ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ “ದರ್ಪಣ’ ಈ ವಾರ ತೆರೆಗೆ: ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Sep 7, 2017, 1:15 PM IST
‘ರಂಗಿತರಂಗ’ ಖ್ಯಾತಿಯ ಅರವಿಂದ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ದರ್ಪಣ’ ಈ ವಾರ ತೆರೆ ಕಾಣುತ್ತಿದ್ದು, ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಗೀತರಚನೆ ಹಾಗೂ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಯತಿರಾಜ್, ಸಂದಿಪ್ ಮಲಾನಿ ಸೇರಿದಂತೆ ಹಲವರು ಅಭಿನಯಿಸಿದ್ದು, ಚಿತ್ರಕ್ಕೆ ಧನುಷ್, ಸೂರ್ಯೋದಯ, ಹಾಗೂ ಸಚಿನ್ ಅವರ ಛಾಯಾಗ್ರಹಣವಿದೆ. ವಿನೋದ್ ಬಸವರಾಜ್ ಸಂಕಲನ, ರಾಜ್ದೇವ್ ನೃತ್ಯ ನಿರ್ದೇಶನ ಹಾಗೂ ಪವರ್ ಪುಷ್ಪರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಟ್ರೈಲರ್ ವೀಕ್ಷಿಸಿ. (Darpana, Trailer, Kannada Commercial Scientific thriller, Aravind Rao, Yathiraj)