ಪಾಕ್ಉಗ್ರ ನೆಲೆಗಳಿಗೆ ಡ್ರೋನ್ ದಾಳಿ: ಅಮೆರಿಕ ಸಜ್ಜು?
Team Udayavani, Jun 21, 2017, 7:45 AM IST
ವಾಷಿಂಗ್ಟನ್: ಮುಸ್ಲಿಂ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಕಠಿನ ವಲಸೆ ನೀತಿ ಜಾರಿ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ಲಾಮಿಕ್ ಉಗ್ರರನ್ನು ಮಟ್ಟ ಹಾಕಲು ಪಾಕ್, ಅಫ್ಘಾನಿಸ್ಥಾನದಲ್ಲಿ ಅಗತ್ಯಬಿದ್ದರೆ ಡ್ರೋನ್ ಕಾರ್ಯಾಚರಣೆ ನಡೆಸಲೂ ಹಿಂಜರಿಯುವುದಿಲ್ಲ ಎಂದಿದ್ದಾರೆ. ಜತೆಗೆ ಪಾಕ್ಗೆ ನೀಡಲಾಗುತ್ತಿರುವ ಮಿಲಿಟರಿ ನೆರವು ಮತ್ತು ನ್ಯಾಟೋ ಹೊರತಾಗಿರುವ ರಾಷ್ಟ್ರಗಳಿಗೆ ನೀಡಲಾಗಿರುವ ಮಿತ್ರತ್ವ ಸ್ಥಾನಮಾನ ತಗ್ಗಿಸುವ ಇರಾದೆಯೂ ಟ್ರಂಪ್ ಸರಕಾರಕ್ಕೆ ಇದೆ. ಆದರೆ ದಾಳಿ ನಡೆಸುವಂಥ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪಾಕ್ ಹೇಳಿಕೊಂಡಿದೆ.
ಪಾಕ್ನಲ್ಲಿ ಉಗ್ರರ ಸುರಕ್ಷಿತ ತಾಣಗಳು ಸಾಕಷ್ಟು ಇದ್ದು, ಅವುಗಳನ್ನು ನಿರ್ನಾಮಗೊಳಿಸುವುದೇ ಸೂಕ್ತ ಎಂಬ ವಾದ ಕೇಳಿ ಬಂದಿದೆ. 2002ರಿಂದ ಈಚೆಗೆ ಅಮೆರಿಕ ಪಾಕಿಸ್ಥಾನಕ್ಕೆ 2.13 ಲಕ್ಷ ಕೋ. ರೂ. ಮೌಲ್ಯದ ಹಣಕಾಸು ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿದೆ. ಆದರೆ ಇಂಥ ಕ್ರಮದಿಂದ ತತ್ಕ್ಷಣ ಯಾವುದೇ ರೀತಿಯ ಯಶಸ್ಸು ದೊರೆಯುವುದು ಕಷ್ಟವೆಂದು ಅಮೆರಿಕ ಸರಕಾರದ ಅಧಿಕಾರಿಗಳೇ ಹೇಳುತ್ತಾರೆ. ಹಿಂದಿನ ಸರಕಾರಗಳು ಕೈಗೊಂಡ ಕ್ರಮಗಳು ಉಗ್ರ ಸಂಘಟನೆಗಳಿಗೆ ಪಾಕ್ ನೀಡುತ್ತಿರುವ ನೆರವು ತಗ್ಗಿಸುವ ನಿಟ್ಟಿನಲ್ಲಿ ನಿರೀಕ್ಷಿತ ಫಲ ನೀಡಿಲ್ಲ. ಆದರೆ ಭಾರತದ ಜತೆ ವೃದ್ಧಿಯಾಗುತ್ತಿರುವ ಬಾಂಧವ್ಯ ಕೂಡ ಪಾಕ್ ಜತೆಗಿನ ಅಮೆರಿಕದ ಸಂಬಂಧಗಳ ಮೇಲೆ ಕರಿ ಛಾಯೆ ಬೀರೀತು ಎಂದಿದ್ದಾರೆ. ಪಾಕ್ ಜತೆಗೂ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ಬಗ್ಗೆ ಅಲ್ಲಿನ ಕೆಲ ಅಧಿಕಾರಿಗಳು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!