ಆಸ್ಟ್ರೇಲಿಯಾದಲ್ಲಿ ಕೇರಳ ಮೂಲದ ಪಾದ್ರಿಗೆ ಇರಿತ
Team Udayavani, Mar 20, 2017, 11:10 PM IST
ಮೆಲ್ಬೋರ್ನ್: ಅಮೆರಿಕದಲ್ಲಿ ಭಾರತೀಯ ನಾಗರಿಕರ ಮೇಲೆ ನಡೆಯುತ್ತಿದ್ದ ಜನಾಂಗೀಯ ದಾಳಿ ಈಗ ಆಸ್ಟ್ರೇಲಿಯಾದಲ್ಲೂ ಆರಂಭವಾಗಿದೆ. ಮೆಲ್ಬೋರ್ನ್ನಲ್ಲಿ ವ್ಯಕ್ತಿಯೊಬ್ಬ ಭಾರತ ಮೂಲದ ಕ್ಯಾಥೋಲಿಕ್ ಪಾದ್ರಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಕೇರಳದವರಾದ ಪಾದ್ರಿ ಟಾಮಿ ಕಲಥೂರ್ ಮ್ಯಾಥಿವ್, ಸಾಮೂಹಿಕ ಬೋಧನೆಗೆ ಸಿದ್ಧತೆ ನಡೆಸುವಾಗ ಅವರಿದ್ದ ಜಾಗಕ್ಕೆ ನುಗ್ಗಿದ ವ್ಯಕ್ತಿ, “ಭಾರತೀಯನಾಗಿರುವ ನೀನು, ಹಿಂದೂ ಅಥವಾ ಮುಸ್ಲಿಂ ಆಗಿರಬೇಕು. ಹೀಗಾಗಿ ನೀನು ಪಾದ್ರಿ ಸ್ಥಾನಕ್ಕೆ ಯೋಗ್ಯನಲ್ಲ’ ಎಂದು ಹೇಳಿ ಚಾಕುವಿನಿಂದ ಪಾದ್ರಿಯ ಕತ್ತಿನ ಎಡ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ. ಮ್ಯಾಥಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ಶಂಕಿತನೊಬ್ಬನನ್ನು ಬಂಧಿಸಲಾಗಿದೆ.
ಹಿಂದೂ, ಸಿಖ್ರೇ ಗುರಿ: ಅಮೆರಿಕದಲ್ಲಿ ಇಸ್ಲಾಮೋ ಫೋಬಿಯಾ ಮತ್ತು ಕ್ಸೆನೋಫೋಬಿಯಾ ಹೆಸರಿನಲ್ಲಿ ಭಾರತ ಮೂಲದ ಹಿಂದೂ ಹಾಗೂ ಸಿಖ್ ಸಮುದಾಯದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಅಮೆರಿಕಸಲ್ಲಿರುವ ಭಾರತೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ