ಲಿಬಿಯಾ ಸೈನಿಕರಿಂದ ಐಸಿಸ್ ಉಗ್ರರ ಸಾಮೂಹಿಕ ಹತ್ಯೆ: ಭಯಾನಕ ವಿಡಿಯೋ
Team Udayavani, Jul 25, 2017, 10:25 AM IST
ಟ್ರಿಪೋಲಿ : ಜಗತ್ತಿನ ಕ್ರೂರಾತೀ ಕ್ರೂರ ಉಗ್ರ ಸಂಘಟನೆ ಐಸಿಸ್ನ ಉಗ್ರರನ್ನು ಲಿಬಿಯಾ ಸೈನಿಕರು ಸಾಮೂಹಿಕವಾಗಿ ಗುಂಡಿಟ್ಟು ಹತ್ಯೆಗೈದಿರು ಭಯಾನಕ ವಿಡಿಯೋವೊಂದು ವೈರಲ್ ಆಗಿದೆ.
ಸೆರೆಯಾಗಿ ಜೈಲಿನಲ್ಲಿ ಕೈದಿಗಳಾಗಿದ್ದ 18 ಮಂದಿ ಉಗ್ರರನ್ನುಕೇಸರಿ ಬಣ್ಣದ ಸಮವಸ್ತ್ರಗಳನ್ನು ತೊಡಿಸಿ ಮುಸುಕು ಹಾಕಿ ಕೈಗಳನ್ನು ಕಟ್ಟಿ ಬಯಲಿನಲ್ಲಿ ನಾಲ್ಕು ಸಾಲುಗಳಲ್ಲಿ ಕೂರಿಸಿ ಗುಂಡಿಟ್ಟು ಕೊಲ್ಲುವ ಭಯಾನಕ ದೃಶ್ಯ ಉಗ್ರರ ಕೈ ಕಾಲು ನಡುಗುವಂತಿಗದೆ.
ಈ ಹಿಂದೆ ಐಸಿಸ್ ಉಗ್ರರು ಒತ್ತೆಯಾಳುಗಳನ್ನು ಇದೇ ರೀತಿ ಕ್ರೂರವಾಗಿ ಕೊಲ್ಲುತ್ತಿದ್ದ ಹಲವು ವಿಡಿಯೋಗಳನ್ನು ಬಿಡುಗಡೆಮಾಡಿ ಭಯ ಹುಟ್ಟಿಸಿದ್ದರು. ಈ ವಿಡಿಯೋ ಉಗ್ರರಿಗೇ ಭೀತಿ ಹುಟ್ಟಿಸುವಂತಿದೆ.