ಆ ದಿನಗಳ “ನೂರೊಂದು ನೆನಪು’ ಈ ವಾರ ತೆರೆಗೆ: ಟ್ರೈಲರ್ ವೀಕ್ಷಿಸಿ
Team Udayavani, Jun 7, 2017, 6:24 PM IST
ಚೇತನ್ ಹಾಗೂ ರಾಜವರ್ಧನ್ ಅಭಿನಯದ “ನೂರೊಂದು ನೆನಪು’ ಈ ವಾರ ತೆರೆ ಕಾಣುತ್ತಿದ್ದು ಚಿತ್ರವನ್ನು ಕುಮಾರೇಶ್ ನಿರ್ದೇಶನ ಮಾಡಿದ್ದು, 3 ಲಯನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಸೂರಜ್ ದೇಸಾಯಿ ಹಾಗೂ ಮನೀಶ್ ದೇಸಾಯಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯ ಸಂಗೀತವಿದೆ. ಎಸ್.ಕೆ.ರಾವ್ ಛಾಯಾಗ್ರಹಣ ಮಾಡಿದ್ದಾರೆ. ಲಾರೆನ್ಸ್ ಕಿಶೋರ್ ಸಂಕಲನವಿದೆ. ಕುಲದೀಪ್ ಅವರ ಕಲಾ ನಿರ್ದೇಶನವಿದೆ. ಮಾಸ್ ಮಾದ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದಲ್ಲಿ ಮೇಘನಾರಾಜ್ ನಾಯಕಿಯಾಗಿದ್ದಾರೆ. ಉಳಿದಂತೆ ಸುಶ್ಮಿತಾ ಜೋಷಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ವೀಣಾ ಸುಂದರ್, ಸಿದ್ಲಿಂಗು ಶ್ರೀಧರ್, ಅರ್ಚನ, ಸುಂದರ್, ಕೌಸ್ತುಭ್ ಮುಂತಾದವರಿದ್ದಾರೆ. (Noorondu Nenapu Official Trailer, Chetan, Meghana Raj, Raja Vardan, Sushmita Joshi, Yash Shetty)