ಅಶೋಕ್ ಕುಮಾರ್ ಎ. | Dec 26, 2011
ಸಿಂಪಲ್: ಬ್ಯಾಂಕಲ್ಲದ ಬ್ಯಾಂಕು
ಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ. ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು, ಖರ್ಚು ಮಾಡುವುದು ಮತ್ತು ಆಯವ್ಯಯದ ಲೆಕ್ಕ ತಿಳಿಯುವುದು ಸುಲಭ.
ಅಂದ ಹಾಗೆ ಸಿಂಪಲ್ ತಾಣವು ಸದ್ಯ ಕೆಲಸ ಮಾಡುತ್ತಿರುವ ಬ್ಯಾಂಕುಗಳ ನೆರವು ಪಡೆದೇ ಬ್ಯಾಂಕ್ ಸೇವೆ ನೀಡುತ್ತದಾದರೂ ಗ್ರಾಹಕನಿಗೆ ಅದರ ಸೇವೆ ಉಚಿತ. ಬ್ಯಾಂಕುಗಳಿಗೆ ಹೊರಗುತ್ತಿಗೆ ನೀಡುವ ರೀತಿ ತನ್ನ ಕೆಲಸವನ್ನು ಅದು ಅವುಗಳ ಮೂಲಕ ಮಾಡಿಸಿಕೊಳ್ಳುತ್ತದೆ.
ಇದಕ್ಕೆ ನೀಡಬೇಕಾದ ಶುಲ್ಕ ಪಾವತಿಸಲು ತನ್ನದೇ ಆದ ಮಾದರಿಯನ್ನು ಅನುಸರಿಸಲಿದೆ. ಸದ್ಯ ಸಿಂಪಲ್ ತಾಣದ ಸದಸ್ಯತ್ವವು ಆಮಂತ್ರಣದ ಮೂಲಕ ಮಾತ್ರ. ಆಮಂತ್ರಣಕ್ಕಾಗಿ ಯಾರು ಬೇಕಾದರೂ ಕೋರಿಕೆ ಸಲ್ಲಿಸಬಹುದು.
ಮೊಬೈಲ್ ಫೋನ್: ವಿಕಿರಣ ಪಟ್ಟಿ
ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ಗಳು ಹೊರಸೂಸುವ ವಿಕಿರಣ ಪ್ರಮಾಣವನ್ನು ಅವುಗಳ ಮೇಲೆ ನಮೂದಿಸುವುದನ್ನು ಕಡ್ಡಾಯಗೊಳಿಸಲು ಸರಕಾರ ಉದ್ದೇಶಿಸಿದೆ. ಪ್ರಸಕ್ತ ವಿಕಿರಣ ಪ್ರಮಾಣವನ್ನು ಪ್ರತಿ ಕೆಜಿಗೆ ಎರಡು ವ್ಯಾಟ್ ಎಂದು ನಿಗದಿ ಪಡಿಸಲಾಗಿದೆ.
ಇದನ್ನು ಪ್ರತಿ ಕೆಜಿಗೆ 1.6 ವ್ಯಾಟ್ ಎಂದು ನಿಗದಿ ಪಡಿಸಲಿದೆ. ನಮ್ಮ ದೇಹವು ನಿಗದಿತ ಹೀರಿಕೆ ದರದಲ್ಲಿ ವಿಕಿರಣವನ್ನು ಹೀರಿಕೊಳ್ಳುತ್ತದೆ. ಪ್ರತಿ ಕೆಜಿ ದೇಹತೂಕಕ್ಕೆ ಈ ಪ್ರಮಾಣವನ್ನೇ ಸರಕಾರ ನಿಗದಿ ಪಡಿಸಿದೆ. ಇಂದಿನ ಸ್ಮಾರ್ಟ್ ಫೋನುಗಳು ಹೊರಸೂಸುವ ವಿಕಿರಣ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಇರುವ ಸಾಧ್ಯತೆ ಇದೆ.
ಆದರೆ ಇದನ್ನು ಫೋನಿನಲ್ಲಿ ಸ್ಪಷ್ಟವಾಗಿ ನಮೂದಿಸಿರದ ಕಾರಣ ಅದು ಗ್ರಾಹಕರ ಗಮನಕ್ಕೆ ಬರುವುದಿಲ್ಲ. ಇನ್ನು ಅದನ್ನು ನಮೂದಿಸುವುದು ಕಡ್ಡಾಯ. ಮಾತ್ರವಲ್ಲ- ಸರಕಾರ ಅದನ್ನು ಪರೀಕ್ಷಿಸಲಿದೆ. ಚೀನೀ ಸೆಟ್‌ಗಳ ಸಹಿತ ವಿದೇಶೀ ಹ್ಯಾಂಡ್‌ಸೆಟ್‌ಗಳು ಈ ಪ್ರಮಾಣವನ್ನು ಮೀರಿದರೆ ಅವುಗಳನ್ನು ನಿಷೇಧಿಸಲು ಸರಕಾರ ಯೋಚಿಸಿದೆ.
ಅಲ್ಲದೆ, ಗ್ರಾಹಕರು ಮೊಬೈಲ್ ಬಳಕೆ ಕಾಲಾವಧಿಯನ್ನು ಮಿತಗೊಳಿಸುವುದು ಒಳಿತು ಎಂದು ಸಲಹೆ ನೀಡಲಾಗಿದೆ. ಧ್ವನಿ ಕರೆಗಳ ಬದಲಿಗೆ, ಕಿರು ಸಂದೇಶಗಳನ್ನು ಬಳಸಲೂ ಸಲಹೆ ಇದೆ. ಕರಮುಕ್ತ ಬಳಕೆಯು ಸೂಕ್ತವೆನ್ನುವುದು ಇನ್ನೊಂದು ಸಲಹೆ. ಇನ್ನು ತಮ್ಮ ದೇಹದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳನ್ನು ಜೋಡಿಸಿಕೊಂಡವರು ಮೊಬೈಲ್ ಸೆಟ್ ಬಳಸಲೇ ಬೇಕೆಂದರೆ ಅದನ್ನು ಅರ್ಧ ಅಡಿ ದೂರದಲ್ಲಿರಿಸುವುದು ಒಳಿತು.
ಸೌರಶಕ್ತಿ ಬಳಕೆ: ಪೈಂಟ್ ಶಕ್ತ
ನೋಟ್ರೆ ಡೇಂನ ವಿವಿಯ ಸಂಶೋಧಕರು ಅಭಿವೃದ್ಧಿ ಪಡಿಸಿರುವ ಪೈಂಟ್ ಅನ್ನು ಲೇಪಿಸಿದ ವಸ್ತುವಿನ ಮೇಲ್ಮೆ„ ಸೌರಶಕ್ತಿಯನ್ನು ಉತ್ಪಾದಿಸಲು ಸಮರ್ಥ. ಪೈಂಟಿನಲ್ಲಿರುವ ಅರೆವಾಹಕ ನ್ಯಾನೋ ಕಣಗಳು ಬೆಳಕನ್ನು ಹೀರಿಕೊಂಡು ವಿದ್ಯುತ್ಛಕ್ತಿ ಉತ್ಪಾದಿಸಲು ಸಮರ್ಥವಾಗಿವೆ.
ಆದರೆ ಇವುಗಳ ದಕ್ಷತೆ ಸದ್ಯದ ಮಾನಕಗಳ ಪ್ರಕಾರ ಬಹು ಕಡಿಮೆಯೇ. ಬಹು ವಿಸ್ತಾರವಾದ ಮೇಲ್ಮೆ„ಗೆ ಪೈಂಟ್ ಲೇಪಿಸಿ, ಬೇಕಾದ ವಿದ್ಯುತ್ಛಕ್ತಿ ಉತ್ಪಾದನೆ ಮಾಡಿಕೊಳ್ಳಲು ಸಾಧ್ಯ. ಈ ಪೈಂಟ್ ಅಗ್ಗವಾದ ಕಾರಣ ಹೆಚ್ಚು ವಿಸ್ತಾರಕ್ಕೆ ಇದನ್ನು ಬಳಿಯಲು ಖರ್ಚು ಬರದು.
ಬೆಳಕಿನಲ್ಲಿರುವ ಶಕ್ತಿಯ ಶೇ.1 ಅಂಶವನ್ನಷ್ಟೇ ವಿದ್ಯುತ್ಛಕ್ತಿಯಾಗಿಸುವ ಸಾಮರ್ಥ್ಯ ಈ ಲೇಪನಕ್ಕಿದೆ. ಲಭ್ಯವಿರುವ ಇತರ ಸೌರಕೋಶಗಳು ಶೇ.15 ಶಕ್ತಿಯನ್ನು ವಿದ್ಯುತ್ಛಕ್ತಿಯಾಗಿಸಲು ಸಮರ್ಥವಾಗಿವೆ. ಪೈಂಟಿನಲ್ಲಿ ಬಳಸಿದ ನ್ಯಾನೋಕಣಗಳು ಟೈಟಾನಿಯಂ ಡಯಾಕ್ಸೆ„ಡಿನವು ಎಂದು ಸಂಶೋಧಕರು ಪ್ರಕಟಿಸಿದ್ದಾರೆ.
ಸ್ಮಾರ್ಟ್‌ಫೋನುಗಳು ಸ್ಮಾರ್ಟ್ ಆದ ಬಗೆ
ಮುಕ್ತಾಯ ಹಂತದಲ್ಲಿರುವ ವರ್ಷದಲ್ಲಿ ಸ್ಮಾರ್ಟ್‌ಫೋನುಗಳು ಬದಲಾಗಿರುವ ರೀತಿಯೇನು ಎಂದು ಕಣ್ಣಾಡಿಸಿದರೆ, ಅದನ್ನು ಐದು ಬಗೆಯಾಗಿ ಕಾಣಬಹುದು. ಮೊದಲನೆಯದಾಗಿ, ಏಕಮುಖ ಕೇಂದ್ರ ಸಂಸ್ಕಾರಕಗಳಿಂದ ದ್ವಿಮುಖ ಕೇಂದ್ರವುಳ್ಳ ಸಂಸ್ಕಾರಕಗಳ ಬಳಕೆಯನ್ನು ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು.
ಇವುಗಳ ವೇಗ 1.5 ಗಿಗಾಹರ್ಟ್ಸ್ಗೆ ತಲುಪಿದೆ. ಮೊದಲು 1 ಗಿಗಾಹರ್ಟ್ಸ್ ವೇಗ ಸಾಮಾನ್ಯವಾಗಿತ್ತು. ಎಎಂಡಿ, ಎನ್ವಿಡಿಯಾ, ಟೆಕ್ಸಸ್ ಇನ್‌ಸ್ಟ್ರೆಮೆಂಟ್ ಕಂಪೆನಿಗಳ ಸಂಸ್ಕಾರಕಗಳನ್ನು ಸ್ಮಾರ್ಟ್‌ಫೋನುಗಳಲ್ಲಿ ಬಳಸಲಾಗುತ್ತಿದೆ. ಈ ಹೊಸ ಸಂಸ್ಕಾರಕಗಳು ಹೆಚ್ಚು ಸ್ಪಷ್ಟ ತೆರೆಯ ಬಳಕೆಗೆ ಅನುವು ಮಾಡಿವೆ. ಬ್ಯಾಟರಿ ಬಳಕೆಯೂ ಕಡಿಮೆ. ಒಮ್ಮೆ ಚಾರ್ಜ್ ಮಾಡಿದರೆ ಇಡೀ ದಿನ ಸ್ಮಾರ್ಟ್‌ಫೋನು ಬಳಸಬಹುದು.
ಎಲ್ಲಾ ತಂತ್ರಾಂಶಗಳು ದ್ವಿಮುಖ ಸಂಸ್ಕಾರಕಗಳನ್ನು ದುಡಿಸಿಕೊಳ್ಳಲು ಸಮರ್ಥವಾದರೆ ಸ್ಮಾರ್ಟ್‌ಫೋನುಗಳು ಇನ್ನೂ ಹೆಚ್ಚು ಉಪಯುಕ್ತವಾಗಬಲ್ಲುವು.
ಸ್ಮಾರ್ಟ್‌ಫೋನುಗಳು ಹೆಚ್ಚು ವಿಸ್ತಾರವಾದ ತೆರೆಗಳನ್ನು ಹೊಂದಿರುವುದು ಈಗಿನ ಇನ್ನೊಂದು ವೈಖರಿ. ಈಗವು 4.7 ಇಂಚಿನವಾಗಿರುವುದು ಮಾಮೂಲಿ. ಅಲ್ಲದೆ ಹೆಚ್ಚಿದ ಸ್ಪಷ್ಟತೆ ಇನ್ನೊಂದು ಬದಲಾವಣೆ. 1280x720 ಪಿಕ್ಸೆಲ್‌ಗಳ ಸ್ಪಷ್ಟತೆ ಈಗ ಲಭ್ಯ.
4ಜಿ ಜಾಲಗಳಲ್ಲಿ ಬಳಸಬಹುದಾದ ಸಾಧನಗಳನ್ನು ತಯಾರಿಸಲು ಹ್ಯಾಂಡ್‌ಸೆಟ್ ತಯಾರಕರು ತೊಡಗಿರುವುದು ವಿದೇಶಗಳಲ್ಲಿ ಕಾಣಬರುವ ಇನ್ನೊಂದು ಬೆಳವಣಿಗೆ.
ಇನ್ನು ತಂತ್ರಾಂಶಗಳತ್ತ ಗಮನ ಹರಿಸಿದರೆ, ಬಳಕೆದಾರರಿಗೆ ಒಂದು ದಶಲಕ್ಷ ಸಂಖ್ಯೆಯ ತಂತ್ರಾಂಶಗಳು ಲಭ್ಯವಿವೆ. ಆಂಡ್ರಾಯಿಡ್ ಫೋನು ಬಳಸುವವರು 10 ಬಿಲಿಯನ್ ಬಾರಿ ತಂತ್ರಾಂಶಗಳನ್ನು ಇಳಿಸಿಕೊಂಡಿದ್ದರೆ, ಆಪಲ್ ಕಂಪೆನಿಯ ಸಾಧನಗಳನ್ನು ಬಳಸುವವರು 15 ಬಿಲಿಯನ್ ಸಲ ತಂತ್ರಾಂಶಗಳನ್ನು ಇಳಿಸಿಕೊಂಡ ದಾಖಲೆಯಿದೆ.
ಆಪರೇಟಿಂಗ್ ವ್ಯವಸ್ಥೆಗಳ ಕಡೆ ನೋಡಿದರೆ ಆರು ಬಗೆಯ ವ್ಯವಸ್ಥೆಗಳಿದ್ದುವು- ಆಪಲ್‌ನ ಐಓಎಸ್, ಗೂಗಲ್‌ನ ಆಂಡ್ರಾಯಿಡ್, ಬ್ಲಾಕ್‌ಬೆರಿ, ವೆಬ್‌ಓಎಸ್, ವಿಂಡೋಸ್, ಸಿಂಬಿಯನ್. ಈಗ ಸಿಂಬಿಯನ್ ಮತ್ತು ವೆಬ್‌ಓಎಸ್ ತೆರೆಮರೆಗೆ ಸರಿದಿವೆ.
ಏಳು ಲಕ್ಷ ಆಂಡ್ರಾಯಿಡ್ ಸಾಧನಗಳ ಸೇರ್ಪಡೆ
ಆಂಡ್ರಾಯಿಡ್ ವ್ಯವಸ್ಥೆಯನ್ನು ಹೊತ್ತ ಸಾಧನಗಳನ್ನು ಗಣನೆಗೆ ತೆಗೆದುಕೊಂಡರೆ, ದಿನವೊಂದರಲ್ಲಿ ಏಳು ಲಕ್ಷ ಸಾಧನಗಳನ್ನು ಹೊಸದಾಗಿ ಬಳಸಲು ಆರಂಭಿಸಲಾಗುತ್ತದಂತೆ. ಕಳೆದ ತ್ತೈಮಾಸಿಕದಲ್ಲಿ ಇದು ಐದು ಲಕ್ಷವಾಗಿತ್ತು. ಮರು ಮಾರಾಟವಾದ ಸಾಧನಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಆಪಲ್‌ನ ಐಓಎಸ್ ಬಳಸುವ ಸಾಧನಗಳನ್ನು ದಿನವೊಂದಕ್ಕೆ ಎರಡುಮುಕ್ಕಾಲು ಲಕ್ಷ ಸಂಖ್ಯೆಯಲ್ಲಿ ಸೇರಿಸಲಾಗುತ್ತಿದೆ.
ಸ್ವ-ದುರಸ್ತಿ ಮಾಡಿಕೊಳ್ಳಬಲ್ಲ ಸಾಧನಗಳು
ಸರ್ಕ್ನೂಟ್ ಬೋರ್ಡುಗಳಲ್ಲಿ ಸಂಪರ್ಕ ಏರ್ಪಡಿಸುವ ತಂತಿಗಳು ಯಾವ ಕಾರಣದಿಂದಾದರೂ ಮುರಿದು ಹೋದರೆ, ಆ ಸಾಧನಗಳು ಕೆಲಸ ಮಾಡವು. ಈಗ ಇಲಿನಾಯ್ಸ ವಿವಿಯ ಸಂಶೋಧಕರು ಹೀಗೆ ವಿಫಲವಾದ ಸಾಧನಗಳಲ್ಲಿ ತಂತಿಗಳ ಮರುಜೋಡಣೆಯಾಗುವಂತೆ ಮಾಡಲು ಸಮರ್ಥರಾಗಿದ್ದಾರೆ.
ಗ್ಯಾಲಿಯಂ-ಇಂಡಿಯಂ ಇರುವ ಮೈಕ್ರೋಕ್ಯಾಪ್ಸೂಲುಗಳನ್ನು ತಂತಿಗಳ ಪಕ್ಕ ಜೋಡಿಸಿದ್ದು, ತಂತಿ ಕಿತ್ತು ಹೋದೊಡನೆ ಮೈಕ್ರೋಕ್ಯಾಪ್ಸೂಲುಗಳು ಬಿರಿಯುತ್ತವೆ. ಆಗ ಗ್ಯಾಲಿಯಂ-ಇಂಡಿಯಂ ಹೊರಚೆಲ್ಲಲ್ಪಟ್ಟು ಮುರಿದ ತಂತಿಗಳ ಬದಲಿಗೆ ಹೊಸ ಸಂಪರ್ಕ ಏರ್ಪಡಿಸುತ್ತವೆ.
ಆದ್ದರಿಂದ ಸಾಧನಗಳು ಮತ್ತೆ ಕೆಲಸ ಮಾಡಲು ಸಮರ್ಥವಾಗುತ್ತವೆ. ಎರಡು ಪದರಗಳ ಸರ್ಕ್ನೂಟ್ ಬೋರ್ಡ್ ಇರುವ ಸಾಧನಗಳಲ್ಲಿ ಇದನ್ನು ಬಳಸಬಹುದು. ಹೀಗಾಗಿ ಈ ತಂತ್ರಜ್ಞಾನ ಕಂಪ್ಯೂಟರುಗಳಲ್ಲೂ ಬಳಕೆಗೆ ಸೂಕ್ತವಾಗಿದೆ.