ಉತ್ತರ ಕೊರಿಯಕ್ಕೆ ಪೆಟ್ರೋಲಿಯಂ ರಫ್ತು ಕಡಿತಗೊಳಿಸುವ ಚೀನ
Team Udayavani, Sep 23, 2017, 12:28 PM IST
ಬೀಜಿಂಗ್ : ಅಣು ಉದ್ಧಟತನ ತೋರುವ ಮೂಲಕ ಅಮೆರಿಕಕ್ಕೆ ಮಾತ್ರವಲ್ಲದೆ ಇಡಿಯ ವಿಶ್ವದ ಸುರಕ್ಷೆಗೇ ಸಡ್ಡು ಹೊಡೆಯುತ್ತಿರುವ ಉತ್ತರ ಕೊರಿಯದ ಮಿತ್ರನಾಗಿರುವ ಹೊರತಾಗಿಯೂ ಚೀನ, ವಿಶ್ವಸಂಸ್ಥೆ ಹೇರಿರುವ ನಿಷೇಧಗಳಡಿ ತಾನು ಉತ್ತರ ಕೊರಿಯಕ್ಕೆ ತೈಲ ರಫ್ತಿನ ಮೇಲೆ ಮಿತಿಯನ್ನು ಹೇರುವುದಾಗಿ ಹೇಳಿದೆ.
ಉತ್ತರ ಕೊರಿಯಕ್ಕೆ ನಾವು ರಫ್ತು ಮಾಡುತ್ತಿರುವ ಸಂಸ್ಕರಿತ ಪೆಟ್ರೋಲಿಯಂ ಅನ್ನು ವರ್ಷಕ್ಕೆ 20 ಲಕ್ಷ ಬ್ಯಾರಲ್ ಗೆ ಸೀಮಿತ ಗೊಳಿಸುತೇವೆ ಮತ್ತು ದ್ರವೀಕೃತ ಅನಿಲ (ಎಲ್ಎನ್ಜಿ) ಮಾರಾಟವನ್ನು ಸಾರಾಸಗಟು ನಿಲ್ಲಿಸುತ್ತೇವೆ; ನಮ್ಮ ಈ ಕ್ರಮ ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರುತ್ತದೆ ಎಂದು ಚೀನದ ವಾಣಿಜ್ಯ ಸಚಿವಾಲಯ ಹೇಳಿದೆ.
ಆದರೆ ಚೀನ ಪ್ರಕೃತ ಉತ್ತರ ಕೊರಿಯಕ್ಕೆ ಎಷ್ಟು ಪ್ರಮಾಣದ ತೈಲವನ್ನು ಪೂರೈಕೆ ಮಾಡುತ್ತಿದೆ ಮತ್ತು ಅದರಲ್ಲಿ ಎಷ್ಟರ ಮಟ್ಟಿಗಿನ ಕಡಿತವನ್ನು ಕೈಗೊಳ್ಳುತ್ತದೆ ಎಂಬುದನ್ನು ಬೀಜಿಂಗ್ ಸ್ಪಷ್ಟಪಡಿಸಿಲ್ಲ.
ಇದೇ ವೇಳೆ ಉತ್ತರ ಕೊರಿಯದಿಂದ ನಾವು ಆಮದಿಸಿಕೊಳ್ಳುವ ಜವುಳಿಯನ್ನು ನಿಷೇಧಿಸುತ್ತೇವೆ ಎಂದು ಬೀಜಿಂಗ್ ಹೇಳಿದೆ. ಜವುಳಿ ರಫ್ತು ಉತ್ತರ ಕೊರಿಯಕ್ಕೆ ವಿದೇಶೀ ವಿನಿಮಯ ಗಳಿಕೆಗೆ ಅತ್ಯಂತ ಪ್ರಮುಖ ಮೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು