ಯಹೂದಿ ವಿನೋದ ಕತೆಗಳು; ಮೂರ್ಖತನದ ಗುರುತು


Team Udayavani, Mar 26, 2017, 3:50 AM IST

26-SAPT-9.jpg

ಒಬ್ಬ ಯುವಕ ರಬೈ ಬಳಿ ಬಂದ. “”ಗುರುಗಳೆ, ನಾನೊಬ್ಬ ಮೂರ್ಖ ಎನ್ನುವುದು ಗೊತ್ತು. ಆದರೆ, ಅದಕ್ಕಾಗಿ ಏನು ಮಾಡುವುದೆಂದೇ ನನಗೆ ತಿಳಿಯದಾಗಿದೆ. ದಯವಿಟ್ಟು ಉದ್ಧರಿಸಿ!” ಎಂದು ಕಣ್ಣೀರಿಡುತ್ತ ತನ್ನ ತಲೆಯನ್ನು ರಬೈಯ ಪಾದಗಳಿಗೆ ಒತ್ತಿದ.

“”ಮಗೂ! ನೀನು ಮೂರ್ಖನೆಂಬ ಸಾಕ್ಷಾತ್ಕಾರ ನಿನಗಾಗಿದೆಯಾದರೆ ನೀನು ನಿಜವಾಗಿಯೂ ಮೂರ್ಖನಲ್ಲ!” ಎಂದ ರಬೈ ಸಂತೈಸುವ ದನಿಯಲ್ಲಿ. “”ಹಾಗಾದರೆ ಯಾಕೆ ಎಲ್ಲರೂ ನನ್ನನ್ನು ಮೂರ್ಖ ಅಂತ ಹೀಯಾಳಿಸುತ್ತಾರೆ?” “”ನಿನಗೇ ನೀನು ಯಾಕೆ ಮೂರ್ಖ ಎನ್ನುವುದು ಗೊತ್ತಾಗದೆ, ಉತ್ತರಕ್ಕಾಗಿ ಬೇರೆಯವರನ್ನು ಕೇಳುತ್ತೀ ಅಂತಾದರೆ… ರಬೈ ಖಚಿತ ದನಿಯಲ್ಲಿ ಹೇಳಿದ: ನೀನು ನಿಜವಾಗಿಯೂ ಒಬ್ಬ ಶತಮೂರ್ಖ!”

ಕುದುರಿದ ವ್ಯವಹಾರ
ಮೋರಿಸ್‌ ಮತ್ತು ಬರ್ನಾರ್ಡ್‌ ಒಂದು ವ್ಯಾಪಾರದ ಮಾತುಕತೆಗಾಗಿ ಹೊಟೇಲಲ್ಲಿ ಸಂಧಿಸಿದ್ದರು. ಮಾತಿನ ಮಧ್ಯೆ ಮೋರಿಸ್‌, “”ನಿಂಗೊಂದು ಒಳ್ಳೆಯ ಡೀಲ್‌ ಇದೆ ನನ್ನ ಹತ್ತಿರ. ಕಳೆದ ತಿಂಗಳು ನ್ಯೂಯಾರ್ಕಿನ ಝೂಗೆ ಹೋದಾಗ, ಅವರಿಗೆ ಬೇಡವಾಗಿದ್ದ ಒಂದು ಆನೆಯನ್ನು ಖರೀದಿಸಿದೆ. ನಿನಗೆ ಬೇಕಾದ್ರೆ ಐದು ಸಾವಿರಕ್ಕೆ ಕೊಡ್ತೇನೆ” ಎಂದ.

ಜಿನ್‌ ಹೀರುತ್ತಿದ್ದ ಬರ್ನಾರ್ಡ್‌ ಒಂದು ಕ್ಷಣ ಆ ಮಾತು ಕೇಳಿ, ಓಲಾಡಿ ಬಿದ್ದೇಬಿಡುವುದರಲ್ಲಿದ್ದ. “”ಮೋರಿಸ್‌, ನಿನಗೆ ತಲೆಗಿಲೆ ಸರಿಯಾಗಿದೆಯೋ ಇಲ್ವೋ? ಅಲ್ಲಯ್ನಾ, ನಾನಿರುವುದು ಮೂರನೇ ಮಾಳಿಗೆಯಲ್ಲಿ. ಅಲ್ಲಿ ನನ್ನ ಕುರ್ಚಿ-ಮೇಜು ಇಟ್ಟುಕೊಳ್ಳಲಿಕ್ಕೇ ಜಾಗ ಇಲೆª ಒ¨ªಾಡ್ತಿದೇನೆ. ಅಂಥಾದ್ದರಲ್ಲಿ, ಆನೆ – ಒಂದು ಆನೇನ ನನ್ನ ತಲೆಗೆ ಕಟ್ಟೋದಕ್ಕೆ ನೋಡ್ತಿಯಲ್ಲಯ್ಯ?” ಎಂದ ನಗುತ್ತ.

“”ಹೋಗ್ಲಿ ಬಿಡು, ಏರೊದು ಇಳಿಸೋದು ಎಲ್ಲ ಬಿಟ್ಟು ಕೊಡೋ ರೇಟು ಹೇಳೆ¤àನೆ. ಮೂರು ಆನೆಗೆ ಹದಿನೈದಲ್ಲ, ಕೇವಲ ಹತ್ತು ಸಾವಿರ. ಈಗ?” ಎಂದು ಮೋರಿಸ್‌ ಸೋಡಿಯ ಗಾಳಿ ಬೀಸಿದ. “”ಇದಪ್ಪಾ ಮಾತಂದ್ರೆ!”  ಖುಷಿಯಾದ ಬರ್ನಾರ್ಡ್‌ ಪೂರ್ತಿ ಜಿನ್ನು ಹೀರಿ ವ್ಯವಹಾರಕ್ಕೆ ಕೂತ.

ಜಗಳದ ಅಂತ್ಯ
ಹ್ಯಾರಿ ಆಗಷ್ಟೇ ಒಂದು ದೊಡ್ಡ ಜಗಳ ಮಾಡಿ ಪತ್ನಿಯೊಂದಿಗೆ ಹೊರಟಿದ್ದ. ಕಾರಲ್ಲಿ ಅಕ್ಕಪಕ್ಕದಲ್ಲೇ ಕೂತಿದ್ದರೂ ಇಬ್ಬರಿಗೂ ಕೋಪ ಇಳಿದಿರಲಿಲ್ಲ. ಅಸಹನೀಯ ಮೌನದಲ್ಲಿ ಪ್ರಯಾಣ ಸಾಗಿತ್ತು. ಅಷ್ಟರಲ್ಲಿ, ಎಲ್ಲಿಂದಲೋ ಬಂದ ಒಂದು ಪೊಲೀಸ್‌ ಜೀಪು, “ಕಾರು ನಿಲ್ಲಿಸಿ! ಕಾರು ನಿಲ್ಲಿಸಿ!’ ಎಂದು ಘೋಷಣೆ ಕೂಗುತ್ತ ಹ್ಯಾರಿಯ ಕಾರಿನ ಪಕ್ಕ ಬಂತು. ಹ್ಯಾರಿ ಕಾರು ನಿಲ್ಲಿಸಿದ. ಅವನ ಪಕ್ಕ ಪೊಲೀಸ್‌ ಅಧಿಕಾರಿಯೊಬ್ಬ ಪ್ರತ್ಯಕ್ಷನಾದ.

“”ಈ ದಾರಿಯಲ್ಲಿ 50 ದಾಟೋ ಹಾಗಿಲ್ಲ ಅಂತ ನಿಯಮ ಇದೆ. ಆದರೆ ನಿಮ್ಮ ಕಾರು ಕನಿಷ್ಠ 65ರಲ್ಲಿ ಹೋಗ್ತಾ ಇತ್ತು” ಪೊಲೀಸ್‌ ಗಡುಸಾಗಿ ಹೇಳಿದ.
“”ಇಲ್ಲಾ ಸಾರ್‌, ಐವತ್ತರೊಳಗೇ ಇತ್ತು” ಎಂದ ಹ್ಯಾರಿ.
“”ಹ್ಯಾರಿ! ನೀನು ಹೋಗ್ತಾ ಇದ್ದದ್ದು 70ರಲ್ಲಿ!” ಪತ್ನಿ ಬಾಯಿ ಬಿಟ್ಟಳು. ಹ್ಯಾರಿ ತಿರುಗಿ ಅವಳಿಗೊಂದು ತೀಕ್ಷ್ಣನೋಟ ಕೊಟ್ಟು ಸುಮ್ಮನಾದ.
“”ಹಾಗೇನೇ ಈ ಕಾರಿನ ಬ್ರೇಕ್‌ಲೈಟ್‌ ಕೂಡ ಒಡೆದಿದೆ. ಅದಕ್ಕೂ ನೀವು ದಂಡ ಕಟ್ಟಬೇಕು”
“”ಹೌದಾ? ನನಗೆ ಗೊತ್ತೇ ಇರಲಿಲ್ಲ. ಹೊರಟಾಗ ಸರಿಯಾಗೇ ಇತ್ತಲ್ಲ” ಎಂದ ಹ್ಯಾರಿ.

“”ಏನಾಗಿದೆ ನಿನಗೆ? ಅದು ಒಡೆದುಹೋಗಿ ಆಗಲೇ ತಿಂಗಳಾಗುತ್ತ ಬಂತು” ಪತ್ನಿ ಸಮಜಾಯಿಷಿ ಕೊಟ್ಟಳು. ಹ್ಯಾರಿಯ ಕಣ್ಣು ಕೆಂಪಗಾದವು.
“”ಹಾಗೇನೇ ನೀವು ಸೀಟ್‌ ಬೆಲ್ಟ್ ಕೂಡ ಹಾಕ್ಕೊಂಡಿಲ್ಲವಲ್ಲ?” ಎನ್ನುತ್ತ ಪೋಲೀಸ್‌ ರಸೀತಿ ಬರೆಯಲು ತೊಡಗಿದ.
“”ಇಲ್ಲ ಸಾರ್‌, ಹಾಕ್ಕೊಂಡೇ ಇ¨ªೆ. ಕಾರು ನಿಲ್ಲಿಸಿದ ಮೇಲೆ ತೆಗೆದೆ ಅಷ್ಟೆ” ಎಂದು ಅಂಗಲಾಚಿದ ಹ್ಯಾರಿ.
“”ಸುಮ್ಮನೆ ಯಾಕೆ ಸಿಕ್ಕಿಬೀಳುತ್ತೀಯ ಹ್ಯಾರಿ? ನೀನ್ಯಾವತ್ತೂ ಅದನ್ನು ಧರಿಸಿದವನೇ ಅಲ್ಲ!” ಎಂದಳು ಪತ್ನಿ. 
ಹ್ಯಾರಿಗೆ ಮೈಯೆಲ್ಲ ಕುದ್ದು ಹೋಯಿತು. ಆಕೆಯತ್ತ ತಿರುಗಿ, “”ನಿನ್ನ ಹರಕು ಬಾಯನ್ನು ಮುಚ್ಚಿ ಕೂತಿರಿ¤àಯೋ ಇಲ್ಲವೋ?” ಎಂದು ಕಿರುಚಿದ.

ಪೊಲೀಸ್‌ ತನ್ನ ಕತ್ತನ್ನು ಬಾಗಿಸಿ, ಆಕೆಯೊಂದಿಗೆ, “”ನಿಮ್ಮ ಪತಿ ಹೀಗೆಯೇ ವರ್ತಿಸುತ್ತಾರ ಯಾವಾಗಲೂ?” ಎಂದು ವಿಚಾರಣೆ ಶುರುಮಾಡಿದ. ಆಕೆ ತಕ್ಷಣ ಗಂಡನ ನೆರವಿಗೆ ಧಾವಿಸುವಂತೆ, “”ಅಯ್ಯೋ ಇಲ್ಲ ಇಲ್ಲ! ಕುಡಿದಿದ್ದಾಗ ಮಾತ್ರ ಈ ರಂಪ!” ಎಂದಳು.

ಮುಟ್ಟಾಳ
ಸ್ಯಾಡಿಗೂ ಮೌರಿಸ್‌ಗೂ ಜಗಳ ಹತ್ತಿತ್ತು. 
“”ನೀನೊಬ್ಬ ಮುಟ್ಟಾಳ. ನೀನು ಹಿಂದೆಯೂ ಮುಟಾuಳನಾಗಿದ್ದವ, ಮುಂದೆಯೂ ಆಗಿರುವವ. ನಿನ್ನ ನಡೆ-ನುಡಿ-ವೇಷಭೂಷಣ ಎಲ್ಲವೂ ಮುಟ್ಟಾಳನದ್ದೇ. ನೀನು ಸಾಯುವವರೆಗೂ ಒಬ್ಬ ದೊಡ್ಡ ಮುಟಾuಳನಾಗೇ ಇರುವವನು. ಈ ಜಗತ್ತಲ್ಲಿ ಮುಟಾuಳರ ಸ್ಪರ್ಧೆ ಇಟ್ಟರೆ ಅದರಲ್ಲಿ ನೀನು ಪ್ರಪಂಚದ ಎರಡನೆಯ ದೊಡ್ಡ ಮುಟಾuಳ ಅನ್ನುವ ಬಹುಮಾನ ಪಡೆಯುತ್ತಿ”” ಎಂದು ಸ್ಯಾಡಿ ವಾಚಾಮಗೋಚರವಾಗಿ ಬಯ್ಯುತ್ತಿದ್ದ.

ಇದೆಲ್ಲವನ್ನು ಕೇಳಿಸಿಕೊಂಡು ಉಗುಳು ನುಂಗುತ್ತ ನಿಂತಿದ್ದ ಮೌರಿಸ್‌ ತುಸುವೇ ಕತ್ತೆತ್ತಿ, “”ಆದರೆ… ಎರಡನೆಯ ಮುಟಾuಳ ಯಾಕೆ?” ಎಂದು ಕ್ಷೀಣದನಿಯಲ್ಲಿ ಕೇಳಿದ.
“”ಯಾಕೆ? ಯಾಕೆಂದರೆ, ಆ ಸ್ಪರ್ಧೆಯಲ್ಲಿ ಕೂಡ ಮೊದಲ ಬಹುಮಾನ ಪಡೆಯುವಷ್ಟು ಬುದ್ಧಿವಂತಿಕೆ ಇಲ್ಲದ ಮುಟಾuಳ ನೀನು!” ಸ್ಯಾಡಿ ತನ್ನ ತರ್ಕ ವಿವರಿಸಿದ.

ಊಟದ ಸಮಸ್ಯೆ

ಯಹೂದಿಗಳ ಚೈನೀಸ್‌ ಫ‌ುಡ್‌ ಪ್ರೇಮ ಜಗದ್ವಿಖ್ಯಾತ. ಮೋಷೆ ಒಂದು ಚೈನೀಸ್‌ ರೆಸ್ಟೋರೆಂಟಿನಲ್ಲಿ ಊಟ ಮಾಡುತ್ತಿರುವಾಗ ಪಕ್ಕದಲ್ಲೇ ನಿಂತಿದ್ದ ಸರ್ವರ್‌ ಜೊತೆ ಲೋಕಾಭಿರಾಮ ಮಾತಾಡುತ್ತಿದ್ದ. “”ಚೀನೀಯರು ನಿಜವಾಗಿಯೂ ಬಹಳ ಒಳ್ಳೆಯ ಜನ!” ಎಂದು ಬಾಯ್ತುಂಬ ಕೊಂಡಾಡಿದ. ನಿಂತಿದ್ದ ಚೀನೀ ಸರ್ವರ್‌ಗೆ ಎದೆಯುಬ್ಬಿ ಬಂತು. “”ಅದು ಸತ್ಯದ ಮಾತು. ನಾವು ಚೀನಾದವರು ಬಹಳ ಸುಸಂಸ್ಕೃತರು. ಯಾಕೆಂದರೆ, ನಮ್ಮ ನಾಗರೀಕತೆ ನಾಲ್ಕು ಸಾವಿರ ವರ್ಷಗಳಷ್ಟು ಪ್ರಾಚೀನವಾದ್ದಲ್ಲವೆ? ಆದರೆ, ಯಹೂದಿಗಳು ಕೂಡ ನಮ್ಮಂತೆಯೇ ಬಹಳ ಸಂಸ್ಕಾರವಂತ ಜನ. ಏನಂತೀರಿ?”ಎಂದ ಅವನು. 

ಮೋಷೆಯ ಮುಖ ಅರಳಿತು. “”ಹೌದೌದು. ಯಾಕೆಂದರೆ ನಮ್ಮ ನಾಗರೀಕತೆ 5000 ವರ್ಷ ಹಳೆಯದಲ್ಲವೆ?” ಎಂದ.
ಈಗ ಮಾತ್ರ ಸರ್ವರ್‌ ಮುಖದಲ್ಲಿ ಸಂಶಯ ಕಾಣಿಸಿತು. “”ಅದು ಮಾತ್ರ ಸುಳ್ಳು ತೆಗೀರಿ! ನೀವೇ ನಮಗಿಂತ ಮುಂಚೆ ಬಂದವರಾದರೆ, ಆ ಒಂದು ಸಾವಿರ ವರ್ಷ ನೀವು ಯಹೂದಿಗಳು ಎಲ್ಲಿ ಊಟ ಮಾಡ್ತಾ ಇದ್ದಿರಿ?” ಅಂತ ಕೇಳಿಯೇಬಿಟ್ಟ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.