Updated at Fri,18th Aug, 2017 8:00PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಳ್ಳಿ ಮದ್ದು - ವರ್ಣದ್ರವ್ಯ ಅರಶಿನ

ಆಯುರ್ವೇದದಲ್ಲಿ ಅರಸಿನವನ್ನು ವರ್ಣದ್ರವ್ಯ ಎಂದು ಹೇಳಲಾಗಿದೆ. ಕೆನ್ನೆ ಕೈಕಾಲುಗಳಿಗೆ ಲೇಪಿಸಿದರೆ ಮೊಗದ ಅಂದ ಹೆಚ್ಚುವುದರ ಜೊತೆಗೆ ಬೇಡದ ಕೂದಲುಗಳು ಉಂಟಾಗುವುದಿಲ್ಲ. ಚಿಕ್ಕಂದಿನಿಂದ ಲೇಪಿಸಿದರೆ ಬೇಡದ ಕೂದಲುಗಳು ಹುಟ್ಟದಂತೆ ತಡೆಯಬಹುದು. ಇದಕ್ಕೆ ರೋಮಶಾತನ ಕ್ರಿಯೆ ಎನ್ನಲಾಗುತ್ತದೆ. ಅರಸಿನ ಜೀರ್ಣಾಂಗವ್ಯೂಹ, ಮಧುಮೇಹ, ಗಡ್ಡೆ , ಗ್ರಂಥಿಗಳ ಕರಗುವಿಕೆ, ಕೊಬ್ಬು ಕರಗಿಸಲು, ಕಾಮಾಲೆ ರೋಗ ಹೀಗೆ ಹತ್ತು ಹಲವು ರೋಗಗಳಲ್ಲಿ ಉಪಯುಕ್ತ ಎಂದು ಆಯುರ್ವೇದದಲ್ಲಿ ಐದು ಸಾವಿರದಷ್ಟು ಮೊದಲಿಗೇ ಹೇಳಲಾಗಿದೆ.

Back to Top