ಹಾಸನಾಂಬೆಗೆ ಈ ವರ್ಷ ದುಪ್ಪಟ್ಟು ಆದಾಯ
Team Udayavani, Oct 23, 2017, 7:50 AM IST
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಹುಂಡಿ ಆದಾಯ ದ್ವಿಗುಣಗೊಂಡಿದೆ. ಈ ವರ್ಷ 4.14ಕೋಟಿ ರೂ. ಸಂಗ್ರಹವಾಗಿದೆ. ದೇವಿಯ ಹುಂಡಿಯಲ್ಲಿ ಎಟಿಎಂ ಕಾರ್ಡ್, ಪ್ರೇಮ ನಿವೇದನೆಯ ಪತ್ರ, ಮಾಂಗಲ್ಯ ಸರ, ನಿಷೇಧಿತ ನೋಟುಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.
ಶನಿವಾರ ದೇವರ ದರ್ಶನಕ್ಕೆ ತೆರೆಬಿದ್ದ ಬಳಿಕ ಭಾನುವಾರ ಬೆಳಗ್ಗೆಯಿಂದಲೇ 16 ಹುಂಡಿಗಳನ್ನು ತೆರೆದು 50 ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ಶುರುವಾಯಿತು. ಸಂಜೆ ವೇಳೆಗೆ ಹುಂಡಿಯಲ್ಲಿ ಒಂದು ಕೋಟಿಗೂ ಅಧಿಕ ಆದಾಯದ ಲೆಕ್ಕ ಸಿಕ್ಕಿದೆ. ವಿಶೇಷ ದರ್ಶನ ಮತ್ತು ನೇರ ದರ್ಶನದಿಂದ 2.72 ಕೋಟಿ ರೂ. ಸಂಗ್ರಹವಾಗಿದೆ. ಲಾಡು ಪ್ರಸಾದದ ಮಾರಾಟ, ಹರಕೆಯ ಸೀರೆಗಳ ಮಾರಾಟ ಸೇರಿ 2.98 ಕೋಟಿ ರೂ. ಸಂಗ್ರಹವಾಗಿದೆ. ಇನ್ನು ಹುಂಡಿಯಲ್ಲಿ ಸುರೇಶ ರಾಮಪ್ಪಎಂಬುವರ ಎಟಿಎಂ ಕಾರ್ಡ್ ಪತ್ತೆಯಾಗಿದ್ದು, ಮಾಂಗಲ್ಯ ಸರ ಮತ್ತು ಹಣವಿದ್ದ ಪರ್ಸ್ ಕೂಡ ಹುಂಡಿಗೆ ಬಿದಿ¨ªೆ ಹಾಗೂ ಒಂದು ಪ್ರೇಮ ಪತ್ರವೂ ದೊರೆತಿದೆ. ಐದು ನೂರು, ಸಾವಿರ ರೂ.ಗಳ ನಿಷೇಧಿತ ನೋಟುಗಳೂ ಹುಂಡಿಯಲ್ಲಿ ದೊರೆತಿದೆ. ಕಳೆದ ವರ್ಷ 2.65 ಕೋಟಿ ರೂ. ಆದಾಯ ಹಾಸನಾಂಬೆ ದೇವಾಲಯದಲ್ಲಿ ಸಂಗ್ರಹವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ