ಸೈಬರ್‌ ಕ್ರಿಮಿನಲ್‌ ವಿರುದ್ಧ ಟ್ರಿಮ್‌ ಆ್ಯಂಡ್‌ ಸ್ಲಿಮ್‌ ಕೆಂಪೇಗೌಡ


Team Udayavani, Apr 21, 2017, 1:13 PM IST

21-SUCHI-5.jpg

“ಕೆಂಪೇಗೌಡ -2′ ಚಿತ್ರ ಆರಂಭವಾಗುತ್ತಿದೆ ಎಂಬ ಸುದ್ದಿ ಹರಡಿದ ದಿನದಿಂದಲೂ ಅನೇಕರಲ್ಲಿ ಒಂದು ಕುತೂಹಲವಿತ್ತು. ಅದೇನೆಂದರೆ “ಕೆಂಪೇಗೌಡ-2’ನಲ್ಲಿ ಯಾರು ನಟಿಸುತ್ತಾರೆ, ಸುದೀಪ್‌ ಇರುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದೀಪ್‌ ಬದಲು “ಕೆಂಪೇಗೌಡ-2’ನಲ್ಲಿ ಕೋಮಲ್‌ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರ ಟೈಟಲ್‌ ಹಾಗೂ ಟ್ರೇಲರ್‌ ಬಿಡುಗಡೆ ಸಮಾರಂಭ ನಡೆಯಿತು. ಈ ಹಿಂದೆ “ಕೆಂಪೇಗೌಡ’ ಚಿತ್ರ ನಿರ್ಮಿಸಿದ ಶಂಕರೇಗೌಡ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರಿಗೆ ಈ ಬಾರಿ ಶಂಕರ್‌ ರೆಡ್ಡಿ ಕೂಡಾ ಸಾಥ್‌ ನೀಡುತ್ತಿದ್ದಾರೆ. ಟ್ರೇಲರ್‌ ಹಾಗೂ ಶಂಕರೇಗೌಡ ಅವರ “ಎಸ್‌ ಕಂಪೆನಿ’ ಲಾಂಚ್‌ಗೆ ಮಾಜಿ ಕೇಂದ್ರ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಸೇರಿದಂತೆ ಅನೇಕರು ಅತಿಥಿಯಾಗಿ ಆಗಮಿಸಿದ್ದರು. 

ಅಂದಹಾಗೆ, “ಕೆಂಪೇಗೌಡ-2′ ಚಿತ್ರವನ್ನು ರೋಶನ್‌ ಮೋಹನ್‌ ನಿರ್ದೇಶನ ಮಾಡುತ್ತಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಪಡೆದಿರುವ ರೋಶನ್‌ ಮೋಹನ್‌ ಅವರು ಈಗ “ಕೆಂಪೇಗೌಡ -2′ ಮಾಡುತ್ತಿದ್ದಾರೆ. ಸುದೀಪ್‌ ಅವರ “ಕೆಂಪೇಗೌಡ’ ತಮಿಳಿನ “ಸಿಂಗಂ’ ಚಿತ್ರದ ರೀಮೇಕ್‌ ಆಗಿತ್ತು. ಆ ನಂತರ “ಸಿಂಗಂ-2′ ಕೂಡಾ ಬಂತು. ಹಾಗಾಗಿ, ಇದು ಕೂಡಾ ರೀಮೇಕ್‌ ಸಿನಿಮಾನಾ ಎಂಬ ಪ್ರಶ್ನೆ ಬರೋದು ಸಹಜ. ಆದರೆ ಇದು ರೀಮೇಕ್‌ ಅಲ್ಲ. ಸ್ವಮೇಕ್‌ ಸಿನಿಮಾ.

ಚಿತ್ರದ ಬಗ್ಗೆ ಮಾತನಾಡುವ ಕೋಮಲ್‌, “ಇದು ರೀಮೇಕ್‌ ಸಿನಿಮಾ ಅಲ್ಲ. ಪಕ್ಕಾ ಒರಿಜಿನಲ್‌ ಸಿನಿಮಾ. ಅದೇ ಕಾರಣಕ್ಕೆ ಚಿತ್ರಕ್ಕೆ “ಪಕ್ಕಾ ಒರಿಜಿನಲ್‌’ ಎಂಬ ಟ್ಯಾಗ್‌ಲೈನ್‌ ಇದೆ. ತುಂಬಾ ಸಹಜವಾಗಿ, ಸಿನಿಮ್ಯಾಟಿಕ್‌ ಆಗಿಯೂ ಇರದೆ, ಈ ಸಿನಿಮಾ ಮೂಡಿಬರುತ್ತದೆ. ಡಿಜಿಟಲ್‌ ಇಂಡಿಯಾದಲ್ಲಿ ಸೈಬರ್‌ ಕ್ರಿಮಿನಲ್‌ಗ‌ಳು ಕೂಡಾ ಜಾಸ್ತಿಯಾಗುತ್ತಿದ್ದಾರೆ. ಬೇರೆ ಕ್ರಿಮಿನಲ್‌ಗ‌ಳಿಗಿಂತ ಆ ತರಹದ ಕ್ರಿಮಿನಲ್‌ಗ‌ಳನ್ನು ಹಿಡಿಯೋದು ಪೊಲೀಸ್‌ ಇಲಾಖೆಗೆ ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ನಾಯಕ ಯಾವ ತರಹ ಸೈಬರ್‌ ಕ್ರಿಮಿನಲ್‌ ಸೇರಿದಂತೆ ಇತರ ಕ್ರಿಮಿನಲ್‌ಗ‌ಳನ್ನು ಮಟ್ಟ ಹಾಕುತ್ತಾನೆ ಎಂಬ ಲೈನ್‌ನೊಂದಿಗೆ ಕಥೆ ಸಾಗುತ್ತದೆ. ತುಂಬಾ ಸಹಜವಾಗಿ, ನೈಜತೆಯೊಂದಿಗೆ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಅದು ನಟನೆಯಿಂದ ಹಿಡಿದು ಕಾನೂನು ಅಂಶಗಳವರೆಗೂ. ಹಾಗಾಗಿಯೇ ಪೊಲೀಸ್‌ ಆಫೀಸರ್‌ಗಳಲ್ಲಿ ಮಾತನಾಡಿ, ಚಿತ್ರಕ್ಕೆ ಪೂರಕವಾದ ಕಾನೂನಿನ ಅರಿವು, ಕೇಸ್‌ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಯಾವುದೇ ಒಂದು ಅಂಶದಲ್ಲೂ ತಪ್ಪು ಕಾಣಬಾರದು. ಈಗ ಪ್ರೇಕ್ಷಕರು ತುಂಬಾ ಬುದ್ಧಿವಂತರು. ಏನೇ ತಪ್ಪಾದರೂ ಬೇಗನೇ ಗುರುತಿಸುತ್ತಾರೆ. ಹಾಗಾಗಿ, ಯಾವುದೇ ಆಭಾಸ ಆಗಬಾರದು ಎಂದು ಎಚ್ಚರ ವಹಿಸುತ್ತಿದ್ದೇವೆ’ ಎನ್ನುವುದು ಕೋಮಲ್‌ ಮಾತು. 

ಈ ಚಿತ್ರಕ್ಕಾಗಿ ಕೋಮಲ್‌ ತೂಕ ಇಳಿಸಿಕೊಂಡು ಸ್ಲಿಮ್‌ ಆಗಿದ್ದಾರೆ ಕೂಡಾ.  

ಟಾಪ್ ನ್ಯೂಸ್

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

CHandrababu Naidu

Andhra ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆಸ್ತಿ 810 ಕೋಟಿ ರೂ.!

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.