ಕೈವಾರ ಗೋಪಿನಾಥ್ | Dec 28, 2011
ನಿಕೋಟಿನ್ ವ್ಯಸನ ವನ್ನು ವಿರೋಧಿಸಲು ಕಾರಣವಾಗುವ ಮಿದುಳಿನ ಯಾವ ಪ್ರದೇಶ ಗಳು, ನರಮಂಡಲಗಳ ಚಟುವಟಿಕೆಯ ವಿವರಗಳ ಅಧ್ಯಯನ ನಡೆಸುವ ಉದ್ದೇಶ ವಿಜ್ಞಾನಿಗಳದಾಗಿತ್ತು. ಅದರಿಂದ ಆ ವ್ಯಸನಿಗಳನ್ನು ಸಿಗರೇಟ್ ಸೇವನೆಯಿಂದ ದೂರವಿಡಲು ಸಾಧ್ಯ ವಾಗಬಹುದೆಂಬ ಇರಾದೆ ವಿಜ್ಞಾನಿಗಳದಾಗಿದೆ.
ಯು.ಸಿ.ಎಲ್.ಎ. ಸಂಸ್ಥೆಯ ಸಮಾಕಲಿತ ನರಬಿಂಬಕ ತಂತ್ರಜ್ಞಾನದ (Integrative Neuroimaging Techn ology) ಪ್ರಯೋಗಾಲಯದಲ್ಲಿ ಮಿದುಳಿನ ಅಂತರಾಳದಲ್ಲಿ ನಡೆಯುವ ಚಟುವಟಿಕೆಗಳನ್ನು ತಿಳಿಯಲು ವಿಶೇಷ ರೀತಿ ಯ ತಂತ್ರಜ್ಞಾನವನ್ನು ಬಳಸಿ¨ªಾರೆ ಎಂಬುದಾಗಿ 2011ರ ಡಿಸೆಂಬರ್ 21ರಂದು ವರದಿಯಾಗಿದೆ.

ಮಿದುಳಿನಲ್ಲಿ ನಡೆಯುವ ಚಟುವಟಿಕೆಯನ್ನು ತಿಳಿಯಲು ಕಂಪ್ಯೂಟರ್‌ನಲ್ಲಿ ಮೂಡುವ ಸಂಕೇತಗಳ ನಮೂನೆಗಳನ್ನು ವಿಶ್ಲೇಷಿಸಿ ಅದರಿಂದ ಅರ್ಥೈಸಿಕೊಳ್ಳುವ ಪ್ರಕ್ರಿಯೆ ವಿಜ್ಞಾನಿಗಳಿಗೆ ಹೊಸದೇನಲ್ಲ.
ಆ ದಿಕ್ಕಿನಲ್ಲಿ ಮಿದುಳಿನ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ "ಬ್ರೆ„ನ್ ರೀಡಿಂಗ್' ಅಥವಾ "ಬ್ರೆ„ನ್ ಡಿಕೋಡಿಂಗ್' ಎನ್ನುತ್ತಾರೆ.
ಸಾಮಾನ್ಯವಾಗಿ ಮಿದುಳಿನ ಸಂಕೇತಗಳನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನು "ಅಯಸ್ಕಾಂತೀಯ ಅನುರಣನ ಬಿಂಬಕ' (MRI or Magnetic Resonance Imaging) ವಿಧಾನವನ್ನು ಬಳಸುವುದು ವಾಡಿಕೆಯಾಗಿದೆ.
ಆದರೆ ಯು.ಸಿ.ಎಲ್.ಎ.ಯ ಪ್ರಯೋಗಾಲಯದ ತಜ್ಞರು ಆ ದಿಸೆಯಲ್ಲಿ ಇನ್ನೂ ಮುಂದುವರಿದು ಮಿದುಳಿನಲ್ಲಿ ಮೂಡುವ ಒಗಟಿನಂತಹ ಸಂಕೇತಗಳನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಪರಿವರ್ತಿಸುವಂತಹ
FRMI ತಂತ್ರಜ್ಞಾನವನ್ನು ಉಪಯೋ ಗಿಸಿ¨ªಾರೆ.
ಹಾಗೆ ಮಿದುಳಿನ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಲು ಯು.ಸಿ.ಎಲ್.ಎ.ನ ವಿಜ್ಞಾನಿಗಳು ಸಿಗರೇಟು ಸೇದುವವರ ಮೇಲೆ ಮೊದಲು ಪ್ರಯೋಗಗಳನ್ನು ನಡೆಸಿದರು.
ಅಂತಹ ವ್ಯಸನಗಳ ಅಧ್ಯಯನ ನಡೆಸುವಾಗ ವಿಜ್ಞಾನಿಗಳ ತಂಡ ಅದಕ್ಕೆ ಪ್ರೇರಣೆ ನೀಡುವ ಸಂಬಂಧದ ವೀಡಿಯೋಗಳನ್ನು ವೀಕ್ಷಿಸುತ್ತಿದ್ದ ಸಿಗರೇಟ್ ಸೇದುವವರ ಮಿದುಳುಗಳನ್ನು ಅವಲೋಕನಕ್ಕೆ ಒಳಪಡಿಸಲಾಯಿತು.
ಆ ಸಂದರ್ಭದಲ್ಲಿ ನಿಕೋಟಿನ್ ವ್ಯಸನ ವನ್ನು ವಿರೋಧಿಸಲು ಕಾರಣವಾಗುವ ಮಿದುಳಿನ ಯಾವ ಪ್ರದೇಶಗಳು, ನರಮಂಡಲಗಳ ಚಟುವಟಿಕೆಯ ವಿವರಗಳ ಅಧ್ಯಯನ ನಡೆಸುವ ಉದ್ದೇಶ ವಿಜ್ಞಾನಿಗಳದಾಗಿತ್ತು. ಅದರಿಂದ ಆ ವ್ಯಸನಿಗಳನ್ನು ಸಿಗರೇಟ್ ಸೇವನೆಯಿಂದ ದೂರವಿಡಲು ಸಾಧ್ಯ ವಾಗಬಹುದೆಂಬ ಇರಾದೆ ವಿಜ್ಞಾನಿಗಳದಾಗಿದೆ.
ಇಂತಹ ಪ್ರಯತ್ನಗಳು ಹೊಸದೇನಲ್ಲ. ಇಂತಹ ಪ್ರಯೋಗಗಳು ನಡೆದ ಬಗ್ಗೆ 2007ರ ಮಾರ್ಚ್ 19ರಂದು ವರದಿಯಾಗಿತ್ತು.ಡ್ನೂಕ್ ವಿ.ವಿಯ ಆಗಿನ ಅಧ್ಯಯನದ ಪ್ರಕಾರ ನಿಕೋಟಿನ್ ವ್ಯಸನದ ಮೇಲಿನ ಅವಲಂಬನವನ್ನು ನಿಯಂತ್ರಿಸುವಂತಹ ಮಿದುಳಿನಲ್ಲಿರುವ ಮೂರು ನಿಗದಿತ ಪ್ರದೇಶಗಳನ್ನು ಗುರುತಿಸಲಾಯಿತು.
ಸಾಮಾನ್ಯವಾಗಿ ಮಾನಸಿಕ ಒತ್ತಡ ಉಂಟಾ ದಾಗ ಅದರ ನಿವಾರಣೆಗೆ ನಿಕೋಟಿನ್‌ಗೆ ಮೊರೆ ಹೋಗುವ ಸಂದರ್ಭಗಳೂ ಇಲ್ಲದಿಲ್ಲ. ಅಂತಹ ಒತ್ತಡವನ್ನು ಕಡಿಮೆ ಮಾಡಿ, ಸುಸ್ಥಿತಿಗೆ ತಂದು, ಇತರ ವಿಷಯಗಳಲ್ಲಿ ಕೇಂದ್ರೀಕರಿಸಲು ಆ ಪ್ರದೇಶಗಳು ಸಹಾಯ ಮಾಡುತ್ತವೆ ಎಂಬುದಾಗಿ ಗೊತ್ತಾಗಿದೆ.
ಆದ್ದರಿಂದ ಅನೇಕ ಸಿಗರೇಟ್ ವ್ಯಸನಿಗಳು ಹೇಗೆ ಅಂತಹ ಸೇವನೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತಾರೆ ಎಂಬ ವಿಷಯವನ್ನು ಮಿದುಳಿನ ಈ ಪ್ರದೇಶಗಳು ವಿವರಣೆ ನೀಡಬಲ್ಲವು. ಅಂತಹ ವಿವರಣೆ ಸಿಕ್ಕರೆ ಆಗ ಅಂತಹ ವ್ಯಸನಿಗಳು ಸಿಗರೇಟ್ ಸೇವನೆಯನ್ನು ನಿಲ್ಲಿಸಲು ಸಾಧ್ಯವಾಗುವಂತಹ ಚಿಕಿತ್ಸೆ ನೀಡಬಹುದಾಗಿದೆ ಎಂದು ಡ್ನೂಕ್ ವಿಶ್ವವಿದ್ಯಾಲಯದ ನಿಕೋಟಿನ್ ಮತ್ತು ಸಿಗರೇಟ್ ಸೇವನೆ ನಿಲ್ಲಿಸಲು ಸಹಾಯಕ ವಿಷಯದ ಬಗ್ಗೆ ಸಂಶೋಧನೆಯ ರೂವಾರಿ ಜೆಡ್ ಎ. ರೋಸ್ ಪ್ರಕಟಿಸಿ¨ªಾರೆ.
ಸ್ವಾರಸ್ಯ ಸಂಗತಿಯೆಂದರೆ ಅಮೇರಿಕದಲ್ಲಿಯೇ ಐದು ನಾಗರಿಕರಿಗೆ ಒಬ್ಬರು ನಿಕೋಟಿನ್ ವ್ಯಸನಿಗಳಾಗಿ¨ªಾರೆ. ಅವರಲ್ಲಿ 70% ಮಂದಿ ಸಿಗರೇಟ್ ಸೇವನೆಯನ್ನು ನಿಲ್ಲಿಸುತ್ತೇವೆಂದು ಪ್ರತಿಜ್ಞೆ ಮಾಡಿದರೂ ಕೇವಲ 5% ಮಂದಿ ಮಾತ್ರ ಆ ಚಟವನ್ನು ನಿಲ್ಲಿಸುವುದರಲ್ಲಿ ಯಶಸ್ವಿಯಾದರು.
ವಿಜ್ಞಾನಿಗಳು 15 ಮಂದಿ ಸಿಗರೇಟ್ ಸೇದುವ ವರಲ್ಲಿ ನಿಕೋಟಿನ್ ಅವಲಂಬನೆ ಮಟ್ಟಗಳನ್ನು ಗುರುತಿಸಿ, ನಂತರ ಅವರ ಮಿದುಳುಗಳನ್ನು "ಪಿ.ಇ.ಟಿ'ಯ (Positron Emission Tomography)ಅವಲೋಕನಕ್ಕೆ ಒಳಪಡಿಸಿದರು. ಆಗ ವ್ಯಸನಿಗಳ ಮಿದುಳಿನ ಮೂರು ನಿಗದಿತ ಪ್ರದೇಶಗಳ ಚಟುವಟಿಕೆಯಲ್ಲಿ ಮಾತ್ರ ವೈಪರೀತ್ಯಗಳು ಕಂಡುಬಂದವು.
ಆದರೆ ಅವರು ಸಿಗರೇಟಿನ ಸೇವನೆಗೆ ಆದ್ಯತೆ ಕೊಡದಿ¨ªಾಗ ಮಾತ್ರ ಆ ಪ್ರದೇಶಗಳು ಯಾವ ರೀತಿಯ ವೈಪರೀತ್ಯಗಳನ್ನೂ ಪ್ರದರ್ಶಿಸಲಿಲ್ಲ!
ಸಿಗರೇಟ್ ವ್ಯಸನಕ್ಕೆ ಸ್ಪಂದಿಸಿದ ಆ ಮೂರು ಪ್ರದೇಶಗಳಲ್ಲಿ "ಥ್ಯಾಲಮಸ್" (thalamus) ಒಂದಾಗಿದೆ. ಥ್ಯಾಲಮನ್ ಸೆಫಲಾನ್‌ನ ಬೆನ್ನಬದಿ ವಲಯದ ಹೆಚ್ಚು ದೊಡ್ಡದಾದ ಹಾಗೂ ಹೆಚ್ಚು ಕೆಳಗಿನ ಭಾಗ ಅದಾಗಿದೆ.
ಆ ವೇಗಗಳನ್ನು ಪ್ರಜ್ಞಾಪೂರ್ವಕ ಸಂವೇದನೆಗಳನ್ನಾಗಿ ಪರಿವರ್ತಿಸುವ ಪ್ರದೇಶ ಮೊದಲನೆಯ ವಲಯವಾಗಿದೆ. ಅದನ್ನು ಮಿದುಳಿನ ಶ್ರೇಷ್ಠ ಪ್ರಸಾರ ಕೇಂದ್ರ ಎಂಬುದಾಗಿ ಪರಿಗಣಿಸಲಾಗಿದೆ.
ಮಿದುಳಿನ ಸುಖಾನುಭವದ ವ್ಯವಸ್ಥೆಯ ಒಂದು ಭಾಗವಾಗಿರುವ "ಸ್ಟ್ರೀಟಮ್' (striatum) ವ್ಯಸನಿಗಳಲ್ಲಿ ಸ್ಪಂದಿಸುವ ಎರಡನೆಯ ವಲಯವಾಗಿದೆ. ಆ ವಲಯ ಇಂದ್ರಿಯ ಸುಖಕ್ಕಾಗಿ ಸಿಗರೇಟ್ ಸೇವಿಸುವವರಿಗೆ ಆನಂದ ನೀಡುತ್ತದೆ.
ಸಿಗರೇಟ್ ವ್ಯಸನಿಗಳ ಮಿದುಳಲ್ಲಿ ಅದಕ್ಕಾಗಿ ಸ್ಪಂದಿಸುವ ಮಿದುಳಿನ ಹೊರಕವಚ "ಕಾರ್ಟೆಕ್ಸ್' (cortex) ಅಂತಹ ಮೂರನೆಯ ವಲಯವಾಗಿದೆ. ಆ ವಲಯ ಯಾವುದೇ ವ್ಯಕ್ತಿಯ ಸ್ವಯಂನಿಯಂತ್ರಣೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಉದ್ವೇಕಗೊಳ್ಳುವಿಕೆಯ ಪ್ರಕ್ರಿಯೆಗಳಿಗೆ ಕಾರಣವಾಗಿದೆ.
ಸಿಗರೇಟ್ ವ್ಯಸನಿಗಳ ಮೇಲೆ ನಡೆಸಿದ ಅಧ್ಯಯನದ ಇನ್ನೊಂದು ವರದಿ 2007ರ ಜುಲೈ 3ರಂದು ಪ್ರಕಟವಾಯಿತು. ಆ ಅಧ್ಯಯನದ ಅಂಕಿ-ಅಂಶಗಳು ಅಚ್ಚರಿಗೊಳಿಸುತ್ತವೆ. ಯುವಪೀಳಿಗೆಯ ಸಿಗರೇಟ್ ವ್ಯಸನಿಗಳಲ್ಲಿ ಶೇಕಡ 10 ಭಾಗದ ವ್ಯಕ್ತಿಗಳು ಮೊದಲ ಸಿಗರೇಟ್ ಸೇವನೆಯ ನಂತರದ ಎರಡೇ ದಿನಗಳಲ್ಲಿ ಸಿಗರೇಟ್ ವ್ಯಸನಕ್ಕೆ ಈಡಾದರು.
ಇನ್ನೊಂದು ಸ್ವಾರಸ್ಯ ಸಂಗತಿಯೆಂದರೆ ಒಂದು ತಿಂಗಳಲ್ಲಿ ಕೆಲವು ಸಿಗರೇಟ್‌ಗಳನ್ನು ಸೇದುವ ವಯಸ್ಕರು ಅದರಿಂದ ಹೊರಗೆ ಬರುವ ಪ್ರಯತ್ನಿಸಲು ಕಷ್ಟ ಪಡುತ್ತಿದ್ದುದನ್ನು ವಿಜ್ಞಾನಿಗಳು ಮನಗಂಡರು.
ಇವೆಲ್ಲವೂ ಸಿಗರೇಟ್ ವ್ಯಸನಿಗಳಿಗೆ ಸಂಬಂಧಪಟ್ಟ ಮಿದುಳಿನ ಅಧ್ಯಯನದ ವಿಷಯವಾದರೆ, ಪಾರಿವಾಳಗಳ ಮಿದುಳಿನ ಕಾರ್ಯಾಚರಣೆಯ ಬಗ್ಗೆ 2011ರ ಡಿಸೆಂಬರ್ 24ರಂದು ವರದಿಯಾಗಿರುವ ಸುದ್ದಿ ಕುತೂಹಲ ಮೂಡಿಸುತ್ತದೆ.
ಮನೆಯ ಮುಂದೆ ಹರಡಿರುವ ಕಾಳುಗಳನ್ನು ತಿನ್ನುವ ಪಾರಿವಾಳಗಳನ್ನು ಹಳ್ಳಿ ವ್ಯಕ್ತಿಗಳು ಕಾಣುವ ಸಾಮಾನ್ಯ ದೃಶ್ಯವಾಗಿದೆ. ಏಕೆಂದರೆ ಕಾಂಕ್ರೀಟ್ ಕಾಡಾಗುತ್ತಿರುವ ಬೆಂಗಳೂರಿನಂತಹ ನಗರಗಳಲ್ಲಿ ಅಂತಹ ಪಕ್ಷಿಗಳನ್ನು ಕಾಣುವುದು ವಿರಳ ಎನ್ನಬಹುದು.
ಅದೇನೇ ಇರಲಿ, ಸಂಶೋಧಕರು ಆ ಪಕ್ಷಿಗಳ ಮಿದುಳಿನ ಇನ್ನೊಂದು ಶಕ್ತಿಯನ್ನು ಕಂಡುಹಿಡಿದಿ¨ªಾರೆ. ವಿಜ್ಞಾನಿಗಳ ಒಂದು ಅಧ್ಯಯನದ ಪ್ರಕಾರ ಒಂಬತ್ತು ವಸ್ತುಗಳ ಬಿಂಬಗಳಲ್ಲಿರುವ ಒಂದೇ ರೀತಿಯ ಎರಡು ಬಿಂಬಗಳನ್ನು ಅವು ಹೋಲಿಸುವ ಶಕ್ತಿಯನ್ನು ಹೊಂದಿದೆ.
ಅಷ್ಟೇ ಅಲ್ಲ ಆ ವಸ್ತುಗಳನ್ನು ಕ್ರಮಾನುಗತವಾಗಿ, ಅಂದರೆ ಕಡಿಮೆ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯವರೆವಿಗೆ ಅವು ಜೋಡಿಸುತ್ತವೆ. ಅವುಗಳ ಹಾಗೆ ಎಣಿಸುವ ಸಾಮರ್ಥ್ಯ ಕೋತಿಗಳ ಸಾಮರ್ಥ್ಯಕ್ಕೆ ಸಮನಾಗಿದೆ.
ಇನ್ನೊಂದು ಸ್ವಾರಸ್ಯ ಸಂಗತಿಯೆಂದರೆ ವಸ್ತುಗಳು ದೂರವಿದ್ದಷ್ಟೂ ಅವುಗಳ ನಿಖರತೆ ಹೆಚ್ಚುವುದು ಎಂಬುದಾಗಿ ನ್ಯೂಝೀಲೆಂಡಿನ ಒಟೋಗೋ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಡಾಮಿಯನ್ ಸ್ಕಾಫ್ì ಕಂಡುಹಿಡಿದಿ¨ªಾರೆ.