Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿದೇಶಾಂಗ ಕಾರ್ಯದರ್ಶಿ ಮುಂದಿನ ವಾರ ಅಮೆರಿಕಕ್ಕೆ
    • ರಂಜನ್‌ ಮಥಾಯ್‌ ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.

      • Udayavani | Feb 04, 2012

        ವಾಷಿಂಗ್ಟನ್‌: ಭಾರತದ ವಿದೇಶಾಂಗ ಕಾರ್ಯದರ್ಶಿ ರಂಜನ್‌ ಮಥಾಯ್‌ ಅವರು ಮುಂದಿನ ವಾರ ಅಮೆರಿಕದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಾಗ ಭಾರತ-ಅಮೆರಿಕ ಪೌರ ಪರಮಾಣು ಒಪ್ಪಂದ, ಇರಾನ್‌ ಮೇಲಣ ನಿರ್ಬಂಧ ಮತ್ತು ಪಾಕ್‌-ಅಫ್ಘಾನ್‌ ಪರಿಸ್ಥಿತಿ ಸಹಿತ ಹಲವಾರು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಚಾರಗಳು ಪ್ರಮುಖವಾಗಿ ಪ್ರಸ್ತಾವಕ್ಕೆ ಬರುವ ನಿರೀಕ್ಷೆಯಿದೆ.

        ವಿದೇಶಾಂಗ ಕಾರ್ಯದರ್ಶಿಯಾಗಿ ಮೊದಲ ಬಾರಿ ಅಮೆರಿಕವನ್ನು ಸಂದರ್ಶಿಸಲಿರುವ ಮಥಾಯ್‌, ಫೆ. 6ರಿಂದ 8ರ ತನಕದ ತನ್ನ ಭೇಟಿ ವೇಳೆ ಕ್ಯಾಪಿಟೋಲ್‌ ಹಿಲ್‌ನಲ್ಲಿ ಅಮೆರಿಕದ ಉನ್ನತ ನಾಯಕರೊಂದಿಗೆ ಇರಾನ್‌ ಮೇಲಣ ನಿರ್ಬಂಧ ವಿಚಾರವನ್ನು ಚರ್ಚಿಸುವ ನಿರೀಕ್ಷೆಯಿದೆ. 'ಅವರು ನಮ್ಮ ಬಲಿಷ್ಠ ದ್ವಿಪಕ್ಷೀಯ ಸಂಬಂಧಗಳಡಿ ಬರುವ ಎಲ್ಲ ವಿಷಯಗಳನ್ನು ಹಾಗೂ ಅನೇಕ ಜಾಗತಿಕ ವಿಷಯಗಳನ್ನು ಚರ್ಚಿಸಲಿದ್ದಾರೆ' ಎಂದು ರಾಜ್ಯಾಂಗ ಇಲಾಖೆ ವಕ್ತಾರ ಮಾರ್ಕ್‌ ಟೋನರ್‌ ಹೇಳಿದರು.

        ಇರಾನ್‌ ಮೇಲಣ ನಿರ್ಬಂಧ ಮತ್ತು ಅದರಿಂದಾಗಿ ಭಾರತದಂಥ ಪಾಲುದಾರರು ಹಾಗೂ ಮಿತ್ರರಾಷ್ಟ್ರಗಳ ಮೇಲಾಗುವ ಪರಿಣಾಮಗಳ ಕುರಿತು ಕೇಳಿದಾಗ, ಟೆಹರಾನ್‌ ಮೇಲ್‌ ಈಚಿನ ನಿರ್ಬಂಧಗಳ ಕುರಿತು ಅಮೆರಿಕ ವಿಶ್ವಾದ್ಯಂತದ ತನ್ನ ಮಿತ್ರರಾಷ್ಟ್ರಗಳು ಹಾಗೂ ಪಾಲುದಾರರ ಜತೆ ಮಾತುಕತೆ ನಡೆಸುತ್ತಿದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಪಾಲುದಾರರ ಮೇಲೆ ಅನಗತ್ಯ ಒತ್ತಡ ಬೀಳದಂತೆ ಖಾತರಿಪಡಿಸಲು ನಾವು ಯತ್ನಿಸುತ್ತಿದ್ದೇವೆ ಎಂದರು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009-2010 Udayavani.All rights reserved.
      • Designed & Hosted By 4cplus