Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಭಿಮತ
    • ಭಾರತದ ಆರ್ಥಿಕ ವ್ಯವಸ್ಥೆ ಸ್ಥಿರತೆ ಉಳಿಸಿಕೊಳ್ಳಬಲ್ಲುದೆ?
      • ಡಾ.ಹ.ಸೋಮಶೇಖರ | Dec 25, 2011

        ಭಾರತದ ಆರ್ಥಿಕ ವ್ಯವಸ್ಥೆ ಸ್ಥಿರತೆಯನ್ನು ಉಳಿಸಿಕೊಳ್ಳಲು, ವಿದೇಶಿ ಆರ್ಥಿಕ ವ್ಯವಸ್ಥೆಯ ಮೇಲೆ ಅವಲಂಬಿತವಾಗಬೇಕಿಲ್ಲ. ಏಕೆಂದರೆ ಭಾರತದ ಆರ್ಥಿಕ ವ್ಯವಸ್ಥೆಯ ವೃದ್ಧಿ ದರ ಕಳೆದ ನಾಲ್ಕೈದು ವರ್ಷಗಳಿಂದ ಏಕರೂಪದಲ್ಲಿ ಬೆಳೆಯುತ್ತಿದೆ.

         ಶೇ. 2ರಿಂದ 8ರವರೆಗೆ ತನ್ನ ವೃದ್ಧಿದರವನ್ನು ಕಾಯ್ದಿಟ್ಟುಕೊಂಡು ಬಂದಿದೆ. ಆದರೆ ವಿದೇಶಿ ಆರ್ಥಿಕ ವ್ಯವಸ್ಥೆಗಳು ಭಾರತದ ಆರ್ಥಿಕ ವ್ಯವಸ್ಥೆಗಿಂತ ಕಡಿಮೆ ಪ್ರಮಾಣದಲ್ಲಿ ವೃದ್ಧಿ ದರವನ್ನು ಸಾಧಿಸಿವೆ. 2011ರಲ್ಲಿ ಚೀನಾ ಶೇ. 9.6ರಷ್ಟು, ಭಾರತ ಶೇ. 8.2ರಷ್ಟು, ದಕ್ಷಿಣ ಆಫ್ರಿಕ ಶೇ. 5.4ರಷ್ಟು, ರಷ್ಯ ಶೇ 4.8ರಷ್ಟು, ದಕ್ಷಿಣ ಕೋರಿಯ ಶೇ.4.5ರಷ್ಟು, ಬ್ರೆಜಿಲ್‌ ಶೇ. 4.1ರಷ್ಟು, ಜಪಾನ್‌ ಶೇ. 2.9ರಷ್ಟು , ಅಮೇರಿಕಾ 2.5ರಷ್ಟು, ಬ್ರಿಟನ್‌ ಶೇ. 1.5ರಷ್ಟು, ಜರ್ಮನಿ ಶೇ. 3.2ರಷ್ಟು ಪ್ರಾನ್ಸ್‌ ಶೇ. 2.1ರಷ್ಟು, ಒಟ್ಟಾರೆಯಾಗಿ ಯುರೋಪ್‌ ವಲಯ ಸರಾಸರಿ 2ರಷ್ಟು ಬೆಳವಣಿಗೆಯನ್ನು ಹೊಂದಿವೆ.

        ಈ ಬೆಳವಣಿಗೆ ದರವನ್ನು ಪರಿಶೀಲಿಸಿದಾಗ ಭಾರತ ಮತ್ತು ಚೀನಾ ವೃದ್ಧಿ ದರದಲ್ಲಿ ಮುಂದಿವೆ. ಉಳಿದ ಮುಂದುವರೆದ ರಾಷ್ಟ್ರಗಳು ಸರಾಸರಿ ಶೇ. 2ರಷ್ಟು ವೃದ್ಧಿ ದರವನ್ನು ಕಾಯ್ದುಕೊಳ್ಳಲು
        ಹೆಣಗುತ್ತಿವೆ.

        ಇವಕ್ಕೆಲ್ಲ ಕಾರಣವೇನೆಂದರೆ ಭಾರತ ಮತ್ತು ಚೀನಾದಲ್ಲಿ ಬಹುತೇಕವಾಗಿ ಆಂತರಿಕ ಅರ್ಥ ವ್ಯವಸ್ಥೆ ಬಲವಾಗಿ ಬೆಳೆದಿರುವುದು. ಭಾರತ ಮತ್ತು ಚೀನಾ ಆರ್ಥಿಕ ವ್ಯವಸ್ಥೆ ವಿಶ್ವಮಟ್ಟದಲ್ಲಿ ಮೇಲೇಳುತ್ತಿರುವ ಆರ್ಥಿಕ ವ್ಯವಸ್ಥೆಯಾಗಿದೆ. ಇವೆರಡೂ ರಾಷ್ಟ್ರಗಳ ಮಾರುಕಟ್ಟೆಯ ಮೇಲೆ ಮುಂದುವರಿದ ರಾಷ್ಟ್ರಗಳು ಕಣ್ಣಿಟ್ಟಿವೆ. ಏಕೆಂದರೆ ಮುಂದುವರಿದ ರಾಷ್ಟ್ರಗಳ ತಂತ್ರಜ್ಞಾನದ ಆವಿಷ್ಕಾರದ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿಕೂಂಡಿವೆ.

        ಹೆಚ್ಚಳ ಉತ್ಪಾದನೆ ಮುಂದುವರಿದ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಗ್ರಾಹಕರು ಗರಿಷ್ಟ ಬೆಳವಣಿಗೆಯನ್ನು ದಾಟಿ ಹೆಚ್ಚಳ ಉತ್ಪನ್ನಗಳನ್ನು ಕೊಳ್ಳುತ್ತಿಲ್ಲ. ಆದ್ದರಿಂದ ತಂತ್ರಜ್ಞಾನದ ಆವಿಷ್ಕಾರ, ಕಾರ್ಮಿಕ
        ಶಕ್ತಿಯ ಬಳಕೆ, ಕಚ್ಛಾ ಸಾಮಗ್ರಿಗಳ ಬಳಕೆ.

        ಬಂಡವಾಳ ಹೂಡಿಕೆಯ ಸಮಸ್ಯೆಗಳು ಮುಂದುವರೆದ ರಾಷ್ಟ್ರಗಳು ಗರಿಷ್ಟ ಪ್ರಮಾಣದಲ್ಲಿ ತಲುಪಿರುವುದರಿಂದ ತಮ್ಮ ಹೆಚ್ಚಳ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಇಲ್ಲದೆ ಮೂರನೆ ಪ್ರಪಂಚದ ರಾಷ್ಟ್ರಗಳ ಮಾರುಕಟ್ಟೆ ರಾಷ್ಟ್ರಗಳ ಮಾರುಕಟ್ಟೆಯನ್ನು ಆಕರ್ಷಿಸಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗಳಲ್ಲಿ ನಿರತವಾಗಿವೆ.

        ಇದನ್ನು ವಿಶ್ವವ್ಯಾಪಾರ ಸಂಘಟನೆಯ ಮೂಲಕ ಕಾರ್ಯಗತಗೊಳಿಸಲು ಸಜ್ಜಾಗಿವೆ. ಆದ್ದರಿಂದ ವಿಶ್ವವ್ಯಾಪಾರ ಸಂಘಟನೆಯೂ ಇಂದು ಮುಂದುವರೆದ ರಾಷ್ಟ್ರಗಳ ಆಣತಿಯ ಮೇರೆಗೆ ನಡೆದುಕೊಳ್ಳುತ್ತಿವೆ.

        ಉತ್ಪಾದನೆ ಮತ್ತು ಮಾರುಕಟ್ಟೆ ಒಂದು ರಾಷ್ಟ್ರದ ಜೀವನಾಡಿ ಇದ್ದಂತೆ. ಮುಂದುವರೆದ ರಾಷ್ಟ್ರಗಳಲ್ಲಿ ಉತ್ಪಾದನೆ ಗರಿಷ್ಟ ಮಟ್ಟ ತಲುಪಿದೆ. ಮಾರುಕಟ್ಟೆಗಳೂ ಸಹ ಗರಿಷ್ಟ ಮಟ್ಟ ತಲುಪಿರುವುದರಿಂದ ಜಾಗತೀಕರಣದ ಮೂಲಕ ತಮ್ಮ ಆರ್ಥಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಸಿದ್ಧಾಂತವಾಗಿದೆ.

        ಆದ್ದರಿಂದ ಮುಂದುವರೆದ ರಾಷ್ಟ್ರಗಳಿಗೆ ಮೂರನೇ ಪ್ರಪಂಚದ ರಾಷ್ಟ್ರಗಳು ಮಾರುಕಟ್ಟೆ ಒದಗಿಸಬೇಕಾಗಿದೆ. ಈ ರಾಷ್ಟ್ರಗಳು ಮೂರನೇ ಪ್ರಪಂಚದ ರಾಷ್ಟ್ರಗಳ ಕೃಷಿ ಮತ್ತು ಸೇವಾವಲಯಕ್ಕೆ
        ನೀಡುತ್ತಿರುವ ಸಹಾಯಧನವನ್ನು ತೆಗೆಯುವಂತೆ, ವಿಶ್ವ ವ್ಯಾಪಾರ ಸಂಘಟನೆಯ ಮೂಲಕ ಒತ್ತಡ ಹೇರುತ್ತಿವೆ.

        ಹೀಗೇನಾದರೂ ತೃತೀಯ ಜಗತ್ತಿನ ರಾಷ್ಟ್ರಗಳು ವಿಶ್ವ ವ್ಯಾಪಾರ ಸಂಘಟನೆಗೆ ಮಣಿದರೆ, ತಮ್ಮ ಸ್ಥಳೀಯ ಮಾರುಕಟ್ಟೆಗಳನ್ನು ನಿಷ್ಕ್ರಿಯಗೊಳಿಸಿದಂತೆ.

        ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಬೇಕೆಂದರೆ ಸ್ಥಳೀಯ ಮಾರುಕಟ್ಟೆಯ ಬೆಳವಣಿಗೆಯನ್ನು ಸದೃಢಗೊಳಿಸಬೇಕಾಗುತ್ತದೆ. ಆದರೆ ಜಾಗತೀಕರಣದಿಂದಾಗಿ ಸ್ಥಳೀಯ ಮಾರುಕಟ್ಟೆಗಳು ಕೆಲವೇ ವರ್ಷಗಳಲ್ಲಿ ಮುಂದುವರೆದ ರಾಷ್ಟ್ರಗಳ ಒತ್ತಡಕ್ಕೆ ಅಳಿದು ಆರ್ಥಿಕವಾಗಿ ದುರ್ಬಲಗೊಳ್ಳಬಹುದು.

        ಮುಂದುವರಿದ ರಾಷ್ಟ್ರಗಳ ಆಂತರಿಕ ಉತ್ಪನ್ನ ದುರ್ಬಲಗೊಂಡಿರುವುದರಿಂದ ಅಲ್ಲಿನ ಜನರು ಹೆಚ್ಚು ವೆಚ್ಚ ಮಾಡಿ, ಉಳಿತಾಯ ಕಡಿಮೆ ಮಾಡಿರುವದರಿಂದ ಹಾಗೂ ವಿಲಾಸಿ ಜೀವನದಿಂದಾಗಿ, ಅಮೇರಿಕಾ ಹಾಗ
        ಯುರೋಪಿಯನ್‌ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಅತ್ಯಂತ ಕೆಳಹಂತಕ್ಕೆ ತಲುಪಿದೆ. ಇದರ ಜೊತೆಗೆ ಹೆಚ್ಚು ಹಣವನ್ನು ಷೂÂರಿಟಿ ಬಾಂಡ್‌ಗಳಲ್ಲಿ, ಸೆಕ್ಯೂರಿಟಿಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಂಡಿವೆ.

        ಈ ನಿಟ್ಟಿನಲ್ಲಿ  ಚೀನಾ ವ್ಯಾಪಕವಾಗಿ ತನ್ನ ಬಂಡವಾಳವನ್ನು ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಇನ್ನಿತರ ತೃತೀಯ ಜಗತ್ತಿನ ರಾಷ್ಟ್ರಗಳು ಹಿಂದೆ ಬಿದ್ದಿಲ್ಲ. ಆದರೆ ಇವುಗಳ ಆರ್ಥಿಕ ವ್ಯವಸ್ಥೆ ಅಮೇರಿಕಾ ಹಾಗೂ
        ಯುರೋಪಿಯನ್‌ ರಾಷ್ಟ್ರಗಳ ಅನುಕಂಪದ ಮೇಲೆ ನಿಲ್ಲಬೇಕಾಗಿದೆ.

        ಯಾಕೆಂದರೆ ಮುಂದುವರೆದ ರಾಷ್ಟ್ರಗಳು ತಮ್ಮ ಆರ್ಥಿಕ ವ್ಯವಸ್ಥೆ ಒಳ ರಹಸ್ಯಗಳನ್ನು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಸಿಗದಂತೆ ಮಾಡಿವೆ.

        ಅಮೇರಿಕಾ ಹಾಗೂ ಯುರೋಪಿಯನ್‌ ರಾಷ್ಟ್ರಗಳು ಇಂದು ಆರ್ಥಿಕ ಸಂಕಷ್ಟದಲ್ಲಿ ಇರಬೇಕಾದರೆ ಇವರು ತಮ್ಮ ಆರ್ಥಿಕ ಸಂಕಷ್ಟದ ದಿನಗಳನ್ನು ಭಾರತ ಮತ್ತು ಚೀನಾದ ಹಾಗೂ ಇನ್ನಿತರ
        ವರ್ಣೀಯ ಪ್ರಪಂಚದ ರಾಷ್ಟ್ರಗಳನ್ನು ಹೇಗೆ ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳಬೇಕೆಂದು ನೋಡುತ್ತಿವೆ.

        ಈ ರಾಷ್ಟ್ರಗಳ ಆರ್ಥಿಕ ವೃದ್ಧಿದರವನ್ನು ಗಮನಿಸಿದರೆ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ.

        ಭಾರತದಲ್ಲಿ ಕೃಷಿ ಕ್ಷೇತ್ರ 2011-12ರಲ್ಲಿ ಶೇ 3 ರಷ್ಟು ಕೈಗಾರಿಕಾ ವಲಯದಲ್ಲಿ ಶೇಕಡ 7.1ರಷ್ಟು ಸೇವಾ ವಲಯದಲ್ಲಿ ಶೇಕಡಾ 10ರಷ್ಟು ಬೆಳವಣಿಗೆಯನ್ನು ಸಾಧಿಸಿರುವುದಕ್ಕೆ ಸ್ಥಳೀಯ ಮಾರುಕಟ್ಟೆಯು ಶಕ್ತಿಯುತವಾಗಿರುವುದೇ ಕಾರಣ.

        ಆದರೆ ಮುಂದುವರಿದ ರಾಷ್ಟ್ರಗಳ ಒತ್ತಡಕ್ಕೆ ಮಣಿದು ತಮ್ಮ ಆಂತರಿಕ ವೃದ್ಧಿ ದರವನ್ನು ಕಡೆಗಣಿಸಿದರೆ ಮುಂದುವರಿದ ರಾಷ್ಟ್ರಗಳ ಆರ್ಥಿಕತೆ ಸಂಕಷ್ಟ ವರ್ಣೀಯ ಪ್ರಪಂಚದ ಮಾರುಕಟ್ಟೆಯ ಅವಕಾಶಗಳ ಮೂಲಕ ಕಡಿಮೆಯಾಗಬಹುದು.

        ಆದ್ದರಿಂದ ತೃತೀಯ ಜಗತ್ತಿನ ರಾಷ್ಟ್ರಗಳು ನವ ವಸಾಹತುಷಾಹಿ ಚಿಂತನೆಗಳಿಂದ ಹೊರಬಂದರೆ, ತಮ್ಮ ಆರ್ಥಿಕ ವ್ಯವಸ್ಥೆಯನ್ನು ಸ್ಥಿರಗೊಳಿಸಬಹುದು. ಮೂರನೇ ಪ್ರಪಂಚದ ರಾಷ್ಟ್ರಗಳು ಮುಂದುವರೆದ ರಾಷ್ಟ್ರಗಳ ಒಳ ಸಂಚಿಗೆ ಬಲಿಯಾದರೆ ಇಲ್ಲಿಯೂ ಸಹ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು.

        ಯುರೋಪಿಯನ್‌ ವಲಯದ ಋಣಭಾರ ವರ್ಷದಿಂದ ವರ್ಷಕ್ಕೆ ತೀವೃಗೊಳ್ಳುತ್ತಿದೆ. 2001ರಲ್ಲಿ  4.33ಟ್ರಿಲಿಯನ್‌ ಯುರೋಗಳಿಷ್ಟಿದ್ದ ಆರ್ಥಿಕ ಋಣ ಭಾರ 2010 ರಷ್ಟರಲ್ಲಿ 7.84
        ಟ್ರಿಲಿಯನ್‌ ಯುರೋಗಳಾಗಿದೆ.

        ಈ ಋಣಭಾರ ದಿಂದ ಹೊರಬರಲು ಪ್ರಯತ್ನ ರಾಷ್ಟ್ರಗಳು  ನಡೆಸುತ್ತಿವೆ. ಇವು ಮೂಲಭೂತವಾಗಿ ಕೃಷಿ ಆಧಾರಿತ ಅರ್ಥವ್ಯವಸ್ಥೆಯಲ್ಲ. ಆದ್ದರಿಂದ ಭಾರತ ಮತ್ತು ಚೀನಾದಿಂದ ಕೃಷಿ ಮತ್ತು ಇನ್ನಿತರ ಮೌಲ್ಯ ವರ್ದಿತ ಉತ್ಪನ್ನಗಳನ್ನು ಆಮದು ಮಾಡಿಕೊಂಡರೆ, ಇವರ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಬಹುದೆ?

        ಇದಕ್ಕಾಗಿ ವಿಶ್ವವ್ಯಾಪಾರ ಸಂಘಟನೆಯನ್ನು ಬಳಸಿಕೊಂಡು ಆಮದು ಸುಂಕ ತೆರಿಗೆಗಳನ್ನು ಕಡಿತಗೊಳಿಸುವಂತೆ ನೋಡಿಕೊಂಡು, ತಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಬಹುದೆಂದು ಯೋಚಿಸಬಹುದು.

        ಆದ್ದರಿಂದ ಮುಂದುವರೆದ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು  ತೃತೀಯ ಜಗತ್ತಿನ ರಾಷ್ಟ್ರಗಳ ಮಾರುಕಟ್ಟೆಗಳನ್ನು ವಶಪಡಿಸಕೊಳ್ಳುವುದರ ಮೂಲಕ ಹೊರಬರಬಹುದು. ಆದರೆ ಭಾರತ ಮತ್ತು ಚೀನಾದ ಮೇಲೆ ಈ ರಾಷ್ಟ್ರಗಳ ಆಥ್ವಿಟಕ್ಷಿ ಬಿಕ್ಕಟ್ಟು ಉದ್ಭವಿಸದಂತೆ ವಿಶ್ವವ್ಯಾಪರ ಸಂಘಟನೆಯ ಎಲ್ಲ ತರಹದ ಕಾರ್ಯತಂತ್ರಗಳನ್ನು ವಿಪಲಗೊಳಿಸಬೇಕಾಗಿದೆ.

        ಇಲ್ಲದೆ ಹೋದರೆ ಮುಂದುವರೆದ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟಿನ ರೋಗ ಭಾರತಕ್ಕೂ ಹರಡಬಹುದು. ಆದ್ದರಿಂದ ತಮ್ಮ ಮಾರುಕಟ್ಟೆಗಳನ್ನು ರಕ್ಷಿಸಿಕೊಳ್ಳುವಂತೆ ತೃತೀಯ ಜಗತ್ತಿನ ರಾಷ್ಟ್ರಗಳು ಆರ್ಥಿಕ ನೀತಿಗಳನ್ನು ರೂಪಿಸಬೇಕಾಗಿದೆ.

        ಆದ್ದರಿಂದ ವಿದೇಶಿ ಬಂಡವಾಳ, ವಿದೇಶಿ ಸಾಂಸ್ಥಿಕ ಬಂಡವಾಳ ಹಾಗೂ ವ್ಯಾಪಾರ ವಹಿವಾಟಿನ ಬಗ್ಗೆ ಸ್ಪಷ್ಟ ನಿಲುವನ್ನು ಭಾರತ ತಳೆಯ ಬೇಕಾಗಿದೆ. ಇಲ್ಲದೇ ಹೋದರೆ ಮುಂದುವರೆದ ರಾಷ್ಟ್ರಗಳ ರೋಗ ಭಾರತಕ್ಕೂ ಹರಡಬಹುದು.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus