Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಧುಗಿರಿ: ಮೇಕೆ ಕಳ್ಳನ ಹಿಡಿದು ಬಡಿದು ಕೊಂದರು !

ಮಧುಗಿರಿ: ತಾಲೂಕಿನ ದೊಡ್ಡಮಾಲೂರಿನಲ್ಲಿ ಮೇಕೆ ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬನನ್ನು ಬಡಿದುಕೊಲೆಗೈದ ಘಟನೆ ಸೋಮವಾರ ರಾತ್ರಿ ನಡೆದಿದೆ. 

ರಾಮರೆಡ್ಡಿ ಎನ್ನುವವರ ಮನೆ ಬಳಿ ಘಟನೆ ನಡೆದಿದ್ದು, ರಾತ್ರಿ ವಾಹನದಲ್ಲಿ ಬಂದಿದ್ದ ನಾಲ್ವರು ಕಳ್ಳರು ಮೇಕೆ ಕಳವಿಗೆ ಯತ್ನಿಸಿದ್ದಾರೆ. ಮೇಕೆಗಳ ಅರಚಾಟ ಕೇಳಿ ಎಚ್ಚರಗೊಂಡ ರಾಮರೆಡ್ಡಿ ಕಳ್ಳರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಓರ್ವ ಸಿಕ್ಕಿಬಿದ್ದಿದ್ದಾನೆ. 

ಹಲವರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರ ಹಲ್ಲೆಗೊಳಗಾದ ಆತ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಹತ್ಯೆಗೊಳಗಾದವ ಆಂಧ್ರದ ಮಣೂರು ಗ್ರಾಮದ ರಾಜು ಎಂದು ಹೇಳಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ಕೊಡಿಗೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. 


More News of your Interest

Trending videos

Back to Top