Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಡಿಲು
    • ಮಕ್ಕಳಲ್ಲಿ ಥೈರೋಗ್ಲೊಸಲ್‌ ತೊಂದರೆ....
    • ಬಾಲ್ಯಾವಸ್ಥೆಯಲ್ಲಿ ಮಗುವು ಥೈರೋಗ್ಲೊಸಲ್‌ ಗಡ್ಡೆಯ ತೊಂದರೆಯಿಂದ ಬಳಲುತ್ತದೆ.

      • Udayavani | Feb 03, 2012

        ಭ್ರೂಣದ ಬೆಳವಣಿಗೆಯಾಗುವ ಸಮಯದಲ್ಲಿ ದೇಹದ ಮುಖ್ಯವಾದ ಒಂದು ನಿರ್ನಾಳ ಗ್ರಂಥಿಯಾಗಿರುವ ಥೈರಾಯಿಡ್‌ ಗ್ರಂಥಿಯು ನಾಲಗೆಯ ಕೆಳಭಾಗದಲ್ಲಿ ಉತ್ಪತ್ತಿಯಾಗುತ್ತದೆ. ಭ್ರೂಣ ಬೆಳೆದಂತೆ ಕುತ್ತಿಗೆಯ ಮಧ್ಯಭಾಗದಲ್ಲಿ ಸ್ಥಳಾಂತರಗೊಳ್ಳುತ್ತದೆ. ಹೀಗೆ ನಡೆಯುವ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾದಾಗ ಅದರ ಕೆಲವು ಭಾಗವು ಯಾವುದೇ ಮಧ್ಯದ ಭಾಗದಲ್ಲಿ ಸ್ಥಿತವಾಗಬಹುದು. ಇದರಿಂದ ಬಾಲ್ಯಾವಸ್ಥೆಯಲ್ಲಿ  ಮಗುವು ಥೈರೋಗ್ಲೊಸಲ್‌ ಗಡ್ಡೆಯ ತೊಂದರೆಯಿಂದ ಬಳಲುತ್ತದೆ. ನಾಲಗೆಯೊಂದಿಗೆ ಈ ಗಡ್ಡೆಯು ಚಲಿಸುತ್ತದೆ. ಒತ್ತಡ ಬಿದ್ದಾಗ ಒಡೆದು ಪೂಯಸ್ರಾವ ಉಂಟಾಗುತ್ತದೆ. ಚಿಕಿತ್ಸೆ ನಡೆಸದಿದ್ದಲ್ಲಿ ಪ್ರಯಸಾವ ಉಂಟಾಗುವ ಹುಣ್ಣು ಉಂಟಾಗುತ್ತದೆ. ಆರಂಭದಲ್ಲಿಯೇ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆ ನಡೆಸುವುದು ಇದರ ಮುಖ್ಯ ಪರಿಹಾರೋಪಾಯವಾಗಿದೆ.

        ಇದೇ ರೀತಿಯಲ್ಲಿ ಕುತ್ತಿಗೆ ಭಾಗದಿಂದ ಕಿವಿಯ ಭಾಗದವರೆಗೆ ಭ್ರೂಣಾವಸ್ಥೆಯಲ್ಲಿ ದುಗ್ಧರಸ ನಾಳಗಳು ಬೆಳೆಯುತ್ತಿರುತ್ತವೆ.

        ಆ ಸಮಯದಲ್ಲಿ ಚಿಕ್ಕ ದುಗ್ಧರಸನಾಳಗಳು ಮುಖ್ಯ ದುಗ್ಧರಸನಾಳದೊಂದಿಗೆ ಸೇರಿ ಬೆಳೆಯದಿದ್ದರೆ, ಚಿಕ್ಕನಾಳಗಳ ಜೀವಕೋಶಗಳು ಒಂದಾಗಿ ಜೇನುಗೂಡಿನ ಆಕಾರ ಪಡೆದ ಗಂತಿಯಾಗಿ ಮಾರ್ಪಾಡುತ್ತವೆ. ಹೆಚ್ಚಾಗಿ ಇದು ಶೈಶವಾಸ್ಥೆವಯಲ್ಲಿ ಹೆಚ್ಚಾಗಿ ಕಂಡುಬರುತ್ತದಾದರೂ, ಹುಟ್ಟುವಾಗಲೂ ಕಂಡು ಬರುವುದೂ ಸಾಮಾನ್ಯವಾಗಿದೆ. ಈ ಭಾಗದಲ್ಲಿ ಮಾತ್ರವಲ್ಲದೆ ಮುಖ, ಕಂಕುಳು, ಎದೆಗೂಡಿನ ಒಳಭಾಗದಲ್ಲೂ ಇಂತಹ ಗಂತಿಗಳು ಕಾಣಿಸಿಕೊಳ್ಳುತ್ತವೆ.

        ಇವುಗಳ ಗಾತ್ರದಲ್ಲಿ ವ್ಯತ್ಯಾಸ ಆಗಾಗ್ಗೆ ಕಂಡುಬರುವುದು ಒಂದು ಮುಖ್ಯ ಲಕ್ಷಣ. ದ್ರವದಿಂದ ಕೂಡಿರುವ ಈ ಗಂತಿಗಳಲ್ಲಿ ಸೋಂಕು ಉಂಟಾದರೆ ತೀವ್ರವಾದ ನೋವು, ಬಾವು, ಜ್ವರ ಇತ್ಯಾದಿಗಳು ಕಾಣಿಸಿಕೊಳ್ಳುತ್ತವೆ. ಶಸ್ತ್ರಚಿಕಿತ್ಸೆ ತತ್‌ಕ್ಷಣ ನಡೆಸುವುದೇ ಇದರ ಪರಿಹಾರೋಪಾಯ.

        ಭ್ರೂಣಾವಸ್ಥೆಯ ಮೊದಲ ಘಟ್ಟಗಳಲ್ಲಿ ಮಾನವನಲ್ಲೂ ಕಿವಿರಿನಂತಹ ಅಂಗ ಉತ್ಪತ್ತಿಯಾಗುತ್ತದೆ. ಮೀನು ಮುಂತಾದ ಧಿಜೀವಿಗಳಲ್ಲಿ ಇದು ಬೆಳವಣಿಗೆ ಹೊಂದಿದರೆ, ಮಾನವನಲ್ಲಿ ಭ್ರೂಣಾವಸ್ಥೆಯಲ್ಲಿಯೇ ಈ ಕಿವಿರಿನಂತಹ ರಚನೆಗಳು ಸೇರಿ ಹೋಗಿ ಬೆಳವಣಿಗೆ ಹ್ರಾಸವಾಗುತ್ತದೆ. ಆದರೆ ಮೊದಲನೆಯ ಒಂದು ಜೊತೆ ಮುಖ್ಯ ಕಿವಿರುಗಳು ಸೇರಿ ಹೋಗದೇ ಮಾನವನ ಕಿವಿಯ ಬಾಹ್ಯಭಾಗದ ರಂಧ್ರವಾಗಿ ಉಳಿದುಕೊಳ್ಳುತ್ತವೆ.

        ಕೆಲವೊಮ್ಮೆ ಕಿವಿರುಗಳು ಸೇರಿಕೊಳ್ಳದೆ ರಚನಾತ್ಮಕ ದೋಷ ಉಂಟಾಗಿ ಕಿವಿರಿನ ಮೆದುಗಧಿಡ್ಡೆಯಂತಹ ರಚನೆ ಕುತ್ತಿಗೆ ಮೇಲ್ಭಾಗದಲ್ಲಿ ದವಡೆಯ ಸ್ನಾಯುವಿಗೆ ಕೆಳಭಾಗದಲ್ಲಿ ಕಂಡುಬರುತ್ತದೆ. ಈ ತೊಂದರೆಗೂ ಶಸ್ತ್ರಚಿಕಿತ್ಸೆ ಪರಿಹಾರೋಪಾಯ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus