Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಮನೋರಂಜನೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಹತ್ವಾಕಾಂಕ್ಷಾ
    • "ಮಿಸ್‌, ಬ್ಯೂಟಿಫ‌ುಲ್‌ ಐಸ್‌'' ಆಗಿದ್ದ ಅಕಾಂಕ್ಷಾ ಅವರಿಗೆ ಅವರ ಬ್ಯೂಟಿಫ‌ುಲ್‌ ಐಸೇ ಅವಕಾಶ ಕಲ್ಪಿಸಿಕೊಟ್ಟಿದೆ.

      • Udayavani | Feb 05, 2012

        ದಿನಿಯನ್ನು ಬದಲಾಯಿಸುವ ಪ್ರಮೇಯ ಇರಲಿಲ್ಲ. ಆದರೆ, ವೈದ್ಯರ ಸಲಹೆಯಂತೆ ಫೆಬ್ರವರಿ ಕೊನೆಯವರೆಗೆ ಚಿತ್ರೀಕರಣದಲ್ಲಿ ಆಕೆ ಪಾಲ್ಗೊಳ್ಳುವಂತಿರಲಿಲ್ಲ. ಉಳಿದ ಕಲಾವಿದರ ಕಾಲ್‌ಶೀಟ್‌ ಹೊಂದಾಣಿಕೆ ಬೇರೆ ಮಾಡಬೇಕಿತ್ತು. ಹಾಗಾಗಿ, ನಾವಿಬ್ಬರು ಒಪ್ಪಂದ ಮಾಡಿಕೊಂಡೆವು. ಆ ಪಾತ್ರಕ್ಕೆ ಬೇರೆ ಯಾರು? ಎಂದು ಯೋಚಿಸುತ್ತಿದ್ದೆ. ನಂದಿನಿಯ ಕಣ್ಣುಗಳಂತೆ ಕಣ್ಣುಗಳಿರಬೇಕು ಎಂದುಕೊಳ್ಳುತ್ತಿರುವಾಗಲೇ, ಪತ್ರಕರ್ತೆ ಗೆಳತಿ, ಆಕಾಂಕ್ಷಾ ಹೆಸರು ಹೇಳಿದಳು. ನೋಡಿದೆ. ಮಾತನಾಡಿದೆ. ನನ್ನ ಪಾತ್ರಕ್ಕೆ ಹೊಂದುತ್ತಿದ್ದ, ಆಕೆಗೂ ಪಾತ್ರ ಇಷ್ಟವಾಯಿತು. ಒಪ್ಪಿಕೊಂಡು ಈಗ ಒಂದು ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡದ್ದೂ ಆಯಿತು' - ಎದೆಗಾರಿಕೆ ನಿರ್ದೇಶಕಿ ಸುಮನಾ ಕಿತ್ತೂರು ತಮ್ಮ ಚಿತ್ರದಲ್ಲಿ ಅಭಿನಯಿಸಲು ಗೊತ್ತಾಗಿದ್ದ ನಟಿ, ಗೆಳತಿ ನಂದಿನಿ (ಭಾವನಾ) ಬದಲಿಗೆ ಆಕಾಂûಾ ಆಯ್ಕೆಯ ಬಗ್ಗೆ ಹೇಳಿದ್ದಿಷ್ಟು.

        ಆಕಾಂಕ್ಷಾ ನಾಲ್ಕು ವರ್ಷಗಳ ಹಿಂದೆ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿದ್ದವರು, ತಮ್ಮ ಸುಂದರ ಕಣ್ಣುಗಳಿಗಾಗಿ "ಮಿಸ್‌, ಬ್ಯೂಟಿಫ‌ುಲ್‌ ಐಸ್‌' ಆಗಿ ಆಯ್ಕೆಯಾಗಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಾಧ್ಯವಾದದ್ದು ಕೂಡಾ ಅದೇ ಸುದ್ದಿ. ಕಳೆದ ವರ್ಷ ಜನವರಿ ತಿಂಗಳಲ್ಲಿ ತೆರೆಕಂಡ ಒಲವೇ ಮಂದಾರ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಈ ಸುನಯನೆ ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದವರು.

        ಆ ಚಿತ್ರ ನೋಡಿದ ಸೂರಪ್ಪಬಾಬು ತಾವು ನಿರ್ಮಿಸಲಿದ್ದ ವರದ ನಾಯಕ ಚಿತ್ರಕ್ಕೆ ಆಕೆಯನ್ನು ಆರಿಸಿದ್ದೇ ಅಲ್ಲದೆ ಆ ಕುರಿತಂತೆ ಮಾತುಕತೆ ಆಡಿದ್ದರು. ಆದರೆ, ಆ ಚಿತ್ರದ ಚಿತ್ರೀಕರಣ ತಡವಾಗುತ್ತಿತ್ತು. ಅವರದೇ ಇನ್ನೊಂದು ಚಿತ್ರ, ಇನ್ನೇನು, ತೆರೆಗೆ ಬರಲು ಸಿದ್ಧವಾಗುತ್ತಿರುವ ದಶಮುಖದಲ್ಲಿ ಆಕಾಂಕ್ಷಾ ಅವಕಾಶ ಪಡೆದರು. ರವಿ ಶ್ರೀವತ್ಸ ನಿರ್ದೇಶನದ ಆ ಚಿತ್ರದಲ್ಲಿ ಆಕೆ ಚೇತನ್‌ ಜೋಡಿ. ಈ ತಿಂಗಳ ಕೊನೆಯ ವಾರ ಇಲ್ಲವೇ ಮಾರ್ಚ್‌ ಮೊದಲ ವಾರ ಅದು ತೆರೆಕಾಣುವ ನಿರೀಕ್ಷೆ ಇದೆ.

        ಕುಮಾರ ಬಂಗಾರಪ್ಪಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಅವರದೇ ನಿರ್ಮಾಣದ ದೇವಿ ಚಿತ್ರದಲ್ಲೂ ಆಕಾಂಕ್ಷಾ ಅವಕಾಶ ಪಡೆದಿದ್ದಾರೆ. ಆ ಚಿತ್ರದಲ್ಲಿ ಸ್ನೇಹಾ ಉಲ್ಲಾಳ್‌ ಮತ್ತು ಆಕಾಂಕ್ಷಾ ಇಬ್ಬರು ನಾಯಕಿ ಯರಿದ್ದಾರೆ.

        ಈಗ ನೋಡಿ. "ಮಿಸ್‌, ಬ್ಯೂಟಿಫ‌ುಲ್‌ ಐಸ್‌' ಆಗಿದ್ದ ಅಕಾಂಕ್ಷಾ ಅವರಿಗೆ ಅವರ ಬ್ಯೂಟಿಫ‌ುಲ್‌ ಐಸೇ ಅವಕಾಶ ಕಲ್ಪಿಸಿಕೊಟ್ಟಿದೆ.

        ಸಿಂಧೀ ಮೂಲದ ಈ ತಾರೆ ದುಬೈಯಲ್ಲಿ ಶಾಲಾ ಶಿಕ್ಷಣ ಪಡೆದು, ಪದವಿಯನ್ನು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಡೆದವರು. ಓದುವ ದಿನಗಳಲ್ಲೇ ಪಾಕಿಸ್ತಾನೀ ಸರಣಿ ಕಾಜಲ್‌ನಲ್ಲಿ ಅಭಿನಯಿಸಿದ್ದುಂಟು. ತಂದೆ ನಾರಾಯಣ ಮನ್ಸುಖಾನಿಯ ಉತ್ತೇಜನ ಆಕೆಗೆ ಒತ್ತಾಸೆಯಾಗಿದೆ.
        ಬಹುಮುಖ ಪ್ರತಿಭೆಯ ಆಕಾಂಕ್ಷಾಗೆ ಅರೆಬಿಕ್‌, ಇಂಗ್ಲಿಷ್‌, ಹಿಂದಿ, ಪಂಜಾಬಿ, ಮರಾಠಿ ಭಾಷೆಗಳು ಗೊತ್ತು. ನೃತ್ಯ ಈಜು ಸಂಗೀತಾಸಕ್ತಿಯ ಜೊತೆ ಕವನ ಬರೆಯುವ ಹವ್ಯಾಸವೂ ಇದೆ. ಈಗ ಕನ್ನಡ ಕಲಿಯುವ ಉತ್ಸಾಹವನ್ನು ತೋರುತ್ತಿರುವ ಆಕಾಂಕ್ಷಾಗೆ ಮೊದಲು, ಬಾಲಿವುಡ್‌ ಒಲವಿತ್ತು. ಆದರೆ ಈಗ ಅದು ಬದಲಾದಂತಿದೆ. ಈಗ ದಕ್ಷಿಣದತ್ತ ಮುಖಮಾಡಿದ್ದಾರೆ ಆಕೆ.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಥೆ ಕೇಳುತ್ತಲೇ ಆ ಪಾತ್ರ ನಿರ್ವಹಿಸಲು ಒಪ್ಪಿರುವ ವೀಣಾ ಮಲಿಕ್‌ ಈ ತಿಂಗಳಲ್ಲಿ ಸೆಟ್ಟೇರಲಿರುವ ಡರ್ಟಿ ಪಿಕ್ಚರ್‌ನ ಕೇಂದ್ರ ಪಾತ್ರಧಾರಿ.
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus