ವಸುಮತಿ ಉಡುಪ | Feb 05, 2012
ಕೊರಳ ಗೆಳೆಯರಲ್ಲಿ ಒಬ್ಬ ಆತ್ಮಹತ್ಯೆ ಮಾಡಿಕೊಂಡು ಈ ಪ್ರಪಂಚಕ್ಕೆ ವಿದಾಯ ಹೇಳಿದ. ಇನ್ನೊಬ್ಬ ಇದ್ದೂ ಸತ್ತಂತಾದ. ಸುಮಾರು ಇಪ್ಪತ್ತೆರಡು ವರ್ಷಗಳ ಸುದೀರ್ಘ ಗೆಳೆತನ. ಪ್ರ„ಮರಿಯಿಂದ ಪಿ.ಯು.ಸಿ.ಯವರೆಗೆ ಒಟ್ಟಿಗೆ ಓದಿ, ಒಂದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿ ಕೊಂಡು, ಕ್ಯಾಂಪಸ್ ಸೆಲೆಕ್ಷನ್ನಿನಲ್ಲಿ ಒಬ್ಬೊಬ್ಬರು ಒಂದೊಂದು ಕಂಪೆನಿಗೆ ಆಯ್ಕೆಯಾಗಿದ್ದರು. ಸಿಲಿಕಾನ್ ಸಿಟಿಯಲ್ಲಿ ಇಬ್ಬರೂ ಸೇರಿ ಅಚ್ಚುಕಟ್ಟಾದ ಬಾಡಿಗೆಮನೆ ಹಿಡಿದು, ಖರ್ಚಿನಲ್ಲಿ ಸಮಾ ಅರ್ಧರ್ಧ ಹಂಚಿಕೊಂಡು, ಬದುಕು ಎಷ್ಟು ಸುಖವಾಗಿ, ಸಹಜವಾಗಿ ನಡೆದುಕೊಂಡು ಹೋಗುತ್ತಿತ್ತು ಅಂದರೆ ಮುಂದೆಯೂ ಇದು ಹೀಗೇ ನಡೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಇಬ್ಬರಿಗೂ ಸಂಶಯವಿರಲಿಲ್ಲ. "ಕೈ ತುಂಬಾ ಹಣ, ಮೈ ತುಂಬಾ ನೆಣ'. ಆಗೀಗ ವಾರಾಂತ್ಯಗಳಲ್ಲಿ ಎಲ್ಲಿಗೆಂದರಲ್ಲಿಗೆ ಸಮಾನ ಮನಸ್ಕರೊಡನೆ, ಸಮಾನ ವಯಸ್ಕರೊಡನೆ, ಮೋಜಿನ ಪ್ರವಾಸ. ಸ್ವತ್ಛಂದದ ಅಲೆತ. ಕುಡಿತ, ಕುಣಿತ. ಊರಿಗೆ ಹೋಗಬೇಕಾದಾಗ ಒಟ್ಟಿಗೆ ರಿಜ‚ರ್ವೇಷನ್ ಮಾಡಿಸಿಕೊಂಡು ಒಟ್ಟಿಗೆ ಹೋಗಿಬರುತ್ತಿದ್ದವರು. ಎರಡು ದೇಹ, ಒಂದು ಜೀವದ ಇಬ್ಬರ ಸ್ವಭಾವ ಮಾತ್ರಾ ಅಜಗಜಾಂತರ. ಈ ವೈರುಧ್ಯಕ್ಕೆ ಪರಸ್ಪರ ಒಗ್ಗಿ ಹೋಗಿದ್ದರಿಂದ ಒಬ್ಬರನ್ನೊಬ್ಬರು ಅವರು ಹೇಗಿದ್ದಾರೋ ಹಾಗೆ ಒಪ್ಪಿಕೊಂಡುಬಿಟ್ಟಿದ್ದರು. ಅಥವಾ ವೈರುಧ್ಯ ಇದ್ದಿದ್ದಕ್ಕೇ ಗೆಳೆತನ ಬಲವಾಗಿ ಕಚ್ಚಿಕೊಂಡಿತ್ತಾ? ಸಪೂರ ಮೈಕಟ್ಟಿನ ಉದ್ದದ ಯುವಕ ಗೋಪಿಕೃಷ್ಣ ಹುಡುಗಿಯರ ಮನಸ್ಸನ್ನು ಮೊದಲ ನೋಟದಲ್ಲೇ ಆಕರ್ಷಿಸಬಲ್ಲಷ್ಟು ಚೆಲುವ. ಈ ಚೆಲುವು ಎದ್ದು ಕಾಣುವಂತೆ ಸೊಗಸಾದ ಬಟ್ಟೆಬರೆ ಧರಿಸಿಕೊಳ್ಳುತ್ತಿದ್ದ. ಸದಾ ಟಿಪ್‌ಟಾಪಾಗಿರುತ್ತಿದ್ದ. ಡ್ರೆಸ್ಸಿಂಗ್ ಮಿರರ್‌ನ ಎದುರು ಹರಡಿಕೊಂಡು ಬಿದ್ದಿದ್ದ ಅವನ ಅಲಂಕಾರ ಸಾಮಗ್ರಿಗಳನ್ನು ಕಂಡರೆ ವಿಶ್ವನಾಥನಿಗೆ ಬೆರಗು.
""ಹುಡುಗಿ ಆಗಿ ಹುಟ್ಟಬೇಕಾದವ್ನು ತಪ್ಪಿ$ಹುಡುಗ ಆಗಿದ್ದಿ' ಎಂದು ಛೇಡಿಸುತ್ತಿದ್ದ.
""ಹುಡುಗರು ಒಡ್ಡೊಡ್ಡಾಗಿ ಇರ್ಬೇಕು ಅಂತ ರೂಲ್ಸುಂಟಾ? ಈ ಕಾಲದಲ್ಲಿ ಎಲ್ರೂ ಟ್ರಿಮ್ಮಾಗೇ ಇರ್ತಾರೆ.
ನೀನೊಂದು ಅಪವಾದ...' ಗೋಪಿಯ ಉತ್ತರ.
ಗೋಪಿಯ ಸಾಮೀಪ್ಯ ಅಂದರೆ ಎಂತವರ ಮನಸ್ಸನ್ನೂ ಮುದಗೊಳಿಸುವ ಮಂದ ಸುಗಂಧದ ವಲಯ. ಸೆಂಟು, ಡಿಯೋಡ್ರೆಂಟು, ಲೋಶನ್ನು, ಪೌಡರುಗಳ ಘಮ.
""ನೀನು ಎಲ್ಲಿದ್ದಿ ಅಂತ ಗಾಳಿ ಹೇಳಿಬಿಡುತ್ತೆ...' ಅನ್ನುತ್ತಿರುತ್ತಿದ್ದ ವಿಶ್ವ.
""ನೀನೂ...' ಅನ್ನಲು ಹೋಗುವ ಗೋಪಿ ತಮಾಷೆ ಅಮಾಸೆಯಾಗಬಾರದೆಂದು ಬಾಯಿ ಬಿಗಿ ಹಿಡಿಯುತ್ತಿದ್ದ. ಒಂದು ಸಲ ಒಗೆದು ಐರನ್ ಮಾಡಿದ್ದ ಶರ್ಟನ್ನು ಎರಡು ಸಲಕ್ಕಿಂತಾ ಹೆಚ್ಚು ಧರಿಸಿದವನಲ್ಲ ಗೋಪಿ. ವಿಶ್ವ ಒಂದು ಸಲ ಒಗೆದಿದ್ದನ್ನು ಹತ್ತು ಸಲ ಧರಿಸುವಷ್ಟು ಕೊಳಕ. ಬೆವರಿನ ನಾತದ ಶರ್ಟುಗಳು ಹಾಳಾಗಲಿ, ಆಫೀಸಿಗೆ ಹೋಗಿ ಬಂದ ವಿಶ್ವ ಶೂಸು, ಸಾಕ್ಸು ಕಳಚಿದನೆಂದರೆ ಮನೆ ಇಡೀ ಇಡುಗಿಕೊಳ್ಳುತ್ತಿತ್ತು ಇಲಿ ಸತ್ತಂತಾ ದುರ್ವಾಸನೆ.
""ಮೊದಲು ತಗೊಂಡ್ಹೊàಗಿ ಬಕೆಟ್ಟಲ್ಲಿ ನೆನೆಸೋ. ಇಲ್ದಿದ್ರೆ ನಾನು ಸತ್ತೇ ಹೋಗ್ತಿàನಿ. ನನ್ನ ಕೊಂದ ಪಾಪ ನಿನಗೆ...' ಗೋಳಾಡುತ್ತಿದ್ದ ಗೋಪಿ. ದಿನದ ಮೈಲಿಗೆ ಬಟ್ಟೆಗಳನ್ನು ದೊಡ್ಡ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಟ್ಟು , ಶನಿವಾರ ಬೆಳಿಗ್ಗೆ ಏಳುತ್ತಿದ್ದಂತೆ ಕೊಳೆಬಟ್ಟೆಗಳನ್ನು ವಾಷಿಂಗ್ ಮಿಷನ್ನಿಗೆ ಹಾಕುವುದು ಗೋಪಿಯ ಆದ್ಯತೆ. ತನ್ನ ಬಟ್ಟೆಬರೆಗಳ ಜೊತೆ ವಿಶ್ವನ ಬಟ್ಟೆಗಳನ್ನು ಸೇರಿಸುತ್ತಿರಲಿಲ್ಲ ಗೋಪಿ. ಈ ಬಗ್ಗೆ ವಿಶ್ವ ಒತ್ತಾಯ ಮಾಡುತ್ತಿರಲಿಲ್ಲ. ಎರಡು ಭಿನ್ನ ವ್ಯಕ್ತಿತ್ವಗಳು ಒಂದು ಮನೆಯಲ್ಲಿ ಕಳೆದೆರಡು ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದುವು. ಒಬ್ಬರನ್ನೊಬ್ಬರು ಹಚ್ಚಿಕೊಂಡು ಬದುಕುತ್ತಿದ್ದುವು. ನೋಡಲು ಗೋಪಿಯಷ್ಟು ಸುಂದರಾಂಗನಲ್ಲದಿದ್ದರೂ ವಿಶ್ವ ತೆಗೆದು ಹಾಕುವಂತವನಲ್ಲ. ಗೋಪಿಗೆ ಹೋಲಿಸಿದರೆ ಕಮ್ಮಿ ಮಾರ್ಕು.
ಅವನಷ್ಟಕ್ಕೆ ಅವನನ್ನು ನೋಡಿದರೆ ಅವನ ವ್ಯಕ್ತಿತ್ವದಲ್ಲೂ ಸೆಳೆತ ಇದೆ. ಆಕರ್ಷಣೆ ಇದೆ. ತಮ್ಮ ನಡುವೆ ಯಾವ ರಹಸ್ಯಕ್ಕೂ ಆಸ್ಪದ ಕೊಡದೆ ಆಪ್ತವಾಗಿದ್ದವರ ನಡುವೆ ಈ ನಿಕಟತೆಯೇ ಕಾರಣವಾಗಿ ಹೆಣ್ಣೊಬ್ಬಳ ಸಂಗತಿ ಪ್ರಸ್ತಾಪವಾಗಿದ್ದು ದುರಂತ ಕತೆಯ ಆರಂಭ. ಅವಳು ಕೆಳಗಿನ ಮನೆಯಲ್ಲಿದ್ದ ಓನರ್ ಮಗಳು.
ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದವಳು. ಗಂಡಹೆಂಡಿರ ನಡುವೆ ಆರಂಭದಿಂದಲೂ ಹೊಂದಾಣಿಕೆಯ ಕೊರತೆ ಇತ್ತೆನ್ನುವುದು ಹೇಳಿಕೆ. ಏನು, ಯಾಕೆ ಅನ್ನುವುದು ಊಹೆ. ಕೊನೆಗೂ ಕೊಂಡಿ ಕಳಚಿತು. ಅವಳು ಮಗುವನ್ನು ಎತ್ತಿಕೊಂಡು, ಗಂಡನನ್ನು ಶಾಶ್ವತವಾಗಿ ತೊರೆದು, ತೌರು ಸೇರಿಕೊಂಡಳು. ವಿಚ್ಛೇದನೆಯ ಕಲಾಪ ಆರಂಭವಾಯ್ತು. ತಮ್ಮದೇ ಓರಗೆಯ ಯುವತಿಯ ಮೇಲೆ ಅದೇ ಮನೆಯ ಮೇಲ್ಭಾಗದಲ್ಲಿದ್ದ ಯುವಕರು ಕನಿಕರ ತೋರಿಸಿದರೆ ಅದು ಮಾನವ ಸಹಜ. ಕಾಲೇಜಿನಲ್ಲಿ ಓದುವಾಗ, ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವಾಗ, ಅವರು ಎಷ್ಟು ಹುಡುಗಿಯರನ್ನು ನೋಡಿಲ್ಲ?
ನೋಡುತ್ತಿಲ್ಲ? ಯಾವ ಹುಡುಗಿಯನ್ನು ನೋಡಿದರೂ ಚೆಲುವಾಗಿ ಕಾಣಿಸುವ ಪ್ರಾಯಕಾಲ. ತಮ್ಮ ಸಂಪರ್ಕಕ್ಕೆ ಬರುತ್ತಿದ್ದ ಎಲ್ಲರೊಡನೆ ಅಗತ್ಯಕ್ಕಿಂತ ಹೆಚ್ಚು ಸಖ್ಯ ಬೆಳೆಸಿಕೊಳ್ಳಬೇಕೆನ್ನುವ ಚಾಪಲ್ಯ. ಎಲ್ಲೆ ಮೀರಬಾರದೆಂಬ ವಿವೇಕದ ಕಡಿವಾಣವನ್ನೂ ಮೀರಿ ಹುಚ್ಚುಕುದುರೆಯಾಗುತ್ತಿದ್ದ ಮೈ, ಮನಸ್ಸುಗಳು.
ಸೂಕ್ತ ಸಂದರ್ಭ ಸಿಗಲಿಲ್ಲವೆಂಬ ಕಾರಣದಿಂದ ಎಷ್ಟೋ ಜನ ಸುಭಗರಾಗಿ ಉಳಿಯುತ್ತಾರೆಯೇ? ಸಂದರ್ಭ ಸಿಕ್ಕಿದ್ದರೆ? ಅಥವಾ ಅದಕ್ಕೂ ಧೈರ್ಯ ಬೇಕಾ? "ಬೇಕು' ಅಂದುಕೊಳ್ಳುತ್ತಾನೆ ವಿಶ್ವ. ಓನರ್ ಮಗಳು ಕೌಸಲ್ಯಾ. ಅವಳ ಮಗಳು ರಾಣಿ. ಎರಡು ವರ್ಷದ ಮುದ್ದಾದ ಹೆಣ್ಣು ಮಗು. "ಮಕ್ಕಳಿದ್ದವರಿಗೆ ಮರ್ಯಾದೆ ಇಲ್ಲ' ಎನ್ನುವ ಮಾತು ಸುಳ್ಳಲ್ಲ. ರಾಣಿಗೆ ತನ್ನ ಮನೆಗಿಂತಾ ಪರರ ಮನೆಯೇ ಪ್ರಿಯ. ಹಿತ. ಇವರಿಬ್ಬರು ಮನೆಯಲ್ಲಿದ್ದರೆ ಯಾವ ಮುಲಾಜೂ ಇಲ್ಲದೆ ಮೆಟ್ಟಿಲು ಹತ್ತಿ ಮೇಲೆ ಬರುತ್ತಾಳೆ. ಬಾಗಿಲು ಹಾಕಿದ್ದರೆ ತಟ್ಟುತ್ತಾಳೆ. ತೆಗೆಸುತ್ತಾಳೆ. ಆ ವಯಸ್ಸಿನ ಮಕ್ಕಳ ಒಡನಾಟ ಕಂಡಿರದಿದ್ದ ಈ ಇಬ್ಬರು ಗೆಳೆಯರು ರಾಣಿಯನ್ನು ಅಗತ್ಯಕ್ಕಿಂತಾ ಹೆಚ್ಚು ಹಚ್ಚಿಕೊಂಡರು. ಅವಳಿಗೋಸ್ಕರ ಚಾಕೊಲೇಟ್‌ಗಳು, ಬಿಸ್ಕತ್ತಿನ ಪ್ಯಾಕುಗಳು, ಮನೆಗೆ ಬರತೊಡಗಿದುವು. ರಾತ್ರಿ ಇವರು ಮನೆಗೆ ಬಂದು ಗೇಟು ತೆಗೆಯುತ್ತಿದ್ದಂತೆ ಆ ಶಬ್ದಕ್ಕೆ ಕಾದಿರುತ್ತಿದ್ದವಳಂತೆ ಹಟ ಮಾಡಿ ಮನೆಯ ಬಾಗಿಲು ತೆಗೆಸಿ ಈಚೆ ಬರುತ್ತಿದ್ದಳು ರಾಣಿ. ವಿಶ್ವ ಇರಲಿ, ಗೋಪಿ ಇರಲಿ, ಅವಳನ್ನು ತೋಳುಗಳಲ್ಲಿ ಬಳಸಿ ತಮ್ಮೊಂದಿಗೆ ಕರೆದೊಯ್ದು ಒಂದಿಷ್ಟು ಹೊತ್ತು ಅವಳೊಡನೆ ಬಾಲಭಾಷೆಯಲ್ಲಿ ಹರಟಿದರೆ ಅವಳಿಗೆ ತೃಪ್ತಿ. ಇವರಿಗೆ ಹಾಯಿ. ಚಟುವಟಿಕೆಯ ಮಗುವೊಂದಕ್ಕೆ ಕೊಡಬೇಕಾದಷ್ಟು ಗಮನ, ಪ್ರೀತಿವಾತ್ಸಲ್ಯಗಳನ್ನು ಅವಳ ಮನೆಯ ನೊಂದ ಜೀವಗಳು ಕೊಡುತ್ತಿಲ್ಲ ಎಂದು ಈ ಗೆಳೆಯರ ಸಂಶಯ. ಮಕ್ಕಳು ಅಂದರೆ ಹೀಗೇ ಎಂದು ಅವರಿಗೆ ಗೊತ್ತಿಲ್ಲ.
ಮನೆಗಿಂತ ಬೀದಿ ಪ್ರಿಯ. ಪರರ ಮನೆ ರುಚಿ.
ಮಗುವಿನ ಮೇಲೆ ಬೆಳೆಸಿಕೊಂಡ ಮಮಕಾರದ ಹಿಂದೆ ಮಗುವಿನ ತಾಯಿಯನ್ನು ಕುರಿತಾದ ಮೃದುಭಾವನೆ ಇರಬಹುದೇ ಎನ್ನುವ ಕುರಿತು ಗೆಳೆಯರು ಹರಟಿಕೊಂಡಿದ್ದಾರೆ. "ಹೀಗೆ ಮಾತಾಡುವುದು ತಪ್ಪು' ಎಂದು ತಮ್ಮನ್ನು ತಾವೇ ಬೈದುಕೊಂಡಿದ್ದಾರೆ. ಮಗುವನ್ನು ಎತ್ತಿಕೊಂಡು ಹೋಗಲು ಕೆಲವು ಸಲ ಮಗುವಿನ ತಾತ ಮಹಡಿ ಏರಿ ಬಂದರೆ ಕೆಲವು ಸಲ ಕೌಸಲ್ಯಾ ಬರುತ್ತಿದ್ದಳು. "ಬರುವುದಿಲ್ಲ' ಎಂದು ಕಾಲು ಜಾಡಿಸಿ ಅಳುವ ಮಗುವನ್ನು ಬಲಾತ್ಕಾರದಿಂದ ಎತ್ತಿಕೊಂಡು ಹೋಗುತ್ತಿದ್ದಳು. ಹಾಗೆ ಕೌಸಲ್ಯ ಬಂದಾಗ ತಮ್ಮ ಹೃದಯದ ಬಡಿತ ಜಾಸ್ತಿಯಾಗುತ್ತದೆಯೆಂದು ಇಬ್ಬರ ಅನುಭವ. ಕೌಸಲ್ಯಾ ಹಾಗಿದ್ದಳು ಅನ್ನುವುದಕ್ಕಿಂತಾ ಆ ವಯಸ್ಸು ಅಂತಾದ್ದು ಎನ್ನುವುದು ಹೆಚ್ಚು ಸೂಕ್ತ.
ಹೀಗೇ ಸರಿಯಿತು ಕಾಲ. ಕೌಸಲ್ಯಾ ಎದುರು ಕಂಡಾಗ ನಿಂತು ನಾಲ್ಕು ಮಾತಾಡುವಷ್ಟು ಸಲಿಗೆ ಗೆಳೆಯರಿಬ್ಬರಿಗೂ ಬೆಳೆಯಿತು. ಇಷ್ಟೇ ಆಗಿದ್ದರೆ ಯಾವ ವಿಶೇಷ ಇರುತ್ತಿರಲಿಲ್ಲ. ಈ ಕತೆ ಹುಟ್ಟುತ್ತಿರಲಿಲ್ಲ. ಅದೊಂದು ದಿನ ಗೋಪಿಕೃಷ್ಣ ಗೆಳೆಯನೊಡನೆ ಮನಸ್ಸು ತೆರೆದಿಟ್ಟ. ಕೌಸಲ್ಯಾಳನ್ನು ಅವನು ಪ್ರೀತಿಸುತ್ತಿದ್ದಾನೆ. ಅವಳನ್ನು ಮದುವೆಯಾಗುವ ತೀರ್ಮಾನ ಮಾಡಿದ್ದಾನೆ. ಪರಸ್ಪರ ಒಪ್ಪಿಗೆಯ ಮೇಲೆ ಅವಳಿಗೆ ವಿಚ್ಛೇದನ ಸಿಗುವುದರಲ್ಲಿದೆ. ಸಿಕ್ಕಿದ ಮೇಲೆ ತನ್ನ ಮನೆಯವರನ್ನು ಒಪ್ಪಿಸಿ ನಂತರ ಮದುವೆಯ ವಿಚಾರ. ವಿಶ್ವ ಬೆಚ್ಚಿ ಬಿದ್ದ. ಯಾರು ಎಷ್ಟೇ ಇಷ್ಟ ಆದರೂ ವಿಶ್ವ ವಾಸ್ತವವಾದಿ. ಪೂರ್ವಾಪರ ವಿವೇಚನೆ ಇಲ್ಲದೆ ಹೆಜ್ಜೆ ಮುಂದಿಡದಂತಹ ವ್ಯಕ್ತಿ.
""ನಿಂಗೇನು ತಲೆ ಕೆಟ್ಟಿದೆಯಾ? ನಿಮ್ಮನೇಲಿ ಒಪ್ತಾರೆ ಅಂದ್ಕಂಡಿದೀಯಾ?' ಕೇಳಿದ.
""ಒಪ್ಪಿದ್ರೆ ಒಳ್ಳೇದಾಯ್ತು. ಇಲ್ಲದಿದ್ರೆ...'
""ಇಲ್ಲದಿದ್ರೆ...'
""ನನ್ನ ಬದುಕು ನಂದು'
""ಓಹೋ, ಭಾರೀ ದೊಡ್ಡಮನುಷ್ಯ ಆಗಿºಟ್ಟಿದ್ದಿ. ಸಾಕಿದ್ದು, ಬೆಳೆಸಿದ್ದು, ಓದಿಸಿದ್ದು ಮರೆತೇಹೋಯ್ತಾ?'
"".. .. ..'
""ಹುಚ್ಚ ಎಲ್ಲೋ, ನೀನು ಒಪ್ಪಿ$ಬಿಟ್ರೆ ಆಯ್ತಾ? ಕೌಸಲ್ಯಾ ಒಪೆºàಕಲ್ಲ? ಇಂತಾದ್ದೆಲ್ಲಾ ಕೇಳ್ಳೋಕೆ ಹೋಗಿ
ಮುಖಕ್ಕೆ ಮಂಗಳಾರತಿ ಮಾಡಿಸ್ಕೋಬೇಡ...'
""ಅವಳೂ ಒಪ್ಪಿದ್ದಾಳೆ ಕಣೋ...' ಅಂದ ಗೋಪಿಕೃಷ್ಣ.
ಈ ಮಟ್ಟದ ಸಲಿಗೆ ಬೆಳೆದಿದ್ದು ಹೇಗೆ? ಇಷ್ಟೆಲ್ಲಾ ನಡೆದಿದ್ದು ಹೇಗೆ? ವಿಶ್ವ ತಲೆ ತುರಿಸಿಕೊಂಡ. ಗೋಪಿ ಎಷ್ಟೋ ಸಲ ತನಗಿಂತ ಮೊದಲು ಮನೆಗೆ ಬರುತ್ತಿದ್ದದ್ದು ನೆನಪಾಯ್ತು. ಕೆಲವೊಮ್ಮೆ ಜೊತೆಯಲ್ಲಿ ಊರಿಗೆ ಬರುವುದಕ್ಕೆ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಶನಿವಾರ, ಭಾನುವಾರ, ಇಡೀ ಎರಡೆರಡು ದಿನ ಅವನಿಗೆ ಸ್ವಾತಂತ್ರ್ಯ.
""ನಮ್ಮ ಕಾಲ ಮೇಲೆ ನಾವೇ ಕಲ್ಲು ಎತ್ತಿ ಹಾಕಿಕೊಳ್ಳೋದು ಅಂದ್ರೆ ಇದೇ. ಅವಳು ಬರೀ ಡೈವೋರ್ಸಿ ಅಲ್ಲ, ಒಂದು ಮಗು ಇದೆ ಅನ್ನೋದನ್ನ ಮರೀಬೇಡ. ಯಾರ್ಯಾರ ಮಕ್ಕಳಿಗೆ ಅಪ್ಪನಾಗೋದು ಅಷ್ಟು ಸುಲಭ ಅಂದೊRಂಡಿದೀಯಾ? ಅದೂ ನಿನ್ನಂತವನು? ಬೇರೆಯೋರು ಇಂತಾ ಕೆಲಸ ಮಾಡಿದ್ರೆ ಆದರ್ಶ ಅಂತ ಹೊಗಳ್ಳೋದು ಸುಲಭ. ಸ್ವತಃ ಮಾಡೋಕೆ ಹೋದ್ರೆ ದೊಡ್ಡ ಹೊಂಡದಲ್ಲಿ ಬೀಳ್ತಿ. ಆಮೇಲೆ ಎದ್ದು ಬರೋಕೂ ಸಾಧ್ಯವಾಗಲ್ಲ, ತಿಳಾR...'
""ಯಾವ ಕಾಲದಲ್ಲಿದ್ದಿ ನೀನು? ಇಂತಾದ್ದು ಈಗೆಲ್ಲಾ ಮಾಮೂಲು. ಸುಳ್ಳೇ ಹೆದರಿಸೋಕೆ ಬರ್ಬೇಡ. ನಿಂಗೇನು ಭವಿಷ್ಯ ಗೊತ್ತುಂಟಾ?' ಗೋಪಿಯ ಧ್ವನಿಯಲ್ಲಿ ಅಸಮಾಧಾನ ಸುಸ್ಪಷ್ಟವಾಗಿತ್ತು.
""ಇದನ್ನ ಹೇಳ್ಳೋಕೆ ಭವಿಷ್ಯ ಗೊತ್ತಿರ್ಬೇಕಾ? ಕಾಮನ್‌ಸೆನ್ಸು. ನಿನ್ನ ಮೆಂಟಾಲಿಟಿ ನಂಗೊತ್ತಿಲ್ವಾ? ಇಷ್ಟು ವರ್ಷ ಜೊತೆಗಿದ್ವಲ್ಲಾ, ಒಂದಿನ, ಒಂದೇ ಒಂದಿನ, ನನ್ನ ಬಟ್ಟೆ ನೀನು ಉಪಯೋಗಿಸಿದ್ದುಂಟಾ?'
ಕೆಲಹೊತ್ತು ಮಾತಾಡದೆ ಕೂತಿದ್ದ ಗೋಪಿ ನಂತರ ನಿಧಾನಕ್ಕೆ ಉಸುರಿದ,
""ಉಪಯೋಗಿಸಿದ್ದಾಯ್ತಲ್ಲ?'
"ಝಗ್' ಅಂತು ವಿಶ್ವನ ಎದೆ. ""ಹೌದೇನೋ?' ಅನ್ನುತ್ತಾ ಗೋಪಿಯ ಭುಜ ಅಲುಗಿಸಿದ. ಗೋಪಿ ಹೂಂ ಅನ್ನಲಿಲ್ಲ, ಉಹೂಂ ಅನ್ನಲಿಲ್ಲ.
""ಮರೆತುಬಿಡು, ಬೇಕಿದ್ರೆ ಮನೆ ಖಾಲಿ ಮಾಡಿ...'
""ಮಾತು ಕೊಟ್ಟಿದೀನಿ. ಯಾವ ಕಾರಣಕ್ಕೂ ಮೀರಲ್ಲ...'
""ಮಹಾ ಸತ್ಯ ಹರಿಶ್ಚಂದ್ರ'
""ಏನಾದ್ರೂ ಅಂದೊRà. ಅವಳನ್ನ ಬಿಟ್ಟಿರೋಕೆ ನನೆR„ಲಾಗಲ್ಲ...'
""ಎಲ್ಲಾ ಆಗುತ್ತೆ. ಮನಸ್ಸು ಮಾಡ್ಬೇಕು'
""ಏನೋ ಫ್ರೆಂಡ್ ಅಂತ ನಿನ್ಹತ್ರ ಹೇಳಿದ್ದೇ ದೊಡ್ಡ ತಪ್ಪಾಯ್ತಲ್ಲ? ನಿಂಗಿದೆಲ್ಲಾ ಅರ್ಥವಾಗಲ್ಲ ಬಿಡು. ಮೊದಲೇ ವಡ್ಡ...' ಗೋಪಿ ಮುಂದೆ ಮಾತಾಡಲು ಮನಸ್ಸಿಲ್ಲದೆ ಮುಸುಗಿಕ್ಕಿ ಮಲಗಿದ."ಒಳ್ಳೇ ಮನಸ್ಸಿನ ಹುಡುಗರ ಹಣೇಬರವೇ ಹೀಗೆ' ಅಂದುಕೊಂಡ ವಿಶ್ವ. ಆತ್ಮಸಾಕ್ಷಿಗೆ ಬೆಲೆ ಕೊಡುವಂತವರು. ಆಡಿದ ಮಾತಿಗೆ ಕಟ್ಟು ಬೀಳುವಂತವರು. ಪ್ರೀತಿಯ ನಾಟಕವಾಡಿ ಕೈ ಬಿಡುವ ಎಷ್ಟೋ ಜನರ ನಡುವೆ ಅಪವಾದವಾಗಿರುವಂತವರು. ಗೋಪಿಯ ತಲೆಗೇರಿದ ಈ ಮೋಹದ ಅಮಲು ಬಿಡಿಸಲು ಏನಾದರೂ ಮಾಡಬೇಕು ಎನ್ನುತ್ತಿದೆ ಅಂತರಂಗ. ಕೌಸಲ್ಯಾಗೆ ಅನ್ಯಾಯವಾಗುವುದು ಎಂಬುದರ ಅರಿವಿದ್ದೂ ಚಿತ್ತ ಗೆಳೆಯನನ್ನು ವಹಿಸಿಕೊಳ್ಳುತ್ತಿದೆ. ಇವಳನ್ನು ಮದುವೆಯಾದರೆ ಗೋಪಿ ಸುಖವಾಗಿರುವುದಿಲ್ಲ ಅನಿಸುತ್ತಿದೆ.
ಮಗು ಇಲ್ಲದಿದ್ದರೆ ಆ ಮಾತು ಬೇರೆ. ಅಥವಾ ಅವಳು ವಿಧವೆಯಾಗಿದ್ದರೂ ಅಡ್ಡಿ ಇರಲಿಲ್ಲ. ನಾಳೆ ಈ ಮಗುವೇ ಮೂಲಕಾರಣವಾಗಿ ಯಾವ್ಯಾವ ರಗಳೆಗಳು ಹುಟ್ಟಿಕೊಳ್ಳುತ್ತವೆಯೋ? ಕೈ ಹಿಡಿದವಳು ಮನಶಾÏಂತಿ ಕಳೆದುಕೊಂಡರೆ ಇವನು ಹೇಗೆ ಸುಖವಾಗಿರು ತ್ತಾನೆ? ಇದೆಲ್ಲಾ ಅರ್ಥವಾಗಬಾರದೇ ಇವನಿಗೆ? ಮಾತು ಕೊಟ್ಟಿದ್ದಾನಂತೆ ಮಾತು. ಈ ಪಿತ್ತ ಇಳಿಸಲು ಉಪಾಯ ಚಿಂತಿಸಿ ವಿಶ್ವ ಬೆಳಗು ಮಾಡಿದ.
*
ಹೇಳಬಾರದಿತ್ತಾ? ಚಾಡಿ ಬೆಸೆಯಬಾರದಿತ್ತಾ? ತನಗೇನಾದರೂ ಹೊಟ್ಟೆಕಿಚ್ಚಾಗಿದ್ದು ಅದಕ್ಕೆ ಬೇರೆಯದೇ ಮುಖವಾಡ ತೊಡಿಸಿದೆನಾ? "ಸುಳ್ಳು' ಎಂದು ಎದೆ ಮುಟ್ಟಿಕೊಂಡು ನಿರಾಕರಿಸಲು ಸಾಧ್ಯವಾಗುತ್ತಿಲ್ಲ. ಕೌಸಲ್ಯಾಳನ್ನು ಕಂಡರೆ ತನಗೂ ಮೆಚ್ಚುಗೆಯ ಭಾವವಿತ್ತು. ಗೋಪಿಗೆ ಅವಳು ಒಲಿದಳೆಂದು, ಗೋಪಿ ಅವಳನ್ನು ಒಲಿಸಿಕೊಂಡನೆಂದು, ತನ್ನ ಅಂತರಂಗ ಅವರ ಒಲುಮೆಯನ್ನು ಧಿಕ್ಕರಿಸಿರಲೂಬಹುದು. ವಿಶ್ವನ ತಲೆಯಲ್ಲಿ ಹುಳುಗಳು ಮಿಜಿಗುಡುತ್ತಿವೆ. ಆ ವಾರಾಂತ್ಯದಲ್ಲಿ ಉದ್ದೇಶಪೂರ್ವಕವಾಗಿ ಊರಿಗೆ ಹೋಗಿ ಗೋಪಿಯ ಅಣ್ಣನ ಹತ್ತಿರ ಗುಟ್ಟಾಗಿ ಎಲ್ಲದರ ವರದಿ ಒಪ್ಪಿಸಿದ್ದ ವಿಶ್ವ. ತನ್ನ ಹೆಸರನ್ನು ಮಧ್ಯೆ ತರಬಾರದೆಂದು ಆಣೆ ಹಾಕಿಸಿಕೊಂಡಿದ್ದ. ಈಗೆಲ್ಲಿದೆ ಆಣೆ? ಆದರೂ ಅದೊಂದು ನಂಬಿಕೆ ಉಳಿದುಕೊಂಡುಬಿಟ್ಟಿದೆ. ದೇವರಾಣೆ ಹಾಕಿಸಿಕೊಂಡರೆ ಮತ್ತೆ ಅದನ್ನು ಮೀರಬಾರದೆಂಬ, ಮೀರಲಾರರೆಂಬ ನಂಬಿಕೆ. ತನಗ್ಯಾಕೆ ಬೇಕಿತ್ತು ಉಪದ್ವ್ಯಾಪ? ಅವರವರ ಬದುಕು ಅವರವರದ್ದು. ಅನ್ಯಾಯವಾಗಿ ಒಂದು ತುಂಬು ಜೀವ ಆಹುತಿಯಾಗಲು ತಾನು ಕಾರಣನಾಗಿರುವುದು ಹೌದಾದರೆ ಆ ಪಾಪಕ್ಕೆ ಕ್ಷಮೆ ಉಂಟಾ?
ಜೀವಮಾನಪೂರ್ತಿ ಈ ಪಾಪಪ್ರಜ್ಞೆ ತನ್ನನ್ನು ಕುಕ್ಕಿ ತಿನ್ನುವುದಿಲ್ಲವಾ? ಏನೇನೋ ಕನವರಿಕೆಗಳು.
ಹಳವಂಡಗಳು. ಅಣ್ಣನಿಂದ ಬುಲಾವು ಬಂತೆಂದು ಊರಿಗೆ ಹೋಗಿಬಂದ ಗೋಪಿ ಮಂಕಾಗಿದ್ದ. ಮುಖ ಬಣ್ಣಗೆಟ್ಟಿತ್ತು.
""ಏನಾಯೊ¤à?' ವಿಶ್ವ ಅಮಾಯಕನಂತೆ ಕೇಳಿದ್ದ.
""ಹುಡುಗಿ ಹುಡುಕಿಟ್ಟಿದಾರೆ...'
""ಅದಕ್ಕಾ$Âಕೆ ಮುಖ ಗಡಿಗೆ ಮಾಡ್ಕೊಂಡಿದ್ದಿ? ಇಷ್ಟ ಆದ್ರೆ ಮಾಡ್ಕೊಳ್ಳೋದಪ್ಪಾ...'
""ಸ್ವಲ್ಪ$ಸುಮ್ನಿರಿ¤àಯಾ? ನಿನ್ಹತ್ರ ಸಲಹೆ ಕೇಳಿÉಲ್ಲ ನಾನು...'
ಮರುದಿನ ವಿಶ್ವ ಕೆಲಸದಿಂದ ಮರಳಿ ಬರುವ ಹೊತ್ತಿಗೆ ಗೋಪಿಕೃಷ್ಣ ನೇಣು ಹಾಕಿಕೊಂಡಿದ್ದ. ಇಹಲೋಕಕ್ಕೆ ವಿದಾಯ ಹೇಳಿದ್ದ. ಮನೆಯಲ್ಲಿ ಏನೇನೆಲ್ಲಾ ಮಾತುಕತೆಗಳು ನಡೆದುವೋ? ಅಥವಾ ಮದುವೆಗೆ ಒತ್ತಾಯ? ಇವನು ತನ್ನ ಮನಸ್ಸು ತಿಳಿಸಿರಬಹುದಾ? ಅವರು ತಿರಸ್ಕರಿಸಿರಬಹುದಾ? ಬೈದು, ಭಂಗಿಸಿ, ಬುದ್ಧಿ ಹೇಳಿ, ಬೆದರಿಕೆ ಹಾಕಿ... ಊಹೆಯನ್ನು ಎಷ್ಟೂ ಓಡಿಸಬಹುದು. ಆದರೆ ಜೀವ ತೆಗೆದುಕೊಳ್ಳುವಷ್ಟು ಗೋಪಿ ಧೃತಿಗೆಟ್ಟಿದ್ದು ಯಾಕೋ? ನನ್ನ ಬದುಕು ನನ್ನದು ಅಂದವನು ಕೈಕಾಲುಗೆಟ್ಟಿದ್ದರ ಹಿನ್ನೆಲೆ ಏನೋ?
ಹೊಸ ಠಿಕಾಣಿ ಹುಡುಕಿಕೊಂಡಿದ್ದರೂ ಹಳೆಯ ನೆನಪುಗಳು ಬ್ರಹ್ಮಕಪಾಲದಂತೆ ಅಂಟಿಕೊಂಡು ವಿಶ್ವನಿಗೆ ಹಿಂಸೆ ಕೊಡುವುದು ನಿಂತಿಲ್ಲ.