253.93 ಕೋಟಿ ರೂ. ಮಿಗತೆ ಬಜೆಟ್‌


Team Udayavani, Feb 22, 2017, 4:15 PM IST

Budget-21-2.jpg

ಲಾಲ್‌ಬಾಗ್‌: ಮಹಾನಗರ ಪಾಲಿಕೆ 2017- 18ನೇ ಸಾಲಿನಲ್ಲಿ ಒಟ್ಟು 909.76 ಕೋಟಿ ರೂ.ಗಳ ಆದಾಯ ಹಾಗೂ 655.83 ಕೋ.ರೂ. ಖರ್ಚು ಅಂದಾಜಿಸಿ 253.93 ಕೋ.ರೂ.ಗಳ ಮಿಗತೆ ಬಜೆಟನ್ನು ಮಂಗಳವಾರ ಪ್ರಕಟಿಸಿದೆ. ಮೇಯರ್‌ ಹರಿನಾಥ್‌ ಅವರ ಅಧ್ಯಕ್ಷತೆಯಲ್ಲಿ, ತೆರಿಗೆ ಹಣಕಾಸು, ಅಪೀಲುಗಳ ಸ್ಥಾಯೀ ಸಮಿತಿ ಅಧ್ಯಕ್ಷೆ ಅಪ್ಪಿ ಅವ ರು 623.07 ಕೋ.ರೂ.ಗಳ ಆಯವ್ಯಯ ಮಂಡಿಸಿದರು. ಆರಂಭಿಕ ನಗದು/ಬ್ಯಾಂಕ್‌ ಶಿಲ್ಕು 285.80 ಕೋ.ರೂ., ರಾಜಸ್ವ ಸ್ವೀಕೃತಿಯಿಂದ 310.70 ಕೋ.ರೂ. ಮತ್ತು ಬಂಡವಾಳ ಸ್ವೀಕೃತಿಯಿಂದ 313.26 ಕೋ.ರೂ. ಸೇರಿ 909.76 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜಸ್ವ ಪಾವತಿಗಾಗಿ 223.73 ಕೋ.ರೂ ಹಾಗೂ ಬಂಡವಾಳ ಪಾವತಿಗಾಗಿ 432.10 ಕೋ.ರೂ. ಸಹಿತ ಒಟ್ಟು 655.83 ಕೋ. ರೂ. ಖರ್ಚು ಅಂದಾಜಿಸಲಾಗಿದೆ.

ಆಸ್ತಿ ತೆರಿಗೆ-ಶೇ.13,ನೀರಿನ ಶುಲ್ಕ-ಶೇ.8, ಕಟ್ಟಡ ಪರವಾನಿಗೆ-ಶೇ.4, ಸರಕಾರದ ಅನುದಾನ-ಶೇ.68, ಜಾಹೀರಾತು ತೆರಿಗೆ-ಶೇ.1, ಒಳಚರಂಡಿ ಶುಲ್ಕ-ಶೇ.2, ವಾಣಿಜ್ಯ ಸಂಕೀರ್ಣ ಕಟ್ಟಡಗಳ ಮತ್ತು ನೆಲ ಬಾಡಿಗೆ-ಶೇ.2, ಉದ್ದಿಮೆ ಪರವಾನಿಗೆ-ಶೇ.1, ಇತರ ಮೂಲಗಳಿಂದ‌ ಶೇ.1 ಆದಾಯ ನಿರೀಕ್ಷಿಸಲಾಗಿದೆ.  ಉಪಮೇಯರ್‌ ಸುಮಿತ್ರಾ ಕರಿಯ, ಆಯುಕ್ತ ಮೊಹಮ್ಮದ್‌ ನಝೀರ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಲ್ಯಾನ್ಸ್‌ ಲಾಟ್‌ ಪಿಂಟೋ, ಕವಿತಾ ಸನಿಲ್‌, ಮೊಹಮ್ಮದ್‌ ಬಶೀರ್‌ ಉಪಸ್ಥಿತರಿದ್ದರು.

ಹೊಸತಿದು…!
ಕುಂಜತ್ತಬೈಲ್‌ನಲ್ಲಿ ನಿರುಪಯುಕ್ತ ಕಟ್ಟಡ ಸಾಮಗ್ರಿಗಳ ವಿಲೇವಾರಿಯ ರಸ್ತೆ ಅಭಿವೃದ್ಧಿಗಾಗಿ – 1 ಕೋ ರೂ.

ಘನತ್ಯಾಜ್ಯ ವಿಲೇವಾರಿ, ಪಚ್ಚನಾಡಿ ಘನತ್ಯಾಜ್ಯ ಘಟಕದ ಪಕ್ಕದಲ್ಲಿ 10 ಎಕರೆ ಖಾಸಗಿ ಜಮೀನು ಖರೀದಿಗೆ ಕ್ರಮ

32 ಪೌರ ಕಾರ್ಮಿಕರಿಗೆ 240 ಲಕ್ಷ ರೂ. ವೆಚ್ಚದಲ್ಲಿ ಜಿ+3 ಮಾದರಿಯ ಗೃಹ ನಿರ್ಮಾಣ

ಕೇಂದ್ರ ಪುರಸ್ಕೃತ ಯೋಜನೆಯಾದ ‘ಹೌಸಿಂಗ್‌ ಫಾರ್‌ ಆಲ್‌’ನಡಿ 2,100 ಮನೆಗಳ ವಿತರಣೆ

ಹಳೆಯ ಬೀದಿದೀಪ ತೆಗೆದು ಎಲ್‌ಇಡಿ ಮಾದರಿ ಹಾಗೂ ಸೋಲಾರ್‌ ಲೈಟ್‌ ಅಳವಡಿಕೆ.

ಎಪ್ರಿಲ್‌ನಿಂದ ‘ಪೇಪರ್‌ಲೆಸ್‌’
ಪಾಲಿಕೆಯನ್ನು ಪೇಪರ್‌ಲೆಸ್‌ (ಕಾಗದ ರಹಿತ ಕಚೇರಿ) ಮಾಡುವ ಸಂಬಂಧ ಹಲವು ತಿಂಗಳಿನಿಂದ ಪ್ರಸ್ತಾವ ಕೇಳಿಬರುತ್ತಿತ್ತು. ಈ ಸಂಬಂಧ ಪ್ರಾರಂಭಿಕ ತಯಾರಿ ಕೂಡ ನಡೆದಿತ್ತು. ಇದರ ಜತೆಗೆ ಪಾಲಿಕೆಯ 19 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲು ಮುಂದಾಗಿತ್ತು. ಇವೆರಡೂ ಯೋಜನೆಗಳಿಗೆ ಈ ಬಾರಿ ಉತ್ತರ ದೊರಕಲಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಎ.1ರಿಂದ ಕಾಗದ ರಹಿತ ಕಚೇರಿ ಹಾಗೂ 19 ಸೇವೆಗಳು ಆನ್‌ಲೈನ್‌ ಮೂಲಕ ಸಿಗಲಿದೆ. ಇದು ಸಾಧ್ಯವಾದರೆ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಮಾದರಿ ಎನಿಸಲಿದೆ. 

ಸ್ಮಾರ್ಟ್‌ ಸಿಟಿಗೆ ‘ಸ್ಮಾರ್ಟ್‌ ರೋಡ್‌’
ಸ್ಮಾರ್ಟ್‌ ಮಂಗಳೂರಿನ ಅನುಷ್ಠಾನದ ಪ್ರಾರಂಭಿಕ ಹಂತದಲ್ಲಿರುವ ನಗರದಲ್ಲಿ ಪಾಲಿಕೆಯು ‘ಸ್ಮಾರ್ಟ್‌ ರೋಡ್‌’ ಪರಿಕಲ್ಪನೆಯನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕಾಗಿ ಮಂಗಳೂರಿನ ಹೃದಯಭಾಗ ಪಿವಿಎಸ್‌ನಿಂದ ಲೇಡಿಹಿಲ್‌ವರೆಗಿನ 4 ಪಥದ ರಸ್ತೆಯನ್ನು ಸ್ಮಾರ್ಟ್‌ ರೋಡ್‌ ಆಗಿ ಪರಿವರ್ತಿಸಲು 2 ಕೋ.ರೂ. ಮೀಸಲಿರಿಸಲಾಗಿದೆ. ರಸ್ತೆಯ ಉದ್ದಕ್ಕೂ ವ್ಯವಸ್ಥಿತ ಸೌಕರ್ಯಗಳು ಲಭ್ಯವಾಗುವಂತೆ ಮಾಡುವುದೇ ಈ ಯೋಜನೆಯ ಉದ್ದೇಶ. ಇದರಂತೆ ಪಿವಿಎಸ್‌ನಿಂದ ಲೇಡಿಹಿಲ್‌ವರೆಗಿನ ರಸ್ತೆಯ ಎರಡೂ ಭಾಗದಲ್ಲಿ ವ್ಯವಸ್ಥಿತ ಫುಟ್‌ಪಾತ್‌, ಡ್ರೈನೇಜ್‌ ಹಾಗೂ ದಾರಿದೀಪ ಸಹಿತ ಪೂರಕ ವ್ಯವಸ್ಥೆಗಳೂ ಶೇ.100ರಷ್ಟು ನಿಖರವಾಗಿ ಜಾರಿಯಾಗಲಿದೆ. 

ಮಳೆ ನೀರು ಕೊಯ್ಲು ಕಡ್ಡಾಯ
ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದಾಗ ಮಳೆ ನೀರು ಕೊಯ್ಲು ಸಹಿತ ಇತರ ಅಂಶಗಳತ್ತ ಪಾಲಿಕೆ ಯೋಚಿಸುತ್ತದೆ. ಕೆಲವು ಕಡ್ಡಾಯ ನಿಯಮಗಳನ್ನು ಆ ಸಂದರ್ಭದಲ್ಲಿ ಪ್ರಕಟಿಸುತ್ತದೆ. ಈಗ ಈ ಬಾರಿ ಮಳೆ ನೀರು ಕೊಯ್ಲು ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನ ಮಾಡುವ ಬಗ್ಗೆ ಉಲ್ಲೇಖೀಸಿದೆ. ನೀರಿನ ಸದ್ಭಳಕೆಯ ಬಗ್ಗೆ ಅರಿವು ಮೂಡಿಸಲು ಪಾಲಿಕೆಯ ಎಲ್ಲ ಪ್ರಮುಖ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು 1 ಕೋಟಿ ರೂ. ಅನುದಾನ ಕಾದಿರಿಸಲಾಗಿದೆ. ಜತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 100 ಚ.ಮೀಟರ್‌ ವಿಸ್ತೀರ್ಣಕ್ಕಿಂತ ಹೆಚ್ಚಿನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ತಿಳಿಸಿದೆ.

ಅರ್ಥವಾಗದ ‘ಅರ್ಥ’ಶಾಸ್ತ್ರ
ಪ್ರತಿ ವರ್ಷ ಪಾಲಿಕೆ ಬಜೆಟ್‌ನಲ್ಲಿ ಪ್ರಾರಂಭದಲ್ಲಿ ಆದಾಯ, ಖರ್ಚು ಹಾಗೂ ಉಳಿಕೆ ಸಹಿತ ಒಟ್ಟು ವಿವರಗಳನ್ನು ವ್ಯವಸ್ಥಿತವಾಗಿ ನೀಡಲಾಗುತ್ತಿತ್ತು. ಈ ಬಾರಿ ಮಾತ್ರ ಎರಡೆರಡು ಬಾರಿ ಇಂತಹ ಲೆಕ್ಕವನ್ನು ‘ಗ್ರಾಸ್‌’ ಹಾಗೂ ‘ನೆಟ್‌’ ರೂಪದಲ್ಲಿ ನೀಡುವ ಮೂಲಕ ಮನಪಾ ವಿಪಕ್ಷಗಳಿಗೆ ಬಜೆಟ್‌ ಅಂಕಿಅಂಶಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿತು. ಬಜೆಟ್‌ ಪುಸ್ತಕದ ಅಂಕಿಅಂಶಗಳಲ್ಲಿ ಬಹುತೇಕ ಕಡೆಗಳಲ್ಲಿ ತಪ್ಪುಗಳು ಕೂಡಿದ್ದು, ಒಟ್ಟು ವ್ಯತ್ಯಾಸಗಳೇ ತುಂಬಿ, ಗೊಂದಲ ಉಂಟಾಗಿದೆ ಎಂದು ಪ್ರತಿಪಕ್ಷ ಸದಸ್ಯರು ಆರೋಪಿಸಿದರು.

ಹೊಸ ಬಸ್‌ ನಿಲ್ದಾಣ
ಪಂಪ್‌ವೆಲ್‌ ಹೊಸ ಬಸ್‌ನಿಲ್ದಾಣದ ಜತೆಯಲ್ಲೇ ಬಂಗ್ರಕೂಳೂರುವಿನಲ್ಲಿ ನಿಲ್ದಾಣ ನಿರ್ಮಿಸಲು ಜಿಲ್ಲಾಧಿಕಾರಿಗಳ ಜತೆಯಲ್ಲಿ ಸ್ಥಳ ಸಮೀಕ್ಷೆ ನಡೆಸಲಾಗಿದೆ. ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ವಲಯ ಕಚೇರಿ ಕೆಲವೇ ದಿನದಲ್ಲಿ ನಡೆಯಲಿದೆ. ಕುಡಿಯುವ ನೀರು ಪೂರೈಕೆಗೆ ತುಂಬೆಯಲ್ಲಿ ಪ್ರತ್ಯೇಕ ‘ವಿಂಗ್‌’ ವ್ಯವಸ್ಥೆ ಮಾಡಲಾಗಿದೆ.
– ಹರಿನಾಥ್‌, ಮೇಯರ್‌

ಸಂಪನ್ಮೂಲ ಕ್ರೋಢೀಕರಣದ ಹಾದಿ
ಆಸ್ತಿ ತೆರಿಗೆ

2016-17ನೇ ಸಾಲಿನಲ್ಲಿ ಆಸ್ತಿ ತೆರಿಗೆಯಲ್ಲಿ 5,500 ಲಕ್ಷ ರೂ. ನಿರೀಕ್ಷಿಸಲಾಗಿದ್ದು, 2016ರ ಡಿಸೆಂಬರ್‌ ಅಂತ್ಯಕ್ಕೆ 2,266.85 ಲಕ್ಷ ರೂ. ವಸೂಲಿ ಮಾಡಲಾಗಿದೆ. 2017-18ನೇ ಸಾಲಿಗೆ 4,900 ಲಕ್ಷ ರೂ.ಗಳನ್ನು ಆಸ್ತಿ ತೆರಿಗೆಯಿಂದ ನಿರೀಕ್ಷಿಸಲಾಗಿದ್ದು, ಶೇ.90ರ ಗುರಿ ಮುಟ್ಟಲು ನಿರೀಕ್ಷಿಸಲಾಗಿದೆ. 1,350 ಲಕ್ಷ ರೂ. ಆದಾಯವನ್ನು ಘನತ್ಯಾಜ್ಯ ವಿಲೇವಾರಿ ಶುಲ್ಕದಿಂದ ನಿರೀಕ್ಷಿಸಲಾಗಿದೆ. 

ನೀರು, ಒಳಚರಂಡಿ ನಿರ್ವಹಣೆ ಕರ
2016-17 ಸಾಲಿನಲ್ಲಿ ನೀರಿನ ತೆರಿಗೆಯಿಂದ 4,500 ಲಕ್ಷ ರೂ.ಗಳ ಗುರಿಯನ್ನು ಹೊಂದಲಾಗಿತ್ತು. 2016ರ ಡಿಸೆಂಬರ್‌ ಅಂತ್ಯಕ್ಕೆ 2,473.21 ಲಕ್ಷ ರೂ. ವಸೂಲಿ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ನೀರಿನ ದರದಲ್ಲಿ 5,000 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ಒಳಚರಂಡಿ ಅಭಿವೃದ್ಧಿ ಶುಲ್ಕದಿಂದ 398.55 ಲಕ್ಷ ರೂ. ನಿರೀಕ್ಷಿಸಲಾಗಿದೆ.

ಪಾಲಿಕೆ ಆಸ್ತಿಗಳಿಂದ ಬರುವ ಬಾಡಿಗೆ
ನಗರ ಪಾಲಿಕೆ ಆಸ್ತಿಗಳಾದ ವಾಣಿಜ್ಯ ಸಂಕೀರ್ಣ, ಕಟ್ಟಡ ಬಾಡಿಗೆ, ಪುರಭವನ ಬಾಡಿಗೆಯಿಂದ 2017-18ರಲ್ಲಿ 468 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. 

ಇತರ ತೆರಿಗೆಗಳು
ರಸ್ತೆ ಅಗೆತ ಮತ್ತು ಪುನರ್‌ ಸ್ಥಾಪನೆ ಶುಲ್ಕಗಳು 400 ಲಕ್ಷ ರೂ, ಜನನ ಮರಣ ಪತ್ರಗಳ ಶುಲ್ಕ 15 ಲಕ್ಷ ರೂ, ಸಾವಯವ ಗೊಬ್ಬರ ಮಾರಾಟದಿಂದ 20 ಲಕ್ಷ ರೂ, ವಾಹನ ಉಪಕರಣ ಬಾಡಿಗೆಯಿಂದ 52 ಲಕ್ಷ ರೂ, ಹೂಡಿಕೆಗಳ ಮೇಲಿನ ಬಡ್ಡಿ ಮತ್ತು ಬ್ಯಾಂಕ್‌ ಬಡ್ಡಿಗಳಿಂದ 825 ಲಕ್ಷ ರೂ, ಜಾಹೀರಾತು ತೆರಿಗೆಯಿಂದ 450 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. 

ಉದ್ದಿಮೆ ಪರವಾನಿಗೆ, ವಾಹನ ನಿಲುಗಡೆ ಶುಲ್ಕ
2016-17ರಲ್ಲಿ ಉದ್ದಿಮೆ ಪರವಾನಿಗೆಯಿಂದ 325 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿತ್ತು. ಡಿಸೆಂಬರ್‌ ಅಂತ್ಯಕ್ಕೆ 94 ಲಕ್ಷ ರೂ. ವಸೂಲಿ ಮಾಡಲಾಗಿದೆ. 2017-18ನೇ ಸಾಲಿಗೆ 270 ಲಕ್ಷ ರೂ. ಹಾಗೂ ವಾಹನ ನಿಲುಗಡೆ, ಇತರೆ ಪರವಾನಿಗೆ ಶುಲ್ಕ, ತಂಗುದಾಣ ಶುಲ್ಕ ಹಾಗೂ ದಂಡಗಳಿಂದ 63 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

ಸರಕಾರದಿಂದ ಸಿಗುವ ಅನುದಾನದ ನಿರೀಕ್ಷೆ 
ರಾಜ್ಯ ಸರಕಾರದಿಂದ ಎಸ್‌ಎಫ್‌ಸಿ ನಿಧಿಯಡಿಯಲ್ಲಿ ವೇತನ ಅನುದಾನವಾಗಿ 3,500 ಲಕ್ಷ ರೂ., ವಿದ್ಯುತ್‌ ಅನುದಾನವಾಗಿ 4,270 ಲಕ್ಷ ರೂ., ಸ್ಟಾಂಪ್‌ ಶುಲ್ಕ ಸರ್‌ಚಾರ್ಜ್‌ 400 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತನಿಧಿಯಡಿಯಲ್ಲಿ 2,500 ಲಕ್ಷ ರೂ., ಎಸ್‌ಎಫ್‌ಸಿ ಪ್ರೋತ್ಸಾಹ ಧನ 255 ಲಕ್ಷ ರೂ., ಎಸ್‌ಎಫ್‌ಸಿಯಡಿಯಲ್ಲಿ ಅಭಾವ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗಾಗಿ 100 ಲಕ್ಷ ರೂ. ಹಾಗೂ ಬಿಡುಗಡೆಗೆ ಬಾಕಿಯಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನ ನಗರೋತ್ಥಾನ 2ನೇ ಹಂತದಡಿ 4,000 ಲಕ್ಷ ರೂ. ಹಾಗೂ 3ನೇ ಹಂತದಡಿ 5,305 ಲಕ್ಷ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. 

ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದೊಂದಿಗೆ ಅನುಷ್ಠಾನವಾಗುತ್ತಿರುವ ಅಮೃತ್‌ ಯೋಜನೆ ಹಾಗೂ ಎಡಿಬಿ 2ನೇ ಹಂತದ ಯೋಜನೆಯನ್ನು ನಗರದಲ್ಲಿ ಜಾರಿಗೊಳಿಸಲು 18,074 ಲಕ್ಷ ರೂ. ನಿರೀಕ್ಷಿಸಲಾಗಿದೆ.

ಅಭಿವೃದ್ಧಿ, ಸಹಾಯಧನ
ಪರಿಶಿಷ್ಟ ಜಾತಿ/ಪಂಗಡದ ಅಭಿವೃದ್ಧಿ- 961.50 ಲಕ್ಷ ರೂ. 
ಬಡವರ ಅಭಿವೃದ್ಧಿ- 289.25 ಲಕ್ಷ ರೂ. 
ಅಂಗವಿಕಲರ ಅಭಿವೃದ್ಧಿ- 120 ಲಕ್ಷ ರೂ.
ಬಡಜನರಿಗಾಗಿ ಸ್ಥಸ್ಥ ಕುಟೀರ, ಕುಟೀರ ಜ್ಯೋತಿ ಯೋಜನೆಗೆ 150 ಲಕ್ಷ ರೂ.
ಕ್ರೀಡಾ ಚಟುವಟಿಕೆಗಳಿಗೆ 50 ಲಕ್ಷ ರೂ.
ಪ್ರಕೃತಿ ವಿಕೋಪ, ಪರಿಹಾರ 10 ಲಕ್ಷ ರೂ.
ಬೀದಿ ನಾಯಿ ಕಡಿತ ಪರಿಹಾರ 3 ಲಕ್ಷ

ಆರೋಗ್ಯ, ಸ್ವಚ್ಛತೆ
ಹೊರಗುತ್ತಿಗೆ ಕಾಮಗಾರಿಗಳಾದ ದಾರಿದೀಪ ನಿರ್ವಹಣೆಗೆ 400 ಲಕ್ಷ ರೂ.
ಘನತ್ಯಾಜ್ಯ ವಿಲೇವಾರಿ 3,500 ಲಕ್ಷ ರೂ.
ಸಗಟು ನೀರು ಖರೀದಿಗಾಗಿ 25 ಲಕ್ಷ ರೂ.
ಹೊರಗುತ್ತಿಗೆ ಕಾರ್ಯನಿರ್ವಹಣೆ ವೆಚ್ಚಕ್ಕಾಗಿ 400 ಲಕ್ಷ ರೂ.
ಒಳಚರಂಡಿ ಹೊರಗುತ್ತಿಗೆ 240 ಲಕ್ಷ ರೂ.
ವಾಹನ ಬಾಡಿಗೆ 160 ಲಕ್ಷ ರೂ.
ಮಲೇರಿಯಾ ನಿಯಂತ್ರಣ 150 ಲಕ್ಷ
ಬೀದಿ ನಾಯಿ ನಿಯಂತ್ರಣಕ್ಕಾಗಿ 15 ಲಕ್ಷ 
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ 10 ಲಕ್ಷ ರೂ.

ಕಟ್ಟಡ ನಿರ್ಮಾಣ
ಮನಪಾ ಕಟ್ಟಡ ದುರಸ್ತಿ ಮತ್ತು ನಿರ್ವಹಣೆ- 180 ಲಕ್ಷ ರೂ.
ಮನಪಾ ವಸತಿಗೃಹಗಳು -75 ಲಕ್ಷ ರೂ.
ಇತರ ಕಟ್ಟಡಗಳ ನಿರ್ವಹಣೆ -20 ಲಕ್ಷ
ಶೌಚಾಲಯ -100 ಲಕ್ಷ ರೂ.
ಕಚೇರಿ ಉಪಕರಣ ಹಾಗೂ ಪೀಠೊಪಕರಣ –  90 ಲಕ್ಷ ರೂ.
ಪುರಭವನ/ರಂಗಮಂದಿರ ನಿರ್ವಹಣೆ -80 ಲಕ್ಷ ರೂ. ಸುಂದರೀಕರಣ
ಈಜುಕೊಳಗಳ ದುರಸ್ತಿಗೆ 30 ಲಕ್ಷ ರೂ.
ಪಾರ್ಕ್‌ ಅಭಿವೃದ್ಧಿ – 300 ಲಕ್ಷ ರೂ. ರಸ್ತೆಗಳಿಗೆ ಹೊಸ ಲುಕ್‌
ರಸ್ತೆಗಳ ಪುನರ್‌ ನವೀಕರಣ,  ಪಾದಚಾರಿ ರಸ್ತೆಗಳು ಹಾಗೂ ಗುಂಡಿ ಮುಚ್ಚುವ ಕಾಮಗಾರಿ- 2,200 ಲಕ್ಷ ರೂ.
ರಸ್ತೆಗಳ ನಿರ್ವಹಣೆ- 110 ಲಕ್ಷ ರೂ.
ರಸ್ತೆಗಳಲ್ಲಿ ಇಂಟರ್‌ಲಾಕ್‌/ಡಾಮರೀಕರಣ/ಕಾಂಕ್ರೀಟೀಕರಣ – 1,500 ಲಕ್ಷ ರೂ.
ರಸ್ತೆ ಅಗಲೀಕರಣ, ಪಾದಚಾರಿ ರಸ್ತೆ ಮತ್ತು ರಸ್ತೆ ಬದಿ ಚರಂಡಿ – 1,500 ಲಕ್ಷ ರೂ.
ರಸ್ತೆಗಳಿಗೆ ನಾಮಫಲಕ ಮತ್ತು ಎಚ್ಚರಿಕೆ ಫಲಕ ಹಾಕುವುದು – 150 ಲಕ್ಷ ರೂ. 

ಚರಂಡಿ ಅಭಿವೃದ್ಧಿ
ಚರಂಡಿ ಬದಿಗೋಡೆ – 200 ಲಕ್ಷ ರೂ.
ಬಾಕಿ ಬಿಲ್ಲು ಪಾವತಿಗೆ – 100 ಲಕ್ಷ ರೂ.
ಚರಂಡಿ ನಿರ್ವಹಣೆಗೆ – 200 ಲಕ್ಷ ರೂ.
ಚರಂಡಿ ನಿರ್ಮಾಣ -250 ಲಕ್ಷ ರೂ.
ಹೂಳು ತೆಗೆಯುವುದು – 100 ಲಕ್ಷ ರೂ.
ಒಳಚರಂಡಿ ಕೊಳವೆ ಮಾರ್ಗಗಳು – 500 ಲಕ್ಷ ರೂ.
ಸ್ಥಾವರ, ಯಂತ್ರೋಪಕರಣ – 500 ಲಕ್ಷ ರೂ. 

ನೀರು ಸರಬರಾಜು
ನೀರು ಸರಬರಾಜು ಮತ್ತು ವಿಸ್ತರಣೆ – 440 ಲಕ್ಷ ರೂ.
ತುಂಬೆ ವೆಂಟೆಡ್‌ ಡ್ಯಾಂ ಭೂಸ್ವಾಧೀನಕ್ಕಾಗಿ – 1000 ಲಕ್ಷ ರೂ. 
ಕೊಳವೆ ಮಾರ್ಗಗಳ ದುರಸ್ತಿ ಮತ್ತು ನಿರ್ವಹಣೆ – 200 ಲಕ್ಷ ರೂ. 
ಕಳೆದ ಬೇಸಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿದ್ದು, ಈ ಸಮಸ್ಯೆ ಬಗೆಹರಿಸುವ ನೆಲೆಯಲ್ಲಿ ತುಂಬೆಯ 
ಹೊಸ ಕಿಂಡಿ ಅಣೆಕಟ್ಟಿನಲ್ಲಿ 5 ಮೀ. ಎತ್ತರದವರೆಗೆ ನೀರು ಸಂಗ್ರಹಿಸಿದ್ದು, ಬಹುತೇಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.