Updated at Sun,25th Jun, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಕ್ಕಳ ಭವಿಷ್ಯ ಅಥವಾ ಮದ್ಯಪಾನ - ಆಯ್ಕೆ ನಿಮ್ಮದು - ಇದುವೇ 'Your Choice'

ಮದ್ಯವ್ಯಸನಿಗಳ ಮಕ್ಕಳು ನಾನಾ ರೀತಿಯ ಭಾನಾತ್ಮಕ ಹಾಗೂ ವರ್ತನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಮದ್ಯವ್ಯಸನಿಗಳ ಮನೆಯಲ್ಲಿ ಸಾಮರಸ್ಯದ ಕೊರತೆಯಿಂದ ಆ ಮಕ್ಕಳು ಖನ್ನತೆ, ಆತಂಕ, ಕೀಳರಿಮೆಗಳಿಗೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಕಲಿಕೆಯಲ್ಲಿ ಹಿಂದುಳಿಯುವ ಹಾಗೂ ಶಾಲೆಗಳಲ್ಲಿ ವರ್ತನಾ ಸಮಸ್ಯೆಗಳಿಂದ ಗುರುತಿಸಿಕೊಳ್ಳಬಹುದು. ಸಂಶೋಧನೆಗಳಿಂದ ತಿಳಿದುಬಂದಿರುವ ಸತ್ಯವೇನೆಂದರೆ, ಮದ್ಯವ್ಯಸನಿಗಳ ಮಕ್ಕಳು ಇತರೇ ಮಕ್ಕಳಿಗಿಂತ ಭವಿಷ್ಯದಲ್ಲಿ ಮದ್ಯವ್ಯಸನಕ್ಕೊಳಗಾಗುವ ಸಾಧ್ಯತೆಗಳು ಮೂರುಪಟ್ಟು ಹೆಚ್ಚಾಗಿರುತ್ತದೆ ಎಂಬ ವಿಷಯ ನಿಜಕ್ಕೂ ಆಘಾತಕಾರಿಯಾಗಿದೆ. ಹಾಗಾದರೆ ನಿಮ್ಮ ಮಕ್ಕಳೂ ಮದ್ಯವ್ಯಸನಿಗಳಾಗಬೇಕೆ...!? ಬೇಡ ತಾನೆ...??

ಈ ವಿಷಯವನ್ನು ಮನಗಂಡು ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ವತಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರಮುಖವಾಗಿಸಿಕೊಂಡು 'ಮದ್ಯವ್ಯಸನಿಗಳ ಮಕ್ಕಳ ಸ್ವ-ಸಹಾಯ ಗುಂಪು' ಎಂಬ ಶೀರ್ಷಿಕೆಯಡಿಯಲ್ಲಿ ಕಳೆದ ಒಂದು ವರ್ಷದಿಂದ ಮದ್ಯವ್ಯಸನಿಗಳ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುವಂತೆ ತಿಂಗಳಲ್ಲಿ ಒಂದ ದಿನದ ಕಾರ್ಯಾಗಾರಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಮಾತ್ರವಲ್ಲದೆ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರೆಡಿಯೋ ಭಾಷಣ, ಟಿ.ವಿ. ಕಾರ್ಯಕ್ರಮ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಮದ್ಯ ವ್ಯಸನಿಗಳ ಮಕ್ಕಳು ಎದುರಿಸುತ್ತಿರುವ ಮನೋಸಂಬಂಧಿತ ಹಾಗೂ ವ್ಯಕ್ತಿತ್ವ ಸಂಬಂಧಿ ಸಮಸ್ಯೆಗಳ ಕುರಿತಾಗಿ ತಯಾರಿಸಲಾಗಿರುವ ಕಿರುಚಿತ್ರ 'Your Choice'. ಈ ಪ್ರಯತ್ನವನ್ನು ಬೆಂಬಲಿಸಿ ಮದ್ಯವ್ಯಸನಿಗಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರಜ್ಞಾವಂತ ಸಮಾಜದ ನಾಗರಿಕರಾಗಿರುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Back to Top