“ನೋ ಡಿಸ್ಕಶನ್, ಓನ್ಲಿ ಆ್ಯಕ್ಷನ್’: “ತಾರಕ್’ ಟ್ರೇಲರ್ ರಿಲೀಸ್
Team Udayavani, Sep 25, 2017, 4:25 PM IST
ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ “ತಾರಕ್’ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ನಲ್ಲೇ ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವಾಗಿದ್ದು, ಆ್ಯಕ್ಷನ್ ಪ್ರಿಯರಿಗೆ ಬೇಕಾದ ಆ್ಯಕ್ಷನ್ ಕೂಡಾ ಇದೆ. “ನಮ್ಮ ತಂದೆ ಯಾವತ್ತೂ ಹೇಳ್ತಾ ಇದ್ರು, ಈ ಪ್ರೀತಿ ಮತ್ತು ಫ್ಯಾಮಿಲಿ ಮಧ್ಯೆ ಯಾವತ್ತೂ ಸಿಕ್ಕಿ ಹಾಕೋಬಾರ್ಧು ಅಂತ’, “ನೋ ಡಿಸ್ಕಶನ್, ಓನ್ಲಿ ಆ್ಯಕ್ಷನ್’ ಸೇರಿದಂತೆ ದರ್ಶನ್ ಅಭಿಮಾನಿಗಳು ಇಷ್ಟಪಡುವ ಸಂಭಾಷಣೆಗಳು ಈ ಟ್ರೇಲರ್ನಲ್ಲಿವೆ. ಇನ್ನು ಚಿತ್ರದಲ್ಲಿ ದರ್ಶನ್ಗೆ ಸಾನ್ವಿ ಶ್ರೀವಾತ್ಸವ್ ಮತ್ತು ಶ್ರುತಿ ಹರಿಹರನ್ ನಾಯಕಿಯರಾಗಿ ನಟಿಸಿದ್ದು, ಮಿಕ್ಕಂತೆ ದೇವರಾಜ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಚಿತ್ರಕ್ಕೆ ಜಯಂತ್ ಕಾಯ್ಕಿಣಿಯವರು ಹಾಡು ಬರೆದಿದ್ದು, ಇದೇ ಮೊದಲ ಬಾರಿಗೆ ದರ್ಶನ್ ಅವರ ಚಿತ್ರವೊಂದಕ್ಕೆ ಅವರು ಸಾಹಿತ್ಯ ರಚಿಸಿರುವುದು ವಿಶೇಷ. ಚಿತ್ರದ ಟ್ರೇಲರ್ ವೀಕ್ಷಿಸಿ. (Tarak Trailer, Challenging Star Darshan, Sruthi Hariharan, Shanvi Srivastav)
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ