ತಾತ, ಮೊಮ್ಮಗನ ಭಾವನಾತ್ಮಕ ಕಥೆ “ಗೌಡ್ರು ಹೊಟೇಲ್’: ಚಿತ್ರದ ಟ್ರೈಲರ್ ವೀಕ್ಷಿಸಿ
Team Udayavani, Sep 20, 2017, 2:34 PM IST
ಒಂದು ಸುಂದರ ಭಾವನಾತ್ಮಕ ಕಥೆಯಲ್ಲಿ ತಾತ, ಮೊಮ್ಮಗನ ಬಾಂಧವ್ಯವನ್ನು ಹೇಳಲು ಹೊರಟಿರುವ ಚಿತ್ರ “ಗೌಡ್ರು ಹೊಟೇಲ್’. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಪಿ.ಕುಮಾರ್ ನಿರ್ದೇಶಿಸಿದ್ದಾರೆ. ರಚನ್ ಚಂದ್ರ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗಿದ್ದಾರೆ. ಇವರಿಗೆ ಜತೆಯಾಗಿ “ಶಿವಲಿಂಗ” ಚಿತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ವೇದಿಕಾ ನಾಯಕಿಯಾದರೆ ತಾತನ ಪಾತ್ರದಲ್ಲಿ ಪ್ರಕಾಶ್ ರೈ ಮಿಂಚಿದ್ದಾರೆ. ಇನ್ನು ಕವಿರಾಜ್ ಸಾಹಿತ್ಯದ ಐದು ಗೀತೆಗಳಿಗೆ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ. (Gowdru Hotel, Official Trailer, Rachan Chandra, Prakash Raj, Vedhika, Yuvan Shankar Raja)