ಭರ್ಜರಿ ಇನ್ನಿಂಗ್ಸ್‌: ಗ್ರಹಣ ಬಿಟ್ಟಾಯ್ತು, ತಗೋ ಶುರು…


Team Udayavani, Sep 15, 2017, 11:32 AM IST

15-SUC-8.jpg

ಈ ವಾರ ಧ್ರುವ ಸರ್ಜಾ ಅಭಿನಯದ “ಭರ್ಜರಿ’ ಜೊತೆಗೆ ವಿನೋದ್‌ ಪ್ರಭಾಕರ್‌ ಅಭಿನಯದ “ಕ್ರ್ಯಾಕ್‌’ ಸಹ ಬಿಡುಗೆಯಾಗುತ್ತಿದೆ. ಎರಡೂ ಚಿತ್ರಗಳು ಆ್ಯಕ್ಷನ್‌ ಜಾನರ್‌ ಸಿನಿಮಾಗಳೇ. ಬಿಡುಗಡೆಗೂ ಮುನ್ನ ವಿನೋದ್‌ ಮತ್ತು ಧ್ರುವ ಪರಸ್ಪರ ಮಾತಾಡಿಕೊಂಡಿದ್ದಾರಂತೆ. ಧ್ರುವ ಜೊತೆಗೆ ಮಾತಾಡಿರುವ ವಿನೋದ್‌, “ಬ್ರದರ್‌ ಇಬ್ಬರೂ ಒಟ್ಟಿಗೆ ಬರುತ್ತಿದ್ದೇವೆ. ಮಾರ್ನಿಂಗ್‌ ಶೋ ನಿನ್ನ ಸಿನಿಮಾ ಹೌಸ್‌ಫ‌ುಲ್‌ ಆಗಲಿ, ಮ್ಯಾಟ್ನಿ ಶೋ ನನ್ನ ಸಿನಿಮಾ ಹೌಸ್‌ಫ‌ುಲ್‌ ಆಗಲಿ’ ಅಂತ ಶುಭ ಹಾರೈಸಿದ್ದಾರಂತೆ. ಆ ಕಡೆಯಿಂದ ಧ್ರುವ,  “ಬ್ರದರ್‌ ಮಾರ್ನಿಂಗ್‌ ಶೋ ನಿನ್ನ ಸಿನಿಮಾ ಹೌಸ್‌ಫ‌ುಲ್‌ ಆಗಲಿ, ಮ್ಯಾಟ್ನಿ ಶೋ ನನ್ನ ಸಿನಿಮಾ ಹೌಸ್‌ಫ‌ುಲ್‌ ಆಗಲಿ’ ಅಂತಾನೂ ವಿಷ್‌ ಮಾಡಿದ್ದಾರೆ. ಹೀಗೆ ಪರಸ್ಪರ ವಿಶ್‌ ಮಾಡಿಕೊಂಡಿರುವ ವಿನೋದ್‌ ಮತ್ತು ಧ್ರುವ, ಈಗ ಪರಸ್ಪರ ಎದುರಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ತಮ್ಮ ಹೊಸ ಚಿತ್ರದ ಬಗ್ಗೆ, ಚಿತ್ರ ಜೀವನದ ಬಗ್ಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ….

“ಆರು ವರ್ಷ ಮೂರು ಸಿನಿಮಾ …’
  – ಇದು ಧ್ರುವ ಸರ್ಜಾ ಅವರ ಕೆರಿಯರ್‌ ಗ್ರಾಫ್. ಧ್ರುವ ಸರ್ಜಾ ಚಿತ್ರರಂಗಕ್ಕೆ ಬಂದು ಆರು ವರ್ಷ ಆಗಿದೆ. ಈ ಆರು ವರ್ಷದಲ್ಲಿ ಧ್ರುವ ಮಾಡಿದ್ದು ಕೇವಲ ಮೂರೇ ಮೂರು ಸಿನಿಮಾ. “ಅದ್ಧೂರಿ’, “ಬಹದ್ದೂರ್‌’ ಹಾಗೂ ಇಂದು ತೆರೆಕಾಣುತ್ತಿರುವ “ಭರ್ಜರಿ’. ಒಬ್ಬ ಬೇಡಿಕೆ ಇರುವ ನಟ ಈ ತರಹ ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಇದು ಧ್ರುವಗೂ ಗೊತ್ತಾಗಿದೆ. ಅದೇ ಕಾರಣಕ್ಕೆ ಧ್ರುವ ಇನ್ನು ಮುಂದೆ ವರ್ಷಕ್ಕೆರಡು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. “ನನಗೂ ವರ್ಷಕ್ಕೆರಡು ಸಿನಿಮಾ ಮಾಡಬೇಕೆಂಬ ಆಸೆ ಇದೆ. ಇನ್ನು ಮುಂದೆ ಆ ನಿಟ್ಟಿನಲ್ಲಿ
ಖಂಡಿತಾ ಪ್ರಯತ್ನಿಸುತ್ತೇನೆ. ಈ ಮೂರು ಸಿನಿಮಾಗಳಲ್ಲಿ ಕೊಂಚ ಸಮಸ್ಯೆಯಾಗಿ ತಡವಾಯಿತು. 

ಒಂದು ಸಿನಿಮಾವನ್ನು ಅರ್ಧದಲ್ಲಿ ಬಿಟ್ಟು ಮತ್ತೂಂದು ಸಿನಿಮಾ ಮಾಡಲು ನನಗೆ ಮನಸ್ಸು ಬರಲಿಲ್ಲ. ಏಕೆಂದರೆ, ಯಾವುದೇ ಒಂದು ಕಥೆಯನ್ನು ನಾವು ತುಂಬಾ ಇಷ್ಟಪಟ್ಟು ಒಪ್ಪಿರುತ್ತೇವೆ. ಏನೋ ಕಾರಣಕ್ಕಾಗಿ ಸಿನಿಮಾ ಸ್ವಲ್ಪ ತಡವಾದ ತಕ್ಷಣ ನಾವು ಅದನ್ನು ಬಿಟ್ಟು ಹೋಗೋದು ಸರಿಯಲ್ಲ. ಆ ನಿಟ್ಟಿನಲ್ಲಿ ಈ ಮೂರು ಸಿನಿಮಾಗಳು ತಡವಾದುವು. ಒಂದಂತೂ ಸತ್ಯ, ಒಂದು ಸಿನಿಮಾ ತಡವಾಗಲು ನಾನಾ ಕಾರಣಗಳಿರುತ್ತದೆ. ಆದರೆ, ಅಂತಿಮವಾಗಿ ಜನ ನೋಡೋದು ಸಿನಿಮಾನಾ. ಸಿನಿಮಾ ಚೆನ್ನಾಗಿ ಬಂದರೆ ಉಳಿದ ಯಾವ ಅಂಶಗಳು ಕೌಂಟ್‌ ಆಗಲ್ಲ’ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ವರ್ಷಕ್ಕೆರಡು ಸಿನಿಮಾ ಮಾಡುವುದಾಗಿ’ ಹೇಳುತ್ತಾರೆ ಧ್ರುವ. ಧ್ರುವ ಬಗ್ಗೆ ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮತ್ತೂಂದು
ಮಾತೆಂದರೆ ಧ್ರುವಗೆ ಕಥೆ ಒಪ್ಪಿಸೋದು ತುಂಬಾ ಕಷ್ಟ ಎಂದು. ಯಾವುದೇ ಕಥೆಯಾದರೂ ಅಳೆದು ತೂಗಿ, ತುಂಬಾ  ಲೆಕ್ಕಾಚಾರ ಹಾಕುತ್ತಾರೆ ಧ್ರುವ. ಆ ಕಾರಣಕ್ಕಾಗಿಯೇ ಅವರು ಅಷ್ಟು ಸುಲಭವಾಗಿ ಯಾವ ಕಥೆಯನ್ನು ಒಪ್ಪೋದಿಲ್ಲ ಎಂಬುದು. “ನಾನು ನಿಮ್ಮ ಜಾಗದಲ್ಲಿ ನಿಂತು ಕಥೆ ಕೇಳುತ್ತೇನೆ’ ಎಂಬ ಉತ್ತರ ಧ್ರುವ ಅವರಿಂದ ಬರುತ್ತದೆ. “ಸಿನಿಮಾದಲ್ಲಿ ನಾನು ಹೀರೋ ಇರಬಹುದು. ಆದರೆ, ಯಾವುದೇ ಕಥೆಯನ್ನು ಕೇಳುವಾಗ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಕೇಳುತ್ತೇನೆ. ಸಿನಿಮಾ ನೋಡುವಾಗ ಒಬ್ಬ ಪ್ರೇಕ್ಷಕನಿಗೆ ಏನೆಲ್ಲಾ ಡೌಟ್‌ ಬರುತ್ತದೋ ಆ ಎಲ್ಲಾ ಸಂದೇಹಗಳು ನನಗೂ ಬರುತ್ತದೆ. ಅವೆಲ್ಲವನ್ನು ಬಗೆಹರಿಸಿಕೊಂಡು, ಒಬ್ಬ ಪ್ರೇಕ್ಷಕನಾಗಿ ನಾನು ತೃಪ್ತನಾದ ನಂತರಷ್ಟೇ ನಾನು ಕಥೆ ಒಪ್ಪೋದು. ಥಿಯೇಟರ್‌ 
ಗೆ ಬಂದ ಪ್ರೇಕ್ಷಕರು ಖುಷಿಯಾಗಿ ಹೋಗಬೇಕೆಂಬುದು ನನ್ನ ಉದ್ದೇಶ’ ಎನ್ನುವುದು ಧ್ರುವ ಮಾತು.

ಧ್ರುವ ಅವರನ್ನು ಹುಡುಕಿಕೊಂಡು ಸಾಕಷ್ಟು ಕಥೆಗಳು ಬರುತ್ತಿವೆಯಂತೆ. ಬಹುತೇಕ ನಿರ್ದೇಶಕರು ಕೂಡಾ ಔಟ್‌ ಅಂಡ್‌ ಔಟ್‌ ಎಂಟರ್‌ಟೈನ್‌ಮೆಂಟ್‌ ಜೊತೆಗೆ ಸಿಕ್ಕಾಪಟ್ಟೆ ಎನರ್ಜಿ ಇರುವ ಪಾತ್ರದಲ್ಲೇ ಧ್ರುವ ಅವರನ್ನು ಕಲ್ಪಿಸಿಕೊಂಡು ಬರುತ್ತಾರಂತೆ. ಆ ತರಹ ಬರುವವರಿಗೆ ಧ್ರುವ ಸಲಹೆ ಏನು ಎಂಬ ಕುತೂಹಲ ಸಹಜವಾಗಿಯೆ ಬರುತ್ತದೆ. “ನಾನು ಸಲಹೆ ಕೊಡುವ ಮಟ್ಟಿಗೆ ಬೆಳೆದಿಲ್ಲ. ಮೊದಲೇ ಹೇಳಿದಂತೆ ಕಥೆ ಕೇಳಿ ನನಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತೇನೆ. ಆದಷ್ಟು ಒಂದು ಸಿನಿಮಾದಿಂದ ಮತ್ತೂಂದು ಸಿನಿಮಾಕ್ಕೆ ಹೊಸತನ್ನು ನೀಡಲು ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ. 

ಕೈ ತುಂಬಾ ಆಫ‌ರ್‌ ಇದ್ದು, ಬೇಡಿಕೆ ಇದ್ದು ಸಿನಿಮಾಗಳನ್ನು ಬಿಟ್ಟರೆ ಮುಂದೆ ಕಷ್ಟ ಆಗಲ್ವ ಎಂದು ನೀವು ಕೇಳಬಹುದು. ಆ ಬಗ್ಗೆ ಧ್ರುವ ಕೂಡಾ ಯೋಚಿಸಿದ್ದಾರೆ. “ನನಗೆ ಒಳ್ಳೆಯ ಸಿನಿಮಾಗಳಷ್ಟೇ ಮುಖ್ಯ. ಹಾಗಾಗಿ, ತುಂಬಾ ಚೂಸಿಯಾಗಿ ಆಯ್ಕೆ ಮಾಡುತ್ತೇನೆ. ಮತ್ತೂಂದು ವಿಚಾರ ಅಂದರೆ ಮೂರು ಸಿನಿಮಾಗಳು ತಡವಾಗಿದ್ದು ನಿಜ. ಆದರೆ, ಮುಂದೆ ಒಳ್ಳೆಯ ಆಫ‌ರ್‌ಗಳನ್ನು ಖಂಡಿತಾ ಒಪ್ಪಿಕೊಳ್ಳುತ್ತೇನೆ. ಸೂರ್ಯಂಗೂ ಒಮ್ಮೊಮ್ಮೆ ಗ್ರಹಣ ಬರುತ್ತೆ. ಅದೇ ತರಹ ನನ್ನ ಸಿನಿಮಾಗಳು ಕೂಡಾ ತಡವಾಯಿತು. ಆದರೆ, ಈಗ ಗ್ರಹಣ ಬಿಟ್ಟಿದೆ’ ಎಂಬುದು ಧ್ರುವ ಮಾತು.

ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡಬೇಕಾದರೆ ಅವರ ಮಾವ ಅರ್ಜುನ್‌ ಸರ್ಜಾ ಅವರಿಗೆ ಕಥೆ ಹೇಳಬೇಕು, ಮೊದಲು ಅವರು ಕಥೆಯನ್ನು ಓಕೆ ಮಾಡಿದ ನಂತರ ಧ್ರುವ ಸಿನಿಮಾ. ಮೂರು ಸಿನಿಮಾಗಳಲ್ಲೂ ಇದೇ ನಡೆದುಕೊಂಡು ಬಂದಿದೆ. ಧ್ರುವಗೆ ಆ ಬಗ್ಗೆ ಯಾವುದೇ ಬೇಸರವಿಲ್ಲ. ಅವರಿಗೆ ಖುಷಿ ಇದೆ. “ಮಾವನಿಗೆ ಚಿತ್ರರಂಗದಲ್ಲಿರುವ ಅನುಭವ ದೊಡ್ಡದು. ಅವರ ಅನುಭವದಲ್ಲಿ ಅವರಿಗೆ ಯಾವ ಕಥೆ ಒಳ್ಳೆಯದು, ಯಾವುದು ನನಗೆ ಒಗ್ಗೊದಿಲ್ಲ ಎಂಬುದು ಗೊತ್ತಾಗುತ್ತದೆ. ನಾವು ಅನುಭವಕ್ಕೆ ಬೆಲೆ ಕೊಡಬೇಕು. ಅದಕ್ಕಿಂತ ಹೆಚ್ಚಾಗಿ ಅವರು ನನ್ನ ಗಾಡ್‌ಫಾದರ್‌.
ಅವರ ಕಥೆಯ ಜಡ್ಜ್ ಮೆಂಟ್‌ ಯಾವತ್ತೂ ಸರಿಯಾಗಿರುತ್ತದೆ’ ಎನ್ನುವ ಮೂಲಕ ಮಾವನ ಬಗ್ಗೆ ಖುಷಿಯಾಗುತ್ತಾರೆ ಧ್ರುವ. ಇಂದು ಧ್ರುವ ಅವರ “ಭರ್ಜರಿ’ ಚಿತ್ರ ಬಿಡುಗಡೆಯಾಗುತ್ತಿದೆ. ಸಹಜವಾಗಿಯೇ ಧ್ರುವಗೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. “ನಾವಂತೂ ಹಂಡ್ರೆಡ್‌ ಪರ್ಸೆಂಟ್‌ ಕೊಟ್ಟು ಸಿನಿಮಾ
ಮಾಡಿದ್ದೀವಿ. ಭಯ, ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಬೇಡಿಕೆ ಬರುತ್ತಿವೆ. ಟ್ರೇಲರ್‌, ಹಾಡುಗಳನ್ನು ಜನ ಇಷ್ಟಪಟ್ಟಿದ್ದಾರೆ. ಈಗಾಗಲೇ ಬುಕ್ಕಿಂಗ್‌ನಲ್ಲೂ ಪಾಸಿಟಿವ್‌ ಅಂಶಗಳು ಎದ್ದು ಕಾಣುತ್ತಿವೆ. ಜನ ಕೂಡಾ ಒಂದು ಒಳ್ಳೆಯ ಪ್ರೊಡಕ್ಟ್ ಅನ್ನು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವ ಧ್ರುವ ಅಭಿಮಾನಿಗಳ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.