Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಂಡಿದ್ದು ಕಾಡಿದ್ದು
    • ಬಂಗಾರಪ್ಪನವರಿಗೆ ಬಂಗಾರಪ್ಪನವರೇ ಸಾಟಿ
    • ಕೊನೆಗೂ ಸಾರೆಕೊಪ್ಪದವರಾಗಿಯೇ ಉಳಿದರು
      • ನಿರಂಜನ ವಾನಳ್ಳಿ | Dec 27, 2011

        ಸಾರೆಕೊಪ್ಪದಿಂದ ಬೆಂಗಳೂರಿಗೆ  ಬಂದು ಇಷ್ಟು ವರ್ಷಗಳಾದರೂ ಏಕವಚನದಿಂದ ಎಲ್ಲರನ್ನು ಹೆಸರು ಹಿಡಿದು ಕರೆಯುವ ಸ್ನೇಹಮಯ ವ್ಯಕ್ತಿತ್ವ ಅವರ ರಾಜಕೀಯ ಚಾಣಾಕ್ಷತೆ ಕೂಡಾ ಆಗಿತ್ತು. ಊರಿಗೆ ಬಂದಾಗ ತಮ್ಮ ಜನಗಳ ಜೊತೆಯೇ ನೆಲದ ಮೇಲೆ ಕುಳಿತು, ಮಂಡಕ್ಕಿ, ಅವಲಕ್ಕಿ ತಿಂದು, ಡೊಳ್ಳುಬಡಿದು, "ಅವರವ' ಎನಿಸಿಕೊಳ್ಳುತ್ತಿದ್ದರು.

        ಬಂಗಾರಪ್ಪ ನಮ್ಮ ಪಕ್ಕದ ಕ್ಷೇತ್ರದವರು. ನಾವು ಚಿಕ್ಕವರಿ¨ªಾಗಿ ನಿಂದ ಬಂಗಾರಪ್ಪನವರೇ ಸೊರಬದ ಪ್ರತಿನಿಧಿ. ಆ ಕಾಲದ ಸೊರಬ ತಾಲೂಕಲ್ಲಿ ಬಂಗಾರಪ್ಪ ಏಕೈಕ ನಾಯಕ.  ಸೋಲಿಲ್ಲದ ಸರದಾರ ಎನಿಸಿಕೊಂಡವರು. ಅವರ ಬಗ್ಗೆ ಅನೇಕ ಕಥೆಗಳು ಅನುಭವಗಳೂ ಪ್ರಚಲಿತವಾಗಿದ್ದವು.

        ಮೂಲತಃ ದೀವರು ನಾಯ್ಕರ ನಾಯಕನಾಗಿ ಗೆದ್ದು ಬರುತ್ತಿದ್ದುದು ನಿಜವಾದರೂ ಎÇÉಾ ಜಾತಿ ಜನಗಳ ಆತ್ಮೀಯತೆ ಗಳಿಸಿದ್ದರು.

        ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಒಮ್ಮೆ ನೋಡಿದ ಘಟನೆ. ಶಿವಮೊಗ್ಗ ಬಸ್ಸುನಿಲ್ದಾಣದಲ್ಲಿ ಬಂದಿಳಿದಾಗ ರಾತ್ರಿಯಾ ಗಿತ್ತು. ಕೆಲವು ಹಳ್ಳಿಜನ ನಿಲ್ದಾಣದಲ್ಲಿ ಮಲಗಿದ್ದರು. ಅವರು ಚಿಕ್ಕಮಗಳೂರು ಕಡೆ ಕೂಲಿಗೆ ಹೋಗಲು ಬಂದವರು. ಆದರೆ ಸಂಜೆಯ ಬಸ್ಸು ತಪ್ಪಿಹೋಯ್ತು. ಇನ್ನೇನು ಮಾಡಬೇಕು?

        ಹೊಟೇಲಿಗೆ ಹೋಗಿ ಉಳಿಯಲು ಯಾರು ದುಡ್ಡು ಕೊಡಬೇಕು? ಹೀಗಾಗಿ ನಿಲ್ದಾಣದÇÉೇ ಟವಲು ಹಾಸಿಕೊಂಡು ಮಲಗಿದರು. ನಡುರಾತ್ರಿ ಬಂದ ಪೊಲೀಸಪ್ಪ ಅವರನ್ನು ಲಾಠಿಯಿಂದ ತಿವಿದು ಏಳಿಸಿದ.

        ಇದೇನು ನಿಮ್ಮ ಮಾವನ ಮನೆಕೆಟ್ಟೋಯ್ತಾ? ಏಳಿ ಎಂದು ದಬಾಯಿಸತೊಡಗಿದ. ಆಗ ಮಲಗಿದ್ದ ಒಂದಿಬ್ಬರು ಹೆಂಗಸರು ನಾವು ಯಾರಂತ ಅಂದುಕೊಂಡಿದ್ದೀಯಾ, ನಾವು ಸಾರೆಕೊಪ್ಪದವರು. ಬಂಗಾರಪ್ಪನವರ ಊರಿನವರು.

        ನಮ್ಮನ್ನು ಲಾಠಿಯಲ್ಲಿ ಮುಟಿ¤àಯಾ? ಈಗ ಫೋನು ಮಾಡಿದ್ರೆ ಸಾಕು ಬಂಗಾರಪ್ಪ ಬರ್ತಾನೆ, ಎಂದು ದಬಾಯಿಸಿದ್ದನ್ನು ಕೇಳಿ ಪೊಲೀಸ್‌ ಜಾಗ ಖಾಲಿ ಮಾಡಿದ. ಹೆಂಗಸರು ಮತ್ತೆ ಮಲಗಿಕೊಂಡರು.

        ಅವರು ಫೋನು ಮಾಡಿದ್ರೆ ಬಂಗಾರಪ್ಪ ಬರಲಿಕ್ಕಿಲ್ಲ. ಆದರೆ ನಾಯಕನೊಬ್ಬ ಅಷ್ಟು ವರ್ಷಗಳಮೇಲೂ ಜನಸಾಮಾನ್ಯರ ನಂಬುಗೆಯನ್ನು ಉಳಿಸಕೊಂಡಿರುವುದು  ನಿಜವಾದ  ಜನನಾಯಕನ ಲಕ್ಷಣ.

        ನಮ್ಮಲ್ಲಿ  ತಂತಮ್ಮ ಕ್ಷೇತ್ರದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ನಾಯಕರಿರಬಹುದು. ಒಂದು ಕೋಮಿನ ನಾಯಕರಾಗಿ ದಶಕಗ ಳಿಂದ ರಾಜಕೀಯ ಮಾಡುತ್ತಿರುವ ದೊಡ್ಡ ಮುಖಂಡರಿರಬಹುದು. ಆದರೆ ಇಡೀ ಕರ್ನಾಟಕದಲ್ಲಿ ಜನನಾಯಕನೆನಿಸಿಕೊಳ್ಳಬಲ್ಲ, ಬಂಗಾರಪ್ಪರಷ್ಟು ಛಾತಿಯ ಮತ್ತೂಬ್ಬ ನಾಯಕರಿಲ್ಲ.

        ಒಪ್ಪಂದಗಳನ್ನು ಮಾಡಿ ಬದುಕುವುದು ಬಂಗಾರಪ್ಪಜಾಯಮಾನವೇ ಅಲ್ಲ. ಆದರೆ ತನಗೆ ಪ್ರಾಮುಖ್ಯತೆ ಸಿಗದ ಕಡೆ ಉಳಿದವರೂ ಅಲ್ಲ. ಅನ್ಯಾಯವನ್ನು ಎಂದೂ ಸಹಿಸಿದವರಲ್ಲ. 1982ರ ಚುನಾವಣೆಯ ವೇಳೆ ಜನತಾಪಕ್ಷದ ಜೊತೆ ತಮ್ಮ ಕ್ರಾಂತಿರಂಗ ಪಕ್ಷವನ್ನು ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷವನ್ನು ಮಣಿಸಿದ ಬಂಗಾರಪ್ಪ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು.

        ಆದರೆ ಆಗ  ಜನತಾಪಕ್ಷದ ಆಣತಿಯಂತೆ ಹೆಗಡೆ ಮುಖ್ಯಮಂತ್ರಿಯಾದರು. ಇದರಿಂದ ಕೋಪದಿಂದ ಭುಸುಗುಟ್ಟಿದ ಬಂಗಾರಪ್ಪ ತಾನು ಕಟ್ಟಿದ ಹುತ್ತದಲ್ಲಿ ಹೆಗಡೆ ಮನೆಮಾಡಿಕೊಂಡರು ಎಂದು ಮೂದಲಿಸುತ್ತಿದ್ದರು.

        ಎಂದೂ ರಾಜಕೀಯವಾಗಿ ನಗಣ್ಯನಾಗಲು ಒಪ್ಪದ ಬಂಗಾರಪ್ಪ, ಮುಪ್ಪಿನಲ್ಲೂ ಹೊಸ ಅಧಿಕಾರದ ಕನಸು ಕಂಡವರು. ಮತ್ತೆ ಮುಖ್ಯವಾಹಿನಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಆಸೆ ಇಟ್ಟುಕೊಂಡಿದ್ದರು.

        ಇಲ್ಲವಾದರೆ ಇತ್ತೀಚೆಗೆ  ಕಾಂಗ್ರೆಸ್‌ ತೊರೆದು  ದೇವೇಗೌಡರ ಜೆಡಿಎಸ್‌ ಪಕ್ಷವನ್ನು ಯಾಕೆ ಸೇರುತ್ತಿದ್ದರು?
        ನಾವು ಎಂ.ಎ. ಮಾಡುವ ಸಂದರ್ಭದಲ್ಲಿ ಬಂಗಾರಪ್ಪ ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ಮಾದರಿ ಪತ್ರಿಕಾಗೋಷ್ಠಿಗೆ ಬಂದಿದ್ದರು.

        ವಿದ್ಯಾರ್ಥಿಗಳು ತಮಗೆ ಮೇಷ್ಟ್ರುಗಳು ಮಾಕ್ಸುìಕೊಡುವುದಿಲ್ಲ ಎಂದು ದೂರಿದರು. ಆಗ ಬಹಳ ಚಾಲಾಕಿನ ಉತ್ತರ ಕೊಟ್ಟ ಬಂಗಾರಪ್ಪ ನನಗೆ ವಿದ್ಯಾರ್ಥಿಗಳು ಮಾಕ್ಸುì ತೆಗೆಯೋದು ಗೊತ್ತು ಮೇಷ್ಟ್ರುಗಳು ಹಾಕೋದು  ಗೊತ್ತಿಲ್ಲ ಎಂದು ತಮ್ಮ ಪ್ರಬುದ್ಧತೆ ಮೆರೆದರು! ಅವರು ಮಹರಾಜಾ ಕಾಲೇಜಿನ ವಿದ್ಯಾರ್ಥಿ.

        ಕಾಲೇಜಿನ ಬಗ್ಗೆ ಅವರಿಗೆ ಬಹಳ ಪ್ರೀತಿಯಿತ್ತು. ಪ್ರತಿಸಾರಿ ಬಂದಾಗಲೂ ಮಹರಾಜಾ ಕಾಲೇಜಿನ ಗೋಡೆ ಮುಟ್ಟಿ ಬರ್ತೇನೆ ಎಂದರು! ನಮ್ಮ ವಿಭಾಗದ ಅಟೆಂಡರು ಬುಳ್ಳಯ್ಯ, ಸಾರ್‌ ಇವತ್ತೂ ಹೋಗಿ ಬಂದ್ರಾ ಎನ್ನೋದೆ? ಅವರು "ಹೋಗಿಬರ್ತೇನೆ' ಎಂದು ನಕ್ಕರು!

        ಬಂಗಾರಪ್ಪನವರನ್ನು ನಾನು ಹತ್ತಿರದಿಂದ ಕಂಡವನಲ್ಲ.  ಎಂ.ಎ ಮುಗಿಸುವಾಗ ಎರಡು ತಿಂಗಳ ತರಬೇತಿಗೆ ಬೆಂಗಳೂರಿಗೆ ಹೋಗಿ, ದೊಡ್ಡ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸಮಾಡುತ್ತಿ¨ªೆ.

        ಒಮ್ಮೆ ಫೋನು ಗುಣಗುಣಿಸಿತು. ನಮ್ಮ ಡೆಸ್ಕಿನಲ್ಲಿ ಬೇರೆ ಯಾರೂ ಇರಲಿಲ್ಲ. ನಾನೇ ಹೋಗಿ ಫೋನೆತ್ತಿಕೊಂಡೆ. ಆ ಕಡೆಯಿಂದ ಮಾತನಾಡುತ್ತಿದ್ದವರು ಬಂಗಾರಪ್ಪ. ನಾನು ನಿರಂಜನ ಎನ್ನೋದೇ ತಡ. ಎಷ್ಟೋ ವರ್ಷಗಳ ಪರಿಚಯವೋ ಎನ್ನುವಂತೆ ಆತ್ಮೀಯತೆಯಿಂದ ಮಾತನಾಡಿದರು.

        ತಾನು ನೀಡಬೇಕಾದ ಹೇಳಿಕೆಯನ್ನೂ ತಿಳಿಸಿದರು. ಮುಖಪರಿಚಯವೇ ಇಲ್ಲದವನ ಜೊತೆಗೂ ಅವರು ತೋರಿದ ಆತ್ಮೀಯತೆ ಅವರ ಯಶಸ್ವಿ ರಾಜಕಾರಣದ ಗುಟ್ಟೇನು ಎಂಬುದನ್ನು ಮೊತ್ತಮೊದಲು ನನಗೆ ಪರಿಚಯ ಮಾಡಿಕೊಟ್ಟಿತು.

        ಬಂಗಾರಪ್ಪನವರ ಸರಳತೆಯ ಬಗ್ಗೆ, ಸೊರಬದ ಜನಗಳನ್ನು ಪ್ರೀತಿಯಿಂದ ಕಾಣುವ ರೀತಿಯ ಬಗ್ಗೆ ಅನೇಕ ಕತೆಗಳಿವೆ. ಅವರು ಅಷ್ಟು ವರ್ಷ ಯಾಕೆ ಸೊರಬವನ್ನು ಆಳಿ¨ªೆಂದು  ಕೇಳಿದರೆ  ವಿಭಿನ್ನ ಉತ್ತರಗಳಿವೆ. ಒಂದು, ಅವರು ತಮ್ಮ ಸಮುದಾಯದ ಇನ್ನೊಬ್ಬ ನಾಯಕ ಬೆಳೆಯದಂತೆ ನೋಡಿಕೊಂಡರು.

        ಸೊರಬದಲ್ಲಿ ಈಡಿಗರದೇ ನಿರ್ಣಾಯಕ ಮತಗಳಾದ್ದರಿಂದ ಸತತವಾಗಿ  ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದರು ಎಂಬುದು ಒಂದು ವಾದ. ಸಾರೆಕೊಪ್ಪದಿಂದ ಬೆಂಗಳೂರಿಗೆ  ಬಂದು ಇಷ್ಟು ವರ್ಷಗಳಾದರೂ ಏಕವಚನದಿಂದ ಎಲ್ಲರನ್ನು ಹೆಸರು ಹಿಡಿದು ಕರೆಯುವ ಸ್ನೇಹಮಯ ವ್ಯಕ್ತಿತ್ವ ಅವರ ರಾಜಕೀಯ ಚಾಣಾಕ್ಷತೆ ಕೂಡಾ ಆಗಿತ್ತು.

        ಊರಿಗೆ ಬಂದಾಗ ತಮ್ಮ ಜನಗಳ ಜೊತೆಯೇ ನೆಲದ ಮೇಲೆ ಕುಳಿತು, ಮಂಡಕ್ಕಿ, ಅವಲಕ್ಕಿ ತಿಂದು, ಡೊಳ್ಳುಬಡಿದು, "ಅವರವ' ಎನಿಸಿಕೊಳ್ಳುತ್ತಿದ್ದರು. ಆದರೆ ಪಕ್ಕದ ತಾಲೂಕಿನ ರಾಮಕೃಷ್ಣ ಹೆಗಡೆಯವರು ಇದಕ್ಕೆ ತದ್ವಿರುದ್ಧ.

        ಅವರು ಹಾಗೆ ನೆಲದಮೇಲೆ ಕುಳಿತವರೇ ಅಲ್ಲವೇನೊ! ಬಂಗಾರಪ್ಪನವರನ್ನು ಎಂದೂ ಕೈಬಿಡದ ಅವರ ಮತದಾರರನ್ನು ಕೇಳಿದ್ದೇನೆ. ಅವರೇನು ಕೆಲಸಮಾಡಿ¨ªಾರೆ, ಸೊರಬಕ್ಕೆ ಒಳ್ಳೇದು ಮಾಡಿ¨ªಾರೆ ಎಂಬುದಕ್ಕಲ್ಲ ಅವರು ಮತಹಾಕೋದು.

        "ನಮ್ಮ ಬಂಗಾರಪ್ಪ, ಅವನನ್ನು ಸೋಲಲು ಬಿಡಬಾರದು' ಅಂತ! ಬಂಗಾರಪ್ಪ ಮುಖ್ಯಮಂತ್ರಿಯಾಗಿ¨ªಾಗ ತವರಿನ ಜನ ಯಾರೇ  ಬೆಂಗಳೂರಿಗೆ ಅವರ ಮನೆಗೆ ಹೊದರೂ ಮುಕ್ತ ಪ್ರವೇಶವಿತ್ತು. ಬೆಂಗಳೂರನ್ನು ತೋರಿಸಿ, ಟಿಕೇಟು ಮಾಡಿಸಿ ವಾಪಸ್ಸು ಕಳಿಸುವ ವ್ಯವಸ್ಥೆ ಇತ್ತು ಎಂದು ಕೇಳಿದ್ದೇನೆ.

        ತಮ್ಮ ಜನರ ಬಗ್ಗೆ ಅವರಿಗಿದ್ದ ಅತಿಯಾದ ವ್ಯಾಮೋಹವೇ ಬಂಗಾರಪ್ಪಮುಖ್ಯಮಂತ್ರಿಯಾಗಿ¨ªಾಗ ಆಪೆ¤àಷ್ಟರು ಎಗ್ಗಿಲ್ಲದೆ ಅವರ ಹೆಸರನ್ನು ದುರುಪಯೋಗ ಮಾಡಿಕೊಳ್ಳಲು ಕಾರಣವಾಯ್ತು ಎನಿಸುತ್ತದೆ.   ಬಂಗಾರಪ್ಪನವರ ನೆನಪಿನ ಶಕ್ತಿ ಹೆಸರುವಾಸಿ.

        ತಮ್ಮ ಊರಿನ ಜನರನ್ನು 50 ವರ್ಷಗಳ ಬಳಿಕವೂ ಹೆಸರಿಟ್ಟು ಕರೆಯುವ ಚಾಕಚಕ್ಯತೆ ಹೊಂದಿದ್ದರಂತೆ. ಸಾರೇಕೊಪ್ಪದಲ್ಲಿ ಬಂಗಾರಪ್ಪ ಹೋಗಿ ಡೊಳ್ಳುಹೊಡೆದರೆ, ಹೆಗಲು ಮೇಲೆ ಕೈಹಾಕಿ ಜನರನ್ನು ಮಾತನಾಡಿಸಿದರೆ, ಮರುದಿನ ಅದು ಸುದ್ದಿಯಾಗೋದು.

        ಜನ ಬಂಗಾರಪ್ಪನವರ ಬಗ್ಗೆ ಇನ್ನಷ್ಟು ಅಭಿಮಾನ ಪಡೋರು. ಚುನಾವಣೆಗೆ ನಾಮಪತ್ರಸಲ್ಲಿಸಿದ ಮೇಲೆ ತನ್ನ ಮತದಾರರ ಮೇಲೆ ವಿಶ್ವಾಸವಿಟ್ಟು, ಕ್ಷೇತ್ರಕ್ಕೆ ಕಾಲುಹಾಕದೆ ವಿಧಾನಸಭಾ ಚುನಾವಣೆ ಗೆದ್ದ ಹೆಗ್ಗಳಿಕೆ ಅವರದು. ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೇರಿದ್ದು ಜೀವನದಲ್ಲಿ ಅವರು ಮಾಡಿದ ಒಂದು ತಪ್ಪು.

        ಅವರಿಗೆ ಬಿಜೆಪಿಯ ಜಾಯಮಾನ ಒಪ್ಪುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಷೆಯಂತೇ ಅವರು ಬಿಜೆಪಿಯಿಂದ ಗೆದ್ದು ಸಂಸತ್‌ ಸದಸ್ಯರಾಗಿ ಮತ್ತೆ ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಸಡ್ಡು ಹೊಡೆದು  ಸ್ವತಂತ್ರವಾಗಿ ಚುನಾವಣೆಗೆ ನಿಂತು ಸಂಸತ್ತಿಗೆ ಆಯ್ಕೆಗೊಂಡಿದ್ದು ದಿಲ್ಲಿಯಲ್ಲಿ ಅವರ ಗೌರವವನ್ನು ಇಮ್ಮಡಿಗೊಳಿಸಿದ ಘಟನೆ.

        ಆ ವರ್ಷ ಬಿಜೆಪಿ ಗೆದ್ದು ತಾವು ಕೇಂದ್ರ ಸಚಿವರಾಗುವ ಕನಸು ಕಂಡಿದ್ದರು. ಆದರೆ ಅವರ ಎಣಿಕೆ ತಲೆಕೆಳಗಾಗಿ ರಾಜಕೀಯ ಜೀವನದಲ್ಲಿ ಮೊದಲ ಸೋಲು ಅನುಭವಿಸಬೇಕಾಯ್ತು.

        ಕರ್ನಾಟಕದಲ್ಲಿ "ಬಂಗಾರಪ್ಪನವರಿಗೆ ಬಂಗಾರಪ್ಪನವರೇ ಸಾಟಿ' ಎಂಬ ಮಾತು ಕ್ಷೀಷೆಯಾಗಿದೆ. ಬಳಸಿ ಬಳಸಿ ಸವಕಲಾಗಿದೆ. ಅವರು ಎಷ್ಟು ಸಾರಿ ಕಾಂಗ್ರೆಸ್‌ ಪಕ್ಷ ಬಿಟ್ಟರೋ ಸೇರಿದರೋ ಅವರಿಗೇ ನೆನಪಿರಲಿಕ್ಕಿಲ್ಲ.

        ಇಡೀ ರಾಜ್ಯದಲ್ಲಿ ಗಿರಿಗಿರಿ ತಿರುಗಿ ಯಾವುದೇ ಪಕ್ಷವನ್ನು ಕಟ್ಟುತ್ತೇನೆ ಎನ್ನುವ ತಾಕತ್ತು ಬಂಗಾರಪ್ಪನವರಿಗಿರುವಷ್ಟು ಬೇರೆಯವರಿಗೆ ಇರಲಿಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಅದೇ ರಾಜಕೀಯ ಚಾಣಾಕ್ಷತೆ ಅವರ ಮಕ್ಕಳಿಗೆ ಬಂದಿಲ್ಲ ಎಂಬುದು ಈಚಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಅಂದರೆ ಬಂಗಾರಪ್ಪಕುಟುಂಬದ ರಾಜಕೀಯಕ್ಕೆ  ಕರ್ನಾಟಕದಲ್ಲಿ ಇನ್ನು ಮನ್ನಣೆ ದೊರೆಯುವುದೆ? ಕಾದು ನೋಡೋಣ.


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus