ಮೆಲ್ಬೋರ್ನ್: ಭಾರತೀಯ ಪಾದ್ರಿಗೆ ಇರಿತ; ಸೇವೆಗೆ ಅನರ್ಹ ಎಂದ ಹಲ್ಲೆಕೋರ
Team Udayavani, Mar 20, 2017, 11:09 AM IST
ಮೆಲ್ಬೋರ್ನ್ : ಇಲ್ಲಿನ ಚರ್ಚ್ ಒಂದರಲ್ಲಿ ಭಾರತೀಯ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಜನಾಂಗೀಯ ದ್ವೇಷದಲ್ಲಿ ಚರ್ಚ್‌ನಲ್ಲೇ ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಜನಾಂಗೀಯ ಹಲ್ಲೆಗೆ ಗುರಿಯಾದವರೆಂದರೆ 48ರ ಹರೆಯದ ಟಾಮಿ ಕಳತ್ತೂರ್ ಮ್ಯಾಥ್ಯೂ. ಫಾಕ್‌ನರ್‌ನಲ್ಲಿ ನಿನ್ನೆ ಸೈಂಟ್ ಮ್ಯಾಥ್ಯೂ ಪ್ಯಾರಿಷ್‌ನಲ್ಲಿ ಇಟಾಲಿಯನ್ ಭಾಷೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ 72ರ ಹರೆಯದ ಫಾಕ್‌ನರ್ ನಿವಾಸಿಯೊಬ್ಬ ಟಾಮಿ ಮ್ಯಾಥ್ಯೂಸ್ ಅವರಿಗೆ “ನೀನು ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅನರ್ಹ; ಭಾರತೀಯನಾಗಿರುವ ನೀನು ಒಂದೋ ಹಿಂದೂ ಅಥವಾ ಮುಸ್ಲಿಮನಾಗಿರಬೇಕು’ ಎಂದು ಕೋಪೋದ್ರಿಕ್ತನಾಗಿ ಚೂರಿಯಿಂದ ಟಾಮಿ ಅವರ ಕುತ್ತಿಗೆಗೆ ಇರಿದು ಗಾಯಗೊಳಿಸಿದ.
ಘಟನೆಯ ಬಳಿಕ ಪೊಲೀಸರು ಹಲ್ಲೆಕೋರ ಫಾಕ್‌ನರ್ ವ್ಯಕ್ತಿಯನ್ನು ಬಂಧಿಸಿ ಆತನ ವಿರುದ್ಧ ಉದ್ದೇಶಪೂರ್ವಕ ಮತ್ತು ನಿರ್ಲಕ್ಷ್ಯದಿಂದ ಇರಿದು ಗಾಯಗೊಳಿಸಿದ ಕೇಸು ಹಾಕಿದರು. ಜೂನ್ 13ರಂದು ಬ್ರಾಡ್ ಮೆಡೋಸ್ ಮ್ಯಾಜಿಸ್ಟ್ರೇಟರ ಮುಂದೆ ಹಾಜರಾಗಬೇಕೆಂಬ ಆದೇಶದೊಂದಿಗೆ ಆರೋಪಿ ಫಾಕ್‌ನರ್ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಕ್ಯಾಥೋಲಿಕ್ ಆರ್ಕ್‌ಡಯೋಸಿಸ್‌ನ ಮೆಲ್ಬೋರ್ನ್ ವಕ್ತಾರ ಶೇನ್ ಹೀಲಿ ಅವರು “ಈ ಘಟನೆಯು ಅತ್ಯಂತ ದುರದೃಷ್ಟಕರ ಮತ್ತು ಆಘಾತಕಾರಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇರಿತಕ್ಕೆ ಗುರಿಯಾಗಿ ಕುತ್ತಿಗೆಗೆ ಗಂಭೀರ ಗಾಯಗೊಂಡು “ದಿ ನಾರ್ದರ್ನ್ ಆಸ್ಪತ್ರೆಗೆ ಸೇರಿರುವ ಫಾದರ್ ಟಾಮಿ ಮ್ಯಾಥ್ಯೂಸ್ ಅವರ ದೇಹ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ವಿಕಾರ್ ಜನರಲ್ ಮಾನ್ಸಿಂಗರ್ ಗ್ರೆಗ್ ಬೆನೆಟ್ ಅವರು ಘಟನೆಯನ್ನು ಖಂಡಿಸಿದ್ದಾರೆ. “ಟಾಮಿ ಮ್ಯಾಥ್ಯೂಸ್ ಅವರು ಬೇಗನೆ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲು ಬಯಸಿದ್ದಾರೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ