ಹೊರನಾಡ ಕನ್ನಡಿಗರ ಅಸ್ಮಿತೆಯ ಪ್ರಶ್ನೆ


Team Udayavani, Apr 2, 2017, 3:50 AM IST

01-SAPTAHIKA-10.jpg

ಯಾವುದೋ ಕಾರಣಕ್ಕೆ ಹುಟ್ಟಿದೂರನ್ನು ಬಿಟ್ಟು ಹೊರನಾಡಿಗೆ ಹೋಗಿ ಬದುಕುತ್ತಿರುವ ಕನ್ನಡಿಗರ ಬಗ್ಗೆ ಒಳನಾಡಿನ ಜನರು ಹೇಗೆ ಯೋಚಿಸುತ್ತಿರಬಹುದು ಎಂದು ಊಹಿಸಲಾಗುತ್ತಿಲ್ಲ. ದೆಹಲಿ-ಮುಂಬಯಿ ಅಂತಹ ಕಡೆಗೆ ಒಳನಾಡಿನಿಂದ ಆಗಮಿಸುವ ಜನರಿಗೆ ಹೊರನಾಡಿನ ಜನರು ಅಗತ್ಯ ಬಿದ್ದರೆ ಕಡಿಮೆ ಖರ್ಚಿನಲ್ಲಿ ವಸತಿ ವ್ಯವಸ್ಥೆ ಮಾಡಿಕೊಡಬೇಕು, ಅವರ ಪ್ರಯಾಣಕ್ಕೆ ವಾಹನಗಳನ್ನು ಗೊತ್ತು ಮಾಡಿಕೊಡಬೇಕು. ಸಾಂಸ್ಕೃತಿಕ ತಂಡಗಳಾದರೆ ಅವರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಇತ್ಯಾದಿ. ಇದಕ್ಕೆ ವ್ಯತಿರಿಕ್ತವಾಗಿ ಹೊರನಾಡಿನವರು ಒಳನಾಡಿಗೆ ಹೋದರೆ ಅವರನ್ನು ಕೇಳುವವರೇ ಇಲ್ಲ. ಒಳನಾಡಿನ ಕಲಾವಿದರ ಕಾರ್ಯಕ್ರಮಗಳನ್ನು ಹೊರನಾಡಿನಲ್ಲಿ ಆಯೋಜಿಸಿದ ಲೆಕ್ಕ ಮತ್ತು ಹೊರನಾಡಿನ ಕಲಾವಿದರನ್ನು ಒಳನಾಡಿನಲ್ಲಿ ಆಯೋಜಿಸಿದ ಲೆಕ್ಕ ತೆಗೆದರೆ ಈ ಒಳ ವಸಾಹತೀಕರಣದ ಒಂದು ಚಿತ್ರ ಸುಲಭವಾಗಿ ದೊರೆಯುತ್ತದೆ. ಹೊರನಾಡಿನ ಕನ್ನಡಿಗರನ್ನು ಒಳನಾಡಿನ ಬಹುತೇಕ ಕನ್ನಡಿಗರು ಕಾರ್ಯಕ್ರಮ ಆಯೋಜಕರು ಅಥವಾ ಶ್ರೀಮಂತರು ಎಂದೇ ತಿಳಿಯುತ್ತಾರೆ. ಹೊರನಾಡಿನ ಕನ್ನಡಿಗರೂ ಅದನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ತಾಯ್ನಾಡಿನಿಂದ ಯಾರೇ ಬಂದರೂ ಅವರು ನಮ್ಮ ಅತಿಥಿಗಳೆಂದು ಹೊರನಾಡಿನ ಕನ್ನಡಿಗರು ಸಾಮಾನ್ಯವಾಗಿ ಭಾವಿಸುತ್ತಾರೆ. 

ಇಂಥ ಪರಿಸ್ಥಿತಿಯಲ್ಲಿ ಇದೀಗ ಹೊರನಾಡ ಕನ್ನಡಿಗರ ಬಗ್ಗೆ ಎಲ್ಲರೂ ಹೊಸದಾಗಿ ಯೋಚಿಸಬೇಕಾಗಿದೆ. ಹೊರನಾಡಿನ ಕನ್ನಡಿಗರು ತಾವೆಲ್ಲಿ ಬದುಕುತ್ತಾರೋ ಆ ಊರಿನ ಜೊತೆ ನಿಧಾನವಾಗಿ ಕರಗಿಯೂ ಕರಗದೆಯೂ ಉಳಿಯುತ್ತಾರೆ. ಹಾಗೆ ಆಗುವಾಗ ಕರ್ನಾಟಕದ ತಮ್ಮೂರಿನ ನೆನಪುಗಳನ್ನೂ ಅಲ್ಪಸ್ವಲ್ಪ ಉಳಿಸಿಕೊಳ್ಳುತ್ತಾರೆ, ಕನ್ನಡವನ್ನು ಮಾತಾಡುತ್ತಾರೆ, ಜೊತೆಗೆ ತಾವು ಬದುಕುತ್ತಿರುವ ಊರಿನ ಭಾಷೆಯನ್ನೂ ಕಲಿಯುತ್ತಾರೆ. ಹೀಗೆ ಮಾಡುವಾಗ ಒಂದು ಭಾಷೆಯೊಳಕ್ಕೆ ಇನ್ನೊಂದು ಭಾಷೆ ನುಸುಳಿಬಿಡುತ್ತದೆ. ಕನ್ನಡದೊಳಕ್ಕೆ ಹಿಂದಿ, ಇಂಗ್ಲಿಷಿನೊಳಗೆ ಕನ್ನಡ, ಮರಾಠಿಯೊಳಕ್ಕೆ ತುಳು- ಹಣಕುತ್ತದೆ. ಹೀಗೆ ಕರ್ನಾಟಕ ಮತ್ತು ಕರ್ನಾಟಕದ ಹೊರಗಡೆಗೆ ಓಲಾಡುತ್ತಿರುವ ಹೊರನಾಡ ಕನ್ನಡಿಗರ ನಿಜವಾದ ಅಸ್ಮಿತೆ ಎಲ್ಲಿದೆ? ಹೊರನಾಡ ಕನ್ನಡಿಗರು ಕರ್ನಾಟಕಕ್ಕೆ ಹೋದಾಗ ಅವರು ಅಲ್ಲಿನ ಬಹುಸಂಖ್ಯಾಕ ಜನವರ್ಗದ ಭಾಗವಾಗಿರುತ್ತಾರೆ. ಆದರೆ ವಾಪಸು ಹೊರನಾಡಿಗೆ ಬಂದಾಗ ಅವರು ಭಾಷಾ ಅಲ್ಪ ಸಂಖ್ಯಾಕರಾಗಿಬಿಡುತ್ತಾರೆ. ಈ ಸಮಸ್ಯೆ ಕುಂಬಳೆ, ಬದಿಯಡ್ಕ, ಕಾಸರಗೋಡು ಮೊದಲಾದ ಗಡಿಪ್ರದೇಶಗಳಲ್ಲಿ ಬದುಕುತ್ತಿರುವ ಕನ್ನಡಿಗರ ಮಟ್ಟಿಗೆ ಇನ್ನೂ ಸಂಕೀರ್ಣವಾಗಿರುತ್ತದೆ. ಅವರು ಬೆಳಗ್ಗೆ ಎದ್ದಾಗ ಭಾಷಾ ಅಲ್ಪಸಂಖ್ಯಾಕರು ! ಕೆಲಸ ಮಾಡಲು ಮಂಗಳೂರಿಗೆ ಹೋದಾಗ ಬಹುಸಂಖ್ಯಾಕ ಭಾಷಿಕರ ಭಾಗ. ಹಲವು ಸಂಸ್ಕೃತಿಗಳನ್ನು ಹಾದುಹೋಗುವ ಬಿಕ್ಕಟ್ಟುಗಳ ನಡುವೆ ಹೊರನಾಡ ಕನ್ನಡಿಗರ ನಿರಂತರ ಉಸಿರಾಟ. ವಾಸ್ತವದಲ್ಲಿ ಇದೊಂದು ತ್ರಿಶಂಕು ಸ್ಥಿತಿ. ಒಮ್ಮೆ ಕಳೆದುಕೊಳ್ಳುವ, ಇನ್ನೊಮ್ಮೆ ಪಡೆದುಕೊಳ್ಳುವ, ಒಮ್ಮೊಮ್ಮೆ ಎಲ್ಲವೂ ತಲೆಕೆಳಗಾಗುವ ಸ್ಥಿತಿಯನ್ನು ಹೊರನಾಡ ಕನ್ನಡಿಗರು ಸದಾ ಅನುಭವಿಸುತ್ತಲೇ ಇರುತ್ತಾರೆ. ಬಹಳ ಕಾಲ ವಿದೇಶದಲ್ಲಿ ಬದುಕಿದ ಎ. ಕೆ. ರಾಮಾನುಜನ್‌ಅವರು ತಮ್ಮ ಕವಿತೆಯೊಂದರಲ್ಲಿ ಹೀಗೆ ಹೇಳುತ್ತಾರೆ-

ಆ ಊರು, ನೀರು, ಹಿಂಗಾರು
ಆ ಪ್ರದೇಶ, ಆ ಇಡೀ ರಾಜ್ಯ
ಎಲ್ಲ ಹೊತ್ತು ಹಾಕಬೇಕು ಎನಿಸಿ 
ಇದ್ದ ಬಿದ್ದ ಆನೆ ಕುದುರೆರಥ
ಸೈನ್ಯಎಲ್ಲ ಕೂಡಿಸಿ
ಇಡೀ ರಾಜ್ಯವನ್ನೆಲ್ಲ ಗೆದ್ದು
ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು
ಮನೆಗೇ ಹೋಗಲಿಲ್ಲ 
ರಾಮನ್‌ ತುಂಬಾ ಸಾಂಕೇತಿಕವಾಗಿ ಹೇಳಿದಂತೆ ಹೊರನಾಡ ಕನ್ನಡಿಗರು ನಿಜವಾದ ಅರ್ಥದಲ್ಲಿ ಮನೆಗೆ ಹೋಗಲಾರರು. ಹಾಗಾಗಿ ಅವರು ಇದ್ದಲ್ಲಿಯೇ ಮನೆಯೊಂದನ್ನು ಕಟ್ಟಿಕೊಳ್ಳಬೇಕಾದ್ದು ಅನಿವಾರ್ಯ. ಇದಕ್ಕಾಗಿ ಹೊರನಾಡ ಕನ್ನಡಿಗರು ತಾವು ಇದ್ದಲ್ಲಿಯೇ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ವಿಶಿಷ್ಟ ಅಸ್ಮಿತೆಯನ್ನು ಕಾಪಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬಹಳ ದೊಡ್ಡ ಸಾಧನೆ ಮಾಡಿದವರು ಮುಂಬಯಿ ಕನ್ನಡಿಗರು. 

ಮುಂಬಯಿ ಕನ್ನಡಿಗರು
ಸ್ವಾತಂತ್ರ್ಯಪೂರ್ವ ಕಾಲ ಘಟ್ಟದಲ್ಲಿ ಮುಂಬಯಿ ಭಾರತದ ಎಲ್ಲ ವ್ಯವಹಾರಗಳ ಕೇಂದ್ರವಾಗಿತ್ತು. ಹಾಗಾಗಿ ಅಲ್ಲಿಗೆ ಭಾರತದ ಎಲ್ಲ ಮೂಲೆಗಳಿಂದಲೂ ಜನರು ಬರುತ್ತಿದ್ದರು. ಕರ್ನಾಟಕದ ಕೆಲವು ಭಾಗಗಳು ಮುಂಬಯಿ ಪ್ರಸಿಡೆನ್ಸಿಯ ಭಾಗವಾಗಿದ್ದುದರಿಂದ ಸಹಜವಾಗಿ ಅಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಕನ್ನಡಿಗರ ವಲಸೆ ನಡೆಯಿತು. ಚಾರಿತ್ರಿಕ ಕಾರಣಗಳಿಂದ ಈ ವಲಸೆಯಲ್ಲಿ ಕರಾವಳಿ ಭಾಗದ ಜನರು ನಿರ್ಣಾಯಕ ಸ್ಥಾನ ವಹಿಸಿದರು. ಬಾಸೆಲ್‌ ಮಿಶನ್‌ ಕಲಿಸಿದ “ಉದ್ಯಮಶೀಲತೆ’, ಮತ್ತು “ವ್ಯವಹಾರ ನೈಪುಣ್ಯ’ದ ನೆರವಿನಿಂದ ಕರಾವಳಿ ಜನರು ಆಧುನಿಕ ಮುಂಬೈಯನ್ನು ಕಟ್ಟಿದರು. ಈ ಹಂತದಲ್ಲಿ ತಮಗಾದ ಅವಮಾನಗಳನ್ನು ಸಹಿಸಿಕೊಂಡು, ತುಂಬಾ ಕಷ್ಟಪಟ್ಟು ದುಡಿದರು, ಹಂತಹಂತವಾಗಿ ಮೇಲೇರಿದರು. ರಾತ್ರಿ ಶಾಲೆಗಳಲ್ಲಿ ಕಲಿತರು. ಕನ್ನಡ ಶಾಲೆ, ಕನ್ನಡ ಸಂಘಗಳ ಜೊತೆಗೆ ತುಳು ಕೇಂದ್ರಿತ ಚಟುವಟಿಕೆಗಳನ್ನು ನಡೆಸುತ್ತ ಮುಂಬಯಿಯಲ್ಲಿ ಕರ್ನಾಟಕವನ್ನು ಜೀವಂತವಾಗಿರಿಕೊಂಡು ಬಂದರು. ಇದರ ಜೊತೆಜೊತೆಗೇ ಮುಂಬಯಿ ನಗರವು ಮಹತ್ವದ ಕನ್ನಡ ಬರಹಗಾರರನ್ನೂ ಸೃಜಿಸಿಕೊಂಡಿತು. ಗಂಗಾಧರ ಚಿತ್ತಾಲ, ಅರವಿಂದ ನಾಡಕರ್ಣಿ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಕೃಷ್ಣ ಕುಮಾರ ಕಲ್ಲೂರು, ವ್ಯಾಸರಾಯ ಬಲ್ಲಾಳ, ವ್ಯಾಸರಾವ್‌ ನಿಂಜೂರು, ರಾಮಚಂದ್ರ ಉಚ್ಚಿಲ್‌, ಮಿತ್ರಾ ವೆಂಕಟ್ರಾಜ್‌, ಸುನೀತಾ ಶೆಟ್ಟಿ ಮೊದಲಾದವರು ಮುಂಬೈ ಜೀವನಕ್ರಮವನ್ನು ಕನ್ನಡ ಭಾಷೆಯಲ್ಲಿ ದಾಖಲಿಸಿ, ಕನ್ನಡದ ಸಿರಿವಂತಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಿದರು. ಬಹಳ ಕಾಲ ಇದ್ದ ತಾಯ್ನುಡಿ ಪತ್ರಿಕೆಯನ್ನು ಮರೆಯುವುದೆಂತು? 

80ರ ದಶಕದ ಆನಂತರದ ಕಾಲಘಟ್ಟದಲ್ಲಿ ಕಾರಣಾಂತರದಿಂದ ಮುಂಬೈ ವಲಸೆ ಕಡಿಮೆ ಅಥವಾ ಇಲ್ಲವಾಯಿತು. ಒಂದು ಕಾಲಕ್ಕೆ ಸುಮಾರು 50 ಕನ್ನಡ ಶಾಲೆಗಳಿದ್ದದ್ದು ಈಗ 5-6ಕ್ಕೆ ಇಳಿದಿದೆ. ಇರುವ ಶಾಲೆಗಳೂ ಕನ್ನಡ ಅಧ್ಯಾಪಕರಿಲ್ಲದೆ ಸೊರಗುತ್ತಿವೆ. ಕರ್ನಾಟಕದ ಅತಿಮುಖ್ಯ ಬ್ಯಾಂಕುಗಳಲ್ಲಿ ಒಂದು ಕಾಲಕ್ಕೆ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಆದರೆ ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ಆನಂತರ ಈ ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತ ಹೋಯಿತು. ಇದಕ್ಕೆ ಅಪವಾದವೆಂದರೆ ಕರ್ನಾಟಕ ಬ್ಯಾಂಕ್‌ ಮಾತ್ರ. ಹೊರನಾಡಿನ ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಹೊರನಾಡ ಕನ್ನಡಿಗರ ಚಟುವಟಿಕೆಗಳೂ ಕಡಿಮೆಯಾಗುತ್ತ ಬಂದಿರುವುದು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶ.

ಹೊರನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಹುಟ್ಟಿಕೊಳ್ಳುವ ಸಂಘಸಂಸ್ಥೆಗಳ ರಚನೆಯ ಹಿಂದೆ ಲಿಖೀತವಾಗಿ ಅಲ್ಲದಿದ್ದರೂ ಭಾವನಾತ್ಮಕವಾಗಿ ಎರಡು ಉದ್ದೇಶಗಳು ಅಡಗಿರುತ್ತವೆ. ಒಂದು, ಅನ್ಯ ಸಂಸ್ಕೃತಿಗಳಿಂದ ಆಗುವ ದಾಳಿಯಿಂದ ರಕ್ಷಣೆ ಪಡೆಯುವುದು. ಇನ್ನೊಂದು, ಇರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ತಲೆಮಾರಿಗೆ ತಲುಪಿಸುವುದು. ಮುಂಬಯಿ ಕರ್ನಾಟಕ ಸಂಘವು ಈ ಎರಡೂ ಕೆಲಸಗಳನ್ನು ಕಳೆದ 82 ವರ್ಷಗಳಿಂದ ಅತ್ಯಂತ ಸಮರ್ಥವಾಗಿ ಮಾಡುತ್ತಲೇ ಬಂದಿದೆ. 1933ರ ಜೂನ್‌ 4ರಂದು ಆರಂಭಗೊಂಡ ಈ ಸಂಘದ ಸ್ಥಾಪಕ ಅಧ್ಯಕ್ಷರು ದಿವಂಗತ ಬಿ.ಡಿ. ಬಳವಿ ಅವರು. 1977ರಲ್ಲಿ ಹಿರಿಯ ಸಾಹಿತಿ ಶ್ರೀ ವರದರಾಜ ಅದ್ಯ ಅವರ ಅಧ್ಯಕ್ಷತೆಯಲ್ಲಿ ಸಂಘವು ತನ್ನದೇ ಆದ ಸಾಂಸ್ಕೃತಿಕ ಸಮುಚ್ಚಯವನ್ನು ನಿರ್ಮಿಸಿಕೊಂಡಿತು. 

ಈ ಸಂಘವು ಮುಂಬಯಿಯಂಥ ಮಹಾನಗರದಲ್ಲಿ  ಕರ್ನಾಟಕವನ್ನು ಜೀವಂತವಾಗಿರಿಸಲು ಮಾಡಿದ ಕೆಲಸಗಳು ಅಷ್ಟಿಷ್ಟಲ್ಲ. ಕನ್ನಡರಂಗಭೂಮಿಯ ಸುವರ್ಣ ವರ್ಷಾಚರಣೆ, ಶ್ರೀರಂಗರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಮೂರು ಬಾರಿ ರಾಜ್ಯಸಾಹಿತ್ಯ ಸಮ್ಮೇಳನ, ಮುಂಬಯಿ ವಿವಿಯಲ್ಲಿ ಕನ್ನಡ ವಿಭಾಗದ ಸ್ಥಾಪನೆಗೆ ಕೆಲಸ, ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸಮವಸ್ತ್ರ ನೀಡಿಕೆ, ಮಕ್ಕಳ ಮೇಳ, ಶಿಕ್ಷಕರ ಮೇಳ, ಉಚಿತ ಸಂಗೀತ ತರಗತಿಗಳು, ಬಹುಭಾಷಾ ನಾಟಕ ಪ್ರದರ್ಶನ, ಕನ್ನಡ-ಮರಾಠೀ ಭಾಷಾ ಬಾಂಧವ್ಯಕ್ಕೆ ಕೆಲಸ, ಪ್ರತಿವರ್ಷ ಕುವೆಂಪು ನೆನಪಿನ ನಾಟಕ ಸ್ಪರ್ಧೆ, ಗ್ರಂಥಾಲಯ ಸ್ಥಾಪನೆ -ಹೀಗೆ ಸಂಘವು ನೂರಾರು ಕೆಲಸಗಳನ್ನು ದಣಿವರಿಯದೆ ಮಾಡುತ್ತಾ ಬಂದಿದೆ. ಬೇಂದ್ರೆ, ಕಾರಂತರೂ ಸೇರಿದಂತೆ ಮುಂಬಯಿ ಕರ್ನಾಟಕ ಸಂಘಕ್ಕೆ ಬಹುತೇಕ ಎಲ್ಲ ಸಾಹಿತಿಗಳೂ ಭೇಟಿ ನೀಡಿದ್ದಾರೆ. ಸಂಘದ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರಕಾರವು 2006ರಲ್ಲಿ ಸುವರ್ಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. 

ಕಾಲ ಬದಲಾದಂತೆ ಸಂಘದ ಆಶೋತ್ತರಗಳೂ ಬದಲಾಗುತ್ತವೆ. ಇದೀಗ ಸಂಘವು ಹೊಸ ಕಟ್ಟಡವನ್ನು ಕಟ್ಟುವ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗುತ್ತಿದೆ. ಈ ಹೊಸ ಕಟ್ಟಡವು 74,020 ಚದರ ಅಡಿಯ ವಿಸ್ತಾರವನ್ನು ಹೊಂದಿದ್ದು, ಅದರಲ್ಲಿ ಅತ್ಯಂತ ಸುಸಜ್ಜಿತವಾದ ಒಂದು ದೊಡ್ಡ ಸಭಾಂಗಣ, ಕಿರಿದಾದ ಇನ್ನೊಂದು ಸಭಾಂಗಣ, ಗ್ರಂಥಾಲಯ (ಮಾಹಿತಿಕೇಂದ್ರ), ಅತಿಥಿ ಕೊಠಡಿಗಳು ಹಾಗೂ ಇನ್ನಿತರ ವ್ಯವಸ್ಥೆಗಳಿರುತ್ತವೆ. ಕಟ್ಟಡದ ಅಂದಾಜು ವೆಚ್ಚ 30 ಕೋಟಿ ರೂ.ಗಳಾಗಿದ್ದು ಮುಂಬೈ ಕನ್ನಡಿಗರು ಹೊಸ ಕಟ್ಟಡದ ಸಾಕಾರಕ್ಕೆ ಪಣತೊಟ್ಟು ದುಡಿಯುತ್ತಿದ್ದಾರೆ. 

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡವು ಕರ್ನಾಟಕದಿಂದ ಹೊರಗಡೆಗೆ ಹೆಚ್ಚು ಹೆಚ್ಚು ಹೋಗಬೇಕು. ಕರ್ನಾಟಕದ ಅಸಂಖ್ಯ ವಿದ್ಯಾಕೇಂದ್ರಗಳಲ್ಲಿ ಓದಿದ ವಿದ್ಯಾರ್ಥಿಗಳು ಇದೀಗ ದೇಶದ ಎಲ್ಲೆಡೆಯೂ ಕೆಲಸ ಮಾಡುತ್ತಿದ್ದಾರೆ. ಈ ಹೊಸತಲೆಮಾರಿನ ಹುಡುಗರು ಕರ್ನಾಟಕ ಸಂಸ್ಕತಿಯ ಕಡೆ ಮುಖ ಮಾಡುವಂತಾಗಲು ಮಹಾನಗರಗಳಲ್ಲಿ ಕರ್ನಾಟಕಕ್ಕೊಂದು ಬಲಿಷ್ಠವಾದ ನೆಲೆ ಇರಬೇಕು. ಆದರೆ ನಮ್ಮ ದುರಾದೃಷ್ಟವೋ ಏನೂ, ಗಟ್ಟಿಯಾಗಬೇಕಾದ ಕಡೆ ನಾವು ದುರ್ಬಲರಾಗುತ್ತಿದ್ದೇವೆ. ವಾರಣಾಸಿ, ಅಹಮದಾಬಾದ್‌ ಮೊದಲಾದೆಡೆಗಳಲ್ಲಿದ್ದ ಕನ್ನಡದ ಕೇಂದ್ರಗಳು ಮುಚ್ಚಿ ಹೋಗಿವೆ. ಇಂಥ ಸಂದರ್ಭದಲ್ಲಿ ಮುಂಬೈನ ಕರ್ನಾಟಕ ಸಂಘವು ಕಟ್ಟುತ್ತಿರುವ ಹೊಸ ಕಟ್ಟಡಕ್ಕೆ ಕರ್ನಾಟಕ ಸರಕಾರವೂ ಸೇರಿದಂತೆ ಎಲ್ಲ ಕನ್ನಡಿಗರೂ ಸಹಾಯಹಸ್ತ ಚಾಚ ಬೇಕಾದ್ದು ಅತ್ಯಗತ್ಯ. 

ಪುರುಷೋತ್ತಮ ಬಿಳಿಮಲೆ

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.