Updated at Sun,20th Aug, 2017 11:36AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾವಿಗೆ ಬಿದ್ದ ನಾಗರ ಹಾವನ್ನು ಜೀವಂತವಾಗಿ ಮೇಲಕ್ಕೆತ್ತಿದಾಗ...

ಇಲಿಯೊಂದನ್ನು ಬೆನ್ನಟ್ಟಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಸುಮಾರು ಇಪ್ಪತ್ತು ಅಡಿ ಬಾವಿಗೆ ಬಿದ್ದಿದ್ದ ನಾಗರಹಾವನ್ನು ಉಡುಪಿಯ ಖ್ಯಾತ ಉರಗ ತಜ್ಞ ಗುರುರಾಜ್‌ ಸನಿಲ್‌ ಅವರು ಚಾಕಚಕ್ಯತೆಯಿಂದ ಮೇಲೆತ್ತುತ್ತಿರುವ ವಿಡಿಯೋ ಇಲ್ಲಿದೆ. ಕೆಲ ದಿನಗಳ ಹಿಂದೆ ನಗರದ ಕುತ್ಪಾಡಿಯ ಅಂಜಗುಡ್ಡೆ ಪರಿಸರದಲ್ಲಿನ ಕಿಟ್ಟಿ ಪೂಜಾರ್ತಿ ಎಂಬವರ ಮನೆ ವಠಾರದಲ್ಲಿರುವ ಈ ಬಾವಿಗೆ ಬಿದ್ದಿದ್ದ ನಾಗರ ಹಾವು ಅಲ್ಲಿ ಕೂರಲು ಎಲ್ಲೂ ಅವಕಾಶ ಸಿಗದೆ ಎರಡು ದಿನ ನೀರಿನಲ್ಲೇ ತೇಲಾಡುತ್ತಾ ಇದ್ದುದನ್ನು ಕಂಡ ಮನೆಯರು ಬಳಿಕ ಗುರುರಾಜ್‌ ಅವರಿಗೆ ವಿಷಯ ತಿಳಿಸಿದರು. ತಕ್ಷಣವೇ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದ ಗುರುರಾಜ್‌ ತುಂಬಾ ಪ್ರಯತ್ನದ ಬಳಿಕ ಆ ಗಂಡು ನಾಗರಹಾವನ್ನು ಬಾವಿಯಿಂದ ಮೇಲಕ್ಕೆತ್ತುವ ಮೂಲಕ ಮೂಕಪ್ರಾಣಿಯ ಜೀವ ಉಳಿಸುವಲ್ಲಿ ನೆರವಾದರು ಮತ್ತು ಮನೆಯವರು ನಿಟ್ಟಿಸುರಿ ಬಿಡುವಂತೆ ಮಾಡಿದರು.

ಗುರುರಾಜ್‌ ಅವರು ಈ ಹಿಂದೆ ಡಾಂಬರಿನಲ್ಲಿ ಸಿಲುಕಿದ್ದ ನಾಗಿಣಿಯನ್ನು, ಮರದ ಕುತ್ತಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿದ್ದ ಇನ್ನೊಂದು ನಾಗಿಣಿಯನ್ನು ರಕ್ಷಿಸಿ ಅವುಗಳಿಗೆ ಸೂಕ್ತ ಉಪಚಾರವನ್ನು ನೀಡಿ ಬಳಿಕ ನೈಸರ್ಗಿಕ ಬನಕ್ಕೆ ಬಿಟ್ಟಿರುವುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಉಡುಪಿ ಸುತ್ತಮುತ್ತ ಹಲವಾರು ಹಾವುಗಳನ್ನು ರಕ್ಷಿಸಿ ಅವುಗಳನ್ನು ಆರೈಕೆ ಮಾಡಿ ಬಳಿಕ ಪ್ರಕೃತಿಗೆ ಬಿಟ್ಟುಬಿಡುವ ಕೆಲಸವನ್ನು ಗುರುರಾಜ್‌ ಅವರು ಹಲವಾರು ವರ್ಷಗಳಿಂದ ಮಾಡುತ್ತಾ ಬಂರುತ್ತಿದ್ದಾರೆ. ಮಾತ್ರವಲ್ಲದೆ ಹಾವುಗಳ ಕುರಿತಾಗಿ ಜನಸಾಮಾನ್ಯರಿಗೆ, ಶಾಲಾ ಮಕ್ಕಳಿಗೆ ಅರಿವು ಮೂಡಿಸುವ ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Back to Top