Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಾನಿಮಾಡದೆ ಹಿಂದಿರುಗಿದ ಅತಿದೊಡ್ಡ ಕ್ಷುದ್ರಗ್ರಹ "ರಾಕ್‌'

ಲಂಡನ್‌: ನಾಸಾದ ಬಾಹ್ಯಾಕಾಶ ವಿಜ್ಞಾನಿಗಳ ದೃಷ್ಟಿಯೆಲ್ಲ "ದಿ ರಾಕ್‌' ಎನ್ನುವ ಕ್ಷುದ್ರಗ್ರಹದ ಮೇಲೆಯೇ ಇತ್ತು.  

2004ರ ನಂತರ ಭೂಮಿಯ ಸನಿಹದಿಂದ ಹಾದುಹೋದ ಅತಿದೊಡ್ಡ ಕ್ಷುದ್ರಗ್ರಹವಿದು! 1.4 ಕಿಲೋಮೀಟರ್‌ ಉದ್ದದ, 2,132 ಅಡಿ ಅಗಲದ ಈ ಕ್ಷುದಗ್ರಹವೇನಾದರೂ ಭೂಮಿಗೆ ತಗುಲಿದ್ದರೆ ಪರಿಸ್ಥಿತಿ ಯಂತೂ ನೆಟ್ಟಗಿರುತ್ತಿರಲಿಲ್ಲ ಎಂದು ಭಯಪಡ ಲಾಗಿತ್ತು.

"ಈ ಗಾತ್ರದ ಕ್ಷುದ್ರಗ್ರಹಕ್ಕೆ ಇಡೀ ಲಂಡನ್‌ ಅಥವಾ ನ್ಯೂಯಾರ್ಕ್‌ ಅನ್ನು ನುಚ್ಚುನೂರು ಮಾಡಿ, ನೂರಾರು ಕಿಲೋಮೀಟರ್‌ ಹಾನಿ ಮಾಡುವ ಸಾಮರ್ಥಯವಿರುತ್ತದೆ, 1000 ಪರಮಾಣುಬಾಂಬ್‌ಗಳಿಗಿಂತಲೂ ಹೆಚ್ಚು ಶಕ್ತಿಯನ್ನು ಅದರ ಘರ್ಷಣೆ ಹುಟ್ಟುಹಾಕಬಲ್ಲದು' ಎನ್ನುತ್ತಾರೆ ನಾಸಾ ವಿಜ್ಞಾನಿಗಳು. ಸುದೈವವಶಾತ್‌, ಜೆ025 ಅಲಿಯಾಸ್‌ "ದಿ ರಾಕ್‌' ಕ್ಷುದ್ರಗ್ರಹ ಭೂಮಿಗಿಂತ 18 ಲಕ್ಷ ಕಿಲೋಧಿಮೀಟರ್‌ ದೂರದಿಂದ ಯಾವುದೇ ಅಪಾಯವುಂಟು ಮಾಡದೇ ಸಾಗಿಹೋಯಿತು! ಅಂದಹಾಗೆ ಸಿನೆಮಾ ನಟ, ಕಟ್ಟುಮಸ್ತು ಕುಸ್ತಿಪಟು "ರಾಕ್‌'ನ ಹೆಸರನ್ನೇ ಈ ಕ್ಷುದ್ರಗ್ರಹಕ್ಕೆ ಇಡಲಾಗಿದೆ. 
 


More News of your Interest

Trending videos

Back to Top