ಅಧ್ಯಕ್ಷನ ಸಮ್ಮುಖದಲ್ಲಿ ಒಂದಾದ ರಾಜ್‌-ವಿಷ್ಣು

Team Udayavani, Jul 21, 2017, 5:20 AM IST

Ban21071702SSch.gif

ಅಧ್ಯಕ್ಷ’ ಚಿತ್ರದ ಮೈಸೂರು ವಿತರಣೆಯ ಹಕ್ಕನ್ನು ನಿರ್ಮಾಪಕ ರಾಮು ಪಡೆದಿದ್ದರಂತೆ. ಆ ಚಿತ್ರದ ಕಲೆಕ್ಷನ್‌ ನೋಡಿ ಅವರಿಗೆ ಆಶ್ಚರ್ಯವಾಯಿತಂತೆ. ಆ ಮಟ್ಟಕ್ಕೆ ಜನ ಶರಣ್‌ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್‌ ಅನ್ನು ಇಷ್ಟಪಟ್ಟಿದ್ದರಂತೆ. ಆಗಲೇ ರಾಮು ತಲೆಯಲ್ಲಿ ಅವರಿಬ್ಬರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಲೋಚನೆ ಬಂದಿದ್ದು. ಶರಣ್‌ ಹಾಗೂ ಚಿಕ್ಕಣ್ಣ ಅವರಿಗೆ ಹೊಂದುವಂತಹ ಕಥೆಗಾಗಿ ಎದುರು ನೋಡುತ್ತಿದ್ದಾಗ ರಾಮು ಅವರ ಕಣ್ಣಿಗೆ ಬಿದ್ದಿದ್ದು ತಮಿಳಿನ “ರಜನಿ ಮುರುಗನ್‌’ ಚಿತ್ರ. ಈ ಚಿತ್ರ ಶರಣ್‌ ಹಾಗೂ ಚಿಕ್ಕಣ್ಣ ಅವರಿಗೆ ಹೊಂದುತ್ತದೆಂದು ರೈಟ್ಸ್‌ ತಗೊಂಡ ರಾಮು ಈಗ ಸಿನಿಮಾ ಮಾಡಿಯೇ ಬಿಟ್ಟಿದ್ದಾರೆ. ಅದೇ “ರಾಜ್‌-ವಿಷ್ಣು’.

ಸುಮಾರು ಮೂರು ವರ್ಷಗಳ ನಂತರ ಶರಣ್‌ ಹಾಗೂ ಚಿಕ್ಕಣ್ಣ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಈ ಚಿತ್ರ ಆಗಸ್ಟ್‌ 4
ರಂದು ತೆರೆಕಾಣುತ್ತಿದೆ.

“ಅಧ್ಯಕ್ಷ ಚಿತ್ರದ ಕಲೆಕ್ಷನ್‌ ನೋಡಿ ನನಗೆ ಆಶ್ಚರ್ಯವಾಯಿತು. ಆ ಚಿತ್ರ ತುಂಬಾ ಚೆನ್ನಾಗಿ ಕಲೆಕ್ಷನ್‌ ಮಾಡಿತು. ಈಗ “ರಾಜ್‌ ವಿಷ್ಣು’ ಚಿತ್ರವನ್ನು ಕೂಡಾ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ. ಮೂಲ ಚಿತ್ರದ ಒಂದೆಳೆಯನ್ನಷ್ಟೇ ತಗೊಂಡು, ಉಳಿದಂತೆ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದೇವೆ.

ಸ್ವಮೇಕ್‌ ಸಿನಿಮಾಕ್ಕೆ ಯಾವ ರೀತಿ ಸ್ಕ್ರಿಪ್ಟ್ ಕೆಲಸ ನಡೆಯುತ್ತೋ ಅದೇ ರೀತಿ ಎಲ್ಲಾ ತಯಾರಿ ಮಾಡಿಕೊಂಡು
ಆ ನಂತರ ಚಿತ್ರೀಕರಣ ಆರಂಭಿಸಿದ್ದು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ರಾಮು. ಅಂದಹಾಗೆ, ಇದು ರಾಮು ಅವರ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ 37ನೇ ಚಿತ್ರ. “ರಾಜ್‌ ವಿಷ್ಣು’ ಚಿತ್ರವನ್ನು ಮಾದೇಶ ನಿರ್ದೇಶಿಸಿದ್ದಾರೆ. ಈಗಾಗಲೇ ಹಲವು ರೀಮೇಕ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಮಾದೇಶ ಅಕೌಂಟ್‌ಗೆ ಇದು ಮತ್ತೂಂದು ರೀಮೇಕ್‌ ಸಿನಿಮಾ. ಎಂದಿನಂತೆ ಮಾದೇಶ ಅವರು ಚಿತ್ರದ ಬಗ್ಗೆ ಹೆಚ್ಚೇನು ಮಾತನಾಡಲಿಲ್ಲ. “ಸಿನಿಮಾ ಚೆನ್ನಾಗಿ ಬಂದಿದೆ, ಬೆಂಬಲಿಸಿ’ ಎಂದಷ್ಟೇ ಹೇಳಿದರು. ನಾಯಕ ಶರಣ್‌ ಅವರಿಗೆ “ಅಧ್ಯಕ್ಷ’ ನಂತರ ಎಲ್ಲೇ ಹೋದರೂ “ನಿಮ್ಮ ಹಾಗೂ ಚಿಕ್ಕಣ್ಣ ಕಾಂಬಿನೇಶನ್‌ ಸಿನಿಮಾ ಮತ್ತೆ ಯಾವಾಗ’ ಎಂದು ಕೇಳುತ್ತಿದ್ದರಂತೆ. ಅದಕ್ಕೆ ಸರಿಯಾಗಿ ಈಗ “ರಾಜ್‌-ವಿಷ್ಣು’ ತಯಾರಾಗಿದೆ. “ನಾನು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ರಾಮು ಅವರ ಬ್ಯಾನರ್‌ನಲ್ಲಿ ನಾನು ನಟಿಸಿರಲಿಲ್ಲ. ಈಗ ನಟಿಸುವ ಅವಕಾಶ ಸಿಕ್ಕಿದೆ.

ಸಹಜವಾಗಿಯೇ ಜವಾಬ್ದಾರಿ ಜಾಸ್ತಿ ಇದೆ. ನಮ್ಮಿಬ್ಬರ ಕಾಂಬಿನೇಶನ್‌ನ “ಅಧ್ಯಕ್ಷ’ ಹಿಟ್‌ ಆಗಿರುವುದರಿಂದ ಈಗ ಈ
ಸಿನಿಮಾದ ನಿರೀಕ್ಷೆ ಹೆಚ್ಚಿದೆ. ಟ್ರೇಲರ್‌ ಕೂಡಾ ದೊಡ್ಡ ಹಿಟ್‌ ಆಗಿದೆ. ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಶರಣ್‌ ಮಾತು.

ಚಿಕ್ಕಣ್ಣ ಕೂಡಾ “ಅಧ್ಯಕ್ಷ’ ನಂತರ ಮತ್ತೆ ಶರಣ್‌ ಜೊತೆ ನಟಿಸುತ್ತಿರುವ ಖುಷಿ ಹಂಚಿಕೊಂಡರು. ಚಿತ್ರದಲ್ಲಿ
ವೈಭವಿ ಶಾಂಡಿಲ್ಯ ನಾಯಕಿ. ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಚಿತ್ರವೇ ದೊಡ್ಡ ಬ್ಯಾನರ್‌ನಲ್ಲಿ ಸಿಕ್ಕಿರುವುದರಿಂದ
ಖುಷಿಯಾಗಿದ್ದಾರಂತೆ. ಎಲ್ಲರಿಗೂ ಇಷ್ಟವಾಗುವಂತಹ ಪಾತ್ರ ಸಿಕ್ಕಿದೆ ಎನ್ನುವುದು ಅವರ ಮಾತು. ಚಿತ್ರದಲ್ಲಿ ಲೋಕಿ
ವಿಲನ್‌ ಆಗಿ ನಟಿಸಿದ್ದಾರಂತೆ. ತುಂಬಾ ಸೆಟಲ್ಡ್‌ ಆದ ಪಾತ್ರ ಸಿಕ್ಕ ಖುಷಿ ಅವರದು.

ಟಾಪ್ ನ್ಯೂಸ್

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.