ಎಲ್ಲ ಗಂಡಸ್ರು ಯಾಕೆ ಕೊಹ್ಲಿ ಆಗೋಲ್ಲ? ನಟಿ ರಿಚಾ ಚಡ್ಡಾ ಬರೆದ ಪತ್ರ

Team Udayavani, Jun 28, 2017, 3:45 AM IST

kohli.jpg

ಬಾಲಿವುಡ್‌ ತಾರೆ ರಿಚಾ ಚಡ್ಡಾ ಒಂದು ಬಹಿರಂಗ ಪತ್ರ ಬರೆದಿದ್ದಾರೆ. “ಕಾಲ ಬದಲಾಗುತ್ತಿದೆ. ಗಂಡು ತನ್ನ ವರ್ತನೆಯನ್ನು, ವಿಚಾರಧಾರೆಯನ್ನು ಬದಲಿಸಿಕೊಳ್ಳಬೇಕು, ಹೆಣ್ಣನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು…’ ಎನ್ನುವುದು ಅವರ ವಾದ…

ದೇಶದ ಜೆಂಟಲ್‌ವುನ್‌ಗಳೇ, 
ನಿಮ್ಮ ಸಂತತಿ ಅಳಿಯುತ್ತಿದೆ. ನೀವು ಆ ಸಂಗತಿಯನ್ನು ಒಪ್ಪುವುದಿಲ್ಲ ಅಂತ ಗೊತ್ತು. ಹಾಗೆಂದ ಮಾತ್ರಕ್ಕೆ ವಾಸ್ತವ ಬದಲಾಗುವುದಿಲ್ಲವಲ್ಲ. ಪ್ರತೀ ಸಾರಿ ಪತ್ರಿಕೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ಸುದ್ದಿಯನ್ನು ಓದಿದಾಗ, ಗಂಡಸರಿಗೆ ಜೆಂಟಲ್‌ವುನ್‌ ಎನ್ನುವುದರ ಪರಿಕಲ್ಪನೆಯೇ ಇಲ್ಲವೇ ಎಂದು ಅಚ್ಚರಿಯಾಗುತ್ತೆ. ಜೆಂಟಲ್‌ವುನ್‌ಗಳು ಸಾಹಿತ್ಯದಲ್ಲಿ ಮಾತ್ರವೇ ಇರೋದಾ? ನಿಜಜೀವನದಲ್ಲಿ ಇರುವುದಿಲ್ಲವಾ ಅಂತಲೂ ಹಲವು ಬಾರಿ ಯೋಚಿಸಿದ್ದಿದೆ.

ನಿಮ್ಮಲ್ಲನೇಕರು “ಜೆಂಟಲ್‌ವುನ್‌ಗಳ ಅಗತ್ಯವಾದರೂ ಏನಿದೆ?’ ಅಂತ ವಾದಿಸಬಹುದು. ಅದೂ ನಿಜ. ಜೆಂಟಲ್‌ವುನ್‌ಗಳು ಯಾಕೆ ಬೇಕು, ಅಲ್ವಾ? ಗಂಡು- ಹೆಣ್ಣು ಸಮಾನರು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಲ್ಲಿ ಲಿಂಗಭೇದವಿಲ್ಲ. ಕಚೇರಿಗಳಲ್ಲಿ ಲಿಂಗ ತಾರತಮ್ಯಗಳಿಲ್ಲ. ಈಗೊಂದು ಪ್ರಶ್ನೆ. ಹಾಗಿದ್ದೂ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಯಾಕೆ ಕಡಿಮೆಯಾಗುತ್ತಿಲ್ಲ? ಗುರುಗ್ರಾಮ್‌ ಆಗಲಿ, ಬೆಂಗಳೂರೇ ಆಗಲಿ, ಹೆಣ್ಣು ಎಲ್ಲಿಯೂ ಸುರಕ್ಷಿತಳಲ್ಲ.

ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯೊಬ್ಬಳು ಗೂಂಡಾಗಳಿಂದ ಅಪಹರಣಗೊಂಡಾಗ, ಇಲ್ಲಾ ಮೆಟ್ರೋಗಳಲ್ಲಿ ರಾತ್ರಿ ಕೆಲಸದಿಂದ ಮನೆಗೆ ಮರಳುತ್ತಿದ್ದ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅದನ್ನು ಎಷ್ಟೋ ಜೆಂಟಲ್‌ವುನ್‌ಗಳು ಆಲಕ್ಷಿಸಿಬಿಡುತ್ತಾರೆ. ಯಾಕೆ ಗೊತ್ತಾ? ಅವರ ಪ್ರಕಾರ ಅದು ಅವರ ಕೆಲಸವಲ್ಲ, ಅವರ ಕರ್ತವ್ಯವೂ ಅಲ್ಲ.

ಒಂದು ಮುಖ್ಯವಾದ ಪ್ರಶ್ನೆ: ಒಬ್ಬ ಮನುಷ್ಯ ಜೆಂಟಲ್‌ವುನ್‌ ಹೇಗಾಗುತ್ತಾನೆ?
ನನ್ನನ್ನು ಕೇಳುವುದಾದರೆ, ಯಾರು ತನ್ನ ನಂಬಿಕೆಗೆ ಬದ್ಧನಾಗಿರುತ್ತಾನೋ, ಯಾರಿಗೆ ಹೆಣ್ಣಿನ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರ ಗೊತ್ತಿರುತ್ತದೋ ಅವನು ಜೆಂಟಲ್‌ವುನ್‌. ಅಂಥವನಿಗೆ ಚರ್ಚೆ ಮತ್ತು ವಾಗ್ವಾದ ಎರಡರ ನಡುವಿನ ಸೂಕ್ಷ್ಮ ವ್ಯತ್ಯಾಸ ತಿಳಿದಿರುತ್ತದೆ. ಅಂಥವನು ತನ್ನವಳಿಗೆ ಆಯ್ಕೆಯ ಸ್ವಾತಂತ್ರÂವನ್ನು ನೀಡುತ್ತಾನೆ.
ಭಾರತ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿಯನ್ನೇ ನೋಡಿ. ಕ್ರಿಕೆಟ್‌ ಅನ್ನು ಜೆಂಟಲ್‌ವುನ್‌ಗಳ ಆಟ ಎನ್ನುತ್ತಾರೆ. ವಿರಾಟ್‌ ಕೊಹ್ಲಿ ಅದನ್ನು ನಿಜಕ್ಕೂ ಸಾಬೀತು ಪಡಿಸಿದ್ದಾರೆ. ಇಡೀ ಬಾರತ “ಅವನ ಹುಡುಗಿಯಿಂದಲೇ ವಿರಾಟ್‌ಗೆ ಚೆನ್ನಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹಲ್ಲು ಮಸೆಯುತ್ತಿದ್ದರೆ, ಹಿಂದೆ ಮುಂದೆ ನೋಡದೆ ತಕ್ಷಣ ತನ್ನ ಹುಡುಗಿಯ ರಕ್ಷಣೆಗೆ ಧಾವಿಸಿದ್ದ. ಅವಳ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದ. ಜೆಂಟಲ್‌ವುನ್‌ನ ಲಕ್ಷಣ ಎಂದರೆ ಅದು!
ದುರದೃಷ್ಟಕರ ಸಂಗತಿಯೆಂದರೆ, ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ವಿರಾಟ್‌ ಕೊಹ್ಲಿಯ ವರ್ತನೆಯನ್ನು ಕೊಂಡಾಡುವ, ಆರಾಧಿಸುವ ಅವನ ಅಭಿಮಾನಿಗಳು ಹೆಣ್ಣಿನ ವಿಚಾರಕ್ಕೆ ಬಂದಾಗ ಮಾತ್ರ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಹೆಂಗಸರ ವಿಷಯದಲ್ಲಿ, ಗಂಡಸರೂ ವಿರಾಟ್‌ ಕೊಹ್ಲಿಯಂತೆ ಯಾಕಿರಬಾರದು?
ಕಾಲ ಬದಲಾಗುತ್ತಿದೆ. ಗಂಡು ತನ್ನ ವರ್ತನೆಯನ್ನು, ವಿಚಾರಧಾರೆಯನ್ನು ಬದಲಿಸಿಕೊಳ್ಳಬೇಕು, ಹೆಣ್ಣನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು. ನಿಜವಾದ ಜೆಂಟಲ್‌ವುನ್‌ಗಳ ಹಾಗೆ!

ಟಾಪ್ ನ್ಯೂಸ್

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.