ಮಳೆ ಎಂದರೆ ಬರೀ ನೀರಲ್ಲವೊ!


Team Udayavani, Jun 16, 2017, 1:24 PM IST

YUVA-SAMPADA-3.jpg

ಪ್ರತಿಬಾರಿಯೂ ಆ ಪ್ರಶ್ನೆಯೊಂದು ತಲೆ ಕೊರೆಯುತ್ತಲೇ ಇರುತ್ತದೆ. ಈ ಮಳೆಗ್ಯಾಕೆ ಜನ ಇಷ್ಟೊಂದು ಹೆದರ್ತಾರೆ? ಅದ್ಯಾಕೆ ಇವರಿಗೆ ಮಳೆಯೆಂದರೆ ಇಷ್ಟು ಅಲರ್ಜಿ? ಅದ್ಯಾಕೆ ಮುಗಿಲಿನಿಂದ ಬೆಂಕಿಕಿಡಿಯೇ ಬಿದ್ದಂತೆ ಸೋಕಲೂ ಭಯಗೊಳ್ಳುತ್ತಾರೆ? ಮಳೆ ಎಷ್ಟೊಂದು ಬದಲಾವಣೆ ತರುತ್ತದೆ, ಮನುಷ್ಯನ ಕುಬj ಮನಸ್ಥಿತಿಯನ್ನೂ ಕೆಲವೊಮ್ಮೆ ಅಲುಗಾಡಿಸಿ ಸರಿದಾರಿಗೆ ತರುವ ಯತ್ನ ಅದು ಮಾಡುವುದುಂಟು. ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿ ಮೂಲವರ್ಣವನ್ನೇ ಬಚ್ಚಿಡುವ ಗಿಡಮರಬಳ್ಳಿ ತರುಲತೆಗಳು ತಮ್ಮ ಬಹಿರಂಗ ಶುದ್ಧಿಗೊಳಿಸಿಕೊಂಡು ಆಗಷ್ಟೇ ವರನೊಂದಿಗೆ ಸಪ್ತಪದಿ ತುಳಿದು ಶೋಭಿಸಿದ ನವವಿವಾಹಿತೆಯಂತೆ ಕಾಂತಿಯುತವಾಗಿ ಹೊಳೆಯುತ್ತದೆ, ಬೆಳಗುತ್ತದೆ. ಹಾದಿಯುದ್ದಕ್ಕೂ ನವಚೈತನ್ಯ ಪಡೆದಂತೆ ರಸ್ತೆಯ ಇಂಚಿಂಚೂ ನಳನಳಿಸುತ್ತದೆ. ಹಳ್ಳಿಗಳ ಚೆಲುವು ಮಳೆಗಾಲದಲ್ಲಿ ಕಾಣಸಿಗುವುದೇ ಹೊಲಗದ್ದೆಗಳಲ್ಲಿ. ಅದನ್ನು ಕಣ್ತುಂಬಿಕೊಂಡವನೇ ಸೌಭಾಗ್ಯಶಾಲಿ. ಕವಿಯೊಬ್ಬನನ್ನು ತಂದು ಪ್ರಕೃತಿಯ ರಮಣೀಯತೆ ಜಾಹೀರುಗೊಳ್ಳುವ ಇಂಥ ಜಾಗಕ್ಕೆ ತಂದು ಕೂರಿಸಿ ಪೇಪರು ಪೆನ್ನು ಕೊಟ್ಟರೆ ಬೀಳುವ ಹನಿಹನಿಗೂ ಅಕ್ಷರರೂಪ ನೀಡಿ ಅವುಗಳನ್ನು ಜೀವಂತವಿರಿಸುವ ಯತ್ನ ಮಾಡಬಲ್ಲ.

ಮಳೆಗಾಲ ಮೈಚಳಿಯೆಬ್ಬಿಸಿದರೂ ಮನಸ್ಸುಗಳನ್ನು ಬೆಚ್ಚಗಿಡುತ್ತದೆ. ಪ್ರೇಮಿಯೊಬ್ಬ ದೂರವಿರುವ ತನ್ನ ಮನದನ್ನೆಯನ್ನು ಮನದ ತುಂಬ ನೆನೆಯುತ್ತ ಮಧುರ ಚಿತ್ರಗೀತೆಯನ್ನು ಕೇಳುತ್ತಾನೆ. ಆಕೆಯ ಮನದಲ್ಲಿ ಮಳೆಯಿಂದೆದ್ದ ಮಣ್ಣಿನ ಘಮದಲ್ಲಿ ಅವರಿಬ್ಬರ ಒಡನಾಟದ ಅಣುಅಣು ಅನುಭವಗಳೂ ಪುನರ್‌ವಿಮರ್ಶೆಯಾಗುತ್ತದೆ. ಅದುವರೆಗೂ ಮಾತಿನ ಮಂಟಪ ಕಟ್ಟುತ್ತಿದ್ದ ನವವಿವಾಹಿತರು ಅಂದಿನಿಂದ ಜಗಮರೆತು ಸಲ್ಲಾಪದಲ್ಲಿ ಮಗ್ನರಾಗುತ್ತಾರೆ. ರೈತ ಕೇವಲ ಬೀಜವಲ್ಲದೇ ತನ್ನ ಕನಸುಗಳನ್ನೂ ಬಿತ್ತಿರುತ್ತಾನೆ, ಕುಡಿಯೊಡೆಯುವುದೋ ಇಲ್ಲವೋ ಎಂಬ ಆತಂಕ ಆತನದ್ದು. ಆ ಪುಟ್ಟ ಕಂದಮ್ಮಗಳಿಗೆ ಶಾಲೆಗೆ ತೆರಳುವುದಕ್ಕೇ ಸಡಗರ. ಅವರ ಬಣ್ಣದ ಲೋಕಕ್ಕೆ ಪೆನ್ನು, ಸ್ಲೇಟು, ಕಂಪಾಸ್‌ ಬಾಕ್ಸು, ಪಾಟಿಚೀಲದೊಂದಿಗೆ ಕೆಂಬಣ್ಣದ ಛತ್ರಿಯೊಂದು ಹೊಸದಾಗಿ ಸೇರ್ಪಡೆಗೊಂಡಿದೆ! ಸೈಕಲ್ಲಿನಲ್ಲಿ ಹೊರಡುವ ಶಾಲಾಹುಡುಗನಿಗೆ ಏನಾದರೂ ನೆಪನೀಡಿ ರೈನ್‌ಕೋಟು ಮರೆಯಬೇಕಿದೆ. ಮಳೆಯಲ್ಲಿ ತೊಯ್ದು ತೊಪ್ಪೆಯಾಗಿ ಕೂದಲಿನ ನೀರು ನೇವರಿಸುವುದನ್ನು ತನ್ನ ಸಹಪಾಠಿಗಳು ಕಂಡರೆ ಸಿನಿಮಾ ನಟನಾದೇನೋ ಎಂಬ ಸಂತೃಪ್ತಭಾವ ಆತನದ್ದು. ಆ ಹುಡುಗಿಗೆ ಮಳೆನಿಂತ ಕೂಡಲೇ ಆ ಹುಣಿಸೇಮರದಡಿ ನಿಂತು ಅದರ ಗೆಲ್ಲು ಅಲುಗಾಡಿಸುವ ಆಸೆ. ಎಲೆಯಿಂದ ಮೈಮೇಲೆ ಬೀಳುವ ಹನಿಗಳು ಆಕೆಗೆ ನಲ್ಲನ ಸವಿಮುತ್ತಿನ ನೆನಪು ತರುತ್ತದೆ. ಯಾವುದೋ ಕಾರ್ಯನಿಮಿತ್ತ ಎತ್ತಲೋ ಹೊರಟು ಮಳೆ ಹೆಚ್ಚಿ ಯಾರ¨ªೋ ಮನೆಯ ಸೂರಿನಡಿ ಆಸರೆ ಪಡೆದವನಿಗೆ ಮನೆಯಾತ ಮಾಡಿದ ಕಾಫಿಯಲ್ಲಿ ಒಂದು ಗುಟುಕು ಕೊಟ್ಟರೆ ಆ ಆಗಂತುಕನ ಕಣ್ಣಲ್ಲಿ ಧನ್ಯತಾಭಾವ ನಮ್ರತೆಯಿಂದ ಸುಳಿದುಹೋಗುತ್ತದೆ. ಭಗ್ನಪ್ರೇಮಿಯೊಬ್ಬ ಮಳೆಯಲ್ಲಿ ನೆನೆಯುತ್ತ ಮಾಜಿ ಪ್ರಿಯತಮೆಯೊಂದಿಗೆ ನಕ್ಕ. ಆತ ಹೆಜ್ಜೆ ಹಾಕಿದ ಜಾಗದಲ್ಲಿ ತಮ್ಮಿಬ್ಬರ ಹಳೆಪ್ರತಿಮೆ ಕಂಡು ಬಿಕ್ಕುತ್ತಾನೆ. ಅವನ ಕಣ್ಣೀರೂ ಮಳೆಹನಿಯೊಂದಿಗೆ ವಿಲೀನಗೊಳ್ಳುತ್ತದೆ. ಆ ಜನಭರಿತ ಪಾರ್ಕಿನ ಕಲ್ಲುಬೆಂಚು ಏಕಾಂತತೆ ಅನುಭವಿಸುತ್ತದೆ, ಬೀಳುವ ಪ್ರತಿ ಮಳೆಹನಿಯೂ ಅದಕ್ಕೆ ಸಾಂತ್ವನ ಹೇಳುತ್ತದೆ.

    ಅಷ್ಟಕ್ಕೂ ಮಳೆಯ ವ್ಯಾಖ್ಯಾನ ಯಾರಿಗೆ ಗೊತ್ತು? ಅದನ್ನು ಅನುಭವಿಸಿ ಕಂಡವರ್ಯಾರು? ಅದು ಕೊಡೆಯಿಲ್ಲದೇ ನಿಂತ ನೀರಲ್ಲಿ ಕಾಗದದ ದೋಣಿ ಬಿಡುವ ಪುಟ್ಟ ಕಂದನ ಮುದ್ದುಮನಸ್ಸಿಗೆ ಗೊತ್ತು. ಪ್ರೇಯಸಿಯ ನಗೆಯ ಇಂಚಿಂಚನ್ನೂ ನೆನೆಯುತ್ತ ಆಕಾಶ ಕಾಣುತ್ತ ತನ್ನಷ್ಟಕ್ಕೇ ನಗುವ ಚಿಗುರುಮೀಸೆಯ ಹುಡುಗನಿಗೆ ಗೊತ್ತು. ಕಳೆದ ದಿನವನ್ನು, ಕೈತಪ್ಪಿ ಹೋದ ಪ್ರೀತಿಯನ್ನು ಇನ್ನೂ ಏನೇನೋ ಮರೆಯುವ ಸಲುವಾಗಿ ಗೊತ್ತುಗುರಿಯಿಲ್ಲದೇ ಎತ್ತಲೋ ಪಯಣಿಸುತ್ತಿರುವ ಬೈಕ್‌ ಸವಾರನಿಗೆ ಗೊತ್ತು. ಅಷ್ಟೇ ಅಲ್ಲ, ಒಲೆಗೆ ಕಟ್ಟಿಗೆ ತುಂಬಿ ಎದೆಯಿಂದ ಉಸಿರೂದಿ ಹೊಗೆಗೆ ಕಣ್ಣೀರಿಟ್ಟು ಅಕ್ಕಿ ಬೇಯಿಸುತ್ತಿರುವ ಬಡರೈತನ ಪತ್ನಿಗೆ ಗೊತ್ತು!

    ಮಳೆ ಬರೀ ನೀರಲ್ಲ! ಅದು ಮುಗಿಲು ಭುವಿಗೆ ಕಳುಹಿಸುವ ಮುತ್ತು. ಅದರ ಒಂದೊಂದು ಹನಿಯೂ ಇಳೆಯ ಪಾಲಿಗೆ ಶಾಶ್ವತ ಚುಂಬನ. ಭುವಿಗೆ ಬಿದ್ದು ಇಂಗುವ ಹನಿಗಳು, ಒಗ್ಗಟ್ಟಿನಲ್ಲಿ ಹರಿಯುವ ಹನಿಗಳು, ನಿಂತ ಹನಿಗಳು ಹೀಗೆ ಪ್ರತಿಯೊಂದು ಹನಿಗೂ ಒಂದೊಂದು ಕಥೆಯಿದೆ. ನೋಡುವ, ಕೇಳಿಸಿಕೊಳ್ಳುವ ಸ್ವಾದಿಸುವ ಮನಸ್ಸು ಬೇಕಿದೆಯಷ್ಟೆ! ಮಳೆ ಬರೀ ನೀರಿನ ಬುಗ್ಗೆಯಲ್ಲ, ಅದು ಗಗನ ಪೃಥ್ವಿಗೆ ಕಳುಹಿಸುವ ಪ್ರೀತಿ, ಒಲವು. 

ಅರ್ಜುನ್‌ ಶೆಣೈ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.