ಅಶೋಕ್ ಕುಮಾರ್ ಎ. | Jan 29, 2012
ಗೂಗಲ್ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಪ್ರತಿಯೋರ್ವನಿಗೂ ತನಗನಿಸಿದ್ದನ್ನು ವ್ಯಕ್ತಪಡಿಸಲು ಅಂತರ್ಜಾಲ ಮುಕ್ತವಿರಬೇಕು. ಹಾಗಾಗಿ ಅಂತಜಾìಲದಲ್ಲಿ ಪ್ರಕಟವಾಗುವ ವಿಷಯಗಳನ್ನು ಪರಿಶೀಲಿಸಬೇಕು, ಅದನ್ನು ಶೋಧಿಸಿ ಅನಂತರವಷ್ಟೇ ಬಹಿರಂಗಗೊಳಿಸಬೇಕು ಎನ್ನುವ ಸರ್ಕಾರದ ಹುಕುಂ ಪಾಲಿಸಲು ಸಾಧ್ಯವಿಲ್ಲವೆಂದು ಗೂಗಲ್ ಸ್ಪಷ್ಟವಾಗಿ ಹೇಳಿದೆ. ಭಾರತ ಸರ್ಕಾರವು ಗೂಗಲ್, ಫೇಸ್‌ಬುಕ್ ಸೇರಿದಂತೆ 21 ಸಾಮಾಜಿಕ ತಾಣಗಳು ಆಕ್ಷೇಪಾರ್ಹ ಮಾಹಿತಿಗಳನ್ನು ತಮ್ಮ ತಾಣದಲ್ಲಿ ಪ್ರಕಟಿಸುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಟ್ಯಾಬ್ಲೆಟ್ ತಂದೀತು ನೋವು!
ಟ್ಯಾಬ್ಲೆಟ್ ಸಾಧನದ ಬಳಕೆ ಮಾಡುವಾಗ, ಕುತ್ತಿಗೆ ನೋವು ತಂದುಕೊಳ್ಳುವ ಅಪಾಯ ಇದೆ. ಲ್ಯಾಪ್‌ಟಾಪ್‌ನ್ನು ತೊಡೆ ಮೇಲೆ ಇಟ್ಟು ಬಳಸುವಂತೆ ಟ್ಯಾಬ್ಲೆಟನ್ನೂ ಬಳಸಿದರೆ ಕುತ್ತಿಗೆ ನೋವು ಬಂದೀತು ಎನ್ನುವುದು ಸಂಶೋಧಕರ ಎಚ್ಚರಿಕೆ. ಟ್ಯಾಬ್ಲೆಟ್‌ನ್ನು ಮೇಜಿನ ಮೇಲಿರಿಸಿ, ಓರೆಯಾಗಿಸಿ, ಅದರತ್ತ ದೃಷ್ಟಿ ಹರಿಸಿದರೆ, ಬಳಸುವವನ ಕುತ್ತಿಗೆಗೆ ಕ್ಷೇಮ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಟ್ಯಾಬ್ಲೆಟ್ ಬಳಸುವ ಹದಿನೈದು ಬಳಕೆದಾರರ ಅಧ್ಯಯನ ಮಾಡಿದಾಗ ಅವರು ಸಾಮಾನ್ಯವಾಗಿ ನಾಲ್ಕು ವಿಧಗಳಲ್ಲಿ ಟ್ಯಾಬ್ಲೆಟ್ ಹಿಡಿಯುವುದು ಕಂಡುಬಂತು. ತೊಡೆ ಮೇಲಿಟ್ಟು, ಟ್ಯಾಬ್ಲೆಟ್‌ನ್ನು ಚೀಲದಲ್ಲಿರಿಸಿ ತೊಡೆ ಮೇಲಿಟ್ಟು, ಮೇಜಿನ ಮೇಲೆ ಟ್ಯಾಬ್ಲೆಟ್‌ನ ಚೀಲದಲ್ಲಿ ಓರೆಯಾಗಿರಿಸಿ, ಎರಡೂ ಕೈಗಳಿಂದ ಅದರ ತೆರೆಯ ಮೇಲೆ ಕೆಲಸ ಮಾಡುವುದು ಮತ್ತು ಟ್ಯಾಬ್ಲೆಟ್‌ನ್ನು ಅದರ ಚೀಲದಲ್ಲಿ ಓರೆಯಾಗಿರಿಸಿ ನೋಡುವುದು ಇವು ಜನರು ಟ್ಯಾಬ್ಲೆಟ್ ಬಳಸುವ ವಿಧಾನಗಳು. ಟ್ಯಾಬ್ಲೆಟ್‌ನ್ನು ಮೇಜಿನ ಮೇಲೆ ಬಹಳ ಓರೆಯಾಗಿರಿಸಿ ಬಳಸುವುದು ಕುತ್ತಿಗೆಯ ಸ್ನಾಯುಗಳಿಗೆ ಕ್ಷೇಮ ಎನ್ನುವುದು ಸಂಶೋಧಕರ ಕಿವಿಮಾತು.
ಸಾಮಾಜಿಕ ಜಾಲತಾಣ: ಮಿಲಿಟರಿ ನಿಯಮ
ಫೇಸ್‌ಬುಕ್, ಅರ್ಕುಟ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮಿಲಿಟರಿ ಅಧಿಕಾರಿಗಳ ಖಾತೆಗಳು ಸಕ್ರಿಯವಾಗಿವೆ. ಮಿಲಿಟರಿಯು ತನ್ನ ಅಧಿಕಾರಿ ಮತ್ತು ಸೈನಿಕರು ಈ ತಾಣಗಳಲ್ಲಿ ವೈಯಕ್ತಿಕ ಖಾತೆಗಳನ್ನು ಹೊಂದುವುದಕ್ಕೆ ನಿಷೇಧ ಹೇರಿಲ್ಲವಾದರೂ ಬಿಗಿಯಾದ ನಿಯಮಗಳನ್ನು ಅನುಷ್ಠಾನಕ್ಕೆ ತಂದಿದೆ. ಹಲವು ಅಧಿಕಾರಿಗಳ ಖಾತೆಗಳು ಹ್ಯಾಕ್ ಆದ ಅನಂತರ ಈ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಮಿಲಿಟರಿ ಎಚ್ಚರಿಕೆ ವಹಿಸದಿದ್ದರೆ ಇದರಿಂದ ದೇಶದ ಭದ್ರತೆಗೆ ಅಪಾಯ ನಿಶ್ಚಿತ. ಅಧಿಕಾರಿಗಳು ತಮ್ಮ ಕೆಲಸದ ಬಗೆಗಿನ ವಿವರಗಳನ್ನು ನೀಡುವುದಾಗಲೀ, ಅದರ ಬಗ್ಗೆ ಚರ್ಚಿಸುವುದಕ್ಕಾಗಲೀ ನಿಷೇಧ ಇದೆ. ತಾವಿರುವ ಪ್ರದೇಶ, ಮಾಡುವ ಕೆಲಸ, ಕರ್ತವ್ಯದ ವಿವರಗಳು, ಮಿಲಿಟರಿಯ ಕೆಲಸ ಕಾರ್ಯಗಳು ಇವ್ಯಾವುದನ್ನೂ ಬಹಿರಂಗಗೊಳಿಸಬಾರದು ಎನ್ನುವ ನಿಯಮವಿದೆ.
ಗೂಗಲ್ ಪ್ಲಸ್: ಎಳೆಯರಿಗೂ ತೆರೆದಿದೆ
ಗೂಗಲ್ ಪ್ಲಸ್ ಇದುವರೆಗೂ ಹದಿನೆಂಟು ವರ್ಷ ಮೀರಿದವರಿಗೆ ಮಾತ್ರ ತೆರೆದಿತ್ತು. ಇದೀಗ ಗೂಗಲ್ ಪ್ಲಸ್ ತನ್ನ ಬಳಕೆದಾರ ಹದಿಮೂರು ವರ್ಷ ಮೀರಿದವರಾದರೆ ಸಾಕು ಎಂದು ತನ್ನ ನಿಯಮ ಸಡಿಲಿಸಿದೆ. ಹದಿಮೂರು ವರ್ಷ ಮೀರಿದವರಿಗೆ ಫೇಸ್‌ಬುಕ್ ತಾಣಕ್ಕೂ ಪ್ರವೇಶಾವಕಾಶ ನೀಡುತ್ತದೆ. ಹಾಗೆಂದು ಹದಿಮೂರು ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಈ ತಾಣಗಳಲ್ಲಿ ಖಾತೆ ಹೊಂದಿಲ್ಲವೆಂದಲ್ಲ. ಹೆತ್ತವರ ಆಕ್ಷೇಪ ಇಲ್ಲವಾದರೆ ಇನ್ನೂ ಎಳೆಯರು ಇಲ್ಲಿ ಖಾತೆ ಹೊಂದಿರುವುದು ಸಾಮಾನ್ಯ. ಸುಳ್ಳು ವಿವರ ನೀಡಿ ಖಾತೆ ತೆರೆಯುವವರಂತೂ ಇದ್ದೇ ಇರುತ್ತಾರೆ. ಗೂಗಲ್ ಪ್ಲಸ್ ಎಳೆಯರನ್ನು ತನ್ನ ಸದಸ್ಯರಾಗಲು ಬಿಟ್ಟುಕೊಂಡಿದ್ದರೂ, ಅವರ ಖಾತೆಗಳ ಖಾಸಗಿತನದ ನಿಯಮಗಳನ್ನು ಬಿಗಿಯಾಗಿ ಪಾಲಿಸುತ್ತದೆ. ಅವರು ಬಯಸಿದ ವಿನಾ ಇತರರು ಅವರ ಜತೆ ಪಟ್ಟಾಂಗ ಹೊಡಿಯಲು ಬಿಡದೆ, ಅಪರಿಚಿತರಿಂದ ಎಳೆಯರನ್ನು ರಕ್ಷಿಸುತ್ತದೆ. ಹಾಗೆಯೇ ಅವರ ಚಿತ್ರ, ವಿವರಗಳು ಅವರ ಖಾಸಗಿ ಗುಂಪಿಗೆ ಹೊರತಾದವರಿಗೆ ತಲುಪದು. ಎಳೆಯ ಸದಸ್ಯರು ಬಯಸಿದ ಹೊರತು ಅವರ ಜತೆ ಇತರರಿಗೆ ಯಾವ ರೀತಿಯೂ ವ್ಯವಹರಿಸಲು ಸಾಧ್ಯವಾಗದಂತೆ ರೀತಿ ನಿಯಮಗಳನ್ನು ವಿಧಿಸಿ ಗೂಗಲ್ ಪ್ಲಸ್ ಎಳೆಯರ ಶೋಷಣೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ಳಲು ಹಿಂದೆ ಬಿದ್ದಿಲ್ಲ.
ಆಧಾರಕ್ಕೆ ಹೊಸ ಆಧಾರ

ಆಧಾರ್ ಎಂದೇ ಜನಪ್ರಿಯವಾಗಿರುವ ವಿಶಿಷ್ಟ ಗುರುತು ಸಂಖ್ಯೆ ಯೋಜನೆಯ ಬಗ್ಗೆ ಎದ್ದಿದ್ದ ಪ್ರಶ್ನಾರ್ಥಕ ಚಿಹ್ನೆಯೀಗ ಮಾಯವಾಗಿದೆ. ಬಹು ನಿರೀಕ್ಷೆಯೊಂದಿಗೆ ನಂದನ್ ನಿಲೇಕಣಿ ಸಾರಥ್ಯದೊಂದಿಗೆ ಆರಂಭವಾಗಿದ್ದ ಆಧಾರ್ ಯೋಜನೆಯು ಮುಂದುವರಿಯುತ್ತದೋ ಇಲ್ಲವೋ ಎನ್ನುವ ಅನುಮಾನವಿತ್ತು. ರಾಷ್ಟ್ರೀಯ ಜನಸಂಖ್ಯಾ ಯೋಜನೆ ಮತ್ತು ಆಧಾರ್ ಎರಡೂ ಭಾರತೀಯ ನಾಗರಿಕರಿಗೆ ತಮ್ಮ ಸಾಚಾತನ ಸಿದ್ಧಪಡಿಸಲು ಅವಕಾಶ ನೀಡುತ್ತಿದ್ದುವು. ಆಧಾರ್ ಯೋಜನೆಯು ಖಾಸಗಿಯವರಿಂದ ನಿರ್ವಹಿಸಲ್ಪಡುವುದರಿಂದ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎನ್ನುವ ವಾದ ಇತ್ತು. ಹಾಗಾಗಿ ಸಂಧಾನದ ಬಳಿಕ, ಆಧಾರ್ ತನ್ನ ನಿಯಮಗಳನ್ನು ಬಿಗಿಗೊಳಿಸಿ, ಆವಶ್ಯಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಒಪ್ಪಿದೆ. ಈಗ 5,800 ಕೋ. ರೂ.ಗಳ ನಿಧಿಯನ್ನು ಹೊಸದಾಗಿ ಒದಗಿಸಿ, ಮುಂದಿನ ವರ್ಷದ ವೇಳೆ ಇನ್ನೂ 40 ಕೋಟಿ ಜನರಿಗೆ ಆಧಾರ್ ಕಾರ್ಡ್ ಒದಗಿಸುವ ಅವಕಾಶ ನೀಡಲು ಕೇಂದ್ರ ಮಂತ್ರಿಮಂಡಲ ಸಮ್ಮತಿಸಿದೆ. 16 ರಾಜ್ಯಗಳಲ್ಲಿ ಆಧಾರ್ ಸಕ್ರಿಯವಾಗಿರುತ್ತದೆ. ಇನ್ನುಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ಯೋಜನೆಯು ಜನರ ವಿವರಗಳನ್ನು ಸಂಗ್ರಹಿಸಲಿದೆ. ಆಧಾರ್ ಯೋಜನೆಯ ಸಂಖ್ಯೆ ಪಡೆದವರು ಅದನ್ನು ನೀಡಿ ರಾಷ್ಟ್ರೀಯ ಜನಸಂಖ್ಯೆ ಯೋಜನೆಗೂ ಒಳಪಡಬೇಕಿದೆ.
ಸೆನ್ಸಾರ್‌ಗೆ ಟ್ವಿಟರ್ ಅಸ್ತು, ಒಲ್ಲೆನೆಂದ ಗೂಗಲ್

ಗೂಗಲ್ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಪ್ರತಿಯೋ ರ್ವನಿಗೂ ತನಗನಿಸಿದ್ದನ್ನು ವ್ಯಕ್ತಪಡಿಸಲು ಅಂತರ್ಜಾಲ ಮುಕ್ತವಿರಬೇಕು. ಹಾಗಾಗಿ ಅಂತಜಾìಲದಲ್ಲಿ ಪ್ರಕಟವಾಗುವ ವಿಷಯಗಳನ್ನು ಪರಿಶೀಲಿಸಬೇಕು, ಅದನ್ನು ಶೋಧಿಸಿ ಅನಂತರವಷ್ಟೇ ಬಹಿರಂಗಗೊಳಿಸಬೇಕು ಎನ್ನುವ ಸರ್ಕಾರದ ಹುಕುಂ ಪಾಲಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಭಾರತದ ಗೂಗಲ್ ಅಧಿಕಾರಿ ನಿಕೇಶ್ ಅರೋರಾ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಭಾರತ ಸರ್ಕಾರವು ಗೂಗಲ್, ಫೇಸ್‌ಬುಕ್ ಸೇರಿದಂತೆ 21 ಸಾಮಾಜಿಕ ತಾಣಗಳು ಆಕ್ಷೇಪಾರ್ಹ ಮಾಹಿತಿಗಳನ್ನು ತಮ್ಮ ತಾಣದಲ್ಲಿ ಪ್ರಕಟಿಸುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಸರ್ಕಾರ ತಾನು ಬಯಸುವುದು ಸೆನ್ಸಾರ್ ಅಲ್ಲ, ಪ್ರಕಟ ವಾದ ಮಾಹಿತಿಗಳ ವಿರುದ್ಧ ಆಕ್ಷೇಪವಿದ್ದಾಗ ಅವನ್ನು ಕಿತ್ತೆಸೆಯಲು ಅವಕಾಶ ಇರಬೇಕು ಎನ್ನುವ ವಿವರಣೆ ನೀಡಿದೆ. ಅಂತರ್ಜಾಲ ವಿರುದ್ಧ ನಿಯಂತ್ರಣ ಅಥವಾ ಅದನ್ನು ಸೆನ್ಸಾರ್‌ಗೊಳಪಡಿಸುವ ಉದ್ದೇಶ ತನಗಿಲ್ಲ ಎನ್ನುವ ಸಮಜಾಯಿಷಿ ಸರ್ಕಾರದ್ದು.
ಟ್ವಿಟರ್ ತಾಣ ಇದಕ್ಕೆ ತುಸು ವಿರುದ್ಧ ನಿಲುವು ಪ್ರಕಟಿಸಿ ಬಳಕೆದಾರರ ಹುಬ್ಬೇರುವಂತೆ ಮಾಡಿದೆ. ಸದ್ಯ ನೂರು ದಶಲಕ್ಷ ಬಳಕೆದಾರರ ಕಣ್ಮಣಿಯಾಗಿರುವ ಟ್ವಿಟರ್, ತನ್ನ ತಾಣಗಳಲ್ಲಿ ಜನರು ಪ್ರಕಟಿಸಿದ ವಿಚಾರಗಳ ಬಗ್ಗೆ ಇತರರು ಆಕ್ಷೇಪ ವ್ಯಕ್ತಪಡಿಸಿದರೆ ಅವನ್ನು ಆ ದೇಶದಲ್ಲಿ ಕಣ್ಮರೆಯಾಗಿಸಲು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ದೇಶವಾರು ನೆಲೆಯಲ್ಲಿ ಈ ಸೆನ್ಸಾರ್ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಟ್ವಿಟರ್ ಒಲವು ತೋರಿದೆ. ನಿಜಕ್ಕಾದರೆ ಗೂಗಲ್ ನೀತಿಯೂ ಹೀಗೆಯೇ ಇದೆ. ಅದು ಕೂಡ ಸಂದೇಶಗಳ ಬಗ್ಗೆ ಆಕ್ಷೇಪ ಬಂದಾಗ ಇದೇ ರೀತಿ ವ್ಯವಹರಿಸುತ್ತದೆ. ಟ್ವಿಟರ್ ಸಂದೇಶಗಳ ಬಗ್ಗೆ ಆಕ್ಷೇಪ ಇದ್ದವರು chillingeffects.org ತಾಣದ ಮೂಲಕ ಅದನ್ನು ಟ್ವಿಟರ್ ಗಮನಕ್ಕೆ ತರಬಹುದಾಗಿದೆ.
ನಿಷೇಧಿತ ತಾಣಗಳನ್ನು ಶೋಧದಲ್ಲಿ ಒಳಪಡಿಸದೆ ಅವುಗಳ ಮಾಹಿತಿಯು ಪ್ರಸಾರವಾಗುವುದನ್ನು ತಡೆಯಲು ಶೋಧ ಸೇವೆಗಳ ಮೇಲೆ ಒತ್ತಡ ಹೆಚ್ಚಿದೆ. ಲೈಸನ್ಸ್ ನಿಯಮ ಉಲ್ಲಂ ಸಿದ ಮಾಹಿತಿಗಳನ್ನು ಪಸರಿಸುವ ತಾಣಗಳ ಕ್ರಮಾಂಕಗಳನ್ನು ಕೆಳಗಿರಿಸಿ, ಅವುಗಳ ಮೇಲೆ ಅಪರೋಕ್ಷ ನಿಯಂತ್ರಣ ಸಾಧಿಸುವ ಸಲಹೆಯೂ ಬಂದಿದೆ.