Updated at Sun,23rd Jul, 2017 11:55AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಮೀನು ವಿವಾದ: ಒಂದೇ ಕುಟುಂಬದ ಮೂವರ ಹತ್ಯೆ

ಸೇಡಂ: ಜಮೀನು ಮಾರಾಟ ವಿವಾದ ಸಂಬಂಧ ಒಂದೇ ಕುಟುಂಬದ ಮೂವರನ್ನು ಕೊಲೆ ಮಾಡಿರುವ ದಾರುಣ
ಘಟನೆ ತಾಲೂಕಿನ ಮುಗನೂರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಗುತ್ತೇದಾರ ಮತ್ತು ಕೊಳ್ಳಿ ಕುಟುಂಬಗಳ ನಡುವೆ ಜಮೀನು ವಿಚಾರವಾಗಿ
ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಕೊಲೆಯಲ್ಲಿ ಅಂತ್ಯ ಕಂಡಿದೆ. ಭಾನುವಾರ ಬೆಳಗ್ಗೆ ಮುಗನೂರ ಗ್ರಾಮದಿಂದ 1 ಕಿ.ಮೀ. ದೂರದಲ್ಲಿರುವ ವಿವಾದಿತ ಜಮೀನಿನಲ್ಲೇ ದೇವರಾಯ ಅಡಿವೆಪ್ಪ ಕೊಳ್ಳಿ (58), ಕಾಶಮ್ಮ ದೇವರಾಯ (45), ರಾಜಶೇಖರ ಬಸವರಾಜ ಕೊಳ್ಳಿ (23), ಅಡಿವೆಪ್ಪ ದೇವರಾಯ (42), ಜಗದೇವಿ ಬಸವರಾಜ (35), ಭೀಮರಾಯ ಬಸವರಾಜ (25) ಎನ್ನುವ ಆರು ಜನರ ಮೇಲೆ ಗ್ರಾಮದ ಕೆಲವರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಗ್ರಾಮಕ್ಕೆ ಬಂದು ಹಲ್ಲೆ ಮಾಡಿರುವುದಾಗಿ ಕೆಲವರ ಮುಂದೆ ಹೇಳಿಕೊಂಡಿದ್ದಾರೆ. ಸುದ್ದಿ ತಿಳಿದ ಗ್ರಾಮಸ್ಥರು ಗಾಯಾಳುಗಳನ್ನು ಸೇಡಂ ಸರಕಾರಿ ಆಸ್ಪತ್ರೆಗೆ ಟ್ರಾಕ್ಟರ್‌ನಲ್ಲಿ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ತೆರಳುವ ದಾರಿ ಮಧ್ಯೆ ದೇವರಾಯ, ಕಾಶಮ್ಮ ಮತ್ತು ರಾಜಶೇಖರ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Back to Top