Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಂಡದ್ದು ಕೇಳಿದ್ದು ಅನಿಸಿದ್ದು...
    • ಚೊಚ್ಚಲ ಯುವ ಕಲಾಮಣಿ ಪ್ರಶಸ್ತಿಯನ್ನು ಪಡೆದಿರುವುದು ತುಂಬಾ ಹೆಮ್ಮೆ ತಂದಿದೆ.

      • Udayavani | Feb 03, 2012

        ಕಾರ್ಯಕ್ರಮ ಸಂಯೋಜನೆಯಲ್ಲಿ ತೋರಿದ ಪ್ರಯೋಗಶೀಲತೆಯಿಂದ ರಾಗಸುಧಾರಸ ಸಂಗೀತೋತ್ಸವ ರಸಿಕರನ್ನು ತನ್ನತ್ತ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ ಎನ್ನುವುದಕ್ಕೆ ನಾಲ್ಕುದಿನಗಳೂ ತುಂಬಿತುಳುಕಿದ ಸಭಾಂಗಣ ಸಾಕ್ಷಿ. ಪ್ರತಿ ಭಾಗದಲ್ಲೂ ಕಾಣಿಸಿದ ವೃತ್ತಿಪರತೆ, ಕಾರ್ಯಕ್ಷಮತೆ ಮತ್ತು ಮುಂದಾಲೋಚನೆ ಮೆಚ್ಚತಕ್ಕ ಅಂಶಗಳು.

        ದ್ವಂದ್ವ ಗಾಯನ, ಜುಗಲ್‌ಬಂದಿ, ಹಿಂದೂಸ್ತಾನಿ ಕರ್ನಾಟಕ ಸಾಂಪ್ರದಾಯಿಕ ಕಛೇರಿಗಳು ಚೆನ್ನಾಗಿಯೇ ನಡೆದವು. ಜುಗಲ್‌ಬಂದಿಯಲ್ಲಿ ಸಮಾನ ಸ್ವರೂಪ ಮತ್ತು ಗುಣಧರ್ಮದ ವಾದ್ಯಗಳು ಮುಖಾ ಮುಖೀಯಾದರೆ ಪ್ರತಿಸ್ಪಂದನದಲ್ಲಿ ಹೆಚ್ಚಿನ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯ, ಪ್ರಸ್ತುತಿ ಹೆಚ್ಚು ಆಪ್ಯಾಯಮಾನ ಎನಿಸಬಹುದು.

        ಈಶ್ವರಯ್ಯ, ಹಿರಿಯ ಸಂಗೀತ ವಿಮರ್ಶಕರು

        ನಮ್ಮ ಜಿಲ್ಲೆಯಿಂದ ಪ್ರಪ್ರಥಮ ಬಾರಿಗೆ ನಾದಸ್ವರ ವಾದ್ಯ ವನ್ನು ವಿದೇಶಕ್ಕೆ ಕೊಂಡು ಹೋದ, ನಮಗೆಲ್ಲರಿಗೂ ಗುರು ಸಮಾನರಾದ ನಾಗೇಶ್‌ ಎ. ಬಪ್ಪನಾಡು ಅವರನ್ನು ಅವರ ಹಾಗೂ ಉ| ರಫೀಕ್‌ ಖಾನ್‌ರವರ ಜುಗಲ್‌ಬಂದಿ ಕಾರ್ಯಕ್ರಮದಂದು ಸಮ್ಮಾನಿಸಲು ಅವಕಾಶ ನೀಡಬೇಕೆಂಬ ನಮ್ಮ ಮನವಿಯನ್ನು ಮನ್ನಿಸಿದ್ದು ಸಂಘಟಕರ ವಿಶಾಲ ಹೃದಯ ವನ್ನು ತೋರಿಸುತ್ತದೆ. ಕಾರ್ಯಕ್ರಮದುದ್ದಕ್ಕೂ ಅಚ್ಚುಕಟ್ಟಿನ ವ್ಯವಸ್ಥೆ ಎದ್ದು ಕಾಣುವಂತಿತ್ತು.

        ನಾರಾಯಣ ಪೊರ್ಕೊಡಿ, ಸ್ಯಾಕೊಫೋನ್‌ ಕಲಾವಿದ

        ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತಗಳೆರಡನ್ನೂ ಸಂಘಟಿಸುತ್ತಿರುವ ನಗರದ ಸಂಸ್ಥೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ. ಸಂಗೀತವನ್ನು ಆಲಿಸುವ ಸಾಮಾನ್ಯ ಶ್ರೋತೃ ವರ್ಗ ನಗರದಲ್ಲಿ ನಿರ್ಮಾಣವಾಗಬೇಕು ಎಂಬ ಸಂಘಟಕರ ಆಶಯ ನಮ್ಮ ಜಿಲ್ಲೆಗೆ ದೊಡ್ಡ ಲಾಭ ಆಗಲಿದೆ. ಜೊತೆಗೆ ಸಿತಾರ್‌ - ನಾಗಸ್ವರ ದಂತಹ ವಾದ್ಯಗಳನ್ನು ಒಂದೆಡೆ ತರುವ ಪ್ರಯೋಗ ಅತ್ಯಂತ ಸಾಧುವಾದುದು. ರಾಗ ಸುಧಾರಸ ಅತ್ಯುತ್ತಮ ಚಿಂತನೆ ಗಳನ್ನೊಳಗೊಂಡ ಕಾರ್ಯ ಕ್ರಮ.

        ಉ| ರಫೀಕ್‌ ಖಾನ್‌,  ಸಿತಾರ್‌ ಕಲಾವಿದ

        ಈ ವರ್ಷದಿಂದ ಪ್ರದಾನ ಮಾಡಲು ಆರಂಭಿಸಿರುವ  ಯುವ ಕಲಾಮಣಿ ಪ್ರಶಸ್ತಿಯನ್ನು ಕಲಾವಿಮರ್ಶಕ ಎ. ಈಶ್ವರಯ್ಯ ಅವರ ನೇತೃತ್ವದ ಸಮಿತಿಯ ಸೂಚನೆಯ ಮೇರೆಗೆ ನನಗೆ ನೀಡಲಾಗಿದೆ. ಚೊಚ್ಚಲ ಯುವ ಕಲಾಮಣಿ ಪ್ರಶಸ್ತಿಯನ್ನು ಪಡೆದಿರುವುದು ತುಂಬಾ ಹೆಮ್ಮೆ ತಂದಿದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯು ಯುವ ಕಲಾದರ ಬೆಳವಣಿಗೆ ಸ್ಫೂರ್ತಿಯಾಗಲೆಂದು ನನ್ನ ಆಶಯ.

        ಪ್ರಾರ್ಥನಾ ಸಾಯಿ ನರಸಿಂಹನ್‌, ಯುವ ಗಾಯಕಿ

        ಯಾವ ಕಲಾದರಿಗೆ ಯಾರನ್ನು ಪಕ್ಕ ವಾದ್ಯಕ್ಕೆ ನಿಗದಿಪಡಿಸಬೇಕೆಂಬುದು ಒಂದು ವಿಶೇಷ ಕಲೆ. ಕಾರ್ಯಕ್ರಮದ ಯಶಸ್ಸಿನ ದೃಷ್ಟಿಯಿಂದ ಇದು ಅತ್ಯಂತ ಮುಖ್ಯವಾದುದು. ಇದು ರಾಗ ಸುಧಾ ರಸದಲ್ಲಿ ಎದ್ದು ಕಾಣುತ್ತಿತ್ತು. ಅಲ್ಲದೆ, ಈ ಬಾರಿಯ ಸಂಗೀತೋತ್ಸವದಲ್ಲಿ ಹಲವಾರು ಪ್ರಯೋಗಗಳು ನಡೆದಿವೆ, ಹಾಗೂ ಅತ್ಯಂತ ಯಶಸ್ವಿಯೂ ಆಗಿವೆ. ಮಂಗಳೂರಿನ ಶ್ರೋತೃಗಳ ಗುಣಮಟ್ಟ  ಅತ್ಯುತ್ತಮವಾದುದು. ಕಲಾವಿದನಾಗಿ ನಾನು ಮೆಚ್ಚಿದ ಇನ್ನೊಂದು ಅಂಶವೆಂದರೆ, ಅರ್ಧಕ್ಕಿಂತಲೂ ಹೆಚ್ಚು ಭಾಗ 15-30 ವರ್ಷ ವಯಸ್ಸಿನ ಯುವಕರು ಭಾಗವಹಿಸಿದ್ದುದು, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವಪೂರ್ಣವಾದುದು. 

        ವಿಠಲ ರಾಮ ಮೂರ್ತಿ, ವಯಲಿನ್‌ ವಾದಕರು

        ಕಲಾವಿದರ ಅತ್ಯುತ್ತಮ ಕಲಾ ಪ್ರದರ್ಶನ, ಒಳ್ಳೆಯ ಶ್ರೋತೃವರ್ಗ ಹಾಗೂ ಪ್ರಾಯೋಜಕರಿಂದ ಉತ್ತಮ ಆರ್ಥಿಕ ನೆರವು ಇವು ಸಂಘಟಕರಿಗೆ ಪ್ರೋತ್ಸಾಹ ನೀಡುವ ಅಂಶಗಳು. ಇವೆಲ್ಲವೂ ಈ ಬಾರಿಯ ರಾಗ ಸುಧಾ ರಸ ದಲ್ಲಿ ಅತ್ಯುತ್ತಮವಾಗಿ ಪ್ರಕಟವಾಗಿರುವುದು ಅತ್ಯಂತ ಸಂತೋಷದ ವಿಚಾರ.
        ಉತ್ತಮ ಆರ್ಥಿಕ ನೆರವು ನೀಡಿದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರಿಗೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗೆ ವಿಶೇಷ ಕೃತಜ್ಞತೆಗಳು.

        ಕ್ಯಾ| ಗಣೇಶ್‌ ಕಾರ್ಣಿಕ್‌, ಅಧ್ಯಕ್ಷರು, ಮಣಿ ಕೃಷ್ಣಸ್ವಾಮಿ ಅಕಾಡೆಮಿ

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus