ನನ್ನ ಮಗಂದ್… “ತಿಕ್ಲ ಹುಚ್ಚ ವೆಂಕಟ್’ ಟ್ರೈಲರ್ ಬಂತು
Team Udayavani, Oct 16, 2017, 6:21 PM IST
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅಭಿನಯದ “ತಿಕ್ಲ ಹುಚ್ಚ ವೆಂಕಟ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ತುಂಬಾ ಬರೀ ಡೈಲಾಗ್ಗಳೇ ಇವೆ, ಅಲ್ಲದೇ ಹುಚ್ಚ ವೆಂಕಟ್ ಅವರನ್ನು ಬಿಟ್ಟರೆ ಇಡೀ ಟ್ರೈಲರ್ನಲ್ಲಿ ಮತ್ತಾರನ್ನು ತೋರಿಸಿಲ್ಲ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಇಸ್ರೋ ಆಶಿರ್ವಾದ ಚಿತ್ರಕ್ಕಿದ್ದು, ಪ್ರಪಂಚದಲ್ಲಿ ಹುಚ್ಚ ವೆಂಕಟ್ ಅವರನ್ನು ಪ್ರೀತಿಸುವ ಎಲ್ಲಾ ಹುಡುಗಿಯರಿಗೆ “ತಿಕ್ಲ ಹುಚ್ಚ ವೆಂಕಟ್’ ಚಿತ್ರದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಾಯಕನಾಗಿ ಸ್ವತಃ ಹುಚ್ಚ ವೆಂಕಟ್ ಕೆಲಸ ಮಾಡಿದ್ದಾರೆ. ಚಿತ್ರದ ಟ್ರೈಲರ್ ವೀಕ್ಷಿಸಿ.