ಫ್ರಾನ್ಸ್ ಅಧ್ಯಕ್ಷರ ಆಯ್ಕೆಗೆ ಮೊದಲ ಹಂತದ ಮತದಾನ
Team Udayavani, Apr 24, 2017, 10:37 AM IST
ಪ್ಯಾರಿಸ್: ಯುರೋಪ್ನಾದ್ಯಂತ ತೀವ್ರ ಕುತೂಹಲ ಸೃಷ್ಟಿಸಿರುವ ಫ್ರಾನ್ಸ್ ಅಧ್ಯಕ್ಷ ಚುನಾವಣೆಗೆ ಮೊದಲ ಹಂತದ ಮತದಾನ ರವಿವಾರ ನೆರವೇರಿದೆ.
ಈ ಬಾರಿಯ ಚುನಾವಣೆಗೆ ಬರೋಬ್ಬರಿ 11 ಮಂದಿ ಅಭ್ಯರ್ಥಿಗಳು ಇದ್ದು, ಯಾರಿಗೂ ಸ್ಪಷ್ಟ ಬಹುಮತ ದೊರೆಯದೇ ಇರುವ ಬಗ್ಗೆ ಫ್ರಾನ್ಸ್ ರಾಜಕೀಯ ವಿಶ್ಲೇಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡು ಹಂತದ ಮತದಾನ ಇಲ್ಲಿದ್ದು, ಮೇಯಲ್ಲಿ ನಡೆಯಲಿರುವ 2ನೇ ಸುತ್ತಿಗೆ ನಾಲ್ಕು ಮಂದಿ ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಫ್ರಾನ್ಸ್ನ ಈ ಬಾರಿಯ ಚುನಾವಣೆಯಲ್ಲಿ ಭದ್ರತೆ, ವಲಸೆ ನೀತಿ ಪ್ರಮುಖ ಚುನಾವಣೆ ವಿಷಯವಾಗಿದೆ. 4.7 ಕೋಟಿ ಮಂದಿ ಮತದಾರರು ನೋಂದಾಯಿಸಲ್ಪಟ್ಟಿದ್ದು, ಬೆಳಗ್ಗೆ 8ರಿಂದ ಮತದಾನ ಆರಂಭವಾಗಿತ್ತು. ಸ್ಪರ್ಧಾಕಣದಲ್ಲಿ ಎಡಪಂಥೀಯ ಜೆನ್ ಲಾಕ್ ಮೆಲಂಕೊನ್, ಕನ್ಸರ್ವೇಟಿವ್ ಪಕ್ಷದ ಫ್ರಾಂಕೊಯಿಸ್ ಫಿಲ್ಲನ್, ಬಲಪಂಥೀಯ ಅಭ್ಯರ್ಥಿ ಮರೈನ್ ಲಾ ಪೆನ್ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ. ಲಾ ಪೆನ್ ಅವರು ಫ್ರಾನ್ಸ್ ಕೂಡ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಧೋರಣೆ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್