Thursday, May 17, 2012
Last Updated: 12:24:52 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕೊಹ್ಲಿ ಗರಿಷ್ಠ ರಾಂಕಿಂಗ್‌ ಆಟಗಾರ
    • ಭಾರತದ ವಿರಾಟ್‌ ಕೊಹ್ಲಿ ಗರಿಷ್ಠ ರಾಂಕಿಂಗ್‌ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ.

      • Udayavani | Feb 04, 2012

        ದುಬೈ : ರವಿವಾರದಿಂದ ಆರಂಭವಾಗಲಿರುವ ಸಿಬಿ ತ್ರಿಕೋನ ಸರಣಿಯಲ್ಲಿ ಭಾರತದ ವಿರಾಟ್‌ ಕೊಹ್ಲಿ ಗರಿಷ್ಠ ರಾಂಕಿಂಗ್‌ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಬ್ಯಾಟಿಂಗ್‌ ರಾಂಕಿಂಗ್‌ ಯಾದಿಯಲ್ಲಿ ಅವರಿಗೀಗ ತೃತೀಯ ಸ್ಥಾನ.

        ಈ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಉಳಿದ ಟಾಪ್‌-10 ಬ್ಯಾಟ್ಸ್‌ಮನ್‌ಗಳೆಂದರೆ ಮಹೇಂದ್ರ ಸಿಂಗ್‌ ಧೋನಿ (6), ಕುಮಾರ ಸಂಗಕ್ಕರ (7), ಮೈಕಲ್‌ ಹಸ್ಸಿ (8) ಮತ್ತು ಮೈಕಲ್‌ ಕ್ಲಾರ್ಕ್‌ (9).

        ಬೌಲಿಂಗ್‌ ಯಾದಿಯ ಮುಂಚೂಣಿಯಲ್ಲಿರುವವರು ಶ್ರೀಲಂಕಾದ ಲಸಿತ ಮಾಲಿಂಗ. ಅವರು 10ನೇ ಸ್ಥಾನದಲ್ಲಿದ್ದು, ಟಾಪ್‌-ಟೆನ್‌ನಲ್ಲಿರುವ ಏಕೈಕ ಬೌಲರ್‌ ಆಗಿದ್ದಾರೆ. ಭಾರತದ ಗರಿಷ್ಠ ರಾಂಕಿಂಗ್‌ ಬೌಲರ್‌ ಆಗಿರುವವರು ರವೀಂದ್ರ ಜಡೇಜ. ಅವರಿಗೆ 13ನೇ ಸ್ಥಾನ.

        ತಂಡದ ರಾಂಕಿಂಗ್‌ನಲ್ಲಿ 130 ಅಂಕ ಹೊಂದಿರುವ ಆಸ್ಟ್ರೇಲಿಯ ನಂಬರ್‌ ವನ್‌ ಸ್ಥಾನದಲ್ಲಿದೆ. ವಿಶ್ವ ಚಾಂಪಿಯನ್‌ ಭಾರತ 116 ಅಂಕಗಳೊಂದಿಗೆ ದ್ವಿತೀಯ ಹಾಗೂ ಶ್ರೀಲಂಕಾ 111 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

        ಶ್ರೀಲಂಕಾದ ರಾಂಕಿಂಗ್‌ ಪ್ರಗತಿಗೆ ಈ ಸರಣಿಯೊಂದು ಉತ್ತಮ ವೇದಿಕೆಯಾಗಲಿದೆ. ಲಂಕಾ ತಂಡ ರಾಂಕಿಂಗ್‌ ಯಾದಿಯಲ್ಲಿ ತನಗಿಂತ ಮೇಲಿನ ಸ್ಥಾನದಲ್ಲಿರುವ ತಂಡಗಳೊಂದಿಗೆ ಆಡುವುದೊಂದು ಪ್ಲಸ್‌ ಪಾಯಿಂಟ್‌. ಇಲ್ಲಿ ಹೆಚ್ಚೆಚ್ಚು ಗೆಲುವು ಸಾಧಿಸಿದರೆ ಲಂಕೆಗೆ ಲಾಭ ಹೆಚ್ಚು.

      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus