Updated at Sat,24th Jun, 2017 3:51PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಿಜೆಪಿ ಕಾರ್ಯಕರ್ತನ ಮನವಿ; ಮತ್ತೆ ಬಿಎಸ್‌ವೈ 'ಕೈ' ಹಿಡಿದ ಈಶ್ವರಪ್ಪ !

ಗುಬ್ಬಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ನಾಯಕರು ಇಂದು ಗುರುವಾರದಿಂದ ಕೈಗೊಂಡಿರುವ  36 ದಿನಗಳ ರಾಜ್ಯ ಪ್ರವಾಸ ಪಕ್ಷದಲ್ಲಿನ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. 

ಪರಸ್ಪರ ಕಚ್ಚಾಡಿಕೊಂಡು ಕಾರ್ಯಕರ್ತರನ್ನು ತೀವ್ರ ಗೊಂದಲಕ್ಕೆ ಗುರಿಮಾಡಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ಕೆಲ ದಿನಗಳ ಬಳಿಕ ಕೈ ಕೈ ಹಿಡಿದುಕೊಳ್ಳುವ ಸಂದರ್ಭ ನಿರ್ಮಾಣವಾಯಿತು. 

ಗುಬ್ಬಿಯಲ್ಲಿ  ನಡೆಯುತ್ತಿದ್ದ ಜನ ಸಂಪರ್ಕ ಸಭೆಯಲ್ಲಿ ಈ ನಿರೀಕ್ಷಿತ ಘಟನೆ ನಡೆದಿದ್ದು, ಕಾರ್ಯಕರ್ತನ ಇಬ್ಬರು ನಾಯಕರು ಒಂದಾಗಬೇಕೆಂಬ ಮನವಿಗೆ ಸ್ಪಂದಿಸಿದ ಇಬ್ಬರೂ ಎದ್ದು ನಿಂತು ಪರಸ್ಪರ ಕೈ ಕೈ ಹಿಡಿದುಕೊಂಡು ಒಮ್ಮತ ಪ್ರದರ್ಶಿಸಿದರು. ಈ ವೇಳೆ ನೂರಾರು ಕಾರ್ಯಕರ್ತರು ವೇದಿಕೆಯಲ್ಲಿದ್ದ ನಾಯಕು ಹರ್ಷೋದ್ಘಾರ ಮಾಡಿದರು. 

ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಅವರು ಈಶ್ವರಪ್ಪ ಅವರ ಮುಖವನ್ನೂ ನೋಡಿರಲಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳಬಹುದು. 


More News of your Interest

Back to Top