ಅಮೆರಿಕದ ಸರ್ಜನ್ ಜನರಲ್ ಮಂಡ್ಯ ಮೂಲದ ವಿವೇಕ್ ಮೂರ್ತಿ ವಜಾ
Team Udayavani, Apr 23, 2017, 3:45 AM IST
ವಾಷಿಂಗ್ಟನ್: ಅಮೆರಿಕದ ಸರ್ಜನ್ ಜನರಲ್(ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ) ಆಗಿ ಒಬಾಮ ಆಡಳಿತದಿಂದ ನೇಮಕಗೊಂಡಿದ್ದ ಮೊದಲ ಭಾರತೀಯ-ಅಮೆರಿಕದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕರ್ನಾಟಕದ ಮಂಡ್ಯ ಮೂಲದ ವಿವೇಕ್ ಮೂರ್ತಿ (39) ಅವರನ್ನು ಟ್ರಂಪ್ ಆಡಳಿತ ವಜಾ ಮಾಡಿದೆ. ಈ ದಿಢೀರ್ ಬೆಳವಣಿಗೆಯು ಸ್ವತಃ ಆರೋಗ್ಯ ಸೇವಾ ಇಲಾಖೆಯ ನೌಕರರಿಗೂ ಅಚ್ಚರಿ ಮೂಡಿಸಿದೆ.
ಮಹತ್ವದ ಇಲಾಖೆಗೆ ಹೊಸ ನಾಯ ಕತ್ವವನ್ನು ತರುವ ಉದ್ದೇಶದಿಂದ ಅವ ರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಅವರ ಸ್ಥಾನಕ್ಕೆ ಅವರ ಕೆಳಗೆ ಕಾರ್ಯ ನಿರ್ವಹಿಸುತ್ತಿದ್ದ ಅಡ್ಮಿರಲ್ ಸಿಲ್ವಿಯಾ ಟ್ರೆಂಟ್-ಆ್ಯಡಮ್ಸ್ರನ್ನು ನೇಮಕ ಮಾಡ ಲಾಗಿದೆ. ಇವರು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೇರುತ್ತಿರುವ ಮೊದಲ ನರ್ಸ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಮೂರ್ತಿ ಎರಡನೆಯವರು: “ಮೂರ್ತಿ ಅವರನ್ನು ಹುದ್ದೆಯಿಂದ ತೆಗೆದುಹಾಕಲಾ ಗಿದೆ. ಅವರು ಕಮಿಷನ್x ಕಾಪ್ಸ್ìನ ಸದಸ್ಯರಾಗಿ ಮುಂದುವರಿಯಲಿದ್ದಾರೆ,’ ಎಂದು ಆರೋಗ್ಯ ಇಲಾಖೆ ತಿಳಿಸಿದೆ. “ಥ್ಯಾಂಕ್ಯೂ ಅಮೆರಿಕ, ನಿಮ್ಮ ಸರ್ಜನ್ ಜನರಲ್ ಆಗಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದಕ್ಕೆ. ಮುಂದೆ ನಿಮ್ಮೊಂದಿಗೆ ಹೊಸ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದೇನೆ,’ ಎಂದು ಮೂರ್ತಿ ಫೇಸ್ಬುಕ್ನಲ್ಲಿ ಬರೆದಿದ್ದಾರೆ. 2014ರ ಡಿಸೆಂಬರಲ್ಲಿ ಮೂರ್ತಿ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದರು. ಕುತೂಹಲದ ವಿಚಾರವೆಂದರೆ, ಮೂರ್ತಿ ಅವರು ಟ್ರಂಪ್ ಆಡಳಿತವು ಸೇವೆಯಿಂದ ವಜಾಗೊಳಿಸುತ್ತಿರುವ 2ನೇ ಭಾರತೀಯ -ಅಮೆರಿಕನ್. ಇತ್ತೀಚೆಗೆ ಯುಎಸ್ ಆಟಾರ್ನಿ ಪ್ರೀತ್ ಭರಾರಾರನ್ನು ವಜಾ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ