ಬೆಟ್ಟದ ತುದಿಯ ಬೆಳ್ಳಿ


Team Udayavani, Oct 19, 2017, 11:42 AM IST

bettda-tudi.jpg

ಕಳೆದ ವರ್ಷ ಮೈಕೊರೆವ ಚಳಿಯಲ್ಲಿ ಮೌಂಟ್‌ ಎವರೆಸ್ಟ್‌ ಏರಿಬಂದಿದ್ದ ನಂದಿತಾ, ಈ ಸಲ “ದಿಸ್‌ ಟೈಮ್‌ ಫಾರ್‌ ಆಫ್ರಿಕಾ’ ಎಂದಿದ್ದಾರೆ. ಆಫ್ರಿಕ ಖಂಡದ ತಾಂಜೇನಿಯಾ ದೇಶದಲ್ಲಿನ ಸುಪ್ತ ಅಗ್ನಿಪರ್ವತ “ಕಿಲಿಮಂಜರೋ’ದ ನೆತ್ತಿ ತಟ್ಟಿ ಬಂದಿದ್ದಾರೆ…

ಕನ್ನಡಿಗರ ಕಣ್ಣಿಗೆ ಹುಬ್ಬಳ್ಳಿ, “ಗಂಡು ಮೆಟ್ಟಿದ ನಾಡು’. ಅಲ್ಲಿ ಹುಟ್ಟಿದ ಹೆಣ್ಮಕ್ಕಳಿಗೂ ಗಂಡಿನ ಧೈರ್ಯದ ಹುರುಪು ಇರುತ್ತದೆ ಎನ್ನುವುದಕ್ಕೆ ನಂದಿತಾ ನಾಗನಗೌಡರ್‌ ಸಾಕ್ಷಿ. ಕಳೆದ ವರ್ಷ ಮೈಕೊರೆವ ಚಳಿಯಲ್ಲಿ ಮೌಂಟ್‌ ಎವರೆಸ್ಟ್‌ ಏರಿಬಂದಿದ್ದ ನಂದಿತಾ, ಈ ಸಲ “ದಿಸ್‌ ಟೈಮ್‌ ಫಾರ್‌ ಆಫ್ರಿಕಾ’ ಎಂದಿದ್ದಾರೆ.

ಆಫ್ರಿಕ ಖಂಡದ ತಾಂಝೇನಿಯಾ ದೇಶದಲ್ಲಿನ ಸುಪ್ತ ಅಗ್ನಿಪರ್ವತ “ಕಿಲಿಮಂಜಾರೋ’ದ ನೆತ್ತಿ ತಟ್ಟಿ ಬಂದಿದ್ದಾರೆ. ಕಿಲಿಮಂಜಾರೋ ಹಾದಿ ಅತಿ ದುರ್ಗಮ. ನಂದಿತಾ ಆರಿಸಿಕೊಂಡಿದ್ದ “ಮಚಾಮೆ’ ಮಾರ್ಗದಲ್ಲಿ ಒಂದೇಸಮನೆ ಮೇಲೇರಲೂ ಆಗುವುದಿಲ್ಲ. ಪರ್ವತಾರೋಹಿಗಳು ಅಲ್ಲಲ್ಲಿ ಕ್ಯಾಂಪ್‌ಗ್ಳನ್ನು ಹಾಕಿಕೊಂಡು, ಹಂತಹಂತವಾಗಿ ಮೇಲಕ್ಕೆ ಹೋಗುತ್ತಾರೆ.

ಇವರ ಕೊನೆಯ ಕ್ಯಾಂಪ್‌ನಿಂದ ಪರ್ವತದ ತುತ್ತ ತುದಿಗಿದ್ದ ದೂರ 1,600 ಮೀ. ಬೆಳಗ್ಗೆ 10-11ರ ಒಳಗೆ ತುದಿ ತಲುಪಬೇಕಿತ್ತು. 11ರ ನಂತರ ಏರುವುದು ಕಷ್ಟದ ಮಾತು. ಹಾಗಾಗಿ, ಮಧ್ಯರಾತ್ರಿ ಸಾಗುವುದೇ ಹೆಚ್ಚು ಸೂಕ್ತ. 1600 ಮೀ. ಕ್ರಮಿಸಲು ನಂದಿತಾ ತೆಗೆದುಕೊಂಡಿದ್ದು ಕೇವಲ 8 ಗಂಟೆ!

ಕಿಲಿಮಂಜರೋ, ಸಮಭಾಜಕ ವೃತ್ತದ ಅಗ್ನಿಪರ್ವತ. ಅಲ್ಲಿ ಹೆಚ್ಚು ಚಳಿ, ಹೆಚ್ಚು ಬಿಸಿಲು ಇರುತ್ತದೆ. ಸ್ವಲ್ಪ ದೂರ ಕ್ರಮಿಸಿದರೆ ಬೆವರು ಧಾರಾಕಾರವಾಗಿ ಸುರಿಯತೊಡಗುತ್ತದೆ. ಹಾಗಂತ ಜಾಸ್ತಿ ಹೊತ್ತು ವಿಶ್ರಾಂತಿ ತೆಗೆದುಕೊಂಡರೆ ದೇಹ ಫ್ರಿàಝ್ ಆಗುವಷ್ಟು ಚಳಿ. ಅಂಥ ವಿಕ್ಷಿಪ್ತ ವಾತಾವರಣವನ್ನು ಬೇಧಿಸಿ ನಂದಿತಾ ನಡೆದಿದ್ದರು. 

3-4 ನಿಮಿಷಕ್ಕೊಮ್ಮೆ ಬ್ರೇಕ್‌ ತೆಗೆದುಕೊಳ್ಳುತ್ತಾ, ಪರ್ವತದ ತುದಿಯಲ್ಲಿ ಭಾರತದ ಭಾವುಟವನ್ನೇರಿಸಿ ಬಂದರು. 11 ಜನರ ತಂಡದಲ್ಲಿದ್ದ ಇಬ್ಬರು ಭಾರತೀಯರಲ್ಲಿ ನಂದಿತಾ ಅವರೂ ಒಬ್ಬರು. ಅವರು ಆಸಿಯಾನ್‌ ದೇಶವನ್ನು ಪ್ರತಿನಿಧಿಸಿ, ಆ ವೇದಿಕೆಯಲ್ಲಿ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. 

ಹುಬ್ಬಳ್ಳಿ ಟು ಹಿಮಾಲಯ
ನಂದಿತಾ ಹುಟ್ಟಿ ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಬೆಟ್ಟ, ಗುಡ್ಡ, ಕಾಡು, ಪರ್ವತಗಳಿಲ್ಲದ ನಗರವದು. ಪರ್ವತಾರೋಹಣವೆಲ್ಲ ದೂರದ ಮಾತು ಬಿಡಿ. ಹುಟ್ಟೂರಿನಲ್ಲೇ ಆರಂಭಿಕ ವಿದ್ಯಾಭ್ಯಾಸ ಮುಗಿಸಿದರು. ಬಿ.ವಿ.ಬಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದು, ಇಂಗ್ಲೆಂಡ್‌ನ‌ ಕೊವೆಂಟ್ರಿ ವಿ.ವಿ.ಯಲ್ಲಿ ಎಂ.ಬಿ.ಎ. ಮುಗಿಸಿದರು.

ಓದು ಮುಗಿಯುತ್ತಿದ್ದಂತೆ ಕಾರ್ಪೋರೇಟ್‌ ಉದ್ಯೋಗ ಕೈ ಬೀಸಿ ಕರೆದಿತ್ತು. ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸಕ್ಕೆ ಸೇರಿದರು. ಆದರೆ, ಕೈ ತುಂಬಾ ಸಂಪಾದನೆ ಮಾಡುತ್ತಾ, ವಿದೇಶದಲ್ಲಿ ಆರಾಮಾಗಿದ್ದ ಹುಡುಗಿಯ ಕಣ್ಮುಂದೆ ಕುಣಿಯುತ್ತಿದ್ದುದು ಮಾತ್ರ  ಪರ್ವತಗಳ ಸಾಲು.

ಪರ್ವತಾರೋಹಣ ಅಷ್ಟು ಸುಲಭವಲ್ಲ…
ಪರ್ವತಾರೋಹಣ ಅಂದರೆ, ನಾವು- ನೀವು ಅಂದುಕೊಂಡಂತೆ ಬೆಟ್ಟ ಹತ್ತುವುದಷ್ಟೇ ಅಲ್ಲ. ಅದನ್ನು ಕೇವಲ ಟ್ರೆಕ್ಕಿಂಗ್‌ ಎಂದು ಭಾವಿಸುವುದು ಮೂರ್ಖತನ. ಹಿಮಾಲಯದಂಥ ಪರ್ವತ ಏರುವ ಮುಂಚೆ ಅದೆಷ್ಟೋ  ಟ್ರೈನಿಂಗ್‌ ಬೇಕಿರುತ್ತದೆ. ದೇಹದಲ್ಲಿ ಶಕ್ತಿ ಇದ್ದರಷ್ಟೇ ಸಾಲದು, ಮಾನಸಿಕ ಸ್ಥೈರ್ಯವೂ ಬೇಕು. ನಂದಿತಾ, ಮನಾಲಿಯ ಅಟಲ್‌ ಬಿಹಾರಿ ವಾಜಪೇಯಿ ಇನ್ಸ್‌ಟಿಟ್ಯೂಟ್‌ ಆಫ್ ಮೌಂಟೆನಿಯರಿಂಗ್‌ನಲ್ಲಿ ತರಬೇತಿ ಪಡೆದರು. 

ಈ ತರಬೇತಿಯಲ್ಲಿ ನೀವು ಕಲಿಯುವ ಪ್ರತಿಯೊಂದು ಸಂಗತಿಯೂ ನಿಮ್ಮ ಜೀವ ಉಳಿಸುವಂಥದ್ದು. ಪರ್ವತ ಏರುವಾಗ ಯಾವ ಚಿಕ್ಕ ವಿಷಯವನ್ನೂ ನಿರ್ಲಕ್ಷಿಸುವಂತಿಲ್ಲ. ದಿನದಲ್ಲಿ ಸತತ 10-12 ಗಂಟೆ ತರಬೇತಿ ಇರುತ್ತದೆ. ಬೆಳಗ್ಗೆ 5ರಿಂದ ಸಂಜೆ 4ರವರೆಗೆ ಬೇರೆ ಬೇರೆ ಸಂಗತಿಗಳನ್ನು ಹೇಳಿಕೊಡುತ್ತಾರೆ. ಯಾವ ಶೂ ಧರಿಸಬೇಕು, ಯಾವ ಆಹಾರ ಸೇವಿಸಬೇಕು, ಪ್ರಾಣಾಪಾಯದಿಂದ ಪಾರಾಗೋದು ಹೇಗೆ, ಹಂತ ಹಂತವಾಗಿ ಪರ್ವತ ಏರಿದಂತೆ ವಾತಾವರಣ ಹೇಗೆ ಬದಲಾಗುತ್ತದೆ,

ಬದಲಾದ ವಾತಾವರಣಕ್ಕೆ ಒಗ್ಗಿಕೊಳ್ಳೋದು ಹೇಗೆ, ಆಹಾರಾಭ್ಯಾಸ ಹೇಗಿರಬೇಕು… ಇತ್ಯಾದಿಗಳನ್ನು ಶ್ರದ್ಧೆಯಿಂದ ಕಲಿಯಬೇಕು. ತರಬೇತಿ ಪಡೆದವರೆಲ್ಲರೂ ಸಾಹಸಕ್ಕೆ ಮುಂದಾಗುವುದಿಲ್ಲ. ಹೆದರಿ ಹಿಂದೆ ಸರಿಯುವವರೇ ಹೆಚ್ಚು. ಉತ್ತರ ಭಾರತೀಯರಿಗೆ ಹೋಲಿಸಿದರೆ ದಕ್ಷಿಣದವರು ಇಂಥ ಸಾಹಸಕ್ಕೆ ಮುಂದಾಗುವುದು ಕಡಿಮೆ. ಅದರಲ್ಲೂ ಹುಡುಗಿಯರು ಬೆರಳೆಣಿಕೆಯಷ್ಟು ಮಾತ್ರ ಇರುತ್ತಾರೆ ಅನ್ನುತ್ತಾರೆ ನಂದಿತಾ.  

ಮೌಂಟ್‌ ಎವರೆಸ್ಟ್‌ ಮೆಟ್ಟಿದ ಕ್ಷಣ
ಹಿಮಾಲಯ, ಎಲ್ಲ ಪರ್ವತಾರೋಹಿಗಳ ಕನಸಿನ ಪರ್ವತ. ನಂದಿತಾ ಅವರು 2016ರಲ್ಲಿ ಎವರೆಸ್ಟ್‌ನ ಸೌತ್‌ ಪೋಲ್‌ ಏರಿ ಗೆಲುವಿನ ನಗೆ ಬೀರಿದರು. 55 ದಿನಗಳ ಆ ಪರ್ವತಾರೋಹಣ ಅವರನ್ನು ಸುಸ್ತು ಮಾಡಲಿಲ್ಲ. ಬದಲಿಗೆ ಅದು ಇನ್ನೊಂದು ಕನಸಿಗೆ ಮೆಟ್ಟಿಲಾಯಿತು. ನಂತರ ಅದನ್ನವರು 2017ರ ಜೂನ್‌ನಲ್ಲಿ ನನಸು ಮಾಡಿಯೇ ಬಿಟ್ಟರು. ಅದುವೇ ಆಸ್ಟ್ರೇಲಿಯಾದ ಅತಿ ಎತ್ತರದ ಕಾರ್‌ಸ್ಟೆನ್‌ ಪಿರಮಿಡ್‌ ಪರ್ವತ.

ಆದರೆ, ಪರ್ವತ ಇಳಿಯುವಾಗ ಪ್ರತಿಕೂಲ ವಾತಾವರಣದಿಂದ ನಾಲ್ಕೈದು ದಿನ ಪ್ರಯಾಣ ಮಾಡಲಾಗದೆ ಕಷ್ಟಕ್ಕೆ ಸಿಲುಕಿದ್ದರು. ಅದು ನಿಜಕ್ಕೂ ಮೃತ್ಯುವನ್ನೇ ಗೆದ್ದು ಬಂದ ಅನುಭವ! ಅಷ್ಟೆಲ್ಲ ಕಷ್ಟವನ್ನು ಮೆಟ್ಟಿ ನಿಂತ ನಂತರ, ಆ ಪರ್ವತವನ್ನು ಏರಿದ ಕರ್ನಾಟಕದ ಮೊದಲ ಸಿವಿಲಿಯನ್‌ ಮಹಿಳೆ ಎಂಬ ಕೀರ್ತಿ ಅವರ ಮುಡಿಗೇರಿತು.  

ನಂದಿತಾ ಕಣ್ಣಿಟ್ಟ ಆ ಏಳು ಶಿಖರಗಳು
ಪ್ರಪಂಚದ ಏಳು ಖಂಡಗಳ ಏಳು ಎತ್ತರದ ಪರ್ವತಗಳಿಗೆ “ಸೆವೆನ್‌ ಸಮಿಟ್ಸ್‌’ ಎಂದು ಕರೆಯುತ್ತಾರೆ. ಈ ಏಳು ಪರ್ವತಗಳನ್ನು ಏರುವುದು ಪರ್ವತಾರೋಹಿಗಳ ಬಹುದೊಡ್ಡ ಕನಸು. ಇಲ್ಲಿಯವರೆಗೆ ಕೆಲವೇ ಕೆಲವು ಮಂದಿ ಇದರಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾ- ಮೌಂಟ್‌ ಎವರೆಸ್ಟ್‌, ಆಫ್ರಿಕಾ- ಕಿಲಿಮಂಜರೊ, ದ. ಅಮೆರಿಕ- ಅಕೊಂಕಾಗುವಾ, ಉ. ಅಮೆರಿಕ- ಡೆನಾಲಿ, ಯುರೋಪ್‌- ಎಲ್ಬ†ಸ್‌/ ಮೌಂಟ್‌ ಬ್ಲಾಂಕ್‌, ಆಸ್ಟ್ರೇಲಿಯ- ಪುನ್ಕಾಕ್‌ ಜಯ/ ಕಾರ್‌ಸ್ಟೆನ್‌j ಪಿರಮಿಡ್‌, ಅಂಟಾರ್ಟಿಕ- ವಿನ್ಸನ್‌ ಮ್ಯಾಸಿಫ್.  

ಕರೆಯುತ್ತಿದೆ ವಿನ್ಸನ್‌ ಮ್ಯಾಸಿಫ್…
ಅಂಟಾರ್ಟಿಕಾದ ವಿನ್ಸನ್‌ ಮ್ಯಾಸಿಫ್ ಏರಲು ಡಿಸೆಂಬರ್‌-ಫೆಬ್ರವರಿ ಪ್ರಶಸ್ತ ಸಮಯ. ನಂದಿತಾ ಈ ಡಿಸೆಂಬರ್‌ನಲ್ಲಿ ಇನ್ನೊಂದು ಸಾಹಸಕ್ಕೆ ಮುಂದಾಗುವ ಪ್ರಯತ್ನದಲ್ಲಿದ್ದಾರೆ. ಇಲ್ಲದಿದ್ದರೆ ಮುಂದಿನ ವರ್ಷದವರೆಗೆ ಅವರು ಮತ್ತೆ ಕಾಯಬೇಕು. ಆದರೆ ಅದಕ್ಕೆ 60-70 ಲಕ್ಷ ರೂ. ಬೇಕಾಗುತ್ತದೆ. ಇಂಥ ಅಡ್ವೆಂಚರಸ್‌ ನ್ಪೋರ್ಟ್ಸ್ನ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಪರ್ವತಾರೋಹಿಗಳಿಗೆ ಸರ್ಕಾರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎನ್ನುವುದು ಬೇಸರದ ವಿಷಯ ಎನ್ನುತ್ತಾರೆ ಅವರು. 

ಪರ್ವತ ಏರೋದು ಬ್ರೈನ್‌ಗೆಮ್‌ ಇದ್ಹಂಗೆ!
ಕ್ರಿಕೆಟ್‌, ಟೆನ್ನಿಸ್‌, ಕಬಡ್ಡಿ ಮುಂತಾದ ಕ್ರೀಡೆಗಳಿಗೆ ನಮ್ಮಲ್ಲಿ ಸಪೋರ್ಟ್‌ ಸಿಗುತ್ತೆ. ಆದರೆ, ಇಂಥ ಕ್ಷೇತ್ರಕ್ಕೆ ಯಾರೂ ಹೋಗಲು ಬಯಸುವುದಿಲ್ಲ. ಹುಡುಗಿಯರಂತೂ ಧೈರ್ಯ ಮಾಡುವುದೇ ಕಡಿಮೆ. ನಾವು ಇದನ್ನು ಕೇವಲ ಪ್ಯಾಶನ್‌ ಅಂತ ನೋಡುತ್ತಿಲ್ಲ. ನಾವು ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತೇವೆ, ಯಾರೂ ಏರದ ಸ್ಥಳದಲ್ಲಿ ನಮ್ಮ ಧ್ವಜವನ್ನು ಹಾರಿಸುತ್ತೇವೆ. ಪರ್ವತಾರೋಹಣದ ವೇಳೆ ಕೆಲವೊಮ್ಮೆ ಕಣ್ಣೆದುರಿಗೇ ಅವಘಡಗಳು ನಡೆದು ಬಿಡುತ್ತವೆ.

ನನ್ನ ಕಣ್ಣೆದುರಿಗೇ ನಮ್ಮ ಟೀಂನ ಇಬ್ಬರು ತೀರಿಕೊಂಡರು. ಅಂಥ ಸಂದರ್ಭದಲ್ಲಿ ನಾವು ಧೃತಿಗೆಡಬಾರದು. ಇದೊಂಥರಾ ಬ್ರೈನ್‌ ಗೇಂ ಇದ್ದಂತೆ. μಟೆ°ಸ್‌ ಬಗ್ಗೆಯೂ ಜಾಸ್ತಿ ಗಮನ ಹರಿಸಬೇಕು. ನಾನಂತೂ ದಿನದಲ್ಲಿ ಐದಾರು ಗಂಟೆ ವಕೌìಟ್‌ ಮಾಡ್ತೇನೆ. ಪರ್ವತಾರೋಹಿಗಳಿ ಗೆ 20-30 ಕೆ.ಜಿ. ಬ್ಯಾಕ್‌ಪ್ಯಾಕ್‌ ಹೊರುವ ಸಾಮರ್ಥ್ಯ ಬೇಕು.  

* ಪ್ರಿಯಾಂಕ

ಟಾಪ್ ನ್ಯೂಸ್

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.