Updated at Sun,23rd Jul, 2017 11:55AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಿಎಸ್‌ಟಿಗೆ ಪೂರಕವಾಗಿ ಸಾಫ್ಟ್ವೇರ್‌ ವಿನ್ಯಾಸ

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ವಾಣಿಜ್ಯ ಇಲಾಖೆಯು ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಜಿಎಸ್‌ಟಿ ಅಡಿಯಲ್ಲಿ ಸುಲಭವಾಗಿ ವ್ಯವಹರಿಸಲು ಅನುಕೂಲವಾಗುವಂತೆ ಹೊಸ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದ್ದು, ವ್ಯಾಪಾರಿಗಳಿಗೆ ವಾರದೊಳಗೆ ಉಚಿತವಾಗಿ ನೀಡಲು ಸಿದ್ಧತೆ ನಡೆಸಿದೆ. ಜಿಎಸ್‌ಟಿ ಅಡಿ ವ್ಯವಹಾರ ಮಾತ್ರವಲ್ಲದೆ ಆದಾಯ ತೆರಿಗೆಯನ್ನೂ ಪಾವತಿಸಲು ಸಾಫ್ಟ್ ವೇರ್‌ನಲ್ಲಿ ಅವಕಾಶ ಕಲ್ಪಿಸುವುದು ಇದರ ವಿಶೇಷತೆ. ಇಲಾಖೆಯಲ್ಲಿ ನೋಂದಾಯಿತ ಸುಮಾರು 4 ಲಕ್ಷ ವ್ಯಾಪಾರಿಗಳಿಗೆ ಇದು ಉಚಿತವಾಗಿ ದೊರೆಯಲಿದ್ದು, ಜುಲೈ 1ರಿಂದ ಜಾರಿಯಾದ ಜಿಎಸ್‌ಟಿಗೆ ಪೂರಕವಾಗಿ ಸಾಫ್ಟ್ವೇರ್‌ನ್ನು ವಿನ್ಯಾಸಗೊಳಿಸಲಾಗಿದೆ.

ಜಿಎಸ್‌ಟಿ ಕುರಿತಂತೆ ವ್ಯಾಪಾರಿಗಳಲ್ಲಿ ಉಂಟಾಗಿರುವ ಗೊಂದಲಗಳ ನಿವಾರಣೆಗೆ ವಾಣಿಜ್ಯ ತೆರಿಗೆ ಇಲಾಖೆ ಸೇರಿ ನಾನಾ ವಾಣಿಜ್ಯೋದ್ಯಮ ಸಂಘಟನೆ ಗಳು ಹಲವಾರು ಕಾರ್ಯಾಗಾರ, ವಿಚಾರ ಸಂಕಿರಣ, ಚರ್ಚೆಗಳನ್ನು ನಡೆಸಿವೆ. ಆ ಮೂಲಕ ವ್ಯಾಪಾರಿ ಗಳಿಗೆ ವ್ಯವಹಾರ, ಲೆಕ್ಕಪತ್ರ ಸಲ್ಲಿಸುವುದು (ರಿಟರ್ನ್ಸ್), ತೆರಿಗೆ ಮೊತ್ತ ಲೆಕ್ಕ ಹಾಕುವುದು, ಇನ್‌ವಾಯಿಸಿಂಗ್‌ ಸಿದ್ಧಪಡಿಸುವುದು ಸೇರಿ ಹೊಸ ತೆರಿಗೆ ವ್ಯವಸ್ಥೆಗೆ ಹೊಂದಿಕೊಳ್ಳುವ ಮಾಹಿತಿ ನೀಡಿದರೂ ವ್ಯಾಪಾರಿಗಳಲ್ಲಿ ಗೊಂದಲ ಕಡಿಮೆಯಾಗದ ಹಿನ್ನೆಲೆಯಲ್ಲಿ, ದೊಡ್ಡ ಪ್ರಮಾಣದಲ್ಲಿ  ಸ್ಪಂದಿಸುವ ನಿಟ್ಟಿನಲ್ಲಿ ಸಾಫ್ಟ್ವೇರ್‌ ತರಲು ಇಲಾಖೆ ಮುಂದಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ನ್ಯಾಷನಲ್‌ ಇನ್‌ಫಾರ್ಮೆಟಿಕ್‌ ಸೆಂಟರ್‌ ಸಂಸ್ಥೆ ಸಹಯೋಗದಲ್ಲಿ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದ್ದು, ಈಗಾಗಲೇ ಪ್ರಾಯೋಗಿಕ ಬಳಕೆ ಯಶಸ್ವಿಯಾಗಿದೆ. ಇದರೊಂದಿಗೆ ಸಾಫ್ಟ್ವೇರ್‌ ಬಳಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲು ಆಯ್ದ ಶ್ರೇಣಿ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ರಚಿಸಲಾಗಿದ್ದು, ಅವರಿಗೆ ತರಬೇತಿ ನೀಡುವ ಕಾರ್ಯಪೂರ್ಣಗೊಂಡಿದೆ. ಸಾಫ್ಟ್ವೇರ್‌ ಜಿಎಸ್‌ಟಿ ಹಾಗೂ ವಾರ್ಷಿಕ  ಆದಾಯ ತೆರಿಗೆ ಪಾವತಿಸಲು ಅನುಕೂಲವಾಗಲಿದೆ.


Back to Top