ಡೋಕ್ಲಾಂ ಬಿಕ್ಕಟ್ಟು : ಭಾರತ – ಚೀನ ನೇರ ಮಾತುಕತೆಗೆ ಅಮೆರಿಕ ಆಗ್ರಹ
Team Udayavani, Jul 19, 2017, 11:01 AM IST
ವಾಷಿಂಗ್ಟನ್ : ಏಶ್ಯದ ದಿಗ್ಗಜಗಳಾಗಿರುವ ಭಾರತ ಮತ್ತು ಚೀನ ತಮ್ಮೊಳಗಿನ ಗಡಿ ಬಿಕ್ಕಟ್ಟು, ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಪರಿಹರಿಸಿಕೊಂಡು ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಅಮೆರಿಕ ಒತ್ತಾಯಿಸಿದೆ.
ಸಿಕ್ಕಿಂನ ಡೋಕ್ಲಾಂ ಗಡಿಯಲ್ಲಿ ಭಾರತ ಮತ್ತು ಚೀನ ಸೇನೆ ಕಳೆದ ಎರಡು ತಿಂಗಳ ಸುದೀರ್ಘ ಸಮಯದಿಂದ ಮುಖಾಮುಖೀಯಾಗಿ ಸಂಘರ್ಷ ಸನ್ನದ್ಧ ಸ್ಥಿತಿಯಲ್ಲಿ ಬೀಡು ಬಿಟ್ಟಿವೆ.
ಸಿಕ್ಕಿಂ ಗಡಿಯಲ್ಲಿ ಭಾರತ – ಚೀನ ಉದ್ವಿಗ್ನತೆಯ ತೀವ್ರತೆಯ ಬಗ್ಗೆ ನಮಗೆ ಕಳವಳವಿದೆ; ಉಭಯ ದೇಶಗಳು ಮಾತುಕತೆಯ ಮೂಲಕ ತಮ್ಮೊಳಗಿನ ಭಿನ್ನಮತ, ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆ ಹರಿಸಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಸೀದರ್ ನ್ಯೂವರ್ಟ್ ಹೇಳಿದ್ದಾರೆ.
ಭಾರತ ಮತ್ತು ಚೀನ ನೇರ ಮಾತುಕತೆಗಳಲ್ಲಿ ತೊಡಗಿಕೊಳ್ಳುವುದನ್ನು ನಾವು ಪ್ರೋತ್ಸಾಹಿಸುತ್ತೇವೆ; ಆ ಮೂಲಕ ಉಭಯ ದಿಗ್ಗಜ ದೇಶಗಳು ಗಡಿ ಬಿಕ್ಕಟ್ಟು, ಉದ್ವಿಗ್ನತೆಯನ್ನು ಶಮನ ಮಾಡುವುವೆಂದು ನಾವು ಆಶಿಸುತ್ತೇವೆ ಎಂದು ನ್ಯೂವರ್ಟ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ