ಮನೆಯಲ್ಲೂ ಕೆಲಸ ಕಚೇರಿಯಲ್ಲೂ ಕೆಲಸ


Team Udayavani, Feb 24, 2017, 3:50 AM IST

23-YUVA-6.jpg

ನೀನು ಇದನ್ನೆಲ್ಲಾ ಹೇಗೆ ಮಾಡ್ತೀಯಾ?ಇಷ್ಟಕ್ಕೆಲ್ಲಾ ನಿನಗೆ ಟೈಮ್‌ ಸಿಗುವುದಾದರೂ ಹೇಗೆ?’ ನನ್ನ ಪರಿಚಿತರು, ಮಿತ್ರರು, ಬಂಧುಬಳಗ ಹೀಗೆ ನನ್ನನ್ನು ಹತ್ತಿರದಿಂದ ಬಲ್ಲವರೆಲ್ಲಾ ಹೀಗೆ ಕೇಳುತ್ತಾರೆ. ನಾನು ಮೂವರು ಪುಟ್ಟ ಮಕ್ಕಳ ಅಮ್ಮ. ಅವರು ಐದನೇ, ಒಂದನೇ ಹಾಗೂ ಎಲ….ಕೆ.ಜಿ. ತರಗತಿಗಳಲ್ಲಿದ್ದಾರೆ. ವೃತ್ತಿಯಲ್ಲಿ ನಾನು ಹೈಸ್ಕೂಲ್‌ ಶಿಕ್ಷಕಿ. ಬೆಳಗ್ಗೆ, ಸಂಜೆ ಸಾಲು ಕೆಲಸಗಳು ನನಗಾಗಿ ಕಾದಿರುತ್ತವೆ. ಇದರ ಮಧ್ಯೆ ನನ್ನ ಬರವಣಿಗೆಯ ಹವ್ಯಾಸವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತೇನೆ. ನನ್ನ ಬರಹಗಳನ್ನೆಲ್ಲಾ ನಾನೇ ಟೈಪ್‌ ಮಾಡುತ್ತೇನೆ. ಸಣ್ಣ ಮಟ್ಟಿಗೆ ಗಾರ್ಡನಿಂಗ್‌ ನಲ್ಲಿ ತೊಡಗುತ್ತೇನೆ. ಮನಸ್ಸಾದರೆ ನನ್ನ ಇನ್ನೊಂದು ಹವ್ಯಾಸವಾದ ಚಿತ್ರರಚನೆಯನ್ನೂ ಮಾಡುತ್ತೇನೆ. ನನ್ನ ಮಕ್ಕಳಿಗೆ ಹೋಮ್‌ ವರ್ಕಿಗೆ ಒಮ್ಮೊಮ್ಮೆ ಸಹಾಯ ಮಾಡುತ್ತೇನೆ. ನನ್ನ ಹಾಗೂ ಶಾಲೆಯ ಮಕ್ಕಳನ್ನು ವಿವಿಧ ಸ್ಪರ್ಧೆಗಳಿಗೆ ತಯಾರು ಮಾಡುತ್ತೇನೆ. ಇದೇ ಎಲ್ಲರ ಆಶ್ಚರ್ಯಕ್ಕೆ ಕಾರಣ. 

ಇಷ್ಟೇ ಅಲ್ಲ. ಮದುವೆಯಾಗಿ ಮೊದಲ ಮಗು ಹುಟ್ಟಿ, ಅವಳಿಗೆ ಒಂದು ವರ್ಷವಾಗುವ ಮೊದಲು ಬಿ.ಎಡ್‌ ಪದವಿ ಮುಗಿಸಿದೆ. ಎರಡನೇ ಮಗಳು ಹುಟ್ಟುವಾಗ ಎಂ.ಎ. ಮುಗಿಸಿಕೊಂಡೆ. ಪ್ರಥಮ ಬಾರಿ ಕೆ.ಎ.ಎಸ್‌. ಪರೀಕ್ಷೆ ಬರೆದೆ. ಮೂರನೇ ಮಗು ಹುಟ್ಟುವುದಕ್ಕೆ ಹದಿನೈದು ದಿನವಿರುವಾಗ ಎರಡನೇ ಸಲ ಕೆ.ಎ.ಎಸ್‌. ಪೂರ್ವಭಾವಿ ಪರೀಕ್ಷೆ ಬರೆದು ಪಾಸಾದೆ. ಮುಖ್ಯ ಪರೀಕ್ಷೆ ಬರೆದೆ. ಕಳೆದ ಬಾರಿ ಕೆ.ಎ.ಎಸ್‌. ಪೂರ್ವಭಾವಿ ಪರೀಕ್ಷೆ ಪಾಸಾಗಿ ಮುಖ್ಯ ಪರೀಕ್ಷೆ ಬರೆದಾಗಲೂ ನನ್ನ ಮೂವರು ಮಕ್ಕಳೂ ಸಣ್ಣವರಿದ್ದರು. ಈ ಎಲ್ಲಾ ಅವಧಿಯಲ್ಲೂ ಕೆಲವು ತಿಂಗಳು (ನಾನಿಲ್ಲದಾಗ ಹಗಲು ಹೊತ್ತು ಮಗುವನ್ನು ನೋಡಿಕೊಳ್ಳಲು) ಕೆಲಸಕ್ಕೆ ಜನ ಇದ್ದದ್ದು ಬಿಟ್ಟರೆ, ಎಲ್ಲಾ ನಾನೇ ನಿಭಾಯಿಸುತ್ತಿದ್ದೆ. ಹೀಗಿರುವಾಗ ಇವರೆಲ್ಲರ ಆಶ್ಚರ್ಯ ಸಹಜ ತಾನೇ? ನನ್ನ ಸೀಕ್ರೆಟ್‌ ಅಂದರೆ ಟೈಂ ಮ್ಯಾನೇಜ್‌ ಮೆಂಟ…. ಸಮಯವನ್ನು ಸದುಪಯೋಗ ಪಡಿಸುವುದು, ಸರಿಯಾಗಿ ನಿರ್ವಹಿಸುವುದು ಹೇಗೆಂದು ಅನುಭವದಿಂದ ಕಲಿತುಕೊಂಡ ಕಾರಣ, ಎಷ್ಟೇ ಕೆಲಸಗಳಿದ್ದರೂ ಮುಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತದೆ.

ನೌಕರಿಯಲ್ಲಿರುವ ಮಹಿಳೆಯರು ನೌಕರಿ ಹಾಗೂ ಮನೆಕೆಲಸ ಎರಡನ್ನೂ ಸಮದೂಗಿಸಲು, ಸಮರ್ಪಕವಾಗಿ ನಿಭಾಯಿಸಲು ಹೆಣಗಾಡುತ್ತಾರೆ. ಸಮಯಾಭಾವ ಬಹುತೇಕರ ಸಮಸ್ಯೆ. ದಿನದ ಅವಧಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದರೆ ಇರುವ ಸಮಯವನ್ನು ಸರಿಯಾಗಿ ನಿರ್ವಹಿಸಿದರೆ ನೌಕರಿಯಾಗಲೀ, ಮನೆಕೆಲಸವಾಗಲೀ ಹೊರೆಯೆನಿಸುವುದಿಲ್ಲ.

ಕೆಲವು ಮಹಿಳೆಯರು ದಿನದ ಹಲವಾರು ನಿಮಿಷ ಅಥವಾ ಗಂಟೆಗಳನ್ನು ಯಾವುದೋ ವಸ್ತುವನ್ನು ಹುಡುಕುವುದರಲ್ಲಿ ವ್ಯರ್ಥ ಮಾಡುತ್ತಾರೆ. ನಿತ್ಯ ನೌಕರಿಗೆ ಹೋಗುವಾಗ ಧರಿಸುವ ಚೂಡಿದಾರಿನ ಪ್ಯಾಂಟ…, ಟಾಪ್‌, ವೇಲ್‌ಗ‌ಳನ್ನು, ಸೀರೆ, ರವಿಕೆ, ಸ್ಕರ್ಟ್‌ಗಳನ್ನು, ಇನ್ಯಾವುದೋ ವಸ್ತ್ರದ ಎರಡು ಭಾಗಗಳನ್ನು ಬೇರೆಬೇರೆ ಕಡೆ ಇಟ್ಟು ಅಥವಾ ವಾರ್ಡ್‌ ರೋಬಿನಲ್ಲಿ ಬಟ್ಟೆಗಳನ್ನು ಒಟ್ಟಾರೆ ತುರುಕಿಸಿಟ್ಟು ಒಂದು ಜೊತೆ ಬಟ್ಟೆಗಾಗಿ ಇಡೀ ಬಟ್ಟೆ ರಾಶಿಯನ್ನು ಜಾಲಾಡುತ್ತಾರೆ. ಹಾಗೆಯೇ ಸೇಫ್ಟಿ ಪಿನ್‌, ಹೇರ್‌ ಕ್ಲಿಪ್‌, ಬಳೆ, ಉಂಗುರ, ವಾಚು, ಸ್ಟಿಕ್ಕರ್‌, ಪೌಡರ್‌, ಬಾಚಣಿಗೆ ಮುಂತಾದುವನ್ನು ಎಲ್ಲೆಲ್ಲೋ ಇಟ್ಟು ಬೆಳಗ್ಗೆ ಹೊರಡುವಾಗ ಇಡೀ ಮನೆ ಹುಡುಕಾಡುತ್ತಾರೆ. ಇದಕ್ಕೆ ಅನಗತ್ಯ ಸಮಯ ಹಾಳು, ಸಮಯ ಮೀರುತ್ತಿದ್ದರೂ  ವಸ್ತು ಸಿಗದಿ¨ªಾಗ ಮಾನಸಿಕ ಒತ್ತಡ ಬೇರೆ. ಆ ಸಮಯದಲ್ಲಿ ಯಾರಾದರೂ ಮಾತನಾಡಿಸಿದರೆ ಸಿಟ್ಟಿನ ಭರದಲ್ಲಿ ಜಗಳವೂ ಆಗಬಹುದು. ಇದರಿಂದ ಇಡೀ ದಿನದ ನೆಮ್ಮದಿ ಹಾಳಾಗುತ್ತದೆ.

ಈ ಸಮಯಾಭಾವವೆಂಬ ಸಮಸ್ಯೆಯಿಂದ ಪಾರಾಗಲು ಬೇಕಾದುದು ಶಿಸ್ತು ಮತ್ತು ಅಚ್ಚುಕಟ್ಟುತನ. ನಿತ್ಯ ಬಳಕೆಯ ವಸ್ತುಗಳನ್ನು ನಿರ್ದಿಷ್ಟ ಜಾಗದಲ್ಲೇ ಇಡಬೇಕು. ಅಪ್ಪತಪ್ಪಿಯೂ ಮತ್ತೆ ಇಡುತ್ತೇನೆ ಎಂದು ಇನ್ನೆÇÉೋ ಇಡಬಾರದು. ಒಂದೆರಡು ಬಾರಿ ನಿಗದಿತ ಜಾಗದಲ್ಲಿ ವಸ್ತುಗಳನ್ನಿಟ್ಟರೆ ನಂತರ ಅದು ರೂಢಿಯಾಗುತ್ತದೆ. ಹುಡುಕಾಟಕ್ಕೆ ವಿನಿಯೋಗಿಸುವ ಸಮಯವನ್ನು ಹೀಗೆ ಉಳಿಸಬಹುದು. ವಾರ್ಡ್‌ ರೋಬಿನಲ್ಲಿ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬೇಕು. ಅಡುಗೆಕೋಣೆಯಲ್ಲಿ ಉಪ್ಪು, ಸಕ್ಕರೆ, ಚಹಾ ಹುಡಿ, ಮೆಣಸು, ಬೇಳೆ ಹೀಗೆ ಎಲ್ಲಾ ಆಹಾರ ವಸ್ತುಗಳಿಗೂ ಅಡುಗೆ ಪಾತ್ರೆಗಳಿಗೂ ನಿರ್ದಿಷ್ಟ ಜಾಗ ನಿಗದಿಪಡಿಸಿದರೆ ಎಷ್ಟೋ ಸಮಯ ಉಳಿಯುತ್ತದೆ. 

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಸ್ಟವ್‌ನ ಒಂದು ಕಡೆ ಅನ್ನ ಮಾಡಲು ಇಟ್ಟರೆ ಇನ್ನೊಂದು ಕಡೆ ಸಾರು /ಪಲ್ಯ ಇಡಬೇಕು. ತರಕಾರಿ ಬೇಯುತ್ತಿರುವಾಗ ಮಸಾಲೆ ರುಬ್ಬಿಟ್ಟುಕೊಂಡು, ಸ್ಟವ್‌ ಖಾಲಿಯಿದ್ದರೆ ಚಹಾ ಮಾಡಲು ನೀರಿಡಬಹುದು. ಅನ್ನ, ಸಾಂಬಾರು ಬೇಯುತ್ತಿರುವ ಸಮಯದಲ್ಲಿ ಪಾತ್ರೆ ತೊಳೆಯುವ ಕೆಲಸ ಮುಗಿಸಬಹುದು. ಚಹಾ ಕುದಿಯುವ ಸಮಯದೊಳಗೆ ಗುಡಿಸುವ ಕೆಲಸ ಮುಗಿಸಲು ಸಾಧ್ಯವಿದೆ. ದೋಸೆ, ಚಪಾತಿ ಇತ್ಯಾದಿಗಳನ್ನು ಮಾಡುವಾಗ ಎರಡು ಕಾವಲಿಗಳನ್ನು ಬಳಸಿದರೆ ಬೇಗನೇ ಆ ಕೆಲಸ ಮುಗಿಸಬಹುದು. ಮಕ್ಕಳ ಟಿಫಿನ್‌ ಕ್ಯಾರಿಯರ್‌ ಗಳನ್ನು ಹಿಂದಿನ ದಿನವೇ ತೊಳೆದು ಕೈಗೆಟಕುವಲ್ಲಿ ಇಟ್ಟುಕೊಂಡರೆ ಸಮಯ ನಷ್ಟವಾಗದೇ ತಿಂಡಿ ತುಂಬಿಸಲು ಸುಲಭವಾಗುತ್ತದೆ. 

ಮಕ್ಕಳು ತಮ್ಮ ವಾಟರ್‌ ಬಾಟಲ್‌ಗ‌ಳನ್ನು ತಾವೇ ತುಂಬಿಸಿಕೊಳ್ಳುವಂತೆ, ಶೂ ಸಾಕ್ಸ್…, ಯೂನಿಫಾರಂಗಳನ್ನು ತಾವೇ ಹಾಕಿಕೊಳ್ಳುವಂತೆ ಅಭ್ಯಾಸ ಮಾಡಿಸಬೇಕು. ಅವರು ಸಹಾ ತಮ್ಮ ಬ್ಯಾಗ್‌, ಶೂ ,ಸಾಕ್ಸ್…, ಇನ್ನಿತರ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿಡುವಂತೆ ಮಾಡಿದರೆ ಮಹಿಳೆಯರ ಮೇಲಿನ ಕೆಲವು ಸಣ್ಣ ಕೆಲಸದ ಹೊರೆಗಳು ತಗ್ಗುತ್ತವೆ. 

ಆ ದಿನ ಧರಿಸಲು ಬೇಕಾದ ಬಟ್ಟೆಬರೆಗಳನ್ನು ಹಿಂದಿನ ದಿನ ರಾತ್ರಿಯೇ ತೆಗೆದಿಟ್ಟು, ಬೇಕಿದ್ದರೆ ಇಸ್ತ್ರಿ ಮಾಡಿಟ್ಟುಕೊಂಡರೆ ಬೆಳಗ್ಗೆ ಬಹಳ ಸಮಯವನ್ನು ಉಳಿಸಬಹುದು. ತೆಂಗಿನಕಾಯಿ ತುರಿದು, ತರಕಾರಿಗಳನ್ನು ಹೆಚ್ಚಿ ಹಿಂದಿನ ರಾತ್ರಿ ಫ್ರಿvj… ನಲ್ಲಿಟ್ಟರೆ ಬೆಳಗ್ಗೆ ಅಡುಗೆ ಕೆಲಸ ಸುಲಭವಾಗುತ್ತದೆ. ನೌಕರಿಯಿಂದ ಹಿಂತಿರುಗಿದ ಬಳಿಕ ಹರಟೆ, ವಾಟ್ಸಾಪ್‌, ಟಿ.ವಿ. ಸೀರಿಯಲ್‌ ಎಂದು ಇಡೀ ಸಂಜೆಯ ಹೊತ್ತನ್ನು ನಷ್ಟಮಾಡಬಾರದು. ಇವೆಲ್ಲಾ ಬೇಡವೆಂದಲ್ಲ. ಫೋನ್‌, ಹರಟೆ, ವಾಟ್ಸಾಪ್‌, ಮನರಂಜನೆಗೆಲ್ಲಾ ಒಂದು ಸಮಯದ ಮಿತಿ ನಿಗದಿ ಪಡಿಸಬೇಕು. ಇಲ್ಲದಿದ್ದರೆ ಅವು ಮಹಿಳೆಯರ ಇಡೀ ದಿನವನ್ನೇ ಅಪಹರಿಸಿಬಿಡುತ್ತದೆ.

ಮನೆಕೆಲಸ, ಕಚೇರಿ ಕೆಲಸ ಇವೆರಡರಿಂದ ಮಹಿಳೆಯರಿಗೆ ಬಹಳಷ್ಟು ಮಾನಸಿಕ ಒತ್ತಡ ಇರುತ್ತದೆ. ಶಾರೀರಿಕ ಆರೋಗ್ಯದ ಮೇಲೆಯೂ ಇದರಿಂದ ದುಷ್ಪರಿಣಾಮಗಳಾಗಬಹುದು. ಮನೆಯ ಮುಂದೆ ಸ್ವಲ್ಪವಾದರೂ ಖಾಲಿಜಾಗವಿದ್ದರೆ, ಅಥವಾ ಕುಂಡಗಳಲ್ಲಾದರೂ ಹೂವಿನ ಗಿಡ ಅಥವಾ ತರಕಾರಿ ಗಿಡಗಳನ್ನು ಬೆಳೆಸುವುದರಿಂದ ಮನಸ್ಸಿನ ಆಯಾಸ ದೂರವಾಗಿ ರಿಫ್ರೆಶ್‌ ಆಗುತ್ತದೆ. ಉತ್ಸಾಹ ,ಉಲ್ಲಾಸ ತುಂಬುತ್ತದೆ. ಮಕ್ಕಳ ಆಟಪಾಠಗಳನ್ನು ಗಮನಿಸುವುದರಿಂದ, ಸ್ವಲ್ಪ ಹೊತ್ತು ಅವರ ಹೋಮ್‌ ವರ್ಕನ್ನು ಗಮನಿಸುವುದರಿಂದ ಮಕ್ಕಳಿಗೆ ಸಂತೋಷವಾಗುವುದರೊಂದಿಗೆ, ತಾಯಂದಿರ ಕೆಲಸದ ಒತ್ತಡದ ನಡುವೆಯೂ ಮಕ್ಕಳಿಗೆ ಸಮಯ ನೀಡುವುದರ ಸಂತೋಷ ಹಾಗೂ ತೃಪ್ತಿ ಸಿಗುತ್ತದೆ. ಮಕ್ಕಳ ಮೇಲೂ ಇದರಿಂದ ಸಕಾರಾತ್ಮಕ ಪರಿಣಾಮವಾಗುತ್ತದೆ. ದಿನಾಲೂ ಹೀಗೆ ಮಾಡಲು ಸಾಧ್ಯವಿಲ್ಲದಿದ್ದರೆ ವಾರಕ್ಕೆ ಒಂದೆರಡು ಬಾರಿಯಾದರೂ ಮಕ್ಕಳೊಂದಿಗೆ ಬೆರೆತು ಉಳಿದಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ಅವರನ್ನು ಅಭ್ಯಾಸ ಮಾಡಿಸಬೇಕು. ಅಮ್ಮಂದಿರ ಮನೆಕೆಲಸದಲ್ಲಿ ಸಣ್ಣಪುಟ್ಟ ಸಹಾಯ ಮಾಡಲು ಕಲಿಸಿಕೊಡಬೇಕು. 

ಅಡುಗೆ ಮನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಪಾತ್ರೆಗಳನ್ನಷ್ಟೇ ಬಳಸಬೇಕು. ಒಮ್ಮೆಲೇ ತೊಳೆಯಲು ಪಾತ್ರೆಗಳನ್ನು ಪೇರಿಸಿಡದೇ ಸಾಧ್ಯವಾದಷ್ಟು ಆಗಾಗ ಪಾತ್ರೆಗಳನ್ನು ತೊಳೆಯಬೇಕು. ಸಮಯದ ಲಭ್ಯತೆ ಕಡಿಮೆ ಇರುವವರು ಅಡುಗೆ ಕೆಲಸ ಸುಲಭಗೊಳಿಸುವ ಉಪಕರಣಗಳನ್ನು ಬಳಸಬಹುದು. ಒಂದು ಕುದಿಬಂದ ಅಕ್ಕಿಯನ್ನು ನಂತರ ಬೆಂಕಿಯ ಸಹಾಯವಿಲ್ಲದೇ ಬೇಯಿಸಿ ಕೊಡುವ ಚೈನಾ ಪಾಟ… (ಥರ್ಮಲ್‌ ಕುಕ್ಕರ್‌), ಚಪಾತಿ ಹಿಟ್ಟನ್ನು ಹದ ಮಾಡಿ ಕೊಡುವ ಗೆùಂಡರ್‌ ಅಥವಾ ಮಿಕ್ಸಿ, ಉಂಡೆ ರೂಪದ ಚಪಾತಿ ಹಿಟ್ಟನ್ನು ಒತ್ತಿ, ಬೇಯಿಸಿ ಕೊಡುವ ರೋಟಿ ಮೇಕರ್‌, ತರಕಾರಿಗಳನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ ಕೊಡುವ ಸರಳ ಉಪಕರಣಗಳು, ರೈಸ್‌ ಕುಕ್ಕರ್‌, ಇಡ್ಲಿ ಕುಕ್ಕರ್‌, ಮಿಲ್ಕ… ಕುಕ್ಕರ್‌, ಬಟ್ಟೆ ಒಗೆಯಲು ವಾಷಿಂಗ್‌ ಮೆಷಿನ್‌ ಇತ್ಯಾದಿಗಳ ಸಹಾಯದಿಂದ ಕೆಲಸದ ಕಷ್ಟ ಕಡಿಮೆಗೊಳಿಸಿ, ಸಮಯವನ್ನು ಉಳಿಸಬಹುದು. 

ನೌಕರಿಯಲ್ಲಿರುವ ಮಹಿಳೆ ನಿರ್ವಹಿಸಬೇಕಾದ ಅನೇಕ ಪಾತ್ರಗಳು ಹಾಗೂ ಜವಾಬ್ದಾರಿಗಳಿರುತ್ತವೆ. ಮನೆಯಲ್ಲೂ ಕಚàರಿಯಲ್ಲೂ ಬಹಳಷ್ಟು ಕೆಲಸದ ಒತ್ತಡವಿರುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಮನೆಯ ಇತರ ಸದಸ್ಯರು ಇವರ ಸಮಸ್ಯೆಗಳನ್ನು ಹಾಗೂ ಕೆಲಸದ ಒತ್ತಡಗಳನ್ನು ಅರ್ಥಮಾಡಿಕೊಂಡು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೆ ಮಹಿಳೆಯರು ನೌಕರಿ ಹಾಗೂ ಮನೆಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸ್ವಲ್ಪಮಟ್ಟಿಗಾದರೂ  ಸಹಾಯವಾಗುತ್ತದೆ. 

ಜೆಸ್ಸಿ ಪಿ. ವಿ.

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.