Readers Recipe : ಬಿಸ್ಕೆಟ್ ರೊಟ್ಟಿ
Team Udayavani, Mar 19, 2017, 11:38 PM IST
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು- 2.5 ಕಪ್
ಸಣ್ಣ ರವೆ – 1/2 ಕಪ್
ಹುರಿಗಡಲೆ ಪುಡಿ – 1 ಚಮಚ
ತೆಂಗಿನಕಾಯಿ – 1/2 ಕಪ್
ಕರಿಬೇವಿನ ಸೊಪ್ಪು- 15-20 ಎಲೆ
ಶುಂಠಿ – ಸ್ವಲ್ಪ
ಅರಿಶಿಣದ ಪುಡಿ – ಸ್ವಲ್ಪ
ಮೆಣಸಿನ ಪುಡಿ – 1 ಚಮಚ
ಸಾಸಿವೆ – 1/2 ಚಮಚ
ಇಂಗು – 1/4 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಮಾಡುವ ವಿಧಾನ
ರವೆ ಮತ್ತು ಹುರಿಗಡಲೆ ಪುಡಿಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಅನಂತರ ಶುಂಠಿ, ಹಸಿಮೆಣಸು ಮತ್ತು ಕರಿಬೇವಿನ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಚಮಚ ಎಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ, ಇದಕ್ಕೆ ಸಾಸಿವೆ ಹಾಕಿ ಇದು ಸಿಡಿಯುತ್ತಿದ್ದಂತೆ ಶುಂಠಿ, ಹಸಿಮೆಣಸು, ಕರಿಬೇವಿನ ಸೊಪ್ಪನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ಇದಕ್ಕೆ ಇಂಗು, ಅರಿಶಿಣ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅನಂತರ ತೆಂಗಿನ ಕಾಯಿಯನ್ನು ಸೇರಿಸಿ, ಕಾಯಿ ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ ಮೆಣಸಿನ ಪುಡಿಯನ್ನು ಸೇರಿಸಿ.ಮೊದಲೇ ಹುರಿದಿಟ್ಟ ರವೆಗೆ ಈ ಮಿಶ್ರಣವನ್ನು ಸೇರಿಸಿ ಒಂದು ನಿಮಿಷ ಹಾಗೆಯೇ ಬಿಡಿ. ಮೈದಾ, ಎಣ್ಣೆ, ಉಪ್ಪು, ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಹಿಟ್ಟು ನಾದಿಕೊಳ್ಳಿ. 15 ನಿಮಿಷಗಳ ಕಾಲ ಮುಚ್ಚಿಡಿ. ಅನಂತರ ಸ್ವಲ್ಪ ಹಿಟ್ಟಿನಲ್ಲಿ ಉಂಡೆ ಮಾಡಿ, ಪೂರಿ ಆಕಾರ ಮಾಡಿ ಎಣ್ಣೆಗೆ ಹಾಕಿ ಕರಿದು ತಟ್ಟೆಗೆ ಹಾಕಿದರೆ ಬಿಸ್ಕೆಟ್ ರೊಟ್ಟಿ ಸವಿಯಲು ಸಿದ್ಧವಾಗುತ್ತದೆ.
– ರಕ್ಷಿತಾ ಶೆಟ್ಟಿ, ಬಿ.ಸಿ. ರೋಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ