Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅತಿಥಿ ದೇವೋಭವ
    • "ಅತಿಥಿ ದೇವೋ ಭವ'' ಎಂದು ನೀವು ನಂಬಿಕೊಂಡು ಬಂದರೆ ಯಾವ ಸಮಸ್ಯೆಗಳೂ ಎದುರಾಗಲಾರದು.

      • ಭರತ್‌ | Feb 03, 2012

        ಜಾಗತೀಕರಣದ ಭರಾಟೆಯಲ್ಲಿ ಕೂಡು ಕುಟುಂಬಗಳು ದೂರವಾಗಿ ಗಂಡ ಹೆಂಡತಿ ಒಂದೋ ಎರಡೋ ಮಕ್ಕಳು ಮಾತ್ರ ಎಂಬಂತಹ ಸಂಸಾರಗಳೇ ಎಲ್ಲೆಡೆಯೂ ತುಂಬಿವೆ. ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಅಂತಹ ಹಿನ್ನೆಲೆಯಲ್ಲಿ ಆತ್ಮೀಯ ಸಂಬಂಧಿಕರು ಎಲ್ಲರೂ ಒಂದೆಡೆಯಲ್ಲಿ ಸೇರುವುದು ಯಾವುದಾದರೂ ಶುಭ ಸಮಾರಂಭಗಳಲ್ಲಿ ಮಾತ್ರ. ಸಿಗುವುದೇ ಅಪರೂಪ. ಆಗಲಾದರೂ ನಾಲ್ಕು ಒಳ್ಳೆಯ ಮಾತುಗಳನ್ನು ಆಡಬಹುದಲ್ಲವೆ? ಚುಚ್ಚು ಮಾತನಾಡಿ, ಯಾರನ್ನೂ ನೋಯಿಸದೆ ಇರಲು ಕೆಲವು ಸೂತ್ರಗಳನ್ನು ಪಾಲಿಸಲು ಸಾಧ್ಯವಿದೆಯಲ್ಲವೇ?

        - ಆತ್ಮೀಯರು ದೂರದ ಊರಿನಿಂದ ಬಂದಿರುತ್ತಾರೆ. ಹಳೆಯದನ್ನು ಕೆದಕಿ, ಅವರಿಂದ ತಪ್ಪು$ ನಡೆದಿದೆ ಎಂದು ಪದೇ ಪದೇ ನೆನಪಿಸಲು ಹೋಗಬೇಡಿ. ನಿಜವಾಗಿ ಆ ತಪ್ಪಿಗೆ ನೀವೇ ಕಾರಣೀಭೂತರಾಗಿರಬಹುದು. ನಿಮ್ಮ ನಡೆನುಡಿಗಳನ್ನು ಆಗಾಗ ಅವಲೋಕಿಸಿ ವರ್ತನೆಯಲ್ಲಿ ತಿದ್ದುಪಡಿ ತಂದುಕೊಳ್ಳಲು ಪ್ರಯತ್ನಿಸಿ.

        ಯಾವಾಗಲೂ ನೀವೇ ಸರಿ ಎಂದು ನೀವು ಅಂದುಕೊಂಡಿದ್ದರೆ ಅದು ನಿಮ್ಮ ಭಾÅಂತಿ ಅಷ್ಟೆ. ನಮ್ಮದೇ ತಪ್ಪು$, ಬೇರೆಯವರು ಸರಿ ಎಂದು ನೀವು ಯೋಚಿಸಲು ಪ್ರಾರಂಭಿಸಿದರೆ ಯಾರೊಡನೆಯೂ ಮನಸ್ತಾಪ ಉಂಟಾಗಲಾರದು.

         ಸುಳ್ಳು ಹೇಳಲು ಎಂದಿಗೂ ಪ್ರಯತ್ನಿಸಬೇಡಿ. ನಿಮ್ಮ ಮನೆಯ ಶುಭ ಕಾರ್ಯಗಳನ್ನು ಮುಂದೆ ಹಾಕಲು ಬಂದಾಗ ಅಥವಾ ಇನ್ಯಾವುದೋ ತೊಂದರೆ ಉಂಟಾದಾಗ ಅದನ್ನು ಮನೆಗೆ ಬಂದ ಅತಿಥಿಗಳ ಮೇಲೆ ಹಾಕಿ ಅವರ ಮೇಲೆ ಗೂಬೆ ಕೂರಿಸಬೇಡಿ.

         ನಿಮ್ಮಿಂದಾಗಿ ಯಾರಿಗಾದರೂ ಸಹಾಯ ದೊರಕಿದರೆ ಅದನ್ನು ನೀವೇ ಹೇಳಿಕೊಂಡು ತಿರುಗಾಡಬೇಡಿ. ನಿಮ್ಮ ಮೇಲೆ ಅವರಿಗೆ ಖಂಡಿತ ಕೃತಜ್ಞತೆ ಇದ್ದೇ ಇರುವುದು. ಆ ಬಗ್ಗೆ ಸಂಶಯ ಬೇಡ. ಯಾರ ನೌಕರಿಗೋ, ವಿದ್ಯಾಭ್ಯಾಸಕ್ಕೋ ನೀವು ಸಹಾಯಹಸ್ತ ಚಾಚಿದ್ದರೆ ಅದನ್ನು ಬಹಿರಂಗಗೊಳಿಸಬೇಡಿ. ಕಾಣದ ಬೇರೆ ಕೈಗಳೂ ಈ ರೀತಿಯ ಸಹಾಯ ಮಾಡಿರಬಹುದು.

        ನಿಮ್ಮಲ್ಲಿಗೆ ಬಂದವರು ತಮ್ಮದೇ ಆದ ಸಮಸ್ಯೆಗಳಲ್ಲಿ, ಕೆಲಸದ ಒತ್ತಡಗಳಲ್ಲಿ ಇದ್ದರೂ ಎಲ್ಲರೊಡನೆ ನಗುವಿನಿಂದ ಇರಬಹುದು. ಅಂತಹವರ ಮನಸ್ಸನ್ನು ನೋಯಿಸಲು ಪ್ರಯತ್ನಿಸಬೇಡಿ.

         ನಮಗೆ ಇರುವುದು ಎರಡು ಕಿವಿ, ಒಂದು ಬಾಯಿ. ಏಕೆಂದರೆ ನಾವು ಆಲಿಸಬೇಕಾದುದು ಬಹಳಷ್ಟಿರಬಹುದು. ಆದರೆ ಮಾತಾಡಬೇಕಾದುದು ಬಹಳ ಕಡಿಮೆ ಎಂದು ನೆನಪಲ್ಲಿರಲಿ.

         ನಿಮ್ಮ ಮನೆಗೆ ಯಾರಾದರೂ ಬಂದಾಗ ಆದರಾತಿಥ್ಯಗಳಿಂದ ಅವರ ಮನಸ್ಸನ್ನು ಗೆದ್ದು ಅವರು ಹೋದ ಬಳಿಕವೂ ಅವರು ಸದಾ ಮೆಲುಕು ಹಾಕುವಂತಿರಲಿ. ನಿಮ್ಮ ಚುಚ್ಚು ಮಾತಿನಿಂದ, ಅಸಭ್ಯ ನಡವಳಿಕೆಯಿಂದ, ಕೊಂಕು ನುಡಿಗಳಿಂದ ನಾವು ಯಾಕಾದರೂ ಬಂದೆವೆಪ್ಪ , ಎಂದು ಅವರು ನೊಂದುಕೊಳ್ಳುವಂತೆ ವರ್ತಿಸಬೇಡಿ.

         ಆತ್ಮೀಯವಾಗಿ ಬಂದವರು ಮಾತಾಡಿದ್ದನ್ನು ಇನ್ನೊಬ್ಬರೊಡನೆ ಬಣ್ಣ ಹಚ್ಚಿ ಹೇಳಲು ಹೊರಡಬೇಡಿ. ಚಾಡಿ ಹೇಳುವುದು ಎಲ್ಲ ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ನೀಡುವುದಿಲ್ಲ.

         ಬಂದವರ ಕೈಯಿಂದ ಉಡುಗೊರೆಯನ್ನೋ ಮನೆಯ ಸಾಮಾನುಗಳ ಖರೀದಿಯನ್ನೋ ಖಂಡಿತ ನಿರೀಕ್ಷಿಸಬೇಡಿ. ಅವರು ಬೇರೆ ರೀತಿಯಲ್ಲಿ ಖಂಡಿತ ಖರ್ಚು ಮಾಡಿರಬಹುದು. ಹಣದಿಂದ ಎಲ್ಲವನ್ನೂ ಪಡೆಯಬಹುದು, ಪ್ರೀತಿಯೊಂದನ್ನು ಬಿಟ್ಟು ಎಂಬುದು ಸದಾ ನೆನಪಿನಲ್ಲಿರಲಿ.

         ನಿಮಗೆ ನಿಮ್ಮ ಹೆತ್ತವರು ಒಡಹುಟ್ಟಿದವರು ಹೇಗೆ ಆತ್ಮೀಯರೋ ಬೇರೆಯವರಿಗೂ ಹಾಗೆಯೇ ಎಂಬುದು ಗೊತ್ತಲ್ಲವೇ?

        ಬೇರೆಯವರ ಮಕ್ಕಳ ಬಗ್ಗೆ ಠೀಕೆ ಮಾಡಿ ನಮ್ಮ ಮಕ್ಕಳು ಸಭ್ಯರು, ಬುದ್ಧಿವಂತರು ಎಂದು ಹೊಗಳಲು ಹೊರಡಬೇಡಿ. ನಿಮ್ಮ ಮಕ್ಕಳ ಬಗ್ಗೆ ಬೇರೆಯವರೂ ಸುಮಾರಾಗಿ ಮಾತಾಡಬಹುದು ಎಂಬುದು ನೆನಪಿರಲಿ.

        "ಅತಿಥಿ ದೇವೋ ಭವ' ಎಂದು ನೀವು ನಂಬಿಕೊಂಡು ಬಂದರೆ ಯಾವ ಸಮಸ್ಯೆಗಳೂ ಎದುರಾಗಲಾರದು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus