರಿಣಾಮ 3-4 ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇದೇ ವಾತಾವರಣ ಮುಂದುವರಿಯುವ
ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕನಕಪುರದಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 6 ಸೆಂ.ಮೀ. ಮಳೆಯಾಗಿದ್ದು, ಕೆ.ಆರ್‌.ನಗರ 4, ಶ್ರೀರಂಗಪಟ್ಟಣ, ಮಂಡ್ಯ ತಲಾ 3, ಎಲೆಕ್ಟ್ರಾನಿಕ್‌ ಸಿಟಿ, ಆನೇಕಲ್‌, ಚನ್ನಪಟ್ಟಣ ತಲಾ 2, ಮೈಸೂರು, ಕೃಷ್ಣರಾಜ ಸಾಗರ ತಲಾ 1
ಸೆಂ.ಮೀ. ಮಳೆಯಾಗಿದೆ.

Back to Top