CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕ್ರಿಕೆಟ್‌ ಮೈದಾನದಲ್ಲಿ ಸುಳಿಗಾಳಿಯ ನರ್ತನ

ಮೂಡಬಿದಿರೆ: ಸ್ವರಾಜ್ಯ ಮೈದಾನದ ನೂತನ ಕ್ರಿಕೆಟ್‌ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉದ್ಭವಿಸಿದ ಕೆಂಧೂಳಿಯೊಡಗೂಡಿದ ಸುಳಿಗಾಳಿ ವೀಕ್ಷಕರಲ್ಲಿ ಅಚ್ಚರಿ, ಕುತೂಹಲ, ಕೌತುಕ ಮೂಡಿಸಿತು.ಮೂಡಬಿದಿರೆ ಇಲೆವೆನ್‌ ಕ್ರಿಕೆಟರ್ ಆಶ್ರಯದಲ್ಲಿ ನಡೆಯುತ್ತಿದ್ದ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಪಾಲ್ಗೊಂಡಿದ್ದವರು ಕೆಲವು ಹೊತ್ತು ಅಚ್ಚರಿ, ಕುತೂಹಲದೊಂದಿಗೆ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು. ಒಂದೊಮ್ಮೆ ಅವರೆಲ್ಲರ ಲಕ್ಷ್ಯ ಈ ಕೆಂಬಣ್ಣದ ಸುಳಿಗಾಳಿಯ ಹೊಯ್ದಾಟದತ್ತಲೇ ಇದ್ದು, ಹತ್ತು ನಿಮಿಷ ಆಟವನ್ನು ದಿಗ್ಭ್ರಮೆ, ಖುಷಿಯೊಂದಿಗೆ ನಿಲುಗಡೆ ಮಾಡಿಸುವಂತಾಯಿತು.

ಸುಮಾರು ನಾಲ್ಕು ನಿಮಿಷಗಳಷ್ಟು ಕಾಲ 'ಜನಮನ ರಂಜಿಸುತ್ತಲೇ' ಒಂದಷ್ಟು ದೂರ ಸುಳಿ ಸುಳಿದು ಸಾಗಿದ ಈ ಸುಳಿಗಾಳಿ ಮರಗಿಡಗಳಿರುವ ಬಿಎಸ್‌ಎನ್‌ಎಲ್‌ ಟವರ್‌ ಬಳಿ ತನ್ನ ಅಬ್ಬರವನ್ನು ಇಳಿಸಿಕೊಂಡು ಮರಗಿಡಗಳ ನಡುವೆ ಅಂತರ್ಧಾನವಾಯಿತು. ಈ ಎಲ್ಲ ಸಂಗತಿಗಳಿಗೆ ಕ್ರಿಕೆಟ್‌ ಉದ್ಘೋಷಕರು ರನ್ನಿಂಗ್‌ ಕಮೆಂಟ್ರಿ ಕೊಡುತ್ತಲೇ ಇದ್ದರು!

►Exclusive Report►ಭೀತಿ ಮೂಡಿಸಿದ ಸುಳಿಗಾಳಿ!: http://bit.ly/2l3ecs8

Back to Top