Udayavani | Feb 04, 2012
ಬೆಳ್ತಂಗಡಿ: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವವು ಜ. 28 ರಿಂದ ಫೆ. 5 ರ ವರೆಗೆ ನಡೆಯುತ್ತಿದ್ದು, ಫೆ. 5 ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಬೆಳಗ್ಗೆ 9 ರಿಂದ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಮಿತಿ ವತಿಯಿಂದ ಸಿದ್ಧ ಚಕ್ರಯಂತ್ರಾರಾಧನೆ, 10.30ರಿಂದ ಅಗ್ನಿತ್ರಯಾರ್ಚನ ಪೂರ್ವಕ ನಿರ್ವಾಣ ಕಲ್ಯಾಣ, ಅಗ್ರೋದಕ ಮೆರವಣಿಗೆ, ರಾತ್ರಿ 7 ಗಂಟೆಯಿಂದ 1008 ಕಲಶಗಳಿಂದ ಮಸ್ತಕಾಭಿಷೇಕ, ಮಹೋತ್ಸವ ಮಹಾಪೂಜೆ, ಸಂಘಪೂಜೆ, ಮಹಾ ಮಂಗಳಾರತಿ, ಕುಂಕುಮೋತ್ಸವ, ಅವಭೃತಸ್ನಾನ, ಧ್ವಜಾವರೋಹಣ, ತೋರಣ ವಿಸರ್ಜನೆ, ಕಂಕಣ ವಿಸರ್ಜನೆ ನಡೆಯಲಿದೆ.
ಬೆಳಗ್ಗೆ 10ರಿಂದ ಕಾವ್ಯರಸಾಸ್ವಾದನ- ಪದ್ಮನಾಭ ಕವಿ ವಿರಿಚಿತ ವೇಣೂರು ಭುಜಬಲಿ ಚರಿತೆ ನಡೆಯಲಿದ್ದು, ಮೂಡಬಿದಿರೆಯ ಮುನಿರಾಜ ರೆಂಜಾಳ ಪ್ರವಚನ ನೀಡಲಿದ್ದು, ಕಾರ್ಕಳದ ನವೀನ ಕುಮಾರ್ ವಾಚನ ಮಾಡಲಿದ್ದಾರೆ.
3.30ರಿಂದ ಭಾವೈಕ್ಯ ಸಮೇ¾ಳನ ಮತ್ತು ಅಭಿನಂದನ ಸಮಾರಂಭ ನಡೆಯಲಿದ್ದು, ವೇಣೂರು ಕೇÒತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ ಗಣ್ಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶೇÌಶತೀರ್ಥ ಶ್ರೀಪಾಂದಗಳವರು ಆಶೀರ್ವಚನ ನೀಡಲಿದ್ದಾರೆ. ರಾಜ್ಯದ ರಾಜ್ಯಪಾಲ ಡಾ| ಹಂಸರಾಜ್ ಭಾರದ್ವಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕೇcತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಗಣ್ಯರನ್ನು ಅಭಿನಂದಿಸುವರು.
ಮುಖ್ಯ ಅತಿಥಿಯಾಗಿ ಬೆಂಗಳೂರು ಕ.ಸಾ.ಪ. ಮಾಜಿ ಅಧ್ಯಕ್ಷ ನಾಡೋಜ ಡಾ| ಹಂಪ ನಾಗರಾಜಯ್ಯ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಶಾಸಕ ಕೆ. ವಸಂತ ಬಂಗೇರ, ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಶಾಸಕರಾದ ಡಿ. ಸುಧಾಕರ, ಅಭಯ ಕುಮಾರ ಪಾಟೀಲ್, ಸಂಜಯ ಪಾಟೀಲ್, ವೀರ ಕುಮಾರ್ ಪಾಟೀಲ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ 6.30ರಿಂದ 7.30ರ ವರೆಗೆ ತಕ್ಷಿಲಾ ಜೈನ್ ಮಂಗಳೂರು ಭರತಾಂಜಲಿ, ರಾತ್ರಿ 7.30 ರಿಂದ 8.30ರ ವರೆಗೆ ಚೆನ್ನಬೈರಾದೇವಿ ಮತ್ತು ಅತ್ತಿಮಬ್ಬೆ- ಶ್ರೀ ಪದ್ಮಾಂಬ ಜೈನ ಮಹಿಳಾ ಸಮಾಜ ತುಮಕೂರು. ರಾತ್ರಿ 8.30 ರಿಂದ 10.30ರ ವರೆಗೆ ಸೋನಿ ಟಿ.ವಿ. ಮುಂಬೈಯ ಭೂಗಿ ಊಗಿಯ ಪ್ರಶಸ್ತಿ ವಿಜೇತ ತಂಡ ಭಾರ್ಗವಿ ಉಡುಪಿ ಇವರಿಂದ ಭಾವ- ಯೋಗ- ನೃತ್ಯ, ರಾತ್ರಿ ಗಂಟೆ 10.30 ರಿಂದ ಬಿ. ಭುಜಬಲಿ ಧರ್ಮಸ್ಥಳ ಇವರ ಸಂಯೋಜನೆಯಲ್ಲಿ ತ್ಯಾಗವೀರ ಬಾಹುಬಲಿ ಯಕ್ಷಗಾನ.
ವಸ್ತುಪ್ರದರ್ಶನ ವೇದಿಕೆಯಲ್ಲಿ ಸಂಜೆ 6.30 ರಿಂದ ವೇಣೂರು ದೇವಿ ಕಿರಣ ಕಲಾನಿಕೇತನ ಮತ್ತು ಮಹಿಳಾ ಮಂಡಲದವರಿಂದ ಭರತ ನೃತ್ಯ ವೈಭವ, ರಾತ್ರಿ 8 ರಿಂದ ಕಾರ್ಕಳದ ಕಲಾ ಸೌರಭ ವಿದುಷಿ ಲಾವಣ್ಯ ಜಗದೀಶ್ ಇವರಿಂದ ನೃತ್ಯ ರೂಪಕ ನಡೆಯಲಿದೆ.