ಬ್ರಿಟನ್‌ನಲ್ಲಿ ಬೆಳಕಿನ ಹಬ್ಬ


Team Udayavani, Oct 22, 2017, 10:45 AM IST

britan.jpg

ಹಣ್ಣೆಲೆ ಬೀಳುವಾಗ  ಕಾಯಿಎಲೆಗಳು ನಗುತ್ತವೆ’ ಎನ್ನುವ ಮಾತನ್ನು ಕೇಳುತ್ತ ಬೆಳೆದವರು ನಾವು; ಬ್ರಿಟನ್‌ನಲ್ಲಿ ಈಗ ಹಣ್ಣೆಲೆ ಮತ್ತು ಕಾಯಿಎಲೆ ಎರಡೂ ಉದುರುವ ಕಾಲ. ಬ್ರಿಟನ್ನಿನ ರಸ್ತೆಯ ಬದಿಗಳಲ್ಲಿ ನೆಟ್ಟ ಹಸಿರು ಮರದ ಎಲೆಗಳೆಲ್ಲ ಚಿನ್ನದ ಬಣ್ಣಕ್ಕೆ ತಿರುಗಿವೆ. ಮತ್ತೆ ಹಣ್ಣು  ಎಲೆ ಯಾವುದು, ಕಾಯಿಎಲೆ ಯಾವುದು ಎಂದು ಗುರುತಿಸಲಾಗದಂತೆ ಒಂದೇ ಬಣ್ಣಕ್ಕೆ ತಿರುಗಿ ಉದುರಿ ಬೀಳುತ್ತಿವೆ; ಈಗಾಗಲೇ ಉದುರಿದ ಹಣ್ಣೆಲೆಗಳು ಇನ್ನೇನು ಬೀಳಲಿರುವ ಕಾಯಿ ಎಲೆಗಳೂ ಎರಡೂ ಒಂದನ್ನು ನೋಡಿ ಇನ್ನೊಂದು ನಗದೇ ಸುಮ್ಮನಿವೆ. ಬ್ರಿಟನ್‌ ಈಗ ನಿಂತಿರುವುದು ಚಳಿಗಾಲದ ಹೊಸ್ತಿಲಲ್ಲಿ; ಹೊಸ್ತಿಲು ದಾಟಿ ಒಳಗೆ ನಡೆಯುತ್ತ ಹೋದರೆ ಎದುರಾಗುವುದು  ಕಡುಚಳಿಯ ಡಿಸೆಂಬರ್‌, ಜನವರಿ, ಫೆಬ್ರವರಿ ಮಾಸಗಳು. ನಾವು ಹೊಸ್ತಿಲು ದಾಟುವುದಿಲ್ಲ ಎಂದರೂ ಇಡೀ ಮನೆಯೇ ನಮ್ಮ ಮೇಲೆ ಆವರಿಸುವ ಊರಿದು;  ನಾವು ಚಳಿಯನ್ನು ಹುಡುಕದೆ ಹೋದರೂ ಚಳಿಯೇ ನಮ್ಮನ್ನು ಹುಡುಕಿ ಬಂದು ತಬ್ಬಿಕೊಳ್ಳುವ ಕಾಲ ಇದು. ಬೇಸಿಗೆಯ ಉದ್ದದ ದಿನಗಳೆಲ್ಲ ನಿಧಾನವಾಗಿ ನೆನಪಿನಿಂದ ದೂರ ಆಗುತ್ತಿವೆ. ಈಗೀಗ ಸೂರ್ಯೋದಯವೂ ತಡ, ಸೂರ್ಯಾಸ್ತವೂ ಬೇಗ.

24 ಗಂಟೆಗಳಲ್ಲಿ ಬೆಳಕಿರುವ ಹೊತ್ತಿನ ಗಾತ್ರ ಕಡಿಮೆ ಆಗುತ್ತ ಕತ್ತಲೆಯ ಹೊತ್ತು ದಿನೇ ದಿನೇ ಹೆಚ್ಚಾಗುತ್ತಿದೆ. ಕತ್ತಲೆ ಹೆಚ್ಚುತ್ತಿರುವಾಗಲೇ ಬೆಳಕು ಬೇಕು ಎನಿಸುವುದು. ಮತ್ತೆ ಪ್ರತಿವರ್ಷವೂ ಚಳಿ ಮತ್ತು ಕತ್ತಲೆ ಎರಡೂ ಜೊತೆಯಾಗುವ ಹೊತ್ತÇÉೇ ದೀಪಾವಳಿ ಹಬ್ಬ ಬರುವುದು. ದೀಪಾವಳಿ ಎಂದರೆ ಬ್ರಿಟಿಷರಿಗೆ ತಿಳಿಯುವುದಿಲ್ಲ. ಬದಲಿಗೆ ನೀವು ಈಜಿಡಿಚlಜಿ ಎಂದರೆ “ಬೆಳಕಿನ ಹಬ್ಬವಲ್ಲವೇ’ ಎಂದು ಅವರೇ ಉದ್ಗರಿಸುತ್ತಾರೆ. ಭಾರತದ ಬೆಳಕಿನ ಹಬ್ಬದ ಬಗ್ಗೆ ತಿಳಿದ ಆಂಗ್ಲರು ಬಹಳ ಜನರಿ¨ªಾರೆ. ತಮ್ಮ ಬಾಲ್ಯದ ಶಾಲಾ ದಿನಗಳಿಂದಲೇ ಇಲ್ಲಿನ ಮಕ್ಕಳು ದೀಪಾವಳಿಯ ಬಗ್ಗೆ ತಿಳಿದಿರುತ್ತಾರೆ ಅಥವಾ ತಮ್ಮ ಭಾರತೀಯ ಸಹಪಾಠಿಗಳಿಂದ ಕೇಳಿರುತ್ತಾರೆ. ಬೇರೆ ಬೇರೆ ದೇಶದ, ಧರ್ಮದ ಸಂಸ್ಕೃತಿಗಳ ಕಿರುಓದು ಇಲ್ಲಿನ ಪ್ರಾಥಮಿಕ ಪಠ್ಯದ ಭಾಗವೇ ಆಗಿದೆ.

ಬ್ರಿಟನ್ನಿನ ಹೆಚ್ಚಿನ ಪಟ್ಟಣಗಳಲ್ಲಿ ಭಾರತೀಯರ ವಾಸ್ತವ್ಯ ಇದೆ ಮತ್ತು ಹಾಗಿರುವÇÉೆಲ್ಲ ದೀಪಾವಳಿಯ ಸಾಮೂಹಿಕ ಆಚರಣೆ ನಡೆಯುತ್ತದೆ. ಒಂದು ಊರಿನ ಅಥವಾ ಆಸುಪಾಸಿನ ಊರುಗಳ ಬೇರೆ ಬೇರೆ ರಾಜ್ಯದ ಭಾರತೀಯರು ಜೊತೆಯಾಗಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಹಬ್ಬಗಳ ಸಾಮೂಹಿಕ ಆಚರಣೆ, ರಜೆ ಇರುವ ವಾರಾಂತ್ಯದಲ್ಲಿ ಮಾತ್ರ ಸಾಧ್ಯ. ಆದ್ದರಿಂದ ಗೋಡೆಯ ಮೇಲೆ ತೂಗುಹಾಕಿದ ಕ್ಯಾಲೆಂಡರ್‌, ಹಬ್ಬ ಇಂತಹದೇ ದಿನ ಎಂದರೂ ಇಲ್ಲಿ ಹಬ್ಬದ ಆಚರಣೆ ಹಬ್ಬಕ್ಕಿಂತ ಮೊದಲೇ ಶುರು ಆಗಿರುತ್ತದೆ; ಮತ್ತು ಹಬ್ಬದ ದಿನಗಳ ನಂತರವೂ ನಡೆಯುತ್ತಿರುತ್ತದೆ.

ಆಸುಪಾಸಿನ ಊರುಗಳಲ್ಲಿ  ಹಬ್ಬದ ಆಚರಣೆ ಒಂದೇ ವಾರಾಂತ್ಯದಲ್ಲಿ ಆಗದಂತೆ ಪ್ರಯತ್ನ ಪಡುತ್ತಾರೆ ಮತ್ತು ನೂರೋ ಇನ್ನೂರೋ ಜನ ಸೇರಿ ಆಚರಿಸುವ ಹಬ್ಬವಾದ್ದರಿಂದ ಸೂಕ್ತವಾದ ಭವನ ಎಂದು ಬಾಡಿಗೆಗೆ ಸಿಗುತ್ತದೆ ಎನ್ನುವುದರ ಮೇಲೂ ದೀಪಾವಳಿಯ ದಿನ ನಿಶ್ಚಯ ಆಗುತ್ತದೆ. ಕೆಲವರು ತಮ್ಮ ಮನೆಯ ಹಿಂದಿನ ಅಂಗಳದಲ್ಲಿ ಹೊಡೆಯಬಹುದಾದ ಸಣ್ಣ ಸದ್ದಿನ ಸೌಮ್ಯ ಪಟಾಕಿಗಳನ್ನು ಸಿಡಿಸುತ್ತಾರೆ. ನೆರೆಮನೆಯ ಆಂಗ್ಲರಿಗೆ, “”ಇವತ್ತು ಸಂಜೆ ನಮ್ಮ ಅಂಗಳದಿಂದ ಸ್ವಲ್ಪ$ಸದ್ದು ಬರುತ್ತದೆ ತಲೆಬಿಸಿ ಮಾಡಿಕೊಳ್ಳಬೇಡಿ” ಎಂದು ಬಾಗಿಲು ತಟ್ಟಿ ಹೇಳುವುದೋ ಅಥವಾ ಕೈಬರಹದ ಸಣ್ಣ ಪತ್ರ ಬರೆದು ಅವರ ಬಾಗಿಲ ಚಡಿಯಲ್ಲಿ ತೂರಿಸುವುದೋ ಕೂಡ ಇದೆ. ಎಲ್ಲ ಊರಿನ ಸಾರ್ವಜನಿಕ ದೀಪಾವಳಿ ಆಚರಣೆಗಳಲ್ಲಿ ಪಟಾಕಿ ಹೊಡೆಯುವುದಿಲ್ಲ. ಒಂದು ಸಾಮೂಹಿಕ ಆಚರಣೆಯಲ್ಲಿ ಪಟಾಕಿ ಹೊಡೆಯಬೇಕಿದ್ದರೆ ನಗರಸಭೆಯವರ ಆರೋಗ್ಯ ಮತ್ತು ಸುರಕ್ಷತೆಯ ಕೆಲವು ಕಾನೂನುಗಳಿವೆ. ಈ ಕಾನೂನುಗಳು, ಪರವಾನಿಗೆಗಳ ಗೊಡವೆ ಬೇಡ ಎಂದು ಹಬ್ಬದ ಪಟಾಕಿ ಹೊಡೆಯದೆ ಹಬ್ಬ ಆಚರಿಸುವವರೂ ಇ¨ªಾರೆ. ಇನ್ನು ಕೆಲವರು ಸುಡುಮದ್ದುಗಳನ್ನು ಹೊಡೆಯುವ ವೃತ್ತಿನಿರತರನ್ನು ಕರೆಸಿ ಪಟಾಕಿ ಹೊಡೆಸುತ್ತಾರೆ; ದೂರ ನಿಂತು ಆಕಾಶ ನೋಡಿ ಚಪ್ಪಾಳೆ ತಟ್ಟುತ್ತಾರೆ. ಕೆಲವು ಊರುಗಳ ದೀಪಾವಳಿ ಆಚರಣೆಯಲ್ಲಿ ಅಲ್ಲಿನ ಆಂಗ್ಲರೂ ಸೇರಿಕೊಳ್ಳುತ್ತಾರೆ.

ಹಬ್ಬಗಳೆಂದರೆ ಆಂಗ್ಲರಿಗೆ ಪ್ರಿಯವೇ. ಹಬ್ಬದ ವಾತಾವರಣ, ಒಳ್ಳೆಯ ತಿನಿಸುಗಳು, ಭಾರತೀಯ ನೃತ್ಯ, ಹಾಡುಗಳು, ಪಟಾಕಿಯ ಬೆಳಕು, ಮತ್ತೆ ಸ್ವಲ್ಪ$ವೈನ್‌ ಮತ್ತು ಕುಣಿತ ಇಷ್ಟು ಸೇರಿಸಿದರೆ ಎಲ್ಲ ಹಬ್ಬಗಳೂ ಅವರಿಗೆ ಇಷ್ಟವೇ! ಬ್ರಿಸ್ಟಲ್‌ ಸಮೀಪದ ಬ್ರಿಟನ್ನಿನ ಪ್ರಸಿದ್ಧ ಪ್ರೌಢಶಾಲೆಯಾದ ಪೆಟ್ಸ… ಗ್ರಾಮರ್‌ ಸ್ಕೂಲ್‌ನಲ್ಲಿ  ಕಳೆದ ವಾರಾಂತ್ಯದÇÉೇ ದೀಪಾವಳಿಯ ಆಚರಣೆ ನಡೆಯಿತು. ಆ ಶಾಲೆಗೆ ಹೋಗುವ ಆಂಗ್ಲ ಮತ್ತು ಭಾರತೀಯ ಮಕ್ಕಳ ಹೆತ್ತವರು ಸೇರಿ ಹಬ್ಬವನ್ನು ಸಂಯೋಜಿಸಿದರು. ಆಚರಣೆಯ ಪ್ರವೇಶ ಶುಲ್ಕ ಮತ್ತು ಭಾರತೀಯ ತಿಂಡಿಗಳ ಮಾರಾಟ, ಕೈಗೆ ಭಾರತೀಯ ಶೈಲಿಯ ಹೆನ್ನಾ ಹಚ್ಚೆ ಹಚ್ಚುವ ಮಳಿಗೆಗಳು, ಭಾರತೀಯ ಉಡುಪುಗಳ ಮಾರಾಟ- ಇವೆಲ್ಲ ಸೇರಿ ದೀಪಾವಳಿಯ ಲೆಕ್ಕದಲ್ಲಿ ನಿಧಿಯೂ ಸಂಗ್ರಹಿಸಲ್ಪಟ್ಟಿತು. ಪ್ರತಿವರ್ಷವೂ ಶಾಲೆಗಳಿಗೆ ಸರಕಾರದಿಂದ ಬರಬೇಕಾದ ಅನುದಾನಗಳ ಕಡಿತ ಆಗುತ್ತಿರುವಾಗ ದೀಪಾವಳಿ ಹಬ್ಬದ ನೆಪದಲ್ಲಿ ಒಟ್ಟಾದ ಹಣ ಶಾಲೆಯ ಖರ್ಚನ್ನು ತೂಗಿಸಲು ಸಣ್ಣ ಸಹಾಯವನ್ನೂ ಮಾಡುತ್ತಿದೆ.

ಬ್ರಿಟನ್ನಿನಲ್ಲಿ ಕತ್ತಲೆ, ಚಳಿಯ ವಾತಾವರಣದಲ್ಲಿ ಜಡತ್ವ ಮೂಡಿಸುವ ಸಮಯದಲ್ಲಿ ಬರುವ ದೀಪಾವಳಿ ಹಬ್ಬ ಭಾರತೀಯರ ಉತ್ಸಾಹ ಹೆಚ್ಚಿಸಿದರೂ ಇಂತಹದೇ ಸಮಯದಲ್ಲಿ ಕೆಲವು ಅಹಿತಕರ ಅನುಭವಗಳೂ ಆಗುವ ಸಾಧ್ಯತೆಗಳಿವೆ. ಕತ್ತಲೆ, ಚಳಿ ಎಂದು ನಾವು ಗೊಣಗುತ್ತಿರುವಾಗ ಈ ದೇಶದ ಕಳ್ಳರು ಚುರುಕಾಗುತ್ತಾರೆ. ಕಳೆದೆರಡು ವರ್ಷಗಳಿಂದ ಬ್ರಿಸ್ಟಲ್‌ನಲ್ಲಿ ಚಳಿಗಾಲದಲ್ಲಿ ನಡೆಯುತ್ತಿರುವ ಕಳ್ಳತನಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಚಳಿಗಾಲ ಎಂದರೆ ಬೇಗ ಕತ್ತಲಾಗುತ್ತದೆ. ಜನರು ಕಚೇರಿ ಮುಗಿಸಿ ಮನೆಗೆ ಬರುವ ಮೊದಲೇ ಕತ್ತಲಾಗಿರುವುದು ಕಳ್ಳರಿಗೆ ಅನುಕೂಲಕರವಾಗಿರುತ್ತದೆ. ಈ ದೇಶದಲ್ಲಿ ವಿಧವಿಧದ ಕಳ್ಳರಿ¨ªಾರೆ. ವಿದ್ಯುನ್ಮಾನ ಗ್ಯಾಜೆಟ…ಗಳನ್ನು ಕದಿಯುವ ತಂಡ ಬೇರೆ, ಚಿನ್ನ ಕದಿಯುವವರು ಬೇರೆ. ಗ್ಯಾಜೆಟ… ಕಳ್ಳರಿಗೆ ಯಾವ, ಯಾರ ಮನೆಯಾದರೂ ಆದೀತು. ಆದರೆ ಚಿನ್ನದ ಕಳ್ಳರು ಬ್ರಿಸ್ಟಲ್‌ನಲ್ಲಿ ಭಾರತೀಯ ಮನೆಗಳನ್ನೇ ಗುರಿಯಾಗಿಸಿ ಚಿನ್ನ ಕದಿಯುವುದು ಹೆಚ್ಚುತ್ತಿದೆ. ಈ ದೇಶದಲ್ಲಿ ಸಿಗುವ ಅಥವಾ ಆಂಗ್ಲರು ಬಳಸುವ ಚಿನ್ನ ಎಂಟೋ, ಹತ್ತೋ ಕ್ಯಾರೆಟ…ನ¨ªಾಗಿರುತ್ತದೆ. ಭಾರತೀಯರು ಧರಿಸುವ ಅಥವಾ ಮನೆಯಲ್ಲಿ ಇಟ್ಟಿರುವ ಚಿನ್ನ ಬಹುಮೂಲ್ಯದ 18-20 ಕಾರಟ…ನ¨ªಾಗಿರುತ್ತದೆ. ಇದನ್ನು ಅರಿತಿರುವ ಇಲ್ಲಿನ ಕಳ್ಳರು ಯಾವುದು ಭಾರತೀಯ ಅಥವಾ ಏಷಿಯಾ ಮೂಲದವರ ಮನೆ ಎಂದು ಮೊದಲೇ ಗುರುತಿಸಿ ಯಾವಾಗ ಮನೆಯಲ್ಲಿ ಯಾರೂ ಇರುವುದಿಲ್ಲ ಎಂದು ನೋಡಿ ನುಗ್ಗಿ ಚಿನ್ನ ಇದ್ದರೆ ಕದ್ದು ಪರಾರಿ ಆಗುತ್ತಾರೆ. ಸಣ್ಣ ಅಪರಾಧಗಳನ್ನು ಲಘುವಾಗಿ ನೋಡುವ ಮತ್ತು ಅಂತಹ ಅಪರಾಧ ಎಸಗಿದವರನ್ನು ಸಾಕ್ಷ ಇದ್ದರೆ ಮಾತ್ರ ಬಂಧಿಸುವ ಕಾನೂನಿನ ಈ ದೇಶದಲ್ಲಿ ಕಳ್ಳರು ಸುಖವಾಗಿ¨ªಾರೆ ಮತ್ತು ಬೇಗ ಕತ್ತಲಾಗುವ ಚಳಿಗಾಲ ಎಂದು ಬರುತ್ತದೋ ಎಂದು ಕಾಯುತ್ತಿರುತ್ತಾರೆ! ಪೊಲೀಸರೇ ಹೇಳುವ ಪ್ರಕಾರ, ಈ ಕಳ್ಳರು ಎಲ್ಲೂ ತಮ್ಮ ಬೆರಳಚ್ಚು , ಪಾದರಕ್ಷೆಗಳ ಗುರುತು ಬಿಡುವವರಲ್ಲ, ಮತ್ತೆ ತಾವು ಕದ್ದ ಚಿನ್ನವನ್ನು ನಿಮಿಷಗಳಲ್ಲಿ ಇನ್ಯಾರದೋ ಕೈಗೆ ವರ್ಗಾಯಿಸಿ ಅದನ್ನು ಕರಗಿಸಿ ಬಿಡುತ್ತಾರೆ. ಸೂಕ್ತ ಆಧಾರ ಇಲ್ಲದೆ ಯಾರನ್ನೂ  ಬಂಧಿಸಬಾರದೆನ್ನುವ ಸಣ್ಣ ಅಪರಾಧಗಳ ಸಡಿಲ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಬ್ರಿಸ್ಟಲ…ನ ಪೊಲೀಸರು ದೀಪಾವಳಿ ಹಬ್ಬದ ಆಚರಣೆ ಶುರು ಆಗುವ ಹೊತ್ತಲ್ಲಿ ಭಾರತೀಯರನ್ನು ಉದ್ದೇಶಿಸಿ ಒಂದು ಸೂಚನೆ ಹೊರಡಿಸಿದ್ದರು. “ಕಳ್ಳರಿಗೆ ದೀಪಾವಳಿ ಭಾರತೀಯರ ಹಬ್ಬ ಎಂದು ಚೆನ್ನಾಗಿ ಗೊತ್ತು. ಯಾರ ಮನೆಯಲ್ಲಿ ದೀಪದ ಅಲಂಕಾರ ಮಾಡಿದ್ದರೋ, ಪಟಾಕಿ ಹಚ್ಚುತ್ತಾರೋ ಅಂತಹ ಮನೆಗಳಲ್ಲಿ  ಚಿನ್ನ ಸಿಕ್ಕೀತು ಎಂದು ಊಹಿಸಿ, ಅಲ್ಲಿಗೆ ಕಳ್ಳರು ಸಮಯ ನೋಡಿ ದಾಳಿ ಇಡಬಹುದು, ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಬೀದಿಯಲ್ಲಿ ಕಂಡುಬಂದರೆ ತಮಗೆ ತಿಳಿಸಿ’ ಎಂದಿದ್ದರು.

ಬ್ರಿಟನ್ನಿನ ಊರೂರುಗಳಲ್ಲಿ ಭಾರತೀಯ ಮನೆಗಳಲ್ಲಿ ದೀಪಾವಳಿಯ ತಯಾರಿ ನಡೆದಿದೆ. ಲಂಡನ್‌ನ ಟ್ರಫಾಲ್ಗರ್‌ ಚೌಕದಲ್ಲಿ ಕಳೆದ 16 ವರ್ಷಗಳಿಂದ ದೀಪಾವಳಿ ಬೃಹತ್‌ ಆಚರಣೆ ನಡೆಯುತ್ತಿದೆ. ಸುಮಾರು 35,000 ಜನರು ಪಾಲ್ಗೊಳ್ಳುವ ಹಬ್ಬದ ವಿವರಗಳು ಲಂಡನ್‌ ನಗರಸಭೆಯ ಅಂತರ್ಜಾಲ ಪುಟವನ್ನೂ ಸೇರಿವೆ. ದಿನಾಂಕದ ಲೆಕ್ಕದಲ್ಲಿ ಈ ವರ್ಷದ ದೀಪಾವಳಿ ಮುಗಿದಿದ್ದರೂ ಬ್ರಿಟನ್ನಿನ ಬೇರೆ ಬೇರೆ ದಿಕ್ಕು, ಊರುಗಳಲ್ಲಿ ಬೆಳಕು ಕಾಣಿಸುತ್ತಿದೆ, ಹಬ್ಬ ಪ್ರತಿಧ್ವನಿಸುತ್ತಿದೆ. ಹೀಗಿದೆ ನೋಡಿ, ನಮ್ಮೂರ ದೀಪಾವಳಿ.

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.