Viral Video: ನಿರೂಪಕಿ ಕತ್ತಿಗೆ ಬಲವಂತವಾಗಿ ಹಾರ ಹಾಕಿದ ನಟ; ಕಿರುಕುಳ ಎಂದ ನೆಟ್ಟಿಗರು
Team Udayavani, Sep 20, 2023, 1:19 PM IST
ಚೆನ್ನೈ: ಕಾರ್ಯಕ್ರಮ ನಡೆಸಿಕೊಡುತ್ತಿದ್ದ ನಿರೂಪಕಿ ಜೊತೆ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸಿದ ನಟನ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕಾಲಿವುಡ್ ಸಿನಿಮಾರಂಗದ ಬಹುತೇಕ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಕೂಲ್ ಸುರೇಶ್ ಅವರ ಗುರುತು ಪರಿಚಯವಿದೆ. ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿರುವ ಸುರೇಶ್ ಮತ್ತೆ ಸುದ್ದಿಯಾಗಿದ್ದಾರೆ.
ಯಾರು ಈ ಕೂಲ್ ಸುರೇಶ್? ಕೆಲವರು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ಹೊರಗೆ ಬಂದು ನಾಲ್ಕೈದು ಡೈಲಾಗ್ಸ್ ಗಳನ್ನು ಹೊಡೆದು ಫೇಮಸ್ ಆಗುತ್ತಾರೆ. ಜನರ ಗಮನ ಸೆಳೆದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾರೆ. ಅಂಥವರಲ್ಲಿ ಒಬ್ಬರು ಈ ಕೂಲ್ ಸುರೇಶ್. ಸಿನಿಮಾವನ್ನು ನೋಡಿದ ಬಳಿಕ ಅದರ ಪಾಸಿಟಿವ್ – ನೆಗೆಟಿವ್ ಗಳನ್ನು ಒಂದು ಬಗೆಯಲ್ಲಿ ವ್ಯಂಗ್ಯವಾಗಿ ಹೇಳುವ ಸುರೇಶ್ ನಟ ಸಿಂಬು ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಥಿಯೇಟರ್ ಮುಂದೆ ಸಿನಿಮಾಗಳ ಮಾತನಾಡಿಕೊಂಡೇ ಫೇಮಸ್ ಆದ ಸುರೇಶ್ ಇತ್ತೀಚೆಗಷ್ಟೇ ಸಿಂಬು ಅಭಿನಯದ ‘ಬಂದು ತಾನಿಂದು ಕಾದು’ ಚಿತ್ರಕ್ಕೆ ಮಾಡಿದ್ದ ಪ್ರಚಾರ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Shivamogga: ಕಾಂಗ್ರೆಸ್ ನ ಗುಂಪುಗಾರಿಕೆಯೇ ಅವರ 100 ದಿನದ ಸಾಧನೆ : ಈಶ್ವರಪ್ಪ ಕಿಡಿ
ಅವರ ಖ್ಯಾತಿಯಿಂದಲೇ ಕಾಲಿವುಡ್ ಸಿನಿಮಾಗಳಾದ ‘ಕಾಖ ಕಾಖಾ’, ‘ಮಾಚಿ’ ಮತ್ತು ‘ಕಾದಲ್ ಅಜಿವತಿಲ್ಲೈ’ ಸಿನಿಮಾಗಳಲ್ಲಿ ಕೂಲ್ ಸುರೇಶ್ ತಮಿಳು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಸಿಕೊಂಡಿದ್ದಾರೆ.
ಕೂಲ್ ಸುರೇಶ್ ಅವರನ್ನು ಅನೇಕ ಸಿನಿಮಾ ತಂಡದವರು ಪ್ರಚಾರ ಮಾಡಲು ಆಹ್ವಾನಿಸುತ್ತಾರೆ. ಬುಧವಾರ (ಸೆ.20 ರಂದು) ‘ಸರಕ್ಕುʼ ಎನ್ನುವ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ವೇಳೆ ಅವರು ನಿರೂಪಕಿಯೊಂದಿಗೆ ವರ್ತಿಸಿದ ರೀತಿಗೆ ನೆಟ್ಟಿಗರು ಗರಂ ಆಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಿರೂಪಕಿ ವೇದಿಕೆಗೆ ಕೂಲ್ ಸುರೇಶ್ ಅವರನ್ನು ಆಹ್ವಾನಿಸಿದ್ದಾರೆ. ಈ ವೇಳೆ ಸುರೇಶ್ ತಮ್ಮ ಕೈಯಲ್ಲಿದ್ದ ಹಾರವನ್ನು ಏಕಾಏಕಿ ಬಲವಂತವಾಗಿ ನಿರೂಪಕಿಯ ಕತ್ತಿಗೆ ಹಾಕಿದ್ದಾರೆ. ಇದರಿಂದ ನಿರೂಪಕಿ ಎಲ್ಲರ ಎದುರು ಮುಜುಗರಕ್ಕೆ ಒಳಗಾಗಿದ್ದು,ಸಿಟ್ಟಾಗಿದ್ದಾರೆ. ಹಾರವನ್ನು ತೆಗೆದು ನಿರೂಪಕಿ ಬಿಸಾಕಿದ್ದಾರೆ.
ಆ ಬಳಿಕ ಈ ಸಮಾರಂಭದಲ್ಲಿ ನಿರೂಪಕಿಯ ಕೆಲಸವನ್ನು ಪ್ರಶಂಸಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಮಜುಗರದ ಸನ್ನಿವೇಶವನ್ನು ಅರಿತುಕೊಂಡ ನಟ ಮನ್ಸೂರ್ ಅಲಿಖಾನ್ ವೇದಿಕೆಗೆ ಬಂದು ಸುರೇಶ್ ಅವರ ಪರವಾಗಿ ನಿರೂಪಕಿ ಬಳಿ ಕ್ಷಮೆಯಾಚಿಸಿದ್ದಾರೆ. ಸುರೇಶ್ ಅವರ ಬಳಿ ಕ್ಷಮೆ ಕೇಳುವಂತೆ ಕೇಳಿದ್ದಾರೆ. ಆದರೆ ಸುರೇಶ್ ಕ್ಷಮೆ ಕೇಳುವ ಬದಲು ನಾನು ಇದನ್ನು ‘ಕಂಟೆಂಟ್’ಗಾಗಿ ಮಾಡಿದ್ದೇನೆ ಎಂದಿದ್ದಾರೆ.
ಕೂಲ್ ಸುರೇಶ್ ಅವರ ಈ ವರ್ತನೆಗೆ ನೆಟ್ಟಿಗರು ಗರಂ ಆಗಿದ್ದು, ಇದು ನಿಂದನೆ ಮತ್ತು ಕಿರುಕುಳ ಎಂದು ನಟನ ವರ್ತನೆಯನ್ನು ಖಂಡಿಸಿದ್ದಾರೆ.
ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಡಿ ಎಂದು ಹಲವು ಬಳಕೆದಾರರು ಮತ್ತು ಪತ್ರಕರ್ತರು ಸಿನಿಮಾ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ.
🤦♂️pic.twitter.com/P1NM04Kjea
— AmuthaBharathi (@CinemaWithAB) September 19, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA